ಕೀರ್ತಿ ಜಯಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯ:Shradha Mathew/ನನ್ನ ಪ್ರಯೋಗಪುಟ ಇಂದ ಪುನರ್ನಿರ್ದೇಶಿತ)
ಕೀರ್ತಿ ಜಯಕುಮರ್

ಕೀರ್ತಿ ಜಯಕುಮಾರ್ (ಜನನ ಡಿಸೆಂಬರ್ ೧೫, ೧೯೮೭) ಒಬ್ಬ ಭಾರತೀಯ ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಸಾಮಾಜಿಕ ಉದ್ಯಮಿ, ಶಾಂತಿ ಕಾರ್ಯಕರ್ತೆ, ಕಲಾವಿದೆ, ವಕೀಲರು ಮತ್ತು ಬರಹಗಾರ್ತಿ.[೧] ಅವರು ಕಾಮನ್ವೆಲ್ತ್ ನ ವಿದ್ವಾಂಸಿನಿ, ವೈಟಲ್ ವಾಯ್ಸಸ್ (ವಿ.ವಿ)ನ ಮುಖ್ಯ ಸಹವರ್ತಿ, ವಿ.ವಿ ಎಂಗೇಜ್ ಮತ್ತು ಲೋಕಲ್ ಪಾಥ್‌ವೇಸ್ ಗಳ ಸದಸ್ಯೆ. ಕೀರ್ತಿ ರಾಯಲ್ ಸೊಸೈಟಿ ಆಫ್ ಆರ್ಟ್ಸ್‌ನ ಸಹವರ್ತಿ ಕೂಡ.

ಅವರು ‘ದಿ ರೆಡ್ ಎಲಿಫೆಂಟ್ ಫೌಂಡೇಶನ್’ ಅನ್ನು ಸ್ಥಾಪಿಸಿದರು. ಇದು ಕಥೆ ಹೇಳುವಿಕೆ, ನಾಗರಿಕ ಶಾಂತಿ ನಿರ್ಮಾಣ ಮತ್ತು ಲಿಂಗ ಸಮಾನತೆಗಾಗಿ ನಿರ್ಮಿಸಲಾದ ಉಪಕ್ರಮವಾಗಿದೆ.[೨] ನೀತಿ, ಕಾನೂನು ಮತ್ತು ಸಾಂಸ್ಥಿಕ ಮಟ್ಟದಲ್ಲಿ ವಿಶ್ವವ್ಯಾಪಕ ಲಿಂಗದ ತಿಳುವಳಿಕೆಯನ್ನು ವಿಸ್ತರಿಸುವ ಉದ್ಧೇಶದಿಂದ ಅವರು ‘ದಿ ಜೆಂಡರ್ ಸೆಕ್ಯುರಿಟಿ ಪ್ರಾಜೆಕ್ಟ್’ ಅನ್ನು ಸ್ಥಾಪಿಸಿದರು. ಅವರು ಸಣ್ಣ ಕಥೆಗಳ ಸಂಗ್ರಹವಾದ "ಸ್ಟೋರೀಸ್ ಆಫ್ ಹೋಪ್" ಮತ್ತು "ದಿ ಡವ್ಸ್ ಲ್ಯಾಂಟ್" ಗಳನ್ನು ಆಂಗ್ಲ ಭಾಷೆಯಲ್ಲಿ ಬರೆದಿದ್ದಾರೆ. ಅವರು ೨೦೧೧ ರಲ್ಲಿ ಯುಎಸ್ ಅಧ್ಯಕ್ಷೀಯ ಸೇವೆಗಳ ಪದಕ ಹಾಗೂ ೨೦೧೨  ಮತ್ತು ೨೦೧೩  ರಲ್ಲಿ ಎರಡು ಸಂಯುಕ್ತ ರಾಷ್ಟ್ರ ಸಂಸ್ಥೆಆನ್‌ಲೈನ್ ಸ್ವಯಂಸೇವಕ ಪ್ರಶಸ್ತಿಗಳನ್ನು ಪಡೆದರು.

ಜೀವನಚರಿತ್ರೆ[ಬದಲಾಯಿಸಿ]

ಕೀರ್ತಿ ೧೯೮೭ ಡಿಸೆಂಬರ್ ೧೫ ರಂದು ಭಾರತಬೆಂಗಳೂರಿನಲ್ಲಿ ಜನಿಸಿದರು. ಅವರು ತಮಿಳುನಾಡಿನ ರಾಜಧಾನಿಯಾದ ಚೆನ್ನೈನ "ಸ್ಕೂಲ್ ಆಫ್ ಎಕ್ಸಲೆನ್ಸ್ ಇನ್ ಲಾ" ದಲ್ಲಿ ಕಾನೂನು ಅಧ್ಯಯನ ಮಾಡಿದರು. ಕೋಸ್ಟರಿಕಾದ ಯುಪೀಸ್‌ನಿಂದ 'ಸಮಕಾಲೀನ ಜಗತ್ತಿನ ಸಮರ್ಥನೀಯ ಶಾ೦ತಿ'ಯಲ್ಲಿ ಎಂ.ಎ.ಅಧ್ಯಯನ ಮಾಡಿದರು.

ಕೋಸ್ಟಾರಿಕಾದ ಶಾಂತಿ ವಿಶ್ವವಿದ್ಯಾಲಯದಿಂದ‌ "ಸಮಕಾಲೀನ ಜಗತ್ತಿನ ಸುಸ್ಥಿರ ಶಾಂತಿ" ಯಲ್ಲಿ ಎಂ.ಎ ಗಳಿಸಿದರು. ಅವರು ಪ್ರಸ್ತುತ ಕೋವೆಂಟ್ರಿ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಟ್ರಸ್ಟ್, ಪೀಸ್ ಮತ್ತು ಸೆಕ್ಯುರಿಟಿಯಲ್ಲಿ ವಿದ್ಯಾರ್ಥಿಯಾಗಿದ್ದು, ಕಾಮನ್ವೆಲ್ತ್ ವಿದ್ಯಾರ್ಥಿವೇತನದಲ್ಲಿ ಶಾಂತಿ ಮತ್ತು ಸಂಘರ್ಷ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ. ಅವರು ಸಂಯುಕ್ತ ರಾಷ್ಟ್ರ ಸಂಸ್ಥೆಯ ಆನ್‌ಲೈನ್ ಸ್ವಯಂಸೇವಕರಾಗಿ ಮತ್ತು ಸ್ವತಂತ್ರ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ.

ಕಲಾವಿದೆ[ಬದಲಾಯಿಸಿ]

ಕೀರ್ತಿ ಜೆನ್ ಡೂಡಲ್ ಕಲೆಯಲ್ಲಿ ಕಲಾವಿದೆ( ಜೆನ್ ಡೂಡಲ್ ಎನ್ನುವುದು ರಚನಾತ್ಮಕ ಮಾದರಿಗಳನ್ನು ಬಳಸಿಕೊಂಡು ವಿನ್ಯಾಸಗಳನ್ನು ಚಿತ್ರಿಸುವ ಕಲೆ). ಲಿಂಗ ಸಮಾನತೆ ಮತ್ತು ಶಾಂತಿ ಶಿಕ್ಷಣಕ್ಕಾಗಿ ತಮ್ಮ ಕ್ರಿಯಾಶೀಲತೆಯನ್ನು ವ್ಯಕ್ತಪಡಿಸುವ ಸಾಧನವಾಗಿ ಅವರು ಡೂಡ್ಲಿಂಗ್ ಕಲೆಯನ್ನು  ಬಳುಸುತ್ತಾರೆ.

ಅವರು ಫೆಮ್ಸೈಕ್ಲೋಪೀಡಿಯಾ ಎಂಬ ಇನ್ಸ್ಟಾಗ್ರಾಮ್ ಆಧಾರಿತ ಯೋಜನೆಯನ್ನು ನಡೆಸುತ್ತಿದ್ದಾರೆ. ಅಲ್ಲಿ ಅವರು ಸ್ಪೂರ್ತಿದಾಯಕ ಮಹಿಳೆಯರ ಭಾವಚಿತ್ರಗಳನ್ನು ಡೂಡಲ್ ಮಾಡುತ್ತಾರೆ. ಈ ಭಾವಚಿತ್ರಗಳನ್ನು ಆಧರಿಸಿ ಅವರು ಕಥೆಗಳನ್ನು ಸಂಗ್ರಹಿಸುತ್ತಾರೆ. ಅವರಿಗೆ ಫೆಬ್ರವರಿ ೨೦೧೭ ರಲ್ಲಿ ಫೆಮ್ಸಿಕ್ಲೋಪೀಡಿಯಾದ ಕಥೆಗೆ ವಿಶ್ವ ನಾಡಿಯಿಂದ 'ಕಥೆ ಪ್ರಶಸ್ತಿ' ದೊರಕಿದೆ.

ಕೀರ್ತಿ ಫೆಮ್ಸೈಕ್ಲೋಪೀಡಿಯಾದ ಅಂಗವಾಗಿ ಚೆನ್ನೈನ ಯುಎಸ್ ಕಾನ್ಸುಲೇಟ್ ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ಮತ್ತು ಮಹಿಳಾ ಇತಿಹಾಸ ತಿಂಗಳ ಪ್ರದರ್ಶನವನ್ನು ಆಯೋಜಿಸಿದರು.

ರಂಗಭೂಮಿ[ಬದಲಾಯಿಸಿ]

ಕೀರ್ತಿ ಫ್ರಾಂಕ್ಲಿ ಸ್ಪೀಕಿಂಗ್ ಎಂಬ ನಾಟಕವನ್ನು ಆಂಗ್ಲ ಭಾಷೆಯಲ್ಲಿ ಬರೆದಿದ್ದಾರೆ. ಇದು ಮುಖ್ಯವಾಗಿ "ದಿ ಡೈರಿ ಆಫ್ ಆನಿ ಫ್ರಾಂಕ್ " ಎಂಬ ಕಥೆಯು ಕೊನೆಗೊಳ್ಳುವ ಹಂತದಿಂದ ಪ್ರಾರಂಭವಾಗುತ್ತದೆ. ಈ ನಾಟಕವು ವಿಶ್ವದ ವಿವಿಧ ಭಾಗಗಳ ಎಂಟು ಯುವತಿಯರ ಸಂಘರ್ಷವನ್ನು ಕೇಂದ್ರೀಕರಿಸಿದೆ ಮತ್ತು "ಇದು ದಿ ಡೈರಿ ಆಫ್ ಆನಿ ಫ್ರಾಂಕ್" ‌ನ ಭಾಗಗಳೊಂದಿಗೆ ವಿಂಗಡಿಸಲಾಗಿದೆ.

ಅವರು ಹರ್ ಸ್ಟೋರಿ ಎಂಬ ಕಥೆಯನ್ನು ಬರೆದು ನಟಿಸಿದ್ದಾರೆ.[೩] ಈ ನಾಟಕವನ್ನು ಕಾವ್ಯದ ಮೂಲಕ ಇತಿಹಾಸದಿಂದ ಹನ್ನೆರಡು ಮಹಿಳೆಯರನ್ನು ಜೀವಂತವಾಗಿ ತಂದು ಸಮಕಾಲೀನ ನೃತ್ಯದ ಮೂಲಕ ಮಾತನಾಡುವ ಪದ ಕಾವ್ಯಕ್ಕೆ ಅನುಗುಣವಾಗಿ  ಪ್ರದರ್ಶನ ಮಾಡಿದ್ದಾರೆ.

ನ್ಯಾಯಮೂರ್ತಿ ಲೀಲಾ ಸೇಠ್, ಮಾಯಾವತಿ, ಜಯಲಲಿತಾ, ದೀಪಾ ಕರ್ಮಾಕರ್, ಷಾ ಬಾನೊ ಬೇಗಂ, ಟಿಸ್ಸಿ ಥಾಮಸ್ ಮತ್ತು ಗೌರಿ ಸಾವಂತ್ ಅವರ ಕಥೆಗಳನ್ನು ನಿರೂಪಿಸಿದ ಅಪರ್ಣ ಜೈನ್ ಅವರ "ಲೈಕ್ ಎ ಗರ್ಲ್" ನ ಆಡಿಯೊಬುಕ್ ಆವೃತ್ತಿಗೆ ಕೀರ್ತಿ ಧ್ವನಿ ನೀಡಿದ್ದಾರೆ.

ಕಾರ್ಯಕರ್ತೆ[ಬದಲಾಯಿಸಿ]

ಕೀರ್ತಿ ಮಹಿಳಾ ಹಕ್ಕು, ಶಾಂತಿ ಮತ್ತು ಸಂಘರ್ಷದ ಕಾರ್ಯಕರ್ತೆ. ಅವರು "ದಿ ರೆಡ್ ಎಲಿಫೆಂಟ್ ಫೌಂಡೇಶನ್" ಅನ್ನು ನಡೆಸುತ್ತಿದ್ದಾರೆ. ಯುಎನ್ ಆನ್‌ಲೈನ್ ಸ್ವಯಂಸೇವಕ ಕಾರ್ಯಕ್ರಮದ ಮೂಲಕ ಅವರು ೧೬  ನಾಗರಿಕ ಸಂಘಗಳು ಮತ್ತು ಯುಎನ್ ಏಜೆನ್ಸಿಗಳೊಂದಿಗೆ ಸ್ವಯಂಸೇವಕ ಕೌಶಲ್ಯಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಡೆಕ್ಕನ್ ಕ್ರಾನಿಕಲ್ / ಏಷ್ಯನ್ ಏಜ್ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ.

ಕೀರ್ತಿ ಸಾರಾ ಬ್ರೌನ್ ನಡೆಸುತ್ತಿರುವ "ಎ ವರ್ಲ್ಡ್ ಅಟ್ ಸ್ಕೂಲ್" ನಲ್ಲಿ ಜಾಗತಿಕ ಯುವ ರಾಯಭಾರಿಯಾಗಿದ್ದಾರೆ. ೧೯೬ ದೇಶಗಳಲ್ಲಿ ಲಿಂಗ ಆಧಾರಿತ ಹಿಂಸಾಚಾರದಿಂದ ಬದುಕುಳಿದವರಿಗೆ ಸಹಾಯ ಮಾಡಲು ಅವರು "ಸಾಹಾಸ್" ಎಂಬ ಅಪ್ಲಿಕೇಶನ್ ಅನ್ನು  ಸೃಷ್ಟಿಸಿದ್ದಾರೆ.  

೨೦೧೩ ರಲ್ಲಿ, ಕೀರ್ತಿ ತನ್ನದೇ ಉಪಕ್ರಮವಾದ "ದಿ ರೆಡ್ ಎಲಿಫೆಂಟ್ ಫೌಂಡೇಶನ್" ಅನ್ನು ಸ್ಥಾಪಿಸಿದರು. ಅವರು ಎಎಇಯೊಂದಿಗೆ ಆಫ್ರಿಕಾದಲ್ಲಿ ಉದ್ಯಮಶೀಲತೆ ಕುರಿತು ಎರಡು ಇ-ಬುಕ್ಸ್ ಅನ್ನು ತಯಾರಿಸಿದರು. ಅವರು ನೈಜೀರಿಯಾದ ಒಕೊಯಿಜೊರೊಗು ಎಂಬ ಹಳ್ಲಿಯಲ್ಲಿ ಮೊದಲ ಶಾಲೆಯನ್ನು ತೆರೆಯಲು ಕೆಲಸ ಮಾಡಿದ ತಂಡದ ಮುಖ್ಯಸ್ಥರಾಗಿದ್ದರು.

ಪ್ರಶಸ್ತಿಗಳು[ಬದಲಾಯಿಸಿ]

ಸ್ವೀಕರಿಸಿದ ಪ್ರಶಸ್ತಿಗಳ ಪಟ್ಟಿ[ಬದಲಾಯಿಸಿ]

  • ಯುಎಸ್ ಅಧ್ಯಕ್ಷೀಯ ಸೇವೆಗಳ ಪದಕ (ಚಿನ್ನ, ಬೆಳ್ಳಿ ಮತ್ತು ಕಂಚು), ೨೦೧೧-೨೦೧೨[೪]
  • ಯುಎನ್ ಆನ್‌ಲೈನ್ ಸ್ವಯಂಸೇವಕ ವರ್ಷದ ಪ್ರಶಸ್ತಿ (ಡೆಲ್ಟಾ ವುಮೆನ್), ೨೦೧೨[೫]
  • ಯುಎನ್ ಆನ್‌ಲೈನ್ ಸ್ವಯಂಸೇವಕ ವರ್ಷದ ಪ್ರಶಸ್ತಿ (ಆಫ್ರಿಕನ್ ಉದ್ಯಮಿಗಳ ಸಂಘ), ೨೦೧೨
  • ಯುಎನ್ ಆನ್‌ಲೈನ್ ಸ್ವಯಂಸೇವಕ ವರ್ಷದ ಪ್ರಶಸ್ತಿ (ಡೆಲ್ಟಾ ವುಮೆನ್), ೨೦೧೩
  • ಯುಎನ್ ಆನ್‌ಲೈನ್ ಸ್ವಯಂಸೇವಕ ವರ್ಷದ ಪ್ರಶಸ್ತಿ (ಆಫ್ರಿಕನ್ ಉದ್ಯಮಿಗಳ ಸಂಘ), ೨೦೧೩
  • ಫೈನಲಿಸ್ಟ್, ಮ್ಯೂಸ್ ಇಂಡಿಯಾ ಯಂಗ್ ಲೇಖಕರ ಪ್ರಶಸ್ತಿ, ೨೦೧೫.
  • ರೈಸಿಂಗ್ ಸ್ಟಾರ್ಸ್ ಆಫ್ ಇಂಡಿಯಾ ಪ್ರಶಸ್ತಿ (ವಿ ಆರ್ ದಿ ಸಿಟಿ ಇಂಡಿಯಾ), ೨೦೧೬
  • ಶಾಂತಿ ಪ್ರಶಸ್ತಿ (ಜಾಗತಿಕ ಶಾಂತಿ ಉಪಕ್ರಮ) ೨೦೧೬   
  • ಸ್ಥಳೀಯ ಪಾಥ್‌ವೇಸ್ ಫೆಲೋ (ಯುಎನ್ ಎಸ್‌ಡಿಎಸ್ಎನ್), ೨೦೧೭
  • ವರ್ಷದ ಸಾಮಾಜಿಕ ಉದ್ಯಮಿ, ೨೦೧೭  (ಬ್ರೂ ಮ್ಯಾಗಜೀನ್)
  • ಯುವ ಸಾಧಕ (ಉದ್ಯಮಶೀಲತೆ) ಎಂಒಪಿ ಯುವ ಸಮ್ಮನ್ (೨೦೧೭ -೨೦೧೮)
  • ವರ್ಷದ ಅತ್ಯುತ್ತಮ ಸಾಮಾಜಿಕ ಉದ್ಯಮಿ (ಎನ್‌ಜಿಒ), ಫಿಕ್ಕಿ ಎಫ್‌ಎಲ್‌ಒ ಚೆನ್ನೈ (೨೦೧೮)
  • ನಾಮಿನಿ, ಟ್ರೂ ಹೊನರ್ ಪ್ರಶಸ್ತಿಗಳು, ೨೦೧೮   
  • ಅತ್ಯುತ್ತಮ ಮಹಿಳಾ ಸಾಧಕ ಪ್ರಶಸ್ತಿ ೨೦೧೮, ಎಫ್.ಐ.ಸಿ.ಸಿ.ಐ. ಎಫ್.ಎಲ್.ಓ, ಜೈಪುರ (೨೦೧೮   )
  • ಪ್ರಮುಖ ಧ್ವನಿಗಳು ವಿ.ವಿ ಎಂಗೇಜ್ ಫೆಲೋ (೨೦೧೮).
  • ಹೀರೋಸ್ ಆಫ್ ಚೆನ್ನೈ - ಸೋಷಿಯಲ್ ಗುಡ್ (ರೈಸಿಂಗ್) (೨೦೧೮).
  • ಹೆರ್ಸ್ಟೋರಿ ವುಮನ್ ಆನ್ ಎ ಮಿಷನ್ ಪ್ರಶಸ್ತಿ (ಮಾರ್ಚ್ ೨೦೧೯).
  • ವೆಬ್ ವಂಡರ್ ವುಮನ್ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಟ್ವಿಟರ್ ಇಂಡಿಯಾ ಮತ್ತು ಬ್ರೇಕ್ಥ್ರೂ ಇಂಡಿಯಾ) (ಮಾರ್ಚ್ ೨೦೧೯).
  • ಮಾರ್ಚ್ ೨೦೧೯ ರ ಅನ್ಸಂಗ್ ಹೀರೋಸ್ಗಾಗಿ ಸಿಐಐ-ಐಡಬ್ಲ್ಯೂಎನ್ ಪ್ರಶಸ್ತಿ.
  • ಅತ್ಯುತ್ತಮ ಸ್ತ್ರೀಸಮಾನತಾವಾದಿ ಧ್ವನಿ, ಜೀವನಶೈಲಿ ಜರ್ನಲ್ ಪ್ರಶಸ್ತಿಗಳು, ಆಗಸ್ಟ್ ೨೦೧೯.[೬]

ಉಲ್ಲೇಖಗಳು[ಬದಲಾಯಿಸಿ]

  1. https://www.wef.org.in/kirthi-jayakumar
  2. https://www.theguardian.com/global-development-professionals-network/2017/jan/12/three-things-ive-learned-about-the-real-meaning-of-gender-equality
  3. https://www.indulgexpress.com/entertainment/theater/2017/sep/08/in-a-dance-state-of-mind-3426.html
  4. https://web.archive.org/web/20160816181812/http://chennai.usconsulate.gov/chpr20121217.html
  5. https://web.archive.org/web/20170203015351/http://www.undp.org/content/dam/kenya/docs/UNV/Press_Release_Online_Volunteering_Award_2012%20E%20pdf%20(2).pdf
  6. https://web.archive.org/web/20200811181141/http://www.thelifestylejournalist.in/the-biggest-confluence-of-bloggers-social-media-influencers-in-india/