ಸದಸ್ಯ:Shlaghana B.R/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
            ಪರಾಗಸ್ಪರ್ಶಿಗಳು


 ಪರಾಗಸ್ಪರ್ಶಿಗಳು ಹೂವು-ಹಣ್ಣುಗಳ ಆಶ್ರಯದಲ್ಲಿ ಬದುಕುತ್ತದೆ.ಜೇನು,ದುಂಬಿ,ಚಿಟ್ಟೆ ಇನ್ನೂ ಮುಂತಾದ ಜೀವಿಗಳು  ಈ ಪರಾಗಸ್ಪರ್ಶಿಗಳಿಗೆ ಉದಾಹರಣೆಯಾಗಿವೆ.

ಇವು ಹೂವಿನ ಮಕರಂದ ಮತ್ತು ಪರಾಗಗಳನ್ನು ಸಂಗ್ರಹಿಸುತ್ತವೆ ಮತ್ತು ಹೂವಿನ ಗಿಡಗಳ ಎಲೆಗಳನ್ನು ಅರ್ಧಚಂದ್ರಾಕಾರದಲ್ಲಿ ಕತ್ತರಿಸಿ ಸೇವಿಸುತ್ತವೆ.ಎಲ್ಲಾ ಬೆಳೆಯಲ್ಲಿಯೂ ಪರಾಗಸ್ಪರ್ಶ ಅನಿವಾರ್ಯವಾಗಿದೆ. ಮುಖ್ಯವಾಗಿ ಜೇನುನೊಣಗಳು ಹಾಗೂ ಇತರ ಕೀಟಗಳು ಏಕಕಾಲದಲ್ಲಿ ನಿಗದಿತ ಸಮಯದಲ್ಲಿ ಈ ಕ್ರಿಯೆ ನಡೆಸುತ್ತವೆ.ಹೂವುಗಳು ಹಣ್ಣುಗಳು ಆಗಿ ಪರಿವರ್ತನೆ ಹೊಂದಲು ಇವು ಸಹಾಯ ಮಾಡುತ್ತವೆ. ಆದರೆ ಇವುಗಳ ಸಂತತಿ ವಿನಾಶದ ಅಂಚಿನಲ್ಲಿದೆ.ಕಾಡಿನ ನಾಶ,ಮರಗಳನ್ನು ನೆಡುವಾಗ ಒಂದೇ ಜಾತಿಯ ಮರಗಳನ್ನು ನೆಡುವುದು,ಅಧಿಕ ಕ್ರಿಮಿನಾಶಕಗಳ ಬಳಕೆ ಇನ್ನೂ ಹಲವಾರು ಕಾರಣಗಳಿಂದ ಪರಾಗಸ್ಪರ್ಶಿಗಳ ಸಂತತಿ ನಶಿಸಿ ಹೋಗುತ್ತಿವೆ.