ವಿಷಯಕ್ಕೆ ಹೋಗು

ಸದಸ್ಯ:Shivkumar P Chauhan/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಅಭಿವೃದ್ಧಿಯಲ್ಲಿ ಯುವಜನಾಂಗದ ಪಾತ್ರ

ಭಾರತದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ತ್ವವಾದದ್ದು. ಆದರೂ ಉತ್ತಮ ಮಾರ್ಗದರ್ಶನ ಪರಿಸರದ ಕೊರತೆಯಿಂದ ಇಂದಿನ ಯು ಭಾರತದುರಿತ್ತಿದೆ, ಆಧುನಿಕ ಯುಗದಲ್ಲಿ ಯುವಜನಾಂಗದ ಸ್ಥಿತಿಗತಿಯನ್ನು ಅರಿಯಲ ಡಿ.ವಿ.ಜಿಯವರು ಹೇಳಿರುವ ಕೆಳಗಿನ ಸಾಲುಗಳನ್ನುಅರಿಯಬೇಕಾಗಿದೆ. ಅವರು ಹೇಳಿರುವಂತೆ,ಹಿಂದೆ ಗುರು ಇದ್ದ, ಮುಂದೆ ಗುರಿಯಿತ್ತು ಓಡುತ್ತಿತ್ತು ಶೂರರ ದಂಡು! ಇಂದು ಹಿಂದೆ ಗುರು ಇಲ್ಲ. ಮುಂದೆ ಗುರಿ ಇಲ್ಲ ಓಡುವುದು ರಣಹೇಡಿಗಳ ಹಿಂಡುಏಷ್ಟೊಂದು ಅರ್ಥಪೂರ್ಣ ವಾಕ್ಯವೆಂದರೆ ಯುವಜನತೆ ಗುರಿಯಿಲ್ಲದೇ, ಉತ್ತಮ ಮಾರ್ಗದರ್ಶನವಿಲ್ಲದೇ, ಯಾವ ಸ್ಥಿತಿ ತಲುಪಿದೆ ಎಂಬುದ ಕೈಗನ್ನಡಿಯಾಗಿದೆ. ಭಾರತ ಕೇವಲ ಜನಸಂಖ್ಯೆಯಲ್ಲಷ್ಟೇ ಶ್ರೀಮಂತವಾಗಿಲ್ಲ. ಕಲೆ, ಸಂಸ್ಕೃತಿ, ಸಾಹಿತ್ಯ ಮುಂತಾದವುಗಳ ಉತ್ತಮ ಆಗರವಾಗಿದೆ. ಆದರೆ ಇದರ ಅರಿವಿಲ್ಲದೆ, ಯುವಜನಾಂಗ ವಿದೇಶಿಯರ ಜಡತತ್ತ್ವ ಮತ್ತು ಭೋಗ ಜೀವನ ಅಡಂಬರಗಳನ್ನು ಆದರ್ಶವಾಗಿಟ್ಟುಕೊಂಡು ಅವರ ಗುಲಾಮರಾಗಿದ್ದಾರೆ. ಆಧುನಿಕ ಭಾರತದ ಪ್ರಗತಿ ಯುವಜನಾಂಗದ ಕೈಯಲ್ಲಿದೆ. ನಾವಾಗಿ ಗಳಿಸಿದ್ದು ನಮ್ಮದಾಗುವುದೇ ಹೊರತು ವಿದೇಶಿಯರ ವೇಷಭೂಷಣ, ಆಹಾರ ಪದ್ಧತಿ, ನಡೆನುಡಿ ಅನುಸರಿಸಿದಾಗ ಪ್ರಬಲರಾಗುವುದು ಸಾಧ್ಯವಿಲ್ಲ. ಏಕೆಂದರೆ ಸಿಂಹದ ತೊಗಲು ಹೊದ್ದ ಮಾತ್ರಕ್ಕೆ ನರಿಸಿಂಹವಾಗಲು ಸಾಧ್ಯವಿಲ್ಲವಿದ್ಯಾರ್ಥಿಗಳಲ್ಲಿ ಒಳ್ಳೆಯದು, ಕೆಟ್ಟದ್ದನ್ನು ತರ್ಕಿಸುವಏಕೆಂದರೆ ಬೇಡಿಕೆ ಬುದ್ಧಿ ಅಗತ್ಯವಾಗಿದ್ದು ವಿವೇಕವೂ ಬೇಕಾಗಿದೆ. ಇವೆಲ್ಲದರ ಕೀಲಿಕೈ ಶಿಕ್ಷಣವಾಗಿದೆ. ಆದರೆಈ ನಿಟ್ಟಿನಲ್ಲಿ ದೇಶದ ಆಸಕ್ತಿ ಎಷ್ಟಿದೆಯೋ, ಅಷ್ಟೇ ಆಸಕ್ತಿ ವಿದ್ಯಾರ್ಥಿಗಳಿಗೆ ಬೇಕು. ಇದ್ದಾಗ ಮಾತ್ರ ಪೂರೈಕೆ ಸಾಧ್ಯವಾಗುತ್ತದೆಯಲ್ಲವೇ? ಕೇವಲ ಹಿಂದುಳಿದ ರಾಷ್ಟ್ರಗಳಿಗಷ್ಟೇ ನಮ್ಮನ್ನು ಹೋಲಿಸಿಕೊಂಡು ನೆಮ್ಮದಿ ಪಡುವುದಕ್ಕಿಂತ, ಅಭಿವೃದ್ಧಿ ಹೊಂದಿದ ದೇಶಗಳನ್ನು ನೋಡಿ, ಅತ್ತಮುನ್ನುಗ್ಗಬೇಕಾಗಿದೆ. ಇದು ಯುವ ಜನಾಂಗದಿಂದ ಮಾತ್ರವೇ ಸಾಧ್ಯವಾಗಿದೆ. ಸಮಾಜವು ಯುವಜನಾಂಗಕ್ಕೆ ಹಿಡಿದ ಕೈಗನ್ನಡಿಯಾಗಿದೆ.ವಿವೇಕಾನಂದರು ಹೇಳುವಂತೆ ವಿದ್ಯೆಯೆಂಬುದು ಮೆದುಳಿನಲ್ಲಿ ಕೇವಲ ಮಾಹಿತಿಯನ್ನು ತುಂಬಿಕೊಳ್ಳುವುದಲ್ಲ. ವಿದ್ಯೆಯಿಂದ ಉನ್ನತ ವಿಚಾರಗಳು ರಕ್ತಗತವಾಗಿ ಜೀವನದಲ್ಲಿ ಹೊಸ ಚೈತನ್ಯ ಮೂಡುವಂತಾಗಬೇಕು. ಪೌರುಷ ಉಕ್ಕಿ, ಶೀಲ ಮೈತಾಳುವಂತಾಗಬೇಕು.\ ಏಕೆಂದರೆ ಯುವಕರು ಭದ್ರತೆಯ ಆಧಾರ ಸ್ತಂಭಗಳಿದ್ದಂತೆ.ನಾಗಾಲೋಟದಲ್ಲಿ ಮುಂದೆ ಹೋಗುತ್ತಿರುವ ವಿಜ್ಞಾನ ಯುಗದಲ್ಲೂ ಹಳ್ಳಿಗಳಲ್ಲಿ ಇಂದು ಯುವಕರಲ್ಲಿ ನಿರುತ್ಸಾಹ ಕಂಡುಬರುತ್ತಿದೆ. ಇದಕ್ಕೆ ಕಾರಣವಿಲ್ಲದಿಲ್ಲ. ಮೊಟ್ಟಮೊದಲನೆಯದಾಗ ಕಲ್ಪನೆಯೇ ಇಲ್ಲದಿರುವುದಾಗಿದೆ. ಕೇವಲ ಅನುಭವವೊಂದೇ ಕೆಲಸ ಕಾರ್ಯಗಳಿಗೆ ಪ್ರೇರಕವಲ್ಲ. ಕಾರ್ಯಕರ್ತನ ಉತ್ಸಾಹವೂ ದೈಹಿಕ ಶಕ್ತಿಯೂ ಅಗತ್ಯವಷ್ಟೇ, ಯುವಕರಿಗೆ ಪ್ರೋತ್ಸಾಹವೀಯದೇ ಹೋದಾಗ ಅವರು ನಿರುತ್ಸಾಹಿಗಳಾಗುವುದರಲ್ಲಿ ಇಂದು ಯುವಜನಾಂಗವು ತಂಬಾಕು, ಮಧ್ಯಪಾನ, ಗಾಂಜಾಮುಂತಾದ ಹತ್ತು ಹಲವು ದುಶ್ಚಟಗಳನ್ನು ತಮ್ಮದಾಗಿಸಿಕೊಂಡು ದೇಶಕ್ಕೆ ಮಾರಕವಾಗಿ ವರ್ತಿಸುತ್ತಿದ್ದಾರೆ. ನಮ್ಮ ಯುವಜನಾಂಗವು ಕೈಜಾರಿ ಹೋಗುತ್ತಿದೆ ಎನ್ನುವುದಕ್ಕೆ 2009 ರಲ್ಲಿ ನಡೆದ ತಾಜ್ ಹೋಟೆಲ್‌ ಭಯಾನಕ ಬಾಂಬ್‌ ಸ್ಫೋಟವೇ ಒಂದು ಉತ್ತಮ ನಿದರ್ಶನವಾಗಿದೆ. "ಮಾತು ಮನೆ ಕೆಡಿಸಿತು. ತೂತು ಒಲೆ ಕೆಡಿಸಿತು" ಎಂಬಂತೆ ನಮ್ಮ ದೇಶದಲ್ಲಿಯೇ ಹುಟ್ಟಿ ಬೆಳೆದು, ಅದೇ ದೇಶಕ್ಕೆ ವಿರುದ್ಧವಾಗಿ ನಿಲ್ಲುವ ಯುವ ಜನಾಂಗವನ್ನು ನಾವಿಂದು ಕಾಣುತ್ತಿದ್ದೇವೆ. ಕೋಮುಗಲಭೆ, ಜಾತೀಯತೆ ಮೊದಲಾದವುಗಳನ್ನು ಸೃಷ್ಟಿಸಿ ದೇಶಕ್ಕೆ ಮಾರಕವಾಗಿ ಇವರು ವರ್ತಿಸುತ್ತಿದ್ದಾರೆ.