ವಿಷಯಕ್ಕೆ ಹೋಗು

ಸದಸ್ಯ:Shivika Kunmar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ ನನ್ನ ಹೆಸರು ಕೆ ಶೀವಿಕ . ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳದಿದ್ದು. ನಾನು ಐದನೇ ಅಕ್ಟೋಬರ್ ೨೦೦೩ನಲ್ಲಿ ಮಾಲತಿ ಮಣಿಪಾಲ್. ಆಸ್ಪತ್ರೆಯಲ್ಲಿ ಹುಟ್ಟಿದು. ನಮ್ಮ ತಂದೆಯಾ ಹೆಸರು ಕುಮಾರ್ ಹಾಗು ತಾಯಿಯ ಹೆಸರು ಸುಮಿತ್ರ. ನನಗೆ ಒಬ್ಬಲು ಅಕ್ಕ ಇದ್ದಾಳೆ ಅವಳ ಹೆಸರು ಮಾಳವಿಕಾ,ಅವಳು ವಾಸ್ತುಶಿಲ್ಪಿ . ನನ್ನ ತಂದೆ ಡಿಪ್ಲೋಮ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ನ, ತಾಯಿ ಬ್ಯಾಚೆಲೊರ್ಸ್ ಇನ್ ಆರ್ಟ್ಸ್ ಮಾಡಿದ್ದಾರೆ.ನಮ್ಮ ತಂದೆ ಉದ್ಯಮಿಯಾಗಿ ಕೆಲಸ ಮಾಡುತ್ತಾರೆ, ನಮ್ಮ ತಾಯಿ ಗೃಹಿಣಿ. ನಾನು ಜಯನಗರದ ಒಂಬತ್ತನೇ ಬಡಾವಣೆಯಲ್ಲಿ ವಾಸವಾಗಿದ್ದೇನೆ. ಇಲ್ಲಿ ನನ್ನ ಅಜ್ಜ,ಅಜ್ಜಿ,ಚಿಕ್ಕಮ್ಮ,ಚಿಕ್ಕಪ್ಪ ಇದ್ದರೆ. ಜಯನಗರದ ವಿಷ್ಣುವರ್ಧನ್ ಉದ್ಯಾನವನದ ಮುಂದೆ ನನ್ನ ಸ್ನೇಹಿತೆ ಸಮೀಕ್ಷರೊಡನೆ ನಾನು ನನಗೆ  ಇಷ್ಟವಾದ ತಿಕ್ಕಿ ಪುರಿ ಹಾಗು ಭೇಲ್ ಪುರಿಯನ್ನು ಪ್ರತಿದಿನ ತಿನ್ನುತ್ತೆನೆ. ನಾನು ಪ್ರತಿ ಭಾನುವಾರ ಲಾಲ್ಬಾಗ್ ಸಸ್ಯಶಾಸ್ತ್ರೀಯ ಉದ್ಯಾನದಲ್ಲಿ ಹೋಗುತ್ತೇನೆ. ನನ್ನ ಇಷ್ಟವಾದ ವಿಷಯ ಇಂಗ್ಲಿಷ್, ಗಣಿತ,ವ್ಯವಹಾರ,ವಿಜ್ಞಾನ.

ನಾನು “ಇನ್ನಿಸ್ಫ್ರೀ ಹೌಸ್ ಸ್ಕೂಲ್” ಎಂಬ ಶಾಲೆಯಲ್ಲಿ ನರ್ಸರಿಯಿಂದ ಹತ್ತನೇ ತರಗತಿವರೆಗೂ ಆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ. “ಇನ್ನಿಸ್ಫ್ರೀ ಹೌಸ್ ಸ್ಕೂಲ್” ಜೆ.ಪಿ.ನಗರದ ೨ನೆ ಹಂತದಲ್ಲಿ ಇದೆ,ರಂಗಶಂಕರ ಪಕ್ಕದಲ್ಲಿದೆ ಆದರಿಂದ ನಾನು ಹಲವಾರು ನಾಟಕಗಳನ್ನು ನೋಡಿದ್ದೇನೆ. ಶಾಲೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಯಿಸುತಿದ್ದೆ. ಪ್ರತಿ ವರುಷ ಶಾಲೆಯವರು ನಮ್ಮನು ಪ್ರವಾಸಗಳಿಗೆ ಕರೆದುಕೊಂಡು ಹೋಗುತಿದ್ದರು.ಮೊದಲನೇ ಹಾಗು ಎರಡನೇ ಪಿ.ಯು.ಸೀ ವಿದ್ಯಾಭ್ಯಾಸವನ್ನು “ಟ್ರಾನ್ಸೆಂಡ್ ಕಾಲೇಜ್ನಳೀ” ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿ ಮುಗಿಸಿದೆ. ಈ ಕಾಲೇಜು ನಮ್ಮನು ಕೊನೆಯ ವರುಷದಲ್ಲಿ ಮಡಿಕೇರಿಗೆ ಕರೆದುಕೊಂಡು ಹೋಗಿದ್ದರು.ಇವಾಗ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಮೊದಲನೇ ವರ್ಷದ ಬ್ಯಾಚುಲರ್ಸ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮಾಡುತಿದ್ದೇನೆ. ಇಲ್ಲಿಯವರೆಗೂ ನಡೆದಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ “ಉಡಿಟಿ” ಎಂಬುವಿದಲ್ಲಿ ನಾನು ನರ್ತನೆಯಲ್ಲಿ ಭಾಗವಯಿಸಿದೆ. ನಾನು ಹೊದಿರುವ ಎಲ್ಲ ಶಾಲೆ ಹಾಗು ಕಾಲೇಜುಗಳಲ್ಲಿ ಇರುವ ಎಲ್ಲ ಉಪಾಧ್ಯಾಯರು ಯಾವಾಗಲು ನನನ್ನು ವೊಲ್ಯ್ಯಾ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದರು ಹಾಗು ಪಾಠವನ್ನು ಅರ್ಥವಾಗುವಂತೆ ಹೇಳಿಕೊಡುತ್ತಿದ್ದರು.

ನಾನು ಉಪಾಧ್ಯಾಯರಿಗೆ ಚಿರಋಣಿಯಾಗಿದ್ದೇನೆ. ನಾನು ವಿದ್ಯಾಭ್ಯಾಸ ಮಾಡಿದ ಸ್ಥಳಗಳ್ಲಲಿ ಹಲವಾರು ಒಳೆಯ ಸ್ನೇಹಿತರನ್ನು  ಮಾಡಿಕೊಂಡಿದ್ದೇನೆ. ನಾನು ಶಾಲೆಯಲ್ಲಿ ವಿನಿಷಾ ಹಾಗು ಆರ್ಯ ಎಂಬ ಆಪ್ತಸ್ನೇಹಿತಿಯರು ಇದ್ದರು. ಪಿ.ಯು.ಸೀಯಲ್ಲಿ ನಾನು ಸ್ಮ್ರಿತಿ ಮತ್ತು ವಿಭಾ ಎಂಬುವ ಗೆಳತಿಯರು ಇದ್ದರು. ಇವರು ನನ್ನಗೆ ಹೇಗೆ ಮೋಜು ಮಾಡದು,ಆಟ,ಸಂವಹನ,ನಿಷ್ಠೆ,ಸಹಾನುಭೂತಿ,ಇತ್ಯಾದಿ ಹೇಳುಕೊಟ್ಟರು. ನಮಗೆ ಹೀಗ ಭೇಟಿಯಾಗಲು ಸಮಯದ ಅಭಾವ ಇರುವುದರಿಂದ ತಿಂಗಳಿಗೆ ಒಂದು ದಿನ ಸಮಯ ಮಾಡಿಕೊಂಡು ಭೇಟಿಯಾಗುತ್ತೆವೆ. ಈ ವರುಷದ ಜೂಲೈ ತಿಂಗಳಿನಲ್ಲಿ ವಿನಿಷಾ ಹಾಗು ಆರ್ಯ ಜೊತೆ ಪಾಂಡಿಚೆರಿಗೆ ಮೊದಲನೆಯ ಸಾರಿ ಬಸ್ಸಿನಲ್ಲಿ ಪ್ರಯಾಣಮಾಡಿದೆ. ಅದು ಒಂದು ಹೊಸ ಅನುಭವವಾಗಿತ್ತು. ಅಲ್ಲಿ ಆರೋವಿಲ್,ಫ್ರೆಂಚ್ ವಸ್ತುಸಂಗ್ರಹಾಲಯ,ಬೀಚ್, ಕುಂಬಾರಿಕೆ ತರಬೇತಿ,ರುಚಿರುಚಿಯಾದ ಉಪಹಾರವನ್ನು ಸೇವಿಸಿದೆ.

ನನಗೆ ಕತೆ ಪುಸ್ತಕಗಳ್ಳನು ಓದುವುದು ತುಂಬಾ ಇಷ್ಟ. ನಾನು ಈಗ ಜರ್ಮನ್ ಭಾಷೆಯನ್ನು ಕಲಿಯುತ್ತಿದ್ದೇನೆ.ಚಿತ್ರಕಲೆ ಹಾಗು ನರ್ತನ ತುಂಬಾ ಇಷ್ಟ.ಆದರಿಂದ ಚಿಕ್ಕ ವಯಸ್ಸಿನಲ್ಲಿ ತರಭೇತಿ ಶಾಲೆಗೇ ಹೋಗುತಿದ್ದೆ. ಬೇರೆ ದೇಶದ ಅಡಿಗೆಯನ್ನು ಯೌಟ್ಯೂಬಿನಲ್ಲಿ ನೋಡಿ ಮಾಡುತ್ತೇನೆ. ಹಲವಾರು ಭಾಷೆಗಳ ಚಲನಚಿತ್ರಗಳನ್ನು ನೋಡುವ ಆಸಕ್ತಿಯಿದೆ. ಹೊಸ ಹೊಸ ಪ್ರವಾಸಿ ಸ್ಥಳಗಳನ್ನು ನೋಡುವುದುಕ್ಕೆ ಕುಟುಂಬ ಸಮೇತ ಹೋಗುತ್ತೆನೆ.ನಾನು ನಾಲ್ಲಕು ವರುಷ ಇರುವಾಗ ನಾನು ಈಜುವ ತರಗತಿಗೆ ಸೇರಿಕೊಂಡಿದ್ದೆ,ಅವಾಗಿಂದ ನನಗೆ ಈಜುವುದು ಎಂದರೆ ತುಂಬಾ ಇಷ್ಟ.ನಾನು ಥೈಲ್ಯಾಂಡ್ ಹೋಗಿದ್ದಾಗ ಅಲ್ಲಿರುವ ಸಮುದ್ರದಲ್ಲಿ ಹಲವಾಗಿರುವ ಜಾಗದಲ್ಲಿ ಈಜಿದೆ.

ನನ್ನ ಮರೆಯಲಾದ ಘಟನೆಎಂದರೆ ನಾನು ಮೂರು ವರುಷಯಿದ್ದಾಗ ಉಯ್ಯಾಲೆ ಆಡುವಾಗ ಬಿದ್ದು ತುಟಿಗೆ ಗಾಯವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು ಮರೆಯಲಾದ ಘಟನೆ.ಶಸ್ತ್ರಚಿಕಿತ್ಸೆಯನ್ನು ಸಾಗರ್ ಆಸ್ಪತ್ರೆಯಲ್ಲಿ ಮಾಡಿಸಿಕೊಂಡಿದ್ದು, ಈಗ ಕಾಲೇಜಿನಿಂದ ಬರುವಾಗ ಆಸ್ಪತ್ರೆ ನೋಡಿ ಈ ಘಟನೆ ನಾಪಕಕ್ಕೆ ಬರುತ್ತದೆ. ಹೊಸ ಗೆಳೆಯರನ್ನು ಭೇಟಿ ಮಾಡಿದಾಗ ಇದರ ಬಗ್ಗೆ ಮಾತಾಡುತ್ತೇನೆ. ಹಾಗು ನನ್ನ ಅದಿನೆಂಟನೇ ಹುಟ್ಟುಹಬ್ಬದಲ್ಲಿ ನನ್ನ ಪರಿವಾರ ಹದಿನೆಂಟು ಬಹುಮಾನವನ್ನು ಕೊಟ್ಟರು, ಇದು ನನಗೆ ಬಹಳ ಸಂತೋಷ ಕೊಟ್ಟಿತು.

ಇನೊಂದು ಮರೆಯಲಾದ ಘಟನೆ ನಾನು ಮಡಿಕೇರಿಯಲ್ಲಿದ್ದ ಜೆರ್ರಿ ಜಲಪಾತದಲ್ಲಿ ನಾವು ಎಲ್ಲರು ತಪ್ಪು ದಾರಿಯಲ್ಲಿ ಹೋಗಿ ಕಾಲಿಗೆಲ್ಲ ಜಿಗಣೆಗಳು ಕಚ್ಚಿತ್ತು.ನಾವು ಭಯ ಪಟ್ಟು ಇನ್ನು ದೂರ ಓಡಿ ನಯಗಳಿಂದ ಹತ್ತಿಸ್ಕೊಂಡು ನೆನಪುಗಳನ್ನು ಮಾಡಿಕೊಂಡ್ವಿ.

ನನಗೆ ಪ್ರಾಣಿಗಳಂದರೆ ತುಂಬಾ ಇಷ್ಟ. ಮನೆಯಲ್ಲಿ ಮುಂಚೆ ಮೀನುಗಳು ಇದ್ದವು.ನಾನು ಪ್ರತಿದಿನ ಆಹಾರ ನೀಡುತ್ತಿದೆ, ವಾರಕ್ಕೆ ಒಂದು ಸಾರಿ ಟ್ಯಾಂಕ್ವನ್ನು ಸ್ವಚ್ಛ ಮಾಡು ತಿದ್ದೇನೆ. ಅವು ಸತ್ತಿಹೋದ ಮೇಲೆ ಬಹಳ  ದುಃಖವಾಯಿತು ಆದರಿಂದ ಈಗ ಮೀನುಗಳನ್ನು ಸಾಕುತ್ತಿಲ್ಲ.ನಾನು ಚಿಕ್ಕ ವಯಸ್ಸಿನಿಂದಲೂ ನಾಯಿಗಳಂದರೆ ಇಷ್ಟ. ಮನೆಗೆ ನಾಯಿ ಭೇಕು ಎಂದು ಹಠ ಮಾಡುತಿದ್ದೇನೆ ಆದರೂ ನನ್ನ ತಂದೆ ತಾಯಿ ಕೊಡಿಸಿಲ್ಲ. ಬೇಸಿಗೆ  ಕಾಲದಲ್ಲಿ ನಾವು ಮಂಡೆಯ ಎದುರಿಗೆ ಬಾಟಲಿನಲ್ಲಿ ನೀರು ಹಾಗು ಆಹಾರವನ್ನು ಪ್ರಾಣಿ ಪಕ್ಷಿಗಳಿಗೆ ಇಡುತ್ತೆವೆ.ನನ್ನ ಕನಸು ಕಾಜಿರಂಗ ರಾಷ್ಟೀಯ ಉದಯನವನ್ನು ನೋಡುವುದು.

ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಬಿ.ಎ ಮುಗಿಸಿ, ಎಂ.ಬಿ.ಎ ಮಾಡಿ ಕೆಲಸಕ್ಕೆ ಸೇರಲು ಯೋಚಿಸಿದ್ದೇನೆ. ಸಮಾಜ ಸೇವೆಯಾ ಮೂಲಕ ವಯಸಾದವರಿಗೆ,ಮಕ್ಕಳಿಗೆ,ಅಂಗವಿಕಲರಿಗೆ,ಪ್ರಣಿಗಳಿಗೆ ನನ್ನ ಸಹಾಯವನ್ನು ನೀಡುತ್ತೆನೆ.ಚಿಕ್ಕವಳಿಂದಲೂ ನನಗೆ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿಯಿದೆ ಆದರಿಂದೆ ನನ್ನ ಕಯ್ಯಲಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತೇನೆ ಹಾಗು ಅದರ ಬಗ್ಗೆ ಬೇರೆ ಯವರಿಗೆ ತಿಳಿಸಲು ಗುರಿಯಿತ್ತಿಕುಂದಿದೇನೆ. ನಾನು ಹೊಸ ಹೊಸ ಕಾರ್ಯವನ್ನು ತಿರಸ್ಕರಿಸುತಿದ್ದೆ ಆದರಿಂದ ನಾನು ಎಲ್ಲವನ್ನು ಪ್ರಯತ್ನಿಸಲು ನುಡಿ ಕೊಟ್ಟಿದ್ದೇನೆ,ಭಯ ಮಾಡಿಕೊಳ್ಳುವುದಿಲ್ಲ.ನಾನು ಈ ವರುಷ ಮುಗಿಯುವ ಮೊದಲು ನನ್ನ ದ್ವಿ ಚಕ್ರ ವಾಹನದ ಪರವಾನಗಿ ಪಡೆಯಲು ಗುರಿಯಿಟ್ಟಿಕೊಂಡಿದ್ದೇನೆ.

ಇತ್ತೀಚಿಗೆ ನಾನು "ಆನಿಮ್" ಎನ್ನುವ ಚಲನಚಿತ್ರವನ್ನು ನೋಡ್ದಿದೆ. ಇದು ನನ್ನ ಯೋಚನೆಯನ್ನು ಬದಲಾಯಿಸಿದೆ. "ಆನಿಮ್" ಜಪಾನ್ ದೇಶದಲ್ಲಿ ಹುಟ್ಟಿದು, ಇದರಲ್ಲಿ ಜನ್ನರು ತನ್ನ ಯೋಚನೆ ಹಾಗು ಕಲ್ಪನೆಯನ್ನು "ಕಾರ್ಟೂನ್" ಚಿತ್ರಗಳಿಂದ ತೋರಿಸುತ್ತಾರೆ. ನಾವು ಮಕ್ಕಳಾಗಿದಾಗ ಹಲವಾರು "ಕಾರ್ಟೂನ್" ಚಿತ್ರಗಳನ್ನು ನೋಡುತಿದ್ವಿ, ಉದಾಹರಣೆಗೆ "ದೊರಯ್ಮೊನ್" ಹಾಗು "ಶಿಂಚನ್". ಎಷ್ಟೊಂದು ಜನ್ನರು ಇದು ನಿಜವಾದ ಚಿತ್ರವಲ್ಲ ಬರಿ ಮಕ್ಕಳು ನೋಡುವುದು ಎಂದು ವಾದ ಮಾಡಿದ್ದಾರೆ. ಆದರೆ ನನ್ನ ಅಭಿಪ್ರಾಯದಲ್ಲಿ ಈ ಚಿತ್ರದಲ್ಲಿ ನಾವು ಭಾವನೆಗಳ್ಳನ್ನು ಇನ್ನೂ ಚೆನ್ನಾಗಿ ತೋರಿಸಬಹದು. ನಾನು ಈ ಚಿತ್ರಕಲಾವನ್ನು ಇನ್ನೂ ಕಲಿಯಲ್ಲೂ ನಿರ್ಣಯಿಸಿದ್ದೇನೆ.

ಹೀಗುಯೆ ನಾನು ಈ ನಡುವೆ ಹಲಾವಾರು ಕಲೆಗಳ್ಳನ್ನು ಕಲಿಯಲು ನಿಶ್ಚಯಿಸಿದ್ದೇನೆ ಎಕ್ಕೆಂದರೆ ಈ ಕಲೆಗಳು ನನ್ನ ಇಡೀ ಜೀವನದಲ್ಲಿ ಉಪಯೋಗಕ್ಕೆ ಬರುತ್ತದೆ ಹಾಗು ನನಗೆ ಖುಷಿ ತರುತ್ತದೆ. ನನ್ನ ಗೆಳತೀ ನನಗೆ "ಕಥಕ್" ಹೇಳಿ ಕೊಡುತಿದ್ದಾಳೆ. ಇದು "ಭಾರತನಾಟ್ಯಮ್" ನೃತ್ಯಕ್ಕೆ ತುಂಬಾ ಸಮಾನ ರೂಪದಲ್ಲಿದೆ. ಈ ವರ್ಷ ಮುಗಿಯುವ ಮುನ್ನ ನಾನು ಕನಿಷ್ಟಪಕ್ಷ ಎರಡು ಹೊಸ ಕಲೆಯನ್ನು ಕಲಿಯುವದಕ್ಕೆ ಗುರಿ ಇಟ್ಟುತೇನೆ. ನಾನು ಚಿಕ್ಕವಳಾಗಿದ್ದಾಗ, ಭಾರತನಾಟ್ಯಮ್ ಹಾಗು "ಹಿಪ್ ಹಾಪ್" ಕಳುತಿದ್ದೆ. ಇದು ನನಗೆ ವ್ಯಾಯಾಮದ ಮಹತ್ವ ತಿಳಿಸಿತು. ನಾವು ನಮ್ಮ ದೇಹವನ್ನು ಚಲಿಸಬೇಕು. ನಮ್ಮ ದೇಹ ಅತ್ಯಂತ ವಾದ ಸ್ಥಿತಿಯಲ್ಲಿರ ಬೇಕು. ದೇಹದ ಜ್ಯೋತೆ ನಮ್ಮ ಬುದ್ಧಿಯನ್ನೂ ಬೆಳೆಸ ಬೇಕು. ನಾನು "ಅಬಾಕಸ್"ನನ್ನ ಕಳ್ಳಿತಿದ್ದೆ.

ನಾನು ಹಿಂದಿನ ವಾರ ಕಾಲೇಜಿಂದ ಕೈಗಾರಿಕಾ ಭೇಟಿಗೆ ಹೆಚ್.ಎಂ.ಟೀ ಖಾರ್ಕಾನೆಗೆ ಹೋಗಿದೆ. ಅಲ್ಲಿ ಹಲವಾರು ಕಾರ್ಮಿಕರನ್ನು ಭೇಟಿಮಾಡಿದೆ. ಒಂದು ದೊಡ್ಡ ಯಂತ್ರಕ್ಕೆ ,ಚಿಕ್ಕ ಭಾಗ ಮಾಡಲು ಹಲವಾರು ವಾರಗಳು ಕೆಲಸ ಮಾಡುತ್ತಾರೆ. ಇದನ್ನು ನೋಡಿ ನನ್ನಗೆ ಸ್ಪೂರ್ತಿ ಸಿಕ್ಕಿತು. ನಾನು ಹೀಗೇ ನನ್ನ ವೃತ್ತಿಯನ್ನು ಬೆಳಿಸಲ್ಲು ಕಷ್ಟಪಡುತ್ತೇನೆ, ಇದರಿಂದ ನನ್ನ ಗುರಿಯನ್ನು ಪೂರ್ಣಗೊಳಿಸಿದ ತೃಪ್ತಿಯನ್ನು ನಾನು ಅನುಭವಿಸಬಹುದು. ಈ ಖಾರ್ಕಾನೆಯಲ್ಲಿ ಜನರು ೧೫-೨೦ ವರುಷಗಳು ಅಲ್ಲಿಯೇ ಕೆಲಸ ಮಾಡುತಿದ್ದರು, ಆದರೂ ಅದೇ ಉತ್ಸಾಹದಿಂದ ನಮಗೆ ವರ್ಣಿಸುತ್ತಿದ್ದರು, ಹೇಳಿಕೊಡುತ್ತಿದ್ದರು. ನಮ್ಮಪ್ಪ ಅವರು ಚಿಕ್ಕವರಾಗಿದ್ದಾಗೆ ಅಲ್ಲಿಯೇ ಪಕ್ಕದಿಲ್ಲದ ಮತ್ತೊಂದು ಹೆಚ್. ಎಂ .ಟೀ ಖಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದ್ದರಿಂದ ನನಗೆ ತುಂಬಾ ಸಂತೋಷವಾಯಿತು.

ನಾನು ಹಿಂದಿನ ವರಷು ನನ್ನ ಕುಟುಂಬ ಸಮೇತ ಗೋವಾಗೆ ಹೋಗಿದೆ, ಅವಾಗ ನಾವು ಒಂದು ಮಸಾಲೆಯ ತೋಟಕ್ಕೆ ಹೋಗಿದ್ದೆ ಅಲ್ಲಿ ನಮ್ಮಗೆ ಹಲವಾರು ಬೀಜಗಳ್ಳನ್ನು ಕೊಟ್ಟಿದ್ದರು, ಅದನ್ನು ನಾನು ಮನೆಗೆ ಬಂಡ ಕೂಡಲೇ ಅದನ್ನು ನೆಟ್ಟಿದೆ. ಅದು ಈಗ ಚಿಗುರಿ ನಮ್ಮಗೆಲ್ಲ ಮಸಾಲೆಯನ್ನು ಕೊಟ್ಟಿದೆ. ಮೆಣಸಿನಕಾಯಿ, ಕಪ್ಪು ಮೆಣಸು, ಕರಿಬೇವು, ಇತ್ಯಾದಿ ನಮ್ಮ ಮನೆಯಲ್ಲಿ ಬೆಲ್ಲಸಿ ನಾನು ಅವನ್ನು ನಮ್ಮ ಅಡುಗೆಯಲ್ಲಿ ಉಪಯೋಗಿಸಿದ್ದೇನೆ. ಇದು ನನ್ನಗೆ ಇನ್ನು ಹೆಚ್ಚು ತೃಪ್ತಿಯನ್ನು ಕೊಟ್ಟಿದೆ. ಎಲ್ಲವು ರುಚಿ ರುಚಿಯಾಗಿದೆ. ನಾನು "ಗೋವಾ"ಗೆ ಹೋಗಿದ್ದಾಗ ಹಲವಾರು ಚುರ್ಚುಗಳನ್ನು ಹಾಗು ಕಡಲತೀರಗಳ್ಳನ್ನು ನೋಡಿದೆ. ಅಲ್ಲಿನ ತಿಂಡಿ ಬಹಳ ರುಚಿಕರವಾಗಿತ್ತು. "ಗೋವಾ"ದಲ್ಲಿ ಪೋರ್ಚುಗೀಸ್ ಬಂದು ವಸಾಹತುವನ್ನಾಗಿಸಿದರು ಆದ್ದರಿಂದ ಎಲ್ಲಿನ್ನ ಭಾಷೆ,ತಿಂಡಿ.ಕೆಲಸ,ಸಂಸ್ಕೃತಿಯೆಲ್ಲವೂ ಪ್ರಭಾವವಾಗಿದೆ.

ನಾನು ಕ್ರಿಸ್ಮಸ್ ರಜೆಗಳ್ಲಲಿ ನನ್ನ ಟಾಟಾನ ಊರಿಗೆ ಹೋಗಿದ್ದೆ, ಅಲ್ಲಿ ರಾತ್ರಿಯ ಹೊತ್ತಿನಲ್ಲಿ ಎಲ್ಲ ನಕ್ಷತ್ರಗಳು ಕಾಣಿಸುತ್ತದೆ. ಅದು ನಾವು ನಗರದಲ್ಲಿ ನೋಡಲಾಗದು. ಅಲ್ಲಿನ ಪ್ರಕೃತಿ ಬಹಳ ಸುಂದರವಾಗಿತ್ತು, ಅಲ್ಲಿನ ಗಾಳಿಯು ತಂಡಿಯಾಗಿತ್ತು. ನಾವು ಅಲ್ಲಿನ ತೋಟಗಳ್ಲಲಿ ತೆಂಗಿನಕಾಯಿಯನ್ನು ಬೆಳೆಸುತ್ತೇವೆ ಆದರಿಂದ ನಾನು ಪ್ರತಿದಿನ ಬೆಳಗೆ ಸಿಹಿ-ಸಿಹಿಯಾದ ಎಳನೀರನ್ನು ಕುದಿಯುತ್ತಿದೆ.ನನ್ನ ದೂರದ ಸಂಬಂಧಿಕರು ಕುರಿ ಹಾಗು ಮೇಕೆಗಲ್ಲನ್ನು ಬೆಳೆಸುತ್ತಾರೆ. ಅವುಗಳ್ಳನ್ನು ನೋಡೀ ನನ್ನಗೆ ತುಂಬಾ ಮೋಜು ಕಾಣಿಸಿತು.

ನಾನು ನನ್ನ ಮನೆಯ ಹತ್ತಿರ ಇರುವ ಕುಂಬಾರಿಕೆ ಕಾರ್ಯಾಗಾರದಲ್ಲಿ ಪಾಠಗಳನ್ನು ಕಲಿಯುತ್ತಿದ್ದೇನೆ. ಮಣ್ಣಿನ ಜ್ಯೋತೆ ಆತ ಆಡಲು ನನ್ನಗೆ ತುಂಬಾ ಖುಷಿಯಾಗಿತ್ತು,ಆದರೆ ಒಂದು ಮಡಿಕೆ ಮಾಡಲು ನನಗೆ ತುಂಬಾ ಕಷ್ಟ ಆಯಿತು. ಮಣ್ಣಿನ ಮಡಿಕೆ ಒಣಗಲು ತುಂಬಾ ಹೊತ್ತು ತೊಗೊಳುತ್ತದೆ. ನಾನು ಮಡಿಕೆಯ ಮೇಲೆ ಮೀನುಗಳನ್ನು ಚಿತ್ರಿಸಿದೆ. ಮೀನುಗಳ ಜ್ಯೋತೆ ನಾನು ನೀರಲ್ಲಿ ಇರುವ ಗಿಡಗಲ್ಲನ್ನೂ ಚಿತ್ರಿಸಿದೆ. ನನಗೆ ಮಡಿಕೆಯನ್ನು ಆರಂಭದಿಂದ ಮಾಡಿ ತುಂಬಾ ಸಂಟಿಶವಾಯಿತು ಆದರಿಂದ ನಾನು ಕುಂಬಾರಿಕೆಯೇ ಪಾತಗಳ್ಳನ್ನು ಮುಂದುವರಿಸಲು ನಿಶ್ಚಯಿಸಿದೆನೇ.

ನನ್ನ ಮೊದಲನೆಯ ಸೆಮಿಸ್ಟರ್ ಅಂತಿಮ ಪರೀಕ್ಷೆಗಳಲ್ಲಿ ನಾನು ಒಳ್ಳೆಯ ಅಂಕಗಳು ಗಳಿಸಿದ್ದೇನೆ. ನಾನು ಇನ್ನು ಮುಂದೆ ಇದಕ್ಕಿಂತ ಚನ್ನಾಗಿ ಮಾಡಲು ನಂಬಿಕೆ ಇಟ್ಟಿದ್ದೇನೆ. ಈ ಎರಡನೇ ಸೆಮೆಸ್ಟರಲ್ಲಿ ನನಗೆ ಹೊಸ ಹಾಗು ಕಷ್ಟವಾದ ವಿಷಯಗಳು ಅಧ್ಯಾಪಕರು ಹೇಳಿ ಕೊಡುತ್ತಿದ್ದಾರೆ. ನಾನು ಈ ಹಿಂದಿನ ೬ ತಿಂಗಳಿನಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಹಲವಾರು ವಿಚಾರದ ಬಗ್ಗೆ ಕಲಿತಿದ್ದೇನೆ, ಮಾತೆ ಇನ್ನು ಕೂಡ ಕಳ್ಳಿಯಲ್ಲೂ ನಿರೀಕ್ಷಿಸುತೆನೆ.