ಸದಸ್ಯ:Shivayya D P H Kallur
ಮಂದಿರದ ಎಲ್ಲ ದೇವತೆಗಳಿಗೆ ಪೂಜೆ ನೈವೇದ್ಯ, ಹಾಗೂ ದೇವಾಲಯದ ಹೊರಗೆ ಸ್ವಲ್ಪ ದೂರದಲ್ಲಿರುವ ಅಷ್ಠ ಧಿಕ್ಪಾಲಕರಿಗೂ ಪೂಜೆ ನೈವೇದ್ಯ ಮಂಗಳಾರತಿ ಮುಖೇನ ತನುಮನದಿಂದ ಸೇವೆ ಸಲ್ಲಿಸುತ್ತಾರೆ. ಸರ್ವ ಧರ್ಮದ ಭಕ್ತರು ಭಕ್ತಿಯಿಂದ ಕೈಮುಗಿದು ಶಿರಬಾಗಿ ನಮಿಸುವರು, ವೀರಶೈವದ ಪುರವಂತರು ವೀರಭದ್ರೇಶ್ವರ ಗುಗ್ಗುಳ ಹಚ್ಚುವರು, ನಾಡಿನ ಮಹಾನ್ ವಿದ್ವಾಂಸರುಗಳಿಂದ ಹಿಂದೂಸ್ತಾನಿ-ಕರ್ನಾಟಕೀಯ ಶಾಸ್ತ್ರೀಯ ಸಂಗೀತ, ಶ್ರೀ ಕಾಳಿಕಾದೇವಿಯ ಮಹಾಭಕ್ತ(ಬಡಿಗಾರರು)ರಿಂದ ಎತ್ತಿನ ಕೊಂಬಿನಲ್ಲಿ ಮದ್ದು ಸುಡುವುದು, ಗ್ರಾಮದ ಮತ್ತು ಸುತ್ತಮುತ್ತಲಿನ ನೆರೆಯೂರುಗಳ ಯುವಕರಿಂದ ಸಾಹಸ ಕಲೆಗಳು, ನವ ಆವಿಷ್ಕಾರಗಳು ನವ-ಕಲೆಗಳು(ಸಾಹಿತ್ಯ, ಚಿತ್ರಕಲೆ, ಮೂರ್ತಿಕೆತ್ತನೆ, ಸುಂದರ ಮಾದರಿ ನಗರ ನಿರ್ಮಾಣ, ನಾಟ್ಯ ನೃತ್ಯ) ರ್ಲೋಕಾರ್ಪಣೆ, ಸಾಧಕರ ಪ್ರಶಸ್ತಿ ಪ್ರಧಾನ ಸೇರಿ ನಾನಾ ವಿಧದ ಕಾರ್ಯಕ್ರಮಗಳು ನಡೆಯುತ್ತವೆ. ನಂತರ ಮಹಾದೀಪೋತ್ಸವ ಕಾರ್ಯಕ್ರಮ ನಿರಂತರ ಅನ್ನಸಂತರ್ಪಣಾ ಮಹಾಧಾಸೋಹ ಬಹು ವಿಜ್ರಂಭಣೆಯಿಂದ ಶ್ರೀ ಕಲ್ಪುರ ಕಲ್ಲೀನಾಥೇಶ್ವರ ಜಾತ್ರಾ ಕಾರ್ತಿಕೋತ್ಸವ ಜರುಗುವುದು, ಶ್ರಾವಣ ಮಾಸದಲ್ಲಿ ಎಲೆ ಚಟ್ಟು ಕಟ್ಟಿಸಲಾಗುತ್ತದೆ. ಅಲ್ಲದೇ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ.ನಾಗರ ಪಂಚಮಿಯಂದು ಗ್ರಾಮದ ಊರಿನ ಹಿರಿಯರ ಸಮ್ಮುಖದಲ್ಲಿ, ವಿಳ್ಯದೆಲೆಯಲ್ಲಿ ಮೂರ್ತಿಯನ್ನು ಅಲಂಕಾರಗೊಳಿಸಲಾಗುತ್ತದೆ. ದೇವಸ್ಥಾನಲ್ಲಿ ಪ್ರತಿ ಅಮಾವಾಸ್ಯೆಗೊಮ್ಮೆ ಅನ್ನ ಸಂತರ್ಪಣೆ ನಡೆಯುತ್ತದೆ. ಕಾರ್ತಿಕೋತ್ಸವ, ಯುಗಾದಿ ಪಾಡ್ಯದಲ್ಲಿ ಮಹಾ ದಾಸೋಹ ಹಮ್ಮಿಕೊಳ್ಳಲಾಗುತ್ತದೆ.
ಮಾರ್ಗಸೂಚಿ
ಹೇಗೆ ಬರಬೇಕು ?.
ಕುಷ್ಟಗಿಯಿಂದ 45 ಕಿ.ಮೀ., ಗಜೇಂದ್ರ ಗಡದಿಂದ 20 ಕಿ.ಮೀ. ಯಲಬುರ್ಗಾ ಪಟ್ಟಣದಿಂದ ಉತ್ತರದಿಂದ ದಕ್ಷಿಣ ದಿಕ್ಕಿಗೆ 15 ಕಿ.ಮೀ. ಸಂಚರಿಸಿದರೆ ಕಲ್ಲೂರು ಗ್ರಾಮ ಸಿಗುತ್ತದೆ. ಅತ್ತ ಕುಕನೂರಿನಿಂದ ದಕ್ಷಿಣದಿಂದ ಉತ್ತರಕ್ಕೆ 15 ಕಿ.ಮೀ ಕ್ರಮಿಸಿದರೆ ಅದೇ ಕಲ್ಲೂರ ಗ್ರಾಮ ಸೇರುವಿರಿ., ಹಾಗೆಯೇ ಆಗ್ನೇಯಕ್ಕೆ ಕೊಪ್ಪಳದಿಂದ 30 ಕಿ.ಮೀ., ಗದಗದಿಂದ ಪಶ್ಚಿಮದ ಈಶಾನ್ಯ ದಿಕ್ಕಿಗೆ 60 ಕೀ. ಮೀ, ದೂರದಲ್ಲಿದೆ. ಗದಗು ಕೊಪ್ಪಳದಿಂದ ಚಲಿಸಿದರೆ, ಇಟಗಿಯ ಮಹಾದೇವ ದೇವಾಲಯ ಮತ್ತು (ಪಾಂಡವರ ಕುಂತಳ) ಕುಕನೂರಿನಲ್ಲಿರುವ ಮಹಾಮಾಯೆ ದೇವಾಲಯ ಹಾಗೂ ಇಲ್ಲಿನ ನಾನಾ ದೇವಸ್ಥಾನಗಳನ್ನು ನೋಡಬಹುದು.