ಸದಸ್ಯ:Shiva prasad b1998/ನನ್ನ ಪ್ರಯೋಗಪುಟ
ಗ್ಲುಕೋಸ್
[ಬದಲಾಯಿಸಿ]ಗ್ಲುಕೋಸ್ (Glc) ಒಂದು ಸರಳ ಶರ್ಕರವಾಗಿದ್ದು (ಮೋನೊಸ್ಯಾಕರೈಡ್) ಜೀವಶಾಸ್ತ್ರದಲ್ಲಿನ ಒಂದು ಪ್ರಮುಖ ಕಾರ್ಬೊಹೈಡ್ರೇಟ್(ಶರ್ಕರ ಪಿಷ್ಟ)ವಾಗಿದೆ. ಜೀವಕೋಶಗಳು ಇದನ್ನು ಶಕ್ತಿಯ ಮೂಲವಾಗಿ ಮತ್ತು ಚಯಾಪಚಯ ಕ್ರಿಯೆಯ ಮಧ್ಯವರ್ತಿಯಾಗಿ ಬಳಸಿಕೊಳ್ಳುತ್ತವೆ.ಗ್ ಗ್ಲುಕೋಸ್ ದ್ಯುತಿಸಂಶ್ಲೇಷಣೆ ಕ್ರಿಯೆಯ ಒಂದು ಮುಖ್ಯ ಉತ್ಪನ್ನ ಮತ್ತು ಇದು ಜೀವಕೋಶಗಳ ಉಸಿರಾಟ ಕ್ರಿಯೆಯನ್ನು ಆರಂಭಿಸುತ್ತದೆ. ಪಿಷ್ಟ ಮತ್ತು ಸೆಲ್ಯುಲೋಸ್ ಗ್ಲುಕೋಸ್‌ನ ನಿರ್ಜಲೀಕರಣದಿಂದ ಪಡೆಯುವ ಪಾಲಿಮರ್‌ಗಳಾಗಿವೆ. "ಗ್ಲುಕೋಸ್" ಪದವು "ಸಿಹಿ" ಎಂಬರ್ಥವಿರುವ ಗ್ರೀಕ್ ಪದ glukus (ಗ್ಲುಕುಸ್) (γλυκύς)ನಿಂದ ಬಂದಿದೆ. ಉತ್ತರ ಪ್ರತ್ಯಯ "-ose" ಶರ್ಕರವನ್ನು ಸೂಚಿಸುತ್ತದೆ.
ಗ್ಲುಕೋಸ್ ಅನೇಕ ವಿಧದ ರಚನೆಗಳನ್ನು ಹೊಂದಬಹುದು. ಆದರೆ ಈ ಎಲ್ಲಾ ರಚನೆಗಳನ್ನು ಕನ್ನಡಿ-ಬಿಂಬಗಳ ಎರಡು (ತಂತು)ವಂಶಗಳಾಗಿ (ಸ್ಟೀರಿಯೊಐಸೋಮರ್‌ಗಳು(ಸಮಸ್ಥಾನಿಕಗಳು) ವಿಭಾಗಿಸಬಹುದು. ಈ ಐಸೋಮರ್‌ಗಳ ಕೇವಲ ಒಂದು ಜೊತೆ ಮಾತ್ರ ನಿಸರ್ಗದಲ್ಲಿ ಅಸ್ತಿತ್ವದಲ್ಲಿದೆ. ಅದನ್ನು ಗ್ಲುಕೋಸ್‌ನ "ಬಲ-ಭಾಗದ ರೂಪ"ದಿಂದ ಪಡೆಯಲಾಗಿದ್ದು, D-ಗ್ಲುಕೋಸ್ ಎಂದು ಸೂಚಿಸಲಾಗುತ್ತದೆ. D-ಗ್ಲುಕೋಸ್‌ಅನ್ನು ಹೆಚ್ಚಾಗಿ, ವಿಶೇಷವಾಗಿ ಆಹಾರ ಉದ್ಯಮದಲ್ಲಿ ಡೆಕ್ಸ್‌ಟ್ರೋಸ್ ಎಂದು ನಿರೂಪಿಸಲಾಗುತ್ತದೆ. ಡೆಕ್ಸ್‌ಟ್ರೋಸ್ ಪದವನ್ನು ಡೆಕ್ಸ್‌ಟ್ರೊರೊಟೇಟರಿ ಗ್ಲುಕೋಸ್ ನಿಂದ ಪಡೆಯಲಾಗಿದೆ. ಡೆಕ್ಸ್‌ಟ್ರೋಸ್‌ನ ದ್ರಾವಣವು ಧ್ರುವೀಕೃತ ಬೆಳಕನ್ನು ಬಲಕ್ಕೆ ತಿರುಗಿಸುತ್ತದೆ (ಲ್ಯಾಟಿನ್‌ನಲ್ಲಿ: ಡೆಕ್ಸ್‌ಟರ್ = "ಬಲ" ). ಈ ವಿಷಯವು D-ಗ್ಲುಕೋಸ್‌ಗೆ ಸಂಬಂಧಿಸಿದೆ. ಅಣುವಿನ ಕನ್ನಡಿ-ಬಿಂಬ L-ಗ್ಲುಕೋಸ್‌ನ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಲಾಗಿದೆ.ಫ್ರಕ್ಟೋಸ್‌ನಂತಹ (ಫ್ರು) ಮತ್ತೊಂದು ಮೋನೊಸ್ಯಾಕರೈಡ್ಅನ್ನು ಉಪಯೋಗಿಸದೆ ಏಕೆ ಗ್ಲುಕೋಸ್‌ಅನ್ನು ಮಾತ್ರ ಜೀವಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ; ಎಂಬುದರ ಕಾರಣದ ಕುರಿತು ವಿಜ್ಞಾನಿಗಳು ವಿಚಾರ ಮಾಡಿದ್ದಾರೆ. ಇತರ ಹೆಕ್ಸೋಸ್ ಶರ್ಕರಗಳಿಗೆ ಹೋಲಿಸಿದರೆ ಗ್ಲುಕೋಸ್, ಪ್ರೋಟೀನ್‌ಗಳ ಅಮೈನೊ ಗುಂಪಿನೊಂದಿಗೆ ಕಡಿಮೆ ಪ್ರಮಾಣದಲ್ಲಿ ಅನಿರ್ದಿಷ್ಟವಾಗಿ ಪ್ರತಿಕ್ರಿಯಿಸುತ್ತದೆ ಎಂಬುದು ಒಂದು ಕಾರಣವಾಗಿರಬಹುದು. ಈ ಪ್ರತಿಕ್ರಿಯೆಯು (ಗ್ಲೈಕೇಶನ್) ಅನೇಕ ಎಂಜೈಮ್‌ಗಳ ಕ್ರಿಯೆಯನ್ನು ಕಡಿಮೆ ಮಾಡುತ್ತದೆ ಅಥವಾ ನಾಶಮಾಡುತ್ತದೆ. ಈ ಗ್ಲೈಕೇಶನ್‌ನ ಕಡಿಮೆ ದರಕ್ಕೆ ಕಾರಣವೆಂದರೆ, ಗ್ಲುಕೋಸ್ ಕಡಿಮೆ ಪ್ರತಿಕ್ರಿಯಾಶೀಲ ಚಕ್ರೀಯ ಐಸೋಮರ್‌ಗೆ ಹೆಚ್ಚು ಆದ್ಯತೆ ನೀಡುವುದಾಗಿದೆ. ಮಧುಮೇಹದ ಹೆಚ್ಚಿನ ದೀರ್ಘಕಾಲದ ಸಮಸ್ಯೆಗಳು (ಉದಾ. ಕುರುಡು, ಮೂತ್ರಪಿಂಡಗಳ ವಿಫಲತೆ ಮತ್ತು ಹೊರಗಿನ ನರರೋಗ) ಪ್ರೋಟೀನ್‌ಗಳ ಅಥವಾ ಲಿಪಿಡ್‌ಗಳ ಗ್ಲೈಕೇಶನ್‌ನಿಂದ ಉಂಟಾಗುತ್ತವೆ. ಇದಕ್ಕೆ ವಿರುದ್ಧವಾಗಿ, ಪ್ರೋಟೀನ್‌ಗಳಿಗೆ ಗ್ಲೈಕೊಸಿಲೇಶನ್‌ನ ಮೂಲಕ ಗ್ಲುಕೋಸ್‌ನ ಎಂಜೈಮ್-ನಿಯಂತ್ರಿತ ಸೇರಿಸುವಿಕೆಯು ಅವುಗಳ ಕ್ರಿಯೆಗೆ ಅತಿಮುಖ್ಯವಾಗಿರುತ್ತದೆ.[