ಸದಸ್ಯ:Shinto265/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೇದಾಂತ ದೇಶಿಕ[ಬದಲಾಯಿಸಿ]

ವೇದಾಂತ ದೇಶಿಕ (೧೨೬೯-೧೩೭೦) ಒಬ್ಬ ಶ್ರೀ ವೈಷ್ಣವ ಗುರುಗಳಾಗಿದ್ದರು. ಅವರು ಒಬ್ಬ ಕವಿ, ಭಕ್ತ, ತತ್ವಶಾಸ್ತ್ರಜ್ಞ ಮತ್ತು ಮಹಾಶಿಕ್ಷಕರಾಗಿದ್ದರು. ಅವರು ಶ್ರೀ ಕುರುಗೇಶರ್, ಶ್ರೀ ಕಿಡಾಂಬಿ ಆಚನ್, ಶ್ರೀ ಆತ್ರೆಯ ರಾಮಾನುಜರ್, ಶ್ರೀ ಆತ್ರೇಯ ರಂಗರಾಜಚಾರಿಯರ್ ಮತ್ತು ಆ ಕ್ರಮದಲ್ಲಿ ಅನೇಕರ ವಂಶಾವಳಿಯಲ್ಲಿ ಬರುವ ಸ್ವಾಮಿ ಶ್ರೀ ಕಿಡಾಂಬಿ ಅಪ್ಪುಲ್ಲರ್ ಯಾನೆ ಶ್ರೀ ಆತ್ರೇಯ ರಾಮಾನುಜಚಾರಿಯರ್‌ರ ಶಿಷ್ಯರಾಗಿದ್ದರು.

ಇವರು ೧೨೬೯ ರಲ್ಲಿ ತಮಿಳುನಾಡಿನ ಕಾಂಚಿಪುರಂ ಎಂಬ ಜಿಲ್ಲೆಯಲ್ಲಿ ಜನಿಸಿದರು.ಇವರು ೧೩೭೦ ರಲ್ಲಿ ಶ್ರೀರಂಗದಲ್ಲಿ ನಿಧನರಾದರು. ಇವರ ತಂದೆಯ ಹೆಸರು ಶ್ರೀ ಅನಂತಸೂರಿ.ಇವರ ತಾಯಿಯ ಹೆಸರು ತೊತಾರಂಬ. ದೇಶಿಕರ ಪೂಷಕರಿಗೆ ದೀರ್ಘಕಾಲದಿಂದಲೂ ಮಕ್ಕಳು ಇರಲಿಲ್ಲ. ಆಗ ಒಂದು ದಿನ ಏಳು ಬೆಟ್ಟದ ದೇವರು ಶ್ರೀನಿವಾಸ ಇವರಿಗೆ ತಿರುಪತಿಗೆ ತೀರ್ಥಯಾತ್ರಕ್ಕೆ ಹೋಗಲು ಆದೇಶಿಸಿದರು.ಅಂದು ವಾಹನಗಳಿಲ್ಲದ ಕಾರಣ ಶ್ರೀ ಅನಂತಸೂರಿ ಮತ್ತು ತೊತಾರಂಬ ಕಾಂಚಿಪುರಂನಿಂದ ತಿರುಪತಿಯವರೆಗೆ ಬೆಟ್ಟ ಹತ್ತಿ ದೇವರಿನ ದರ್ಶನ ಪಡೆದುಕೊಂಡರು.ಅಂದು ರಾತ್ರಿ ಅವರು ಮಂಟಪದಲ್ಲಿ ವಿಶ್ರಮಿಸುತ್ತಿದ್ದರು. ಆಗ ತೊತಾರಂಬ ರವರ ಕನಸಿನಲ್ಲಿ ಶ್ರೀನಿವಾಸ ದೇವರು ಚಿಕ್ಕ ವೈಷ್ಣವ ಹುಡುಗನ ರೂಪದಲ್ಲಿ ಪ್ರತ್ಯಕ್ಷನಾಗಿ ಅವರಿಗೆ ಒಂದು ಚಿನ್ನದ ಗಂಟೆಯನ್ನು ಕೊಟ್ಟರು.ಮರುದಿನ ಅರ್ಚಕರಿಗೆ ಆ ಗಂಟೆ ದೇವರ ಸನ್ನಿದಿಯಲ್ಲಿ ಕಾಣಿಸಲಿಲ್ಲ.ಅದಕ್ಕೆ ಅವರಿಗೆ ಚಿಂತೆಯಾಗಿ ಅದನ್ನು ಹುಡುಕಲು ಪ್ರಾರಂಬಿಸಿದರು.ದೇವರು ಆಕಾಶದ ದ್ವನಿಯಲ್ಲಿ" ಆ ಗಂಟೆಯನ್ನು ತೊತಾರಂಬಳಿಗೆ ನೀಡಿದ್ದೇನೆ ,ಅವಳು ಮಹಾ ವಿದ್ವಾಂಸನಾದ ಬಗವದ್ ರಾಮನುಜನಂತೆ ಮಗನನ್ನು ತಲುಪುತ್ತಾಳೆ. ಆ ಘಟನೆಯನ್ನು ನೆನಪಿಸಲು ಇಂದಿಗೂ ಆ ಘಂಟೆ ಆ ದೇವರ ಸನ್ನಿದಿಯಲ್ಲಿ ಇಲ್ಲ,ಕೇವಲ ಬೇರೆಯಾದ ಮತ್ತೊಂದು ದೊಡ್ಡ ಘಂಟೆ ಆ ಹಾಲ್ ಮುಂದೆ ಉಪಯೋಗಿಸುತ್ತಾರೆ.

ಇವರ ಬಾಲ್ಯ[ಬದಲಾಯಿಸಿ]

ಸ್ವಾಮಿ ದೇಶಿಕರು ಹುಟ್ಟಿ ಕೆಲವು ದಿನಗಳ ನಂತರ ಶ್ರೀ ಅಪುಲ್ಲಾರ್ ರವರು ವೇದಾಂತ ದೇಶಿಕರಿಗೆ ವೆಂಕಟನಾತ ಎಂದು ಹೆಸರಿಟ್ಟರು.ಅವರಿಗೆ ೫ನೇ ವಯ್ಯಸ್ಸಿದ್ದಗ ಒಂದು ಆಚಾರ್ಯಾ ರಾಮಾನುಜರ ಉಪನ್ಯಾಸ ನೀಡುತ್ತಿರುವ ಕಂಚಿ ವರದರಾಜರ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದರು.ಇವರಿಬ್ಬರು ಆ ವಿದ್ವಾಂಸನ ಬಳಿ ಹೋಗಿದರು,ಅವರು ಉಪಾನ್ಯಾಸವನ್ನು ನಿಲ್ಲಿಸಿ ಇವರನ್ನು ಆಶಿರ್ವದಿಸಿದರು.ಶ್ರೀ ಅಪುಲ್ಲಾರ್ ರವರು ಮತ್ತು ದೇಶಿಕರು ಬಿಟ್ಟು ಬಂದರು, ಆಚಾರ್ಯ ತನ್ನ ಉಪನ್ಯಾಸ ಮುಂದುವರಿಸಲು ಬಯಸಿದರು ಆದರೆ ನಿಲ್ಲಿಸಿದೆ ಅಲ್ಲಿ ಅವರು ಮರೆತಿದ್ದಾರೆ.ಆಶಿರ್ವದಿಸಿದ ನಂತರ ಆಚಾರ್ಯರು ದೇಶಿಕರನ್ನು ಕುರಿತು ಅವರು ವಿದ್ವಾಂಸನು ಆಗುತ್ತನೆ ಎಂದು ಎಲ್ಲರಿಗು ಹೇಳುವರು .ಆಚಾರ್ಯರು ಅಪುಲ್ಲರ್ ರವರಿಗೆ ದೇಶಿಕರಿಗೆ ಎಲ್ಲಾವೇದಗಳು, ಸ್ತೊತ್ರಗಳು ಹಾಗೂ ದಿವ್ಯ ಪ್ರಭಂದವನ್ನು ಕಲಿಸಬೇಕೆಂದು ಸೂಚಿಸಿದರು .ಇಂದಿಗೂ ನಾವು ಈ ಘಟನೆಯ ನೆನಪಿಸುವ ವರದರಾಜ ದೇವಸ್ಥಾನ ವರ್ಣಚಿತ್ರ ನೋಡಬಹುದು. ೭ನೇ ವಯ್ಯಸ್ಸಿನಲ್ಲಿ ಉಪನ್ಯಯಂ ನಂತರ ಶ್ರೀ ಅಪುಲ್ಲರ್ ರವರು ದೇಶಿಕರಿಗೆ ಎಲಾ ವೇದಗಳು , ಸ್ತೋತ್ರಗಳು ಹಾಗೂ ದಿವ್ಯ ಪ್ರಭಂಧಗಳು ಕಲಿಸಲು ಆರಂಭಿಸಿದರು.ಯಾವುದೆ ಆದರು ಕಲಿಸಿ ಕೆಲವು ಸಮಯದಲ್ಲೆ ಕಲಿಸಿದ್ದನ್ನೆಲ್ಲ ನೆನಪಿಸಿಕೊಳ್ಳುವವರಾಗಿದ್ದರಿಂದ ಎಲ್ಲರಿಗೂ ಸಹ ಆಶ್ಚರ್ಯವಾಯಿತು.೨೦ನೇ ವಯಸ್ಸಿನಲ್ಲಿ, ಶ್ರೀ ದೇಶಿಕರು ಎಲ್ಲಾ ಶಾಸ್ತ್ರಗಳಲ್ಲಿ ಮಾಸ್ಟರಿಂಗ್ ಮತ್ತು ವಿದ್ವಾಂಸರಾದರು. ೨೧ ನೇ ವಯ್ಯಸ್ಸಿನಲ್ಲಿ ಕನಕವಲ್ಲಿ ಎಂಬ ಸುಂದರ ಹುಡುಗಿಯನ್ನು ಮದುವೆಮಾಡಿಕೊಂಡರು. === ಕೊನೆ ದಿನಗಳು [೧] ಸ್ವಾಮಿ ದೇಶಿಕರು ೧೦೧ ವರ್ಷಗಳ ಕಾಲ ವಾಸಿಸುತ್ತಿದ್ದರು ಮತ್ತು ಅವರು ನಾರಾಯಣನ ಆಧ್ಯಾತ್ಮಿಕ ನಿವಾಸಕ್ಕೆ ಹೋಗಲು ಸಮಯ ಬಂದಿತು ಎಂದು ಭಾವಿಸಿದರು. ಇವರಿಗೆ ಸರ್ವತಂತ್ರ,ಸ್ವಾತಂತ್ರ,ಕವಿತಾರ್ಗಿಕ ಸಿಂಹ,ವೇದಾಂತಚಾರ್ಯರ್ ಎಂಬ ಪ್ರಶಸ್ತಿಗಳು ದೊರಕಿವೆ. ಶ್ರೀ ಕಿಡಾಂಬಿ ಅಪುಲ್ಲರ್ ಅಲಿಯಾಸ್ ಶ್ರೀ ಆತ್ರೆಯ ರಾಮನುಜಚಾರ್ಯರ್ ರವರು ಸ್ವಾಮಿ ವೇದಾಂತ ದೇಶಿಕರ ಗುರುವಾಗಿದ್ದರು. ರಾಮಾನುಜರ ವಿಷಿಷ್ಟ ಅದ್ವೈತ ಸ್ವಾಮಿ ವೇದಾಂತ ದೇಶಿಕರ ತತ್ವಶಾಸ್ತ್ರವಾಗಿತ್ತು. ಇವರ ಸಾಹಿತ್ಯದ ಕೆಲಸಗಳು -ಶೀ ಸ್ತೊತ್ರ ನಿಧಿ , ಶ್ರೀ ಪದುಕ ಸಾಹಸ್ರ , ರಹಸ್ಯ ಗ್ರಂತಗಳು , ಮತ್ತು ಶ್ರೀ ದೇಶಿಕ ಪ್ರಭಂದಳು ಹಾಗೂ ಕಾವ್ಯಗಳು.

ವೇದಾಂತ ದೇಶಿಕರು ಶ್ರೀ ವೈಷ್ಣವ ಗುರುವಾಗಿದ್ದರು ಹಾಗೂ ರಾಮನುಜರ ಅವಧಿಯಲ್ಲಿ ಅತ್ಯಂತ ಪ್ರತಿಭಾವಂತ ಕಟ್ಟಾಳುಗಳಾದ ಒಬ್ಬರು. ಸ್ವಾಮಿ ವೇದಾಂತ ದೇಶಿಕರು ಮಹಾಕವಿಯಾಗಿದ್ದರು. ಅಲ್ಲದೇ ಭಕ್ತರು , ತತ್ವಶಾಸ್ತ್ರರು ಮತ್ತು ಮಹಾಶಿಕ್ಷಕರು ಸಹಾ ಆಗಿದ್ದರು.ಶ್ರೀ ವೈಷ್ಣವರು ಸ್ವಾಮಿ ವೇದಾಂತ ದೇಶಿಕರನ್ನು ವೆಂಕಟೇಶ್ವರ ಅವರ ದೈವಿಕ ಗಂಟೆಯೆಂದು ಪರಿಗಣಿಸಿದರು.

ಶ್ರೀ ವೈಷ್ಣವರ ಸಂಪ್ರಾಯದಲ್ಲಿ ತನಿಯನ್ ಎಂದರೆ ಅಚರ್ಯರು ಮತ್ತೊಂದು ಆಚರ್ಯರ ಬಗ್ಗೆ ಹೊಗಳಿಕೆಯ ಸಮರ್ಪಣೆ ಮಾಡುವುದು. ತಮಿಳು ತಿಂಗಳಿನ ಅವನಿಯ ಹಸ್ತಂ ಮತ್ತು ಕಾಂಚಿಪುರಂನಲ್ಲಿರುವ ವರದರಾಜ ಪೆರುಮಾಲ್ ನಕ್ಷತ್ರದ ದಿನ ಈ ತನಿಯನ್ ಅನ್ನು ಸಂಯೋಜಿಸಿದರು. ಇದು ದಿವ್ಯ ಪ್ರಭಂದ ಆರಭಿಸುವ ಮೊದಲೇ ಕಂಠಪಾಟವಾಗಿದೆ (ವಾದಕಾಳಯರ ಕೃತಿಗಳು). ಇದನ್ನು ಅನುವಾದಿಸಿದಾಗ " ಕವಿಗಳಿಗೆ ಹಾಗೂ ತತ್ವಶಾಸ್ತ್ರರಿಗೆ ಸಿಂಹವಾದ ವೆಂಕಟನಾತ ಎಂದು ಅರಿಯಲ್ಪಡುವ ವೇದಾಂತ ದೇಶಿಕರಿಗೆ ಒಂದು ಮಹಾ ಸಲ್ಲ್ಯೂಟ್ " ಎಂದು ಹೇಳಲಾಗಿದೆ . ವೇದಾಂತ ದೇಶಿಕರು ಜ್ನಾನ ಮತ್ತು ವಿವೇಚನ ಎರಡೂ ಹೊಳೆಯುತ್ತಿರುವರು ಹಾಗೂ ಇವರು ಆತ್ರೆಯರ ಅನುಗ್ರಹವನ್ನು ಪಡೆಯುವ ಅರ್ಹರು.

ಉಲ್ಲೆಖನಗಳು[ಬದಲಾಯಿಸಿ]

  1. ===//en.wikipedia.org/wiki/Vedanta_Desika