ಕೈನಾಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯ:Shilpa Shivamadaiah/ಕೈನಾಡಿ ಇಂದ ಪುನರ್ನಿರ್ದೇಶಿತ)

ಕೈನಾಡಿ ಗ್ರಾಮವು ಭಾರತದ ಕೇರಳದ ಆಲಪ್ಪುಜ ಜಿಲ್ಲೆಯ ನೀಲಂಪೇರೂರು ಗ್ರಾಮ ಪಂಚಾಯತಿಗೆ ಸೇರಿದೆ.

ನೀಲಂಪೇರೂರು ಪದಯಾನಿ

ಭೂಗೋಳ[ಬದಲಾಯಿಸಿ]

ಕೈನಾಡಿ ಒಂದು ಸಣ್ಣ ದ್ವೀಪವಾಗಿದೆ. ಸುಂದರವಾದ ಭತ್ತದ ಗದ್ದೆಗಳು ಮತ್ತು ಸಣ್ಣ ಕಾಲುವೆಗಳಿಂದ ಸುತ್ತುವರೆದಿದೆ. ಜನಸಂಖ್ಯೆಯು ಹಿಂದೂ ಮತ್ತು ಕ್ರಿಶ್ಚಿಯನ್ ಪಂಗಡಗಳನ್ನು ಒಳಗೊಂಡಿದೆ. ಕೈನಾಡಿನಲ್ಲಿ ಅವರ್ ಲೇಡಿ ಆಫ್ ಡಾಲರ್ಸ್ ಚರ್ಚ್ ಮತ್ತು ಕರುಮಾತ್ರ ದೇವಸ್ಥಾನವು ಪ್ರಮುಖ ಎರಡು ಪೂಜಾ ಸ್ಥಳಗಳಾಗಿವೆ.

ಪ್ರಸಿದ್ದ ವ್ಯಕ್ತಿಗಳು[ಬದಲಾಯಿಸಿ]

ಕೈನಾಡಿ ೧೯೨೦ರಲ್ಲಿ ಶ್ರೀ ಮೌಲಂ ಜನಪ್ರಿಯ ಸಭೆಯ ಸದಸ್ಯರಾಗಿದ್ದ ಪಲ್ಲಿತನಂ ಲೂಕಾ ಮಥೈ (ಪಲ್ಲಿಥನಾಥ ಮಥೈಚನ್ ಎಂದು ಜನಪ್ರಿಯರಾಗಿದ್ದರು) ಅವರ ಜನ್ಮಸ್ಥಳ. ಅವರು ಕುಟ್ಟನಾಡಿನ ಹಿನ್ನೀರಿನ ಮೂಲಕ ಭತ್ತ ಬೆಳೆಯುವುದಕ್ಕೆ ನಾಂದಿ ಹಾಡಿದರು. ಅವರು ೧೯೦೦ರಲ್ಲಿ ವೆಂಬನಾಡ್ ಕಯಾಲ್ ನಿಂದ ಭತ್ತದ ಕೃಷಿಗಾಗಿ ಚೆರುಕರ ಕಯಾಲ್ ಮತ್ತು ಪಲ್ಲಿತನಂ ಕಯಾಲ್ ಅನ್ನು ಪುನಃ ಪಡೆದುಕೊಂಡರು. ಅವರನ್ನು ಕುಟ್ಟನಾಡಿನಲ್ಲಿ ಸಹಕಾರಿ ಕೃಷಿ ಚಳುವಳಿಯ ಪಿತಾಮಹ ಎಂದು ಪರಿಗಣಿಸಲಾಗಿದೆ. ಅವರು ಸಾಲ ಪರಿಹಾರ ಹೋರಾಟವನ್ನು ಮುನ್ನಡೆಸಿದರು ಮತ್ತು ಕೃಷಿ ಸಾಲ ಪರಿಹಾರ ಕಾಯಿದೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಕಡುಬಡತನದ ಕೃಷಿ ಕುಟುಂಬಗಳನ್ನು ಸಾಲದಿಂದ ಮುಕ್ತಗೊಳಿಸಿತು. ಅವರು ಕುಟ್ಟನಾಡು ರೈತರ ಧ್ವನಿಯಾಗಿ ಪರಿಗಣಿಸಲ್ಪಟ್ಟ ಕುಟ್ಟನಾಡು ಕರ್ಷಕ ಸಂಘದ ಸ್ಥಾಪಕರಾಗಿದ್ದರು.

ಇತಿಹಾಸ[ಬದಲಾಯಿಸಿ]

೧೯೨೧ ರಲ್ಲಿ, ಶ್ರೀ ಮೂಲಂ ಪಾಪ್ಯುಲರ್ ಅಸೆಂಬ್ಲಿಯ ಅಂದಿನ ಸದಸ್ಯರಾದ ಪಲ್ಲಿತನಂ ಲೂಕಾ ಮಥೈ ಪ್ರಭಾವದಿಂದ ಕೈನಾಡಿ ಚರ್ಚ್ ಅವರು ಕೈನಾಡಿಯಲ್ಲಿರುವ ಮುಖ್ಯ ಶಿಕ್ಷಣ ಸಂಸ್ಥೆಯಾಗಿರುವ ಸೇಂಟ್ ಮೇರಿ ಶಾಲೆಯನ್ನು ಆರಂಭಿಸಲು ಟ್ರಾವಂಕೂರ್ ರಾಜನಿಂದ ಅನುಮತಿ ಪಡೆದರು. ೧೯೬೦ ರಲ್ಲಿ ಶಾಲೆಯ ಖ್ಯಾತ ಕ್ಯಾಥೊಲಿಕ್ ನಾಯಕ ಮತ್ತು ಮುಖ್ಯಮಂತ್ರಿ ಗೌರವಾರ್ಥವಾಗಿ ಎಜೆ ಜಾನ್ ಮೆಮೋರಿಯಲ್ ಸ್ಕೂಲ್ ಎಂದು ಮರುನಾಮಕರಣ ಮಾಡಲಾಯಿತು.

ಪ್ರಖ್ಯಾತ ಸಸ್ಯಶಾಸ್ತ್ರಜ್ಞ ಜೋಸೆಫ್ ಪಲ್ಲಿತನಮ್ ಮತ್ತು ಕೇರಳ ಶಾಸಕಾಂಗ ಸಭೆಯ ಮಾಜಿ ಸದಸ್ಯ ಈಪೆನ್ ಕಂದಕುಡಿ ಈ ಸ್ಥಳಕ್ಕೆ ಸೇರಿದವರು. ಸಾಮಾಜಿಕ ಕಾರ್ಯಕರ್ತ ಥಾಮಸ್ ಪಲ್ಲಿತಾನಂ ಕೂಡ ಕೈನಾಡಿಯವರು.

ಪ್ರಕೃತಿ[ಬದಲಾಯಿಸಿ]

ಕೇರಳದ ಹಿನ್ನೀರಿನ ಭತ್ತದ ಗದ್ದೆಗಳ ನಡುವೆ ಇರುವ ಕೈನಾಡಿ ಬಹಳ ರಮಣೀಯವಾದ ಸ್ಥಳವಾಗಿದೆ. ನೀರು ಮತ್ತು ರಸ್ತೆ ಸಾರಿಗೆಯಿಂದ ಸಮೃದ್ದವಾಗಿದೆ. ಈ ಗ್ರಾಮವು ಕುಟ್ಟಂದನ್ ಕಾಯಲ್‌ಗಳ ಅಂಚಿನಲ್ಲಿದೆ. ಈ ಸ್ಥಳ ಕೊಟ್ಟಾಯಂ ಮತ್ತು ಚಂಗಣಚೇರಿ ಪಟ್ಟಣಗಳಿಗೆ ಬಹಳ ಹತ್ತಿರದಲ್ಲಿದ್ದು ಸಂಪರ್ಕವನ್ನು ಹೊಂದಿದೆ.

ಉಲ್ಲೇಖಗಳು[ಬದಲಾಯಿಸಿ]

 

"https://kn.wikipedia.org/w/index.php?title=ಕೈನಾಡಿ&oldid=1151052" ಇಂದ ಪಡೆಯಲ್ಪಟ್ಟಿದೆ