ಸದಸ್ಯ:Sherwin antonie dsouza/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇವತ್ತಿನಂತೆ ಅವತ್ಯಾರೂ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಇಟ್ಟುಕೊಂಡಿರಲಿಲ್ಲ. ಇದರಿಂದ ಜನ ಸಾಮಾನ್ಯರಿಗೆ ಅಂಥಹ ಯಾವುದೇ ಪರಿಣಾಮಗಳೂ ಬೀರಲಿಲ್ಲ. ಈ ನಿರ್ಧಾರದಿಂಧ ವಾರದೊಳಗೆ ಚಿನ್ನ ಮತ್ತು ಸ್ಥಿರಾಸ್ತಿಗಳ ಮೌಲ್ಯ ಮಾತ್ರ ಶೇಕಡಾ 5 ರಿಂದ 10 ರಷ್ಟು ಕುಸಿದು ಹೋಯಿತು. ಕಪ್ಪು ಹಣದ ವಿಚಾರಕ್ಕೆ ಬಂದಾಗ ಮೊರಾರ್ಜಿಯ ಈ ನಿರ್ಧಾರ ನಿಷ್ಪ್ರಯೋಜಕವಾಗಿತ್ತು ಎನ್ನುತ್ತಾರೆ ‘ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸಿಟ್ಯೂಟ್’ನ ಫ್ರೊಫೆಸರ್ ಅಭಿರೂಪ್ ಸರ್ಕಾರ್. ಇದರಿಂದ ಕಪ್ಪು ಹಣದ ಚಲಾವಣೆಗೆ ಹೆಚ್ಚಿನ ತೊಂದರೆಯೇನೂ ಆಗಲಿಲ್ಲ ಎಂಬುದು ಅವರ ಅಭಿಪ್ರಾಯ. ಆದರೆ “ಕೆಲವು ದೊಡ್ಡ ಮೊತ್ತದ ಕಫ್ಪು ಹಣ ಇದ್ದವರಿಗೆ ಇದು ಸಮಸ್ಯೆ ತಂದಿದ್ದು ನಿಜ. ಅವತ್ತು ಕಪ್ಪು ಕುಳಗಳು ಜನ ಸಾಮಾನ್ಯರಿಗೆ 1,000 ರೂಪಾಯಿಯ ನೋಟುಗಳನ್ನು 300 ರೂಪಾಯಿಗಿಂತ ಕಡಿಮೆ ದರಕ್ಕೆ ಮುಂಬೈ ಬೀದಿಗಳಲ್ಲಿ ಮಾರುತ್ತಿದ್ದರು,” ಎನ್ನುತ್ತಾರೆ ವಕೀಲ ಅನಿಲ್ ಹರೀಶ್.

ದೊಡ್ಡ ಮೊತ್ತದ ಮುಖಬೆಲೆಯ ಅಂದರೆ ರೂಪಾಯಿ 500 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ನೋಟುಗಳು ಮೊದಲ ಬಾರಿಗೆ 1934ರಲ್ಲಿ ಭಾರತದಲ್ಲಿ ಕಾರ್ಯರೂಪಕ್ಕೆ ಬಂತು. 10,000 ಮುಖಬೆಲೆಯ ನೋಟನ್ನು ರಿಸರ್ವ್ ಬ್ಯಾಂಕ್ 1938ರಲ್ಲಿ ಪ್ರಿಂಟ್ ಮಾಡಿತು. 1,000 ಕ್ಕಿಂತ ಹೆಚ್ಚಿನ ಬೆಲೆಯ ನೋಟುಗಳನ್ನು 1946ರಲ್ಲಿ ರದ್ದು ಮಾಡಲಾಯಿತು. ಇದು ಭಾರತದ ಇತಿಹಾಸದಲ್ಲಿ ನೋಟಿನ ಚಲಾವಣೆ ಮೇಲೆ ನಿಷೇಧ ಹೇರಿದ ಮೊದಲ ಘಟನೆ. 1949ರಲ್ಲಿ ಮತ್ತೆ ದೊಡ್ಡ ಮೊತ್ತದ ನೋಟುಗಳು ಚಲಾವಣೆಗೆ ಬಂದವು. ಎರಡನೇ ಹಣ ಬದಲಾವಣೆಯ ನಿರ್ಧಾರವನ್ನು 1978ರಲ್ಲಿ ಮೊರಾರ್ಜಿ ದೇಸಾಯಿ ತೆಗೆದುಕೊಂಡರು. ಅವತ್ತು 1,000, 5,000, 10,000 ಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಿಸಲಾಯಿತು. 1998ರಲ್ಲಿ ಹೆಚ್ಚಿನ ಬೆಲೆಯ ನೋಟುಗಳು ಜನ ಸಾಮಾನ್ಯರ ಕೈ ತಲುಪಲು ಆರಂಭವಾದವು. ಎನ್.ಡಿ.ಎ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡಿತ್ತು.

ಆರ್ಥಿಕ ಸುಧಾರಣೆಗಳಿಗೆ ಬಂದಾಗ ಇಂದಿರಾ ಗಾಂಧಿ ನಡೆಸಿದ ಹಣದ ಅಪಮೌಲ್ಯೀಕರಣವೂ ಮುಖ್ಯವಾಗುತ್ತದೆ. ಅರ್ಧ ಶತಮಾನಗಳ ಹಿಂದೆ ಅಂದರೆ 06/06/1966 ರಂದು ಭಾರತೀಯ ಅರ್ಥ ಶಾಸ್ತ್ರ ಚರಿತ್ರೆಯಲ್ಲಿ ಮಹತ್ವದ ನಿರ್ಧಾರ ಹೊರ ಬಿದ್ದ ದಿನ. 1966 ಜನವರಿ 11ರಂದು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ನಿಧರಾಗುತ್ತಿದ್ದಂತೆ ಆ ಸ್ಥಾನಕ್ಕೆ ಬಂದವರು ಇಂದಿರಾ ಗಾಂಧಿ. ಆ ವರ್ಷ ದೇಶದೆಲ್ಲೆಡೆ ಬರಗಾಲ ಆವರಿಸಿಕೊಂಡು ಆಹಾರವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಭಾರತದ ರಫ್ತು1,264 ಕೋಟಿ ರೂಪಾಯಿಗೆ ಕುಸಿದು, ಆಮದು 2,194 ಕೋಟಿ ಇತ್ತು. ಭಾರತದ ಬಳಿ 930 ಕೋಟಿಗಳ ಋಣಾತ್ಮಕ ವಿದೇಶಿ ವಿನಿಮಯದ ಹೊರೆ ಬಿದ್ದಿತ್ತು. ಕೊನೆಗೆ ವಿಶೇಷ ಒಪ್ಪಂದದ ಮೂಲಕ ನಮ್ಮದೇ ಕರೆನ್ಸಿ ನೋಟುಗಳನ್ನು ನೀಡಿ ಅಮೆರಿಕಾದ ಬಳಿ ನಾವು ಆಹಾರವನ್ನು ಆಮದು ಮಾಡಿಕೊಂಡೆವು.