ಕರ್ತಾರ್ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯ:Sherene272/WEP 2018-19 ಇಂದ ಪುನರ್ನಿರ್ದೇಶಿತ)
ಕರ್ತಾರ್ ಸಿಂಗ್
ಜನನ೭ ಅಕ್ಟೋಬರ್ ೧೯೫೩
ಸುರ್ ಸಿಂಗ್ ಗ್ರಾಮ, ಟರ್ನ್ ತರಂ ಜಿಲ್ಲೆ, ಪಂಜಾಬ್, ಭಾರತ
ರಾಷ್ಟ್ರೀಯತೆಭಾರತೀಯ
ಪ್ರಮುಖ ಪ್ರಶಸ್ತಿ(ಗಳು)ಅರ್ಜುನ ಪ್ರಶಸ್ತಿ, ಪದ್ಮ ಶ್ರೀ ಪ್ರಶಸ್ತಿ

ಕರ್ತಾರ್ ಸಿಂಗ್ ಅವರು ಭಾರತೀಯ ಕುಸ್ತಿಪಟು ಆಗಿದ್ದರು. ೧೯೭೮ ಮತ್ತು ೧೯೮೬ರಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕಗಳನ್ನು ಗೆದ್ದವರು. ಅವರು ೧೯೮೪ ಸಮ್ಮರ್ ಒಲಿಂಪಿಕ್ಸ್ನಲ್ಲಿ ಮೆನ್'ಸ್ ಫ್ರೀಸ್ಟೈಲ್ ೧೦೦ ಕೆಜಿ ರೆಸ್ಲಿಂಗ್ ನಲ್ಲಿ ೭ನೇ ಸ್ಥಾನವನ್ನು ಪಡೆದರು.

ಜನನ[ಬದಲಾಯಿಸಿ]

ಕರ್ತಾರ್ ಸಿಂಗ್ ಅವರು ೭ ಅಕ್ಟೋಬರ್ ೧೯೫೩ರಲ್ಲಿ ಭಾರತದಲ್ಲಿರುವ ಪಂಜಾ‌ಬ್‌ನ ಇಂದಿನ ಟರ್ನ್ ತರಂ ಜಿಲ್ಲೆಯ ಸುರ್ ಸಿಂಗ್ ಗ್ರಾಮದಲ್ಲಿ ಜನಿಸಿದರು.

ಸಾಧನೆಗಳು[ಬದಲಾಯಿಸಿ]

ಬ್ಯಾಂಕಾಕ್‌ನಲ್ಲಿ ನಡೆದ ೧೯೭೮ರ ಏಶಿಯನ್ ಗೇಮ್ಸ್ನಲ್ಲಿ ೯೦ ಕೆಜಿ ಫ್ರೀಸ್ಟೈಲ್ ವರ್ಗದಲ್ಲಿ ಮತ್ತು ಸಿಯೋ‌ಲ್‌ನಲ್ಲಿ ನಡೆದ ೧೯೮೬ರ ಏಶಿಯನ್ ಗೇಮ್ಸ್ನಲ್ಲಿ ೧೦೦ ಕೆಜಿ ಫ್ರೀಸ್ಟೈಲ್ ವರ್ಗದಲ್ಲಿ ಅವರು ಚಿನ್ನದ ಪದಕಗಳನ್ನು ಗೆದ್ದರು. ಅವರು ದೆಹಲಿಯಲ್ಲಿ ನಡೆದ ೧೯೮೨ರ ಏಶಿಯನ್ ಗೇಮ್ಸ್ನಲ್ಲಿ ೯೦ ಕೆಜಿ ಫ್ರೀಸ್ಟೈಲ್ ವರ್ಗದಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಅವರು ೧೯೭೮ರಲ್ಲಿ ಎಡ್ಮಂಟನ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ೯೦ ಕೆಜಿ ಫ್ರೀಸ್ಟೈಲ್ ವರ್ಗದಲ್ಲಿ ಕಂಚಿನ ಪದಕವನ್ನು ಪಡೆದರು. ೧೯೮೦ರಲ್ಲಿ ಬ್ರಿಸ್ಬೇನ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ೯೦ ಕೆಜಿ ಫ್ರೀಸ್ಟೈಲ್ ವರ್ಗದಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ೧೯೮೪ರ ಲಾಸ್ ಎಂಜಲೀಸ್ ಒಲಿಂಪಿಕ್ಸ್ರಲ್ಲಿ ವಿಶ್ವದ ಶ್ರೇಷ್ಠ ಕುಸ್ತಿಪಟುಗಳಲ್ಲಿ ಏಳನೇ ಸ್ಥಾನದಲ್ಲಿ ಮುಗಿಸಿದರು. ೧೯೯೨ರಲ್ಲಿ ಕೊಲೊಂಬಿಯದಲ್ಲಿ, ೧೯೯೩ರಲ್ಲಿ ಟೊರೊಂಟೊದಲ್ಲಿ, ೧೯೯೭ರಲ್ಲಿ ಮಾರ್ಷೆನಿ (ಸ್ವಿಟ್ಜರ್ಲ್ಯಾಂಡ್) ಮತ್ತು ೧೯೯೮ರಲ್ಲಿ ಬೋಡೆಕ್ಸ್ (ಫ್ರಾನ್ಸ್) ನಲ್ಲಿ ನಡೆದ ವೆಟರನ್ಸ್ ವರ್ಲ್ಡ್ ಚಾಂಪಿಯನ್ಶಿಪ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದರು. ಪಂಜಾಬ್ ಪೋಲೀಸ್ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಆಗಿ ಕರ್ತಾರ್ ಸಿಂಗ್ರವರು ೨೦೧೧ರಲ್ಲಿ ನ್ಯೂ ಯಾರ್ಕ್ನಲ್ಲಿ ನಡೆದ ವರ್ಲ್ಡ್ ಪೊಲೀಸ್ ಗೇಮ್ಸ್ನಲ್ಲಿ ೯೬ ಕೆಜಿ ವರ್ಗದಲ್ಲಿ ಚಿನ್ನದ ಪದಕವನ್ನು ಪಡೆದರು. ಅವರು ಕೆನಡಿಯನ್ ಕುಸ್ತಿಪಟುವನ್ನು ಸೋಲಿಸಿದರು.

೧೯೮೨ರಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಮತ್ತು ೧೯೮೭ರಲ್ಲಿ ಪದ್ಮ ಶ್ರೀ ಪ್ರಶಸ್ತಿ ವಿಜೇತ ಕರ್ತಾರ್ ಸಿಂಗ್ ಅವರಿಗೆ ಭಾರತೀಯ ಕುಸ್ತಿ ವಲಯದಲ್ಲಿ ಗೌರವಾನ್ವಿತ ಹೆಸರಿದೆ. ಸುರ್ ಸಿಂಗ್ ಗ್ರಾಮದಿಂದ ತಮ್ಮ ನಿವಾಸವನ್ನು ಜಲಂಧರ್ಗೆ ಸ್ಥಳಾಂತರಿಸಿದರು, ಅಲ್ಲಿ ಅವರು ಪೋಲಿಸ್ ಅಧೀಕ್ಷಕರಾಗಿ ಮತ್ತು ಪಂಜಾಬ್ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.

ಕರ್ತಾರ್ ಸಿಂಗ್

ರಾಜಕೀಯ ಜೀವನ[ಬದಲಾಯಿಸಿ]

೨೦೧೭ರ ಪಂಜಾಬ್ ಚುನಾವಣೆಗಳಲ್ಲಿ ಟರ್ನ್ ತರಂ ಎಂಬ ಪಂಜಾಬ್ನಲ್ಲಿರುವ ಜಿಲ್ಲೆಯಲ್ಲಿ ಕರ್ತಾರ್ ಸಿಂಗ್ ತಮ್ಮ ರಾಜಕೀಯ ಚೊಚ್ಚಲವನ್ನು ಮಾಡಿದರು.[೧] ಅವರು ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಿದ್ದರು. ತನ್ನ ರಾಜಕೀಯ ಪ್ರಚಾರದಲ್ಲಿ ಕರ್ತಾರ್ ಸಿಂಗ್ರವರು ಔಷಧ ಚಟದ ಸಮಸ್ಯೆಗಳ ಬಗ್ಗೆ ಮಾತಾಡಿದರು. "ಈ ಪ್ರದೇಶದಲ್ಲಿ ಸರ್ಕಾರದ ಶಿಕ್ಷಣ ವ್ಯವಸ್ಥೆಯು ಕುಸಿದಿದೆ ಮತ್ತು ಕ್ರೀಡಾಂಗಣಗಳಿಲ್ಲ. ಕ್ರೀಡಾ ಕ್ಷೇತ್ರಗಳಲ್ಲಿ ಸಮಯವನ್ನು ಕಳೆದುಕೊಳ್ಳುವ ಬದಲು ಯುವಕರು ಔಷಧಿಗಳಿಗೆ ಕೊಂಡಿಯಾಗಿದ್ದಾರೆ" ಎಂದು ಕರ್ತಾರ್ ಸಿಂಗ್ರವರು ತಮ್ಮ ಹೊಸ ಬೆಂಬಲಿಗರೊಂದಿಗೆ ಸಂವಹನ ಮಾಡುವಾಗ ಹೇಳಿದರು.

ಕ್ರೀಡಾ ವೃತ್ತಿಜೀವನ[ಬದಲಾಯಿಸಿ]

ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯೂಎಫ್ಐ) ಮತ್ತು ಇಂಟರ್ನ್ಯಾಷನಲ್ ಫೆಡರೇಶನ್ (ಎಫ್ಐಎಲ್ಎ) ೨೦೧೨ರ ಶಹೀದ್ ಭಗತ್ ಸಿಂಗ್ ಇಂಟರ್ನ್ಯಾಷನಲ್ ವ್ರೆಸ್ಲಿಂಗ್ ಟೂರ್ನಮೆಂಟ್ ಮುಂದೂಡಲ್ಪಟ್ಟ ಆದೇಶಗಳನ್ನು ನಿರಾಕರಿಸಿದ ಬಗ್ಗೆ ಕರ್ತಾರ್ ಸಿಂಗ್ ರವರು ಒಂದು ಪ್ರಮುಖ ವಿವಾದವನ್ನು ಕೋರಿದರು. ಕರ್ತಾರ್ ಸಿಂಗ್ ಸ್ಪಷ್ಟವಾಗಿ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾವನ್ನು ಕಡೆಗಣಿಸಿ ಇಂಟರ್ನ್ಯಾಷನಲ್ ಫೆಡರೇಶನ್ ಮತ್ತು ಭಾರತ ಸರ್ಕಾರದೊಂದಿಗೆ ಅಗ್ರ ಭಾರತೀಯ ಕುಸ್ತಿಪಟುಗಳು ಅಥವಾ ಇತರ ರಾಷ್ಟ್ರೀಯ ಒಕ್ಕೂಟದ ಯಾವುದೇ ಕುಸ್ತಿಪಟುಗಳು ಭಾಗವಹಿಸದ ಪಂದ್ಯಾವಳಿಯನ್ನು ನಡೆಸಿದರು. ಹಿಂದಿನ ಡಬ್ಲ್ಯೂಎಫ್ಐ ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಕರ್ತಾರ್ ಸಿಂಗ್ ಅವರು ೧ ಕೋಟಿ ರೂಪಾಯಿಗಳನ್ನು ಟೂರ್ನಮೆಂಟ್ಗೆ ಪ್ರಾಯೋಜಕತ್ವವಾಗಿ ಸಂಗ್ರಹಿಸಿದ್ದಾರೆ ಎಂದು ರೆಸ್ಲಿಂಗ್ ಫೆಡರೇಶನ್ ಆ ಇಂಡಿಯಾ ಆರೋಪಿಸಿದ್ದಾರೆ. ಡಬ್ಲ್ಯೂಎಫ್ಐ ತನ್ನ ಸ್ಥಾನವನ್ನು ವಿವರಿಸಲು ಅವಕಾಶಗಳನ್ನು ನೀಡಿದರೂ ಕರ್ತಾರ್ ಸಿಂಗ್ ಅವರ ಆಡಿಟೆಡ್ ಕಾತೆಗಳನ್ನು ಡಬ್ಲ್ಯೂಎಫ್ಐಗೆ ಸಲ್ಲಿಸಲು ನಿರಾಕರಿಸಿದರು. ಡಬ್ಲ್ಯೂಎಫ್ಐನ ಶಿಸ್ತಿನ ಸಮಿತಿಯು ಅದರ ಸಾಮಾನ್ಯ ಮಂಡಳಿಯ ಅನುಮತಿಯೊಡನೆ ಕರ್ತಾರ್‌ರವರಿಗೆ ಆರು ವರ್ಷಗಳ ನಿಷೇಧವನ್ನು ನೀಡಿದೆ.

ಉಲ್ಲೇಖಗಳು[ಬದಲಾಯಿಸಿ]

  1. https://www.hindustantimes.com/assembly-elections/with-dara-singh-turban-pehalwan-kartar-singh-enters-punjab-poll-dangal/story-TMHiLrAJS8Gsc5860UWvmO.html