ಸದಸ್ಯ:Sharon P Varghese/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಬೊಂಗ್.ಕಾಂ
ಮುಖ್ಯ ಕಾರ್ಯಾಲಯಗುರಗಾಂವ್,ಹರಿಯಾಣ

ಪರಿಚಯ[ಬದಲಾಯಿಸಿ]

೨೦೧೨ರಲ್ಲಿ ಆರಂಭಿಸಿದ ಜಬೊಂಗ್.ಕಾಂ(Jabong.com) ಭಾರತದ ಪ್ರಮುಖ ಫ್ಯಾಷನ್ ಮತ್ತು ಜೀವನಶೈಲಿ ಪೋರ್ಟಲ್ ಆಗಿದೆ.ಪ್ರವೀನ್ ಸಿನ್ಹಾ,ಲಕ್ಷ್ಮಿ ಪೊಟ್ಲೂರಿ,ಅರುನ್ ಚಂದ್ರ ಮೋಹನ್ ಇದರ ಸ್ಥಾಪಕರು.ಈ ಪೋರ್ಟಲಿನಲ್ಲಿ ಉಡುಪು,ಪಾದರಕ್ಷೆಗಳು, ಸೌಂದರ್ಯ ಉತ್ಪನ್ನಗಳು,ಮನೆ ಉತ್ಪನ್ನಗಳು ಹಾಗೂ ಮುಂತಾದ ಫ್ಯಾಷನ್ ಪದಾರ್ತಗಳು ಲಭಿಸುತ್ತದೆ.ಜಬೊಂಗಿನ ಪ್ರಧಾನ ಕಚೇರಿ ಗುರಗಾಂವ್,ಹರಿಯಾಣದಲ್ಲಿದೆ.ಜುಲೈ ೨೦೧೬ರಲ್ಲಿ,ಜಬೊಂಗನ್ನು ಫ್ಲಿಪ್ಕಾರ್ಟ್ ತಮ್ಮ ಘಟಕವಾದ ಮಿಂತ್ರಾದ ಮೂಲಕ ಸುಮಾರು $೭೦ ಮಿಲಿಯನಿಗೆ ಸ್ವಾಧೀನಪಡಿಸಿಕೊಂಡಿತು.ಇದರ ನಂತರ,ಅನಂತ್ ನಾರಾಯಣನನ್ನು ಜಬೊಂಗ್ ಅದರ ಹೊಸ ಸಿಇಒ ಆಗಿ ಘೋಷಿಸಿತು.ಅರುಣ್ ಚಂದ್ರ ಮೋಹನ್,ಪ್ರವೀನ್ ಸಿನ್ಹಾ ಮತ್ತು ಲಕ್ಷ್ಮಿ ಪೊಟ್ಲೂರಿ ಜಬೊಂಗಿನ ಸಹ-ಸಂಸ್ಥಾಪಕರು.ಎಲ್ಲಾ ಸಹ-ಸಂಸ್ಥಾಪಕರು ಈಗ ಕಂಪನಿಯಿಂದ ಬಿಟ್ಟು ಹೋಗಿದ್ದಾರೆ.ಮಾರ್ಚ್ ೨೦೧೩ರಲ್ಲಿ,ಜಬೊಂಗ್ ಒಂದು ದಿನಕ್ಕೆ ಆರು ಸಾವಿರದಿಂದ ಏಳು ಸಾವಿರದವರೆಗೆ ಆದೇಶಗಳನ್ನು ಹಡಗಿಸುತ್ತದೆ.೨೦೧೨ರಲ್ಲಿ,ಎಕಾನಾಮಿಸ್ಟ್ ಪ್ರಕಾರ ಸುಮಾರು ಅಮೇರಿಕಾದ $೧೦೦-೧೫೦ ಮಿಲಿಯನ್ ಸಮಗ್ರ ಮಾರಾಟ ಮಾಡಿದೆ.ಲೈವ್ ಮಿಂಟ್ ಲೇಖನದ ಪ್ರಕಾರ,ಜಬೊಂಗ್ ಸೆಪ್ಟೆಂಬರ್ ೨೦೧೩ರ ಅವಧಿಯಲ್ಲಿ ಪ್ರತಿದಿನ ೧೪೦೦೦ ಆದೇಶಗಳನ್ನು ಹಡಗಿಸುತ್ತದೆ ಹಾಗೂ ಈ ೬೦% ಸಣ್ಣ ಪಟ್ಟಣಗಳಿಂದಿದ್ದವು.೨೦೧೩ರ ದಿ ಗ್ರೇಟ್ ಇಂಡಿಯನ್ ಶಾಪಿಂಗ್ ಫೆಸ್ಟಿವೆಲಿನ ಸಮಯದ್ದಲ್ಲಿ ಅತ್ಯಂತ ಭೇಟಿಯಾದ ಕಾಮರ್ಸ್ ಸೈಟ್ಗಳಲ್ಲಿ ಜಬೊಂಗ್ ಒಂದಾಗಿತ್ತು.ಒಂದು ಸಾಮಾನ್ಯ ದಿನಕ್ಕೆ ಹೋಲಿಸಿದಾಗ ಇದರ ಆದಾಯವನ್ನು ಐದು ಆರು ಪಟ್ಟು ಹೆಚ್ಚಿಸಿತು ಎಂದು ಸಂಸ್ಥೆಯ ಪ್ರತಿನಿಧಿಗಳು ಹೇಳಿದ್ದಾರೆ.

ಪ್ರೊಫೈಲ್[ಬದಲಾಯಿಸಿ]

ಶೂಗಳು,ಉಡುಪುಗಳು,ಮನೆ ಅಲಂಕಾರಿಕ ವಸ್ತುಗಳು,ಸೌಂದರ್ಯ ಉತ್ಪನ್ನಗಳು,ಪೀಠೋಪಕರಣಗಳು ಹಾಗೂ ಮುಂತಾದವುಗಳ ಮಾರಾಟ ಜಬೊಂಗ್ ತಮ್ಮ ವೆಬ್ಸೈಟಿನ ಮೂಲಕ ಮಾಡುತ್ತದೆ.ಜಬೊಂಗಿನ ಇ-ಅಂಗಡಿ(ಇ-ಸ್ಟೋರ್) ಪ್ರಸ್ತುತಕ್ಕೆ ೧೦೦೦ಕ್ಕು ಹೆಚ್ಚು ಬ್ರಾಂಡ್ಗಳನ್ನು ಮತ್ತು ೯೦೦೦೦ಕ್ಕು ಮೇಲೆ ಉತ್ಪನ್ನಗಳನ್ನು ಒಯ್ಯುತ್ತದೆ.ಆಭರಣಗಳು ಹಾಗೂ ಚಿನ್ನದ ನಾಣ್ಯಗಳೂ ಸಹ ಮಾರಾಟದಲ್ಲಿ ಸೇರಿವೆ.೨೦೧೨ ನವೆಂಬರ್ನಲ್ಲಿ,ಜಬೊಂಗ್.ಕಾಂ ಮತ್ತು ಕ್ರಿಕೆಟ್ ಉಪಕರಣ ತಯಾರಿಕೆಗಾರರಾದ ಎಸ್ಜಿ ಕ್ರಿಕೆಟ್-ವೀರೆಂದ್ರ ಸೆಹ್ವಾಗ್ ಕ್ರಿಕೆಟ್ ಬ್ಯಾಟ್ಗಳ ವ್ಯಾಪ್ತಿಯನ್ನು ಮಂಡಿಸಿದರು ಹಾಗೂ ಇದು ಜಬೊಂಗಿನ ಮೂಲಕ ಪ್ರತ್ಯೇಕವಾಗಿ ಮಾರಾಟವಾಯಿತು.ಜಬೊಂಗ್ ಈಗ ತಮ್ಮ ಕ್ಯಾಟಲಾಗಿನಲ್ಲಿ ಪ್ರಮುಖ ಅಂತರರಾಷ್ಟ್ರೀಯ ಬ್ರಾಂಡುಗಳನ್ನು ಸೇರಿಸಿವೆ.ದೊರೊಥಿ ಪರ್ಕಿನ್ಸ್, ಮಿಸ್ ಸೆಲ್ಫ್ರಿಜ್,ರಿವರ್ ಐಲ್ಯಾಂಡ್,ಮುಂತಾದವು ಮತ್ತು ಸ್ಪಾನಿಷ್ ಬ್ರಾಂಡಾದ ಮ್ಯಾಂಗೊವನ್ನು ಸಹ ಈ ಅಂತಾರಾಷ್ಟ್ರೀಯ ಬ್ರಾಂಡ್ಗಳ ಕ್ಯಾಟಲಾಗಿನಲ್ಲಿ ಸೇರಿವೆ.ನವೆಂಬರ್ ೨೦೧೩ರಲ್ಲಿ ಅಬೌ ಆಂಡ್ ಬಿಯೋಂಡ್ ಬ್ರಾಂಡಿನ ಸರಕುಗಳನ್ನು ಮಾರಾಟ ಮಾಡಲು ಜಬೊಂಗ್ ಜ್ಯಾಕ್ ಆಂಡ್ ಜೋನ್ಸ್ ಎಂಬ ಪ್ರಮುಖ ಬ್ರಾಂಡಿನ ಜೊತೆ ಸಹಭಾಗಿತ್ವದಲ್ಲಿ ಪ್ರವೇಶಿಸಿತು.ಜನುವರಿ ೨೦೧೪ರಲ್ಲಿ ಜಬೊಂಗ್ ಸ್ಟ್ಯೈಲಿಸ್ಟ ಎಂಬ ಫ್ಯಾಷನ್ ವೇದಿಕೆಯ ಜೊತೆ ಸಹಭಾಗಿಯಾಯಿತು;ಭಾರತೀಯ ವಿನ್ಯಾಸಿಗಳಾದ ವೆಂಡಲ್ ರೋಡ್ರಿಕ್ಸ್,ಪ್ರಿಯದರ್ಶಿನಿ ರಾವ್ ಮತ್ತು ನಿಕ್ಷಾ ಲುಲ್ಲಾರ ಸಂಗ್ರಹವನ್ನು ಇದು ಒಳಗೊಂಡಿತು.ಮೇ ೨೦೧೪ರಲ್ಲಿ ಎನ್.ಬಿ.ಎ(NBA) ಮತ್ತು ಜಬೊಂಗ್ ಭಾರತದಲ್ಲಿ ಮೊದಲ ಅಧಿಕೃತ ಎನ್ಬಿಎ ಆನ್ಲೈನ್ ಸ್ಟೋರ್ ಆರಂಭಿಸಲು ಸಹಭಾಗಿತ್ವಕ್ಕೊಳಗೊಂಡರು.ಬ್ಯುಸ್ನೆಸ್ ಸ್ಟಾನ್ಡರ್ಡ್ಸ್.ಕಾಂ ಪ್ರಕಾರ ೨೦೧೫ರಲ್ಲಿ ಜಬೊಂಗ್ ಒಂದು ಶತಕೋಟಿ ಡಾಲರ್ ಕ್ಲಬ್ ಪ್ರವೇಶಿಸಲು ಸಿದ್ದವಾಗಿತ್ತು.

ಪ್ರಚಾರಗಳು[ಬದಲಾಯಿಸಿ]

ಕಂಪನಿ ಕೇವಲ ಅಲ್ಪ ಅವಧಿಯಲ್ಲೆ ಡಿಜಿಟೆಲ್ ಮಾಧ್ಯಮದಲ್ಲಿ ಆಗಲೆ ಸ್ಥಾಪಿಸಲಾಗಿದ ಸ್ಪರ್ಧಿಗಳ ಜೊತೆ ಸ್ಪರ್ಧಿಸುತ್ತಾ ಸಕ್ರಿಯವಾಗಿದೆ.ಮಾರ್ಚ್ ೨೦೧೨ರಲ್ಲಿ ಜಬೊಂಗ್ ಕಂಪನಿ ತಮ್ಮ ಮೊದಲ ಟಿ.ವಿ(ದೂರದರ್ಶನ) ಅಭಿಯಾನವನ್ನು ಆರಂಭಿಸಿತು.ಸೆಪ್ಟೆಂಬರ್ ೨೦೧೨ರಲ್ಲಿ ಹಾಗೂ ೨೦೧೩ರ ಅವಧಿಯಲ್ಲಿ ಜಬೊಂಗಿನ ಇತರ ಅಭಿಯಾನಗಳು ದೂರದರ್ಶನದಲ್ಲಿ ಕಾಣಿಸಿಕೊಂಡಿತು.ನವೆಂಬರ್ ೨೦೧೩ರಲ್ಲಿ ಜಬೊಂಗ್ ಪೂಮ ಜೊತೆ ಒಟ್ಟಿಗೆ ಡಿಜಿಟಲ್ ಫಿಟ್ನೆಸ್ ಪ್ರಚಾರ ಗೇರ್ ಅಪ್ ಬಡ್ಡಿ ಬಾಲಿವುಡ್ ನಟ ಚಿತ್ರಾಂಗದ ಸಿಂಗ್ ಮೂಲಕ ಆರಭಿಸಲಾಯಿತು.ಆನ್ಲೈನ್ ಫ್ಯಾಷನ್ ತಾಣವಾಗಿ ಸ್ವತಃ ಸ್ಥಾನಗಳನ್ನು ಪಡೆಯಲು ಜಬೊಂಗ್ ಲ್ಯಾಕ್ಮೆ ಫ್ಯಾಷನ್ ವೀಕಿನ ಮುಂದಿನ ನಾಲ್ಕು ಕ್ರೀಡಾಋತುಗಳಲ್ಲಿ ಮತ್ತು ವಿನ್ಯಾಸಕ ರೋಹಿತ್ ಬಾಲಿನ ಜೊತೆ ಸಹಭಾಗಿತ್ವ ಮಾಡಿದಾರೆ.೨೦೧೪ರಲ್ಲಿ ಜಬೊಂಗ್.ಕಾಂ ಇಂಡಿಯ ಅನ್ಲೈನ್ ವೀಕ್ ಆರಂಭಿಸಿತು.ಈ ಈವೆಂಟ್ ಯುವ ಮತ್ತು ಮಹತ್ವಾಕಾಂಕ್ಷೀ ವಿನ್ಯಾಸಕರು,ಮಾಡೆಲ್ ಮತ್ತು ಛಾಯಾಗ್ರಾಹಕರಿಗೆ ವೇಧಿಕೆಯಾಯಿತು.೨೦೧೪ ಏಪ್ರಿಲಿನಲ್ಲಿ,ದಿ ಜ್ಯೂಸ್ ಎಂಬ ಮಾಸಿಕ ಫ್ಯಾಷನ್ ಮ್ಯಾಗಸಿನನ್ನು(ಪತ್ರಿಕೆ) ಜಬೊಂಗ್ ಬಿಡುಗಡೆ ಮಾಡಿತು.ಈ ಮಾಸಿಕ ಪತ್ರಿಕೆ ಸುಮಾರು ಕಥೆಗಳು-ಫ್ಯಾಷನ್, ಸೌಂದರ್ಯ, ಜನರು, ಪ್ರವೃತ್ತಿಗಳು, ಪ್ರಯಾಣ,ಪಾಪ್ ಸಂಸ್ಕೃತಿ ಬಗ್ಗೆ ಹೊಂದಿದೆ.

ವ್ಯವಹಾರ ಮಾದರಿ[ಬದಲಾಯಿಸಿ]

ಜಬೊಂಗ್.ಕಾಂ ದಾಸ್ತಾನು ಮಾದರಿ ಮತ್ತು ಮಾರುಕಟ್ಟೆ ಮಾದರಿಯನ್ನು ಅನುಸರಿಸುತ್ತದೆ.ದಾಸ್ತಾನು ಮಾದರಿಯಲ್ಲಿ,ಉತ್ಪನ್ನಗಳು ಬ್ರಾಂಡ್ಗಳ ಮೂಲದ ಮತ್ತು ಜಬೊಂಗಿನ ಗೋದಾಮಿನಲ್ಲಿ ಸಂಗ್ರಹಿಸಲಾಗಿದೆ.ಜಬೊಂಗ್ ಮಾರುಕಟ್ಟೆ ಮಾದರಿಯಲ್ಲಿ-ಮಾರ್ಕೆಟಿಂಗ್, ಜಾರಿ ಮತ್ತು ವಿತರಣಾ ಒದಗಿಸುತ್ತದೆ.

ಪಾಲುದಾರಿಕೆಗಳು[ಬದಲಾಯಿಸಿ]

ಮೇ ೨೦೧೩ರಲ್ಲಿ,ಬಾಲಿವುಡ್ ಚಿತ್ರ ಯೇ ದಿವಾನಿ ಹೈ ಜವಾನಿ ಆಧರಿಸಿ ಒಂದು ಫ್ಯಾಷನ್ ಸಂಗ್ರಹ ಮಂಡಿಸಿದರು ಹಾಗೂ ಫ್ಯಾಷನ್ ಉಡುಪುಗಳನ್ನು ಪ್ರದರ್ಶಿಸಲು ಚಿತ್ರ ನಕ್ಷತ್ರಗಳನ್ನು ಜಬೊಂಗ್ ಬಳಸಿತು.ಜುಲೈ ೨೦೧೩ರಲ್ಲಿ,ಭಾಗ್ ಮಿಲ್ಕಾ ಭಾಗ್ ಎಂಬ ಚಿತ್ರದ ಮೂಲಕ ಮತ್ತೆ ಜಬೊಂಗ್ ಬಾಲಿವುಡ್ ಸಂಬಂಧಿಸಿತು ಹಾಗೂ ಚಿತ್ರದಿಂದ ಪ್ರೇರಿತವಾಗಿ ಉಡುಪುಗಳ ಸಂಗ್ರಹವನ್ನು ನೀಡಿತು.ಜಬೊಂಗಿನ ಮೂರನೇ ಬಾಲಿವುಡ್ ಸಹಯೋಗದಿಂದ,ಧೂಮ್-೩ ಎಂಬ ಚಿತ್ರದಿಂದ ಪ್ರೇರಿತಗೊಂಡು ಡಿಸೆಂಬರ್ ೨೦೧೩ರಲ್ಲಿ ಫ್ಯಾಷನ್ ಉತ್ಪ್ನನ್ನಗಳ(ಚೀಲಗಳು,ಟೋಪಿಗಳು,ಉಂಗುರಗಳು,ಮುಂತಾದವು ಸೇರಿದ) ಸಂಗ್ರಹವನ್ನು ಪ್ರದರ್ಶಿಸಿತು.೨೦೧೪ರಲ್ಲಿ,ಹಂಪ್ಟಿ ಶರ್ಮ ಕಿ ದುಲ್ಹನಿಯಾ ಜೊತೆ ಜಬೊಂಗ್ ಸಹಭಾಗಿಯಾಯಿತು.ಅಕ್ಟೋಬರ್ ೨೦೧೪ ರಲ್ಲಿ, ಅಮೆಜಾನ್ ಜಬೊಂಗ್ ಪಡೆಯಲು ಆರಂಭಿಕ ಮಾತುಕತೆ ನಡೆಯಿತು,ಆದರೆ ಯಾವುದೇ ಒಪ್ಪಂದ ನಡೆಯಲಿಲ್ಲ ಹಾಗೂ ಯಾವುದೇ ಪಕ್ಷಗಳು ಕಾರಣವನ್ನು ವ್ಯಕ್ತಪಡಿಸಿರಲಿಲ್ಲ.ಜುಲೈ ೨೦೧೬ರಲ್ಲಿ,ಜಬೊಂಗನ್ನು ಫ್ಲಿಪ್ಕಾರ್ಟಿನ ಅಂಗಸಂಸ್ಥೆಯಾದ ಮಿಂತ್ರಾ ಬಹಿರಂಗಪಡಿಸದ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿತು.

ಆನ್ಲೈನ್ ಸಂಚಾರ[ಬದಲಾಯಿಸಿ]

ಸೆಪ್ಟೆಂಬರ್ ೨೦೧೨ರ ಕಾಮ್ಸ್ಕೋರ್ ವರದಿ ಪ್ರಕಾರ,ಭಾರತೀಯ ಇ-ಕಾಮರ್ಸ್ ವೆಬ್ಸೈಟ್ ನಡುವೆ, ಪ್ರಾರಂಭಗೊಂಡ ಕೆಲವೇ ತಿಂಗಳುಗಳಲ್ಲಿ ಎರಡನೇಯ ಅತ್ಯಧಿಕ ಪ್ರಮಾಣದ ಸಂಚಾರ ನಡೆಯುವ ವೆಬ್ಸೈಟ್ ಎಂಬ ಹೆಸರು ಜಬೊಂಗಿಗೆ ಸೇರಿತು.೨೦೧೩ ನವೆಂಬರಿನಲ್ಲಿ,ಅಲೆಕ್ಸಾ ಟ್ರಾಫಿಕ್ಕ್ ರಾಂಕಿಂಗ್ ಪ್ರಕಾರ ಭಾರತದಲ್ಲಿ ೩೭ನೇ ರಾಂಕ್ ಜಬೊಂಗಿಗೆ ಲಭಿಸಿತು.

ಅಂತಾರಾಷ್ಟ್ರೀಯ ಸ್ಟೋರ್[ಬದಲಾಯಿಸಿ]

ಜಬೊಂಗಿಗೆ ಜಬೊಂಗ ವರ್ಲ್ಡ್.ಕಾಂ ಎಂಬ ಅಂತಾರಾಷ್ಟ್ರೀಯ ಆನ್ಲೈನ್ ಶಾಪಿಂಗ್ ಅಂಗಡಿಯು ಸಹ ಇದೆ;ಯುನೈಟೆಡ್ ಸ್ಟೇಟ್ಸ್,ಮಲೇಷ್ಯಾ,ಮಾರಿಷಸ್ ಮತ್ತು ಇತರ ರಾಷ್ಟ್ರಗಳಿಂದ ಹೆಚ್ಚಿನ ಪ್ರಮಾಣವನ್ನು ಪಡೆಯುತ್ತದೆ.

ಪ್ರಶಸ್ತಿಗಳು[ಬದಲಾಯಿಸಿ]

ಬ್ರ್ಯಾಂಡ್ ಟ್ರಸ್ಟ್ ವರದಿ ಭಾರತ ಅಧ್ಯಯನದ ಪ್ರಕಾರ - ೨೦೧೩ರಲ್ಲಿ ಟ್ರಸ್ಟ್ ರಿಸರ್ಚ್ ಅಡ್ವೈಸರಿ ಮೂಲಕ ಜಬೊಂಗ್ ಭಾರತದ ಅಗ್ರ ೨೫ ವಿಶ್ವಾಸಾರ್ಹ ಆನ್ಲೈನ್ ಬ್ರ್ಯಾಂಡ್ಗಳಲ್ಲಿ ಒಂದಾಗಿದೆ.

ಉಲ್ಲೇಖ[ಬದಲಾಯಿಸಿ]

[೧] [೨] [೩] [೪] [೫] [೬] [೭] [೮] [೯] [೧೦] [೧೧] [೧೨] [೧೩]

  1. http://www.bestmediainfo.com/2013/09/jabong-fuels-the-shopping-madness/
  2. http://www.campaignindia.in/video/jabong-com-invites-shopaholics-to-go-crazy-shopping/419517
  3. http://www.financialexpress.com/archive/jabbing-its-way-to-the-top/1182110/0/
  4. https://e27.co/jabong-sings-international-tune-with-above-beyond-merchandise/
  5. http://www.thehindubusinessline.com/news/sports/nba-joins-hands-with-jabong-for-online-store/article5983098.ece
  6. http://www.livemint.com/Companies/iicvIYFijqp9VRAx0ON46I/Flipkarts-Myntra-acquires-Jabong.html
  7. http://www.medianama.com/2013/02/223-jabong-international/
  8. http://www.indiantelevision.com/iworld/e-commerce/jabong-partners-with-humpty-sharma-ki-dulhania-140627
  9. https://www.fashionunited.in/news/apparel/jabong-partners-dhoom-3-for-apparel-line-231220136447
  10. http://www.indiantelevision.com/mam/headlines/y2k13/july/julymam26.php
  11. http://www.eventfaqs.com/news/ef-02901/jabong-com-launches-yeh-jawaan-1369680304526
  12. http://www.afaqs.com/news/story/40741_Jabong-launches-its-fashion-magazine-The-Juice
  13. http://economictimes.indiatimes.com/industry/services/retail/jabong-partners-with-fashion-designer-rohit-bal-to-launch-exclusive-collection-from-april/articleshow/31862017.cms