ವಿಷಯಕ್ಕೆ ಹೋಗು

ಸದಸ್ಯ:Sharanya123456

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಬ್ದ

ಶಬ್ದವು ಶಕ್ತಿಯ ಒಂದು ರೂಪ. ಶಬ್ದದ ಮೂಲಕ ನಮ್ಮ ಸುತ್ತ ಮುತ್ತಲಿನ ಆಗು ಹೋಗುಗಳನ್ನು ತಿಳಿದು ಕೊಳ್ಳಲು ಸಾಧ್ಯವಾಗುತ್ತದೆ. ಶಬ್ದದ ಅಧ್ಯಯನದಿಂದ ನಾ ಮಾತನಾಡುವ ಬಗೆ ಹೇಗೆ ಎಂದು ತಿಳಿದುಕೊಳ್ಳಬಹುದು. ಶರೀರ ಶಾಸ್ತ್ರಜ್ಞರು ಉಚ್ಛಾರ ಲೋಪ ದೋಷಗಳ ಪರಿಹಾರ ಕಂಡುಹಿಡಿಯುವುದರಲ್ಲಿ ಶಬ್ದದ ಅಧ್ಯಯನವು ಮುಖ್ಯ ಪಾತ್ರ ವಹಿಸುತ್ತದೆ.

ಹೃದಯ ಮತ್ತು ಶ್ವಾಸಕೋಶದಿಂದ ಹೊರ ಹೊಮ್ಮುವ ಶಬ್ದದ ಮುಖಾಂತರ, ಅದರಲ್ಲಿರುವ ತೊಂದರೆಯನ್ನು ಕಂಡುಹಿಡಿಯಬಹುದು. ಭಾಷೆಗಳ ವಿಕಸನಕ್ಕೆ, ಮನುಷ್ಯನು ಉಂಟುಮಾಡುವ ಧ್ವನಿಯ ಏರಿಳಿತವೇ ಮುಖ್ಯ ಕಾರಣ.

ಯಾವುದೇ ಪ್ರತಿಫಲಿಸುವ ಅದಮ್ಯ ಮೇಲೈನಿಂದ ಪ್ರತಿಫಲನಗೊಂಡ ಶಬ್ದವೇ ಪ್ರತಿಧ್ವನಿ. ವಸ್ತುವು ನಿರ್ದಿಷ್ಟ ವ್ಯಾಪ್ತಿಯಲ್ಲಿ ಕಂಪಿಸಿದಾಗ, ಶಬ್ದವು ಉತ್ಪತ್ತಿಯಾಗುತ್ತದೆ.

ಹದಿನೆಂಟನೇ ಶತಮಾನದಲ್ಲಿ ಜರ್ಮನ್ ವಿಜ್ಞಾನಿ ಹಾಗೂ ಸಂಗೀತಕಾರ ಅರ್ನೆಸ್ಟ್ ಕ್ಲಾಡ್ ನೀಯ ಶಬ್ದ ಕಂಪನ ದ್ರವ್ಯದಲ್ಲೂ ಕಂಪನ ಉಂಟುಮಾಡುತ್ತದೆ ಎಂಬುದನ್ನು ಪ್ರತಿಪಾದಿಸಿದನು.

ಅವನು ಒಂದು ತಟ್ಟೆಯಲ್ಲಿ ಮರಳನ್ನು ಹರಡಿ ತಟ್ಟೆಯ ತುದಿಯಲ್ಲಿ ಪಿಟೀಲಿನ ಕಮಾನನ್ನು ಎಳೆದಾಗ ಮರಳಿನಲ್ಲಿ ಜ್ಯಾಮಿತೀಯ ರೇಖಾ ಕೃತಿಗಳು ಉಂಟಾದವು.

ಪ್ರತಿಧ್ವನಿಯನ್ನು ಒಂದಕ್ಕಿಂತ ಹೆಚ್ಚು ಸಲ ಕೇಳಬಹುದು ಧ್ವನಿಯ ಹಲವಾರು ಪ್ರತಿಫಲಿಸುವ ಮೇಲೈಯಿಂದ ಪ್ರತಿ ಫಲಿಸಿದಾಗ ನಾವು ಅನೇಕ ಪ್ರತಿಧ್ವನಿಯನ್ನು ಕೇಳಬಹುದು.

ಮೋಡಗಳ ಅನೇಕ ಪ್ರತಿಫಲಿಸುವ ಮೇಲ್ಮೈನಿಂದ ಪ್ರತಿಫಲನಗೊಳ್ಳುವ ಧ್ವನಿಯೇ ಗುಡುಗು.