ಸದಸ್ಯ:Shabazrifa/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಸಾರ್ವತ್ರಿಕ ನಾಗರೀಕ ಮಸೂದೆಯ ಬದಲಾಗಿ ಅಸ್ಥಿತ್ವದಲ್ಲಿರುವ ಖಾಸಗಿ ಕಾನೂನುಗಳ ಮೂಲ ಭಾರತದ ಸನಾತನ ಧರ್ಮಗಳೂ ಮತ್ತು ದೇಶದ ಉನ್ನತ ಧಾರ್ಮಿಕ ಸಮುದಾಯಗಳ ಪದ್ದತಿಗಳು ಎಂಬುದು ಚರ್ಚಿತವಾಗಿದೆ. ಈ ಮಸೂದೆಯು ವ್ಯಕ್ತಿಯ ಮೇಲೆ ಪ್ರಭುತ್ವ ಸಾಧಿಸುತ್ತದೆ. ಈ ಕಾನೂನುಗಳು ಜನಸಮಾನ್ಯರ ಕಾನೂನುಗಳಿಗಿಂತ ಭಿನ್ನವಾಗಿರುತ್ತವೆ. ಇದು ಮದುವೆ, ವಿಚ್ಚೇದನ, ಪಿತ್ರಾರ್ಜಿತ ಭಾದ್ಯತೆ, ದತ್ತು ತೆಗೆದುಕೊಳ್ಳುವಿಕೆ ಪೋಷಣೆ ಇವುಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ರಾಜ್ಯವು ಸಂವಿದಾನದ ೪೪ ನೇ ವಿಧಿಯಲ್ಲಿರುವ ಭಾರತದ ಸಾರ್ವತ್ರಿಕ ಮಸೂದೆಯಲ್ಲ್ಲಿ ಅಳವಡಿಸಿಕೊಳ್ಳುವುದು ಅವರ ಕರ್ತವ್ಯವಾಗಿದೆ.ಸಮಕಾಲೀನ ಭಾರತೀಯ ರಾಜಕೀಯದಲ್ಲಿ ೧೯೮೫ ರ ಶಾಹ್ ಬಾನೊ ಕೇಸ್ ಒಂದು ವಿವಾದಾತ್ಮಕ ವಿಷಯವಾಗಿತ್ತು. ಈ ಚರ್ಚಿತ ವಿಷಯ ಮುಸ್ಲೀಮರ ಖಾಸಗಿ ಕಾನೂನಿನ ಮೂಲವಾಗಿದ್ದು, ೧೯೩೭ರ ತನಕ ಸುಧಾರಣೆಯಾಗದೆ ಉಳಿದಿತ್ತು. ಈ ಕಾನೂನು ದೇಶದಲ್ಲಿ ಏಕಮುಖೀಯ ವಿಚ್ಛೇದನ ಮತ್ತು ಬಹುಪತ್ನಿತ್ವಕ್ಕೆ ಅವಕಾಶ ಮಾಡಿಕೊಟ್ಟಿತ್ತು. ೧೨ನೇ ಶತಮಾನದ ಮಹಿಳಾ ಚಳುವಳಿಗಾರ್ತಿಯರಿಂದ ಭಾರತದಲ್ಲಿ ಮಹಿಳೆಯ ಹಕ್ಕು, ಸಮಾನತೆ ಮತ್ತು ರಕ್ಷಣೆ ಎಂಬ ಉದ್ದೇಶವನ್ನೊಳಗೊಂಡ ಭೇಢಿಕೆಯನ್ನು ಮುಂದಿಟ್ಟರು. ಶಾಹ್ ಬಾನೊ ಕೇಸ್ ಜನರನ್ನು 'ಅಲ್ಪಸಂಖ್ಯಾತರ ನಿರ್ದಿಷ್ಟ ದಾರ್ಮಿಕತೆ ಮತ್ತು ಸಂಸ್ಕ್ರುತಿಯನ್ನು ರಕ್ಷಣೆ' ಇದರ ಮೂಲಕ ತಾರ್ಕಿಕ ಚಿಂತನೆಗೆ ಒಳಪಡಿಸಿತ್ತು. ಹಿಂದುಗಳ ಪ್ರಮುಖ ಪಕ್ಷಗಳಾದ ಭಾರತೀಯ ಜನಾತಾ ಪಾರ್ಟಿ ಮತ್ತು ಕಾಂಗ್ರೇಸ್ ಇದಕ್ಕೆ ಸಹಾಯ ಮಾಡಿದವು,ಆದರೆ ಭಾರತದ 'ಆಲ್ ಇಂಡಿಯಾ ಮುಸ್ಲೀಂ ಪರ್ಸನಲ್ ಲಾ ಬೋರ್ಡ್' ಇದನ್ನು ತಿರಸ್ಕರಿಸಿತು.

ಬ್ರೀಟೀಷ್ ರಾಜ್ ಆಳ್ವಿಕೆಯ ಸಮಯದಲ್ಲಿ ಹಿಂದು ಮತ್ತು ಮುಸ್ಲೀಂರ ಖಾಸಗಿ ಕಾನೂನುಗಳಿಗೆ ಒಂದು ಚೌಕಟ್ಟನ್ನು ರೂಪಿಸಲಾಗಿತ್ತು. 'ಹಿಂದು ಸಾಂಪ್ರಾದಯಿಕ ಕಾನೂನು' ಮಹಿಳೆಯರಿಗೆ ಅನುವಂಶೀಯವಾಗಿ ಬಂದ ಆಸ್ತಿ ಹಕ್ಕು, ಮರು ವಿವಾಹ, ಮತ್ತು ವಿವಾಹ ವಿಚ್ಚೇದನ- ಇವುಗಳ ಬಗ್ಗೆ ತಾರತಮ್ಯ ನೀತಿಯನ್ನು ತೋರಿಸುತಿತ್ತು.. ಬ್ರೀಟೀಷರು ಭಾರತೀಯ ಸಮುದಾಯದ ನಾಯಕರ ಮತ್ತು ಅವರ ಸ್ವಂತ ಕಾರ್ಯಕ್ಷೇತ್ರಗಳಿಗೆ ಮದ್ಯಪ್ರವೇಶಿಸುವುದರ ಬಗ್ಗೆ ಆಸಕ್ತಿ ತೋರಲಿಲ್ಲ ಏಕೆಂದರೆ ಭಾರತೀಯರು ಅವುಗಳ ಬಗ್ಗೆ ಭಾವನಾತ್ಮಕ ಸಂಬಂದ ಹೊಂದಿದ್ದರು. ಭಾರತ ಸ್ವತಂತ್ರ ಪಡೆಯುವ ವರೆಗೆ ಕೆಲವು ಕಾನೂನುಗಳು ಸುಧಾರಣೆಯಗಿರಲಿಲ್ಲ ಅದರಲ್ಲಿ ಮುಖ್ಯವಾದ ಕಾನೂನು ಎಂದರೆ ಭಾರತೀಯ ವಿಧವೆಯರ ಜೀವನ ಕ್ರಮ. ೧೯೫೬ ರಲ್ಲಿ ಭಾರತದ ಲೋಕಸಭೆ 'ಹಿಂದೂ ಕೋಡ್ ಬಿಲ್'ನಲ್ಲಿ ವಿಧವೆಯರ ಜೀವನಕ್ರಮದ ಕುರಿತಾದ ಉತ್ತಮ ಸುಧಾರಣೆಗಳನ್ನು ಜಾರಿಗೊಳಿಸಿತ್ತು. ಭಾರತದ ಪ್ರದಾನಮಂತ್ರಿಯಾಗಿದ್ದ ಜವಹರಲಾಲ್ ನೆಹರುರವರು ಭಾರತಕ್ಕೆ'ಭಾರತದ ಸಾರ್ವತ್ರಿಕ ನಾಗರೀಕ ಮಸೂದೆ'ಯ ಅವಶ್ಯಕತೆ ಇದೆಯೆಂದು ತಿಳಿಸಿ ಅದರ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟರು. ಜವಹರಲಾಲ್ ನೆಹರು ಅವರ ಅನುಯಾಯಿಗಳು ಮತ್ತು ಮಹಿಳಾ ಹೋರಾಟಗಾರ್ತಿಯರು ಭಾರತದ ಸಂವಿದಾನಕ್ಕೆ 'ನಿರ್ದೇಶಕ ತತ್ವಗಳನ್ನು' ಅಳವಡಿಕೊಳ್ಳುವುದರ ಮೂಲಕ ಸರ್ಕಾರದೊಡನೆ ಸಂಧಾನ ಮಾಡಿಕೊಂಡರು. ಈ ನೀತಿಯ ಜಾರಿಯಿಂದಾಗಿ 'ಶಾಹ್ ಬಾನೊ ಕೇಸ್' ಒಂದು ವಿಶೇಷ ತಿರುವು ಪಡೆಯಿತು.ಅವರು ತಮ್ಮ ಜೀವನ ನಿರ್ವಹಣಾ ವೆಚ್ಚವನ್ನು 'ಆಲ್ ಇಂಡಿಯ ಕ್ರಿಮಿನಲ್ ಕೋಡ್' ಅಡಿಯಲ್ಲಿ ಪಡೆಯಲು ಈ ನೀತಿ ಸಹಕರಿಸಿತು. ಇದರ ಬಗ್ಗೆ ರಾಜಕೀಯ ಚರ್ಚೆಗಳು ತಲೆದೋರಿದವು.ಮುಸ್ಲೀಂ ಮಹಿಳೆಯರಿಗೆ ಇದರಿಂದ ವಿಶೇಷ ವಿನಾಯಿತಿಯನ್ನು ನೀಡಲಾಯಿತು. ೧೯೮೬ ರ ಕಲಂ [ಮುಸ್ಲೀಂ ಮಹಿಳೆಯರ ವಿಚ್ಚೇದನ ಹಕ್ಕು] ಇದರ ಪ್ರಕಾರ, ಇವರ ಸಮಸ್ಯೆಯನ್ನು ಅವರ ಸಮುದಾಯದಲ್ಲೇ ಪರಿಹರಿಸಿಕೊಳ್ಳಲು ಅವಕಾಶ ನೀಡಿತು.

ಬ್ರಿಟಿಷ್ ಭಾರತ

ನಾಗರಿಕ ಸಾರ್ವತ್ರಿಕ ಮಸೂದೆಯ ಬಗ್ಗೆ ಚರ್ಚೆಯು ಭಾರತದಲ್ಲಿ ವಸಹತುಶಾಹಿಯ ಕಾಲದಲ್ಲಿಯೆ ಆರಂಭವಯ್ತು. ಅಕ್ತೊಬರ್ ೧೮೪೦ರ ಲೆಕ್ಸ್ ಲೊಕಿ ವರದಿಯು ಭಾರತದ ಕಾನೂನು ಕಾಯ್ದೆಯಲ್ಲಿ ಸಾರ್ವತ್ರಿಕ ಮಸುದೆಯ ಮಹತ್ವ ಮತ್ತು ಅವಶ್ಯಕತೆಯನ್ನು ವತ್ತಿಹೆಳಿತು. ಆದರೆ ಹಿಂದು ಮತ್ತು ಮುಸ್ಲಿಮರ ಖಾಸಗಿ ಕಾನೂನುಗಳನ್ನು ಈ ಕಾಯ್ದೆಯಿಂದ ಹೊರಗಿಡಲು ಶಿಪಾರಸ್ಸು ಮಾಡಿತು. ಬ್ರಿಟೀಶರು ಭಾರತದಲ್ಲಿದ್ದ ಧಾರ್ಮಿಕ ವಿಭಜನೆಯಿಂದಾಗಿ ಸಾರ್ವತ್ರಿಕ ಮಸೂದೆಯೆ ಕಾರ್ಯಕ್ಷೆತ್ರವನ್ನು ವಿವಿಧ ಧಾರ್ಮಿಕ ಗ್ರಂಥಗಳು ಮತ್ತು ಸಂಪ್ರದಯಗಳ ನದುವೆ ವಿಭಜಿಸಿದರು.ಈ ಧಾರ್ಮಿಕ ಕನೂನುಗಳು ಸ್ಥಳಿಯ ನ್ಯಾಯಲಯಗಳು ಮತ್ತು ಪಂಚಾಯತಿಗಳ ಮೂಲಕ ಒಂದೆ ಧರ್ಮದ ಜನರ ನಡುವೆ ನಾಗರೀಕ ವಿವಾದಗಳು ಉಂಟಾದಾಗ ಮಾತ್ರ ಅನ್ವಯ ವಾಗುತ್ತಿತ್ತು.ಆದರೆ ರಾಜ್ಯ ಮಟ್ಟದ ಕಾನೂನುಗಳು ಅಪವಾದಾತ್ಮಕ ವಿಷಯಗಳಲ್ಲಿ ಮಾತ್ರ ನಡುವೆ ಸಂಭವಿಸುತ್ತಿತ್ತು. ಹೀಗೆ ಬ್ರಿಟೀಷರು ೧೮೫೯ರ ಕ್ವೀನ್ಸ್ ಪ್ರಕಟಣೆಯಲ್ಲಿ, ಭಾರತದ ಧಾರ್ಮಿಕ ವಿಷಯದಲ್ಲಿ ತಾಠಸ್ತ್ಯ ನೀತಿಯನ್ನು ಅನುಸರಿಸಿ, ಭಾರತೀಯರು ತಮ್ಮ ಸ್ವಾದೆಶಿಕ ವಿಷಯದಲ್ಲಿ ತಮ್ಮ ಖಾಸಗಿ ಕಾನೂನಿನ ಉಪಯೊಗವನ್ನು ಪಡೆಯಲು ಅವಕಾಶ ನೀಡಿದರು. ಪಿತ್ರಾರ್ಜಿತ ಬಾಧ್ಯತೆ, ಉತ್ತರಾಧಿಕಾರ, ಮದುವೆ ಮತ್ತು ಧಾರ್ಮಿಕ ಶಿಷ್ಟಾಚಾರಗಳು ಖಾಸಗಿ ಕಾನೂನಿನ ಚೌಕಟ್ಟಿಗೆ ಒಳಪಟ್ಟಿದ್ದವು. ನಾಗರೀಕ ಕಾರ್ಯಕ್ಷೆತ್ರ ಬ್ರಿಟೀಷರು ಮತ್ತು ಆಂಗ್ಲೊ-ಭಾರತೀಯ ಕಾನೂನಿನ ಮೂಲಕ ಆಳಿಸಲ್ಪಡುತ್ತಿತ್ತು. ಈ ಕಾರ್ಯಕ್ಷೆತ್ರ ಅಪರಾಧ, ಭೂಮಿಗೆ ಸಂಬಂಧಿಸಿದ ಗುತ್ತಿಗೆ ಕಾನೂನು ಮತ್ತು ಪ್ರಮಾಣವನ್ನು ಒಳಗೊಂಡಿತು. ಈ ಎಲ್ಲಾ ಕಾನೂನುಗಳು ಎಲ್ಲಾ ನಾಗರೀಕರಿಗೆ ಸಮಾನವಗಿ ಅನ್ವಯವಾಗಿತ್ತು.

ದೇಶದ ಎಲ್ಲಾ ಕಡೆಗಳಲ್ಲಿ ಸಾಂಪ್ರದಾಯಕ ಕಾನೂನುಗಳು ಆಯ್ಕೆಯ ವಿಚಾರದಲ್ಲಿ ವ್ಯತ್ಯಾಸಗಳಿದ್ದವು. ಎಕೆಂದರೆ ಹಿಂದು ಮತ್ತು ಮುಸ್ಲಿಂ ಸಮಾಜಗಳಲ್ಲಿ ಕೆಲವೊಮ್ಮೆ ಈ ವಿಚಾರವಗಿ ಘರ್ಷಣೆಗಳಾಗುತ್ತಿತ್ತು. ಇಂತಹ ಘರ್ಷಣೆಗಳ ಉದಾಹರಣೆಗಳು ನಾವು ಜಾಟ್ಸ್ ಮತ್ತು ದ್ರಾವೀಡಿಯನ್ ಸಮಾಜಗಳಲ್ಲಿ ಕಾಣಬಹುದು. ಉದಾಹರಣೆಗೆ ಶೂದ್ರರು ವಿಧವ ಪುನರ್ವಿವಾಹಕ್ಕೆ ಆದ್ಯತೆ ನೀಡಿದರೆ, ಹಿಂದು ಕಾನೂನಿನಲ್ಲಿ ಇದು ನಿಶೇಧವಾಗಿತ್ತು. ಬ್ರಿಟೀಷರು ಮತ್ತು ಭಾರತೀಯ ನ್ಯಾಯಧಿಶರು ಬ್ರಾಹ್ಮಣ ವ್ಯವಸ್ಥೆಯ ಬಗ್ಗೆ ಹೊಂದಿದ್ದ ಹೆಚ್ಚು ಒಲವು ಮತ್ತು ಮೇಲ್ಜಾತಿಯ ಭಯದಿಂದ ಹಿಂದು ಕಾನೂನುಗಳು ಹೆಚ್ಚು ವಲವು ಪಡೇದಿದ್ದವು. ಯಾವುದೆ ಜಾತಿಯ ನಿರ್ಧಿಶ್ಟ ಅಭ್ಯಾಸಗಳನ್ನು ಕಾರ್ಯಚರಣೆ ಮಾಡಲು ಸಾಂಪ್ರದಾಯ ಕನೂನುಗಳಿಗೆ ಸಾಧ್ಯವಗಲಿಲ್ಲ. ಹಿಂದು ಕಾನೂನಿಗೆ ಹೊಲಿಸಿದರೆ ಮುಸ್ಲಿಂ ವೈಯಕ್ತಿಕ ಕಾನೂನು ಅಥವಾ ಶರಿಯಾ ಜನರ ಮೇಲೆ ಹೆಚ್ಚು ವತ್ತಾಯವನ್ನು ಹೇರಲಿಲ್ಲ. ಇದು ತನ್ನ ಮನವಿಯಲ್ಲಿ ಎಕರೂಪತೆಯನ್ನು ಹೊಂದಿರಲಿಲ್ಲ ಮತ್ತು ಅಧಿಕಾರಿಶಾಹಿಗಳಿಂದ ಪ್ರತ್ಯೇಕವಾಗಿ ನಿರ್ಬಂಧಿಸಲಾಗಿತ್ತು. ಇದರಿಂದಾಗಿ ಸಾಂಪ್ರದಾಯಕ ಕಾನೂನುಗಳು ಮಹಿಳೆಯರಿಗೆ ಪಕ್ಶಪಾತ ಧೊರಣೆಯನ್ನು ಅನುಸರಿಸುತ್ತಿತ್ತು. ಉತ್ತರ ಮತ್ತು ಪೌರಾತ್ಯ ಭಾರತದಲ್ಲಿ ಶರಿಯಾ ಕಾನೂನುಗಳು ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿ ಮತ್ತು ವರದಕ್ಷಿಣೆ ವಿಚಾರದಲ್ಲಿ ನಿಗ್ರಹಿಸಲಾಗಿತ್ತು. ಮುಸ್ಲಿಮ್ ಶ್ರೀಮಂತರ ಒತ್ತಡದಿಂದಾಗಿ ೧೯೩೭ ರಲ್ಲಿ ಜಾರಿಯಾದ ಶರಿಯತ್ ಕಾನೂನು ಎಲ್ಲಾ ಭಾರತೀಯ ಮುಸ್ಲಿಂರು ಮದುವೆ, ವಿಚ್ಚೇದನ, ಪೊಷಣೆ, ದತ್ತು ಉತ್ತರಧಿಕಾರ ಮತ್ತು ಪಿತ್ರಾರ್ಜಿತ ಹಕ್ಕು ಮುಂತಾದ ಎಲ್ಲಾ ವಿಷಯಗಳಲ್ಲಿ ಮುಸ್ಲಿಂ ಕಾನೂನಿನ ಚೌಕಟ್ಟಿಗೆ ಒಳಪಟ್ಟಿರಬೇಕು.

ಹಿಂದು ಕಾನೂನು ಮಹಿಳೆಯರಿಗೆ ತಮ್ಮ ಪಿತ್ರಾರ್ಜಿತ ಹಕ್ಕು,ಪುನರ್ವಿವಾಹ ಮತ್ತು ವರದಕ್ಷಿಣೆ ಹಕ್ಕುಗಳನ್ನು ಕಸೆದುಕೊಳ್ಳುವ ಮೂಲಕ ಪಕ್ಷಪಾತ ಮಾಡಿತು. ಈ ಪಕ್ಷಪಾತ ಧೋರಣೆಯಿಂದ ಮತ್ತು ಬೇರೆ ಪ್ರಚಲಿತ ಸಂಪ್ರದಾಯಗಳಿಂದ ವಿಶೇಷವಾಗಿ ಹಿಂದು ವಿಧವೆ ಮತ್ತು ಹೆಣ್ಣುಮಕ್ಕಳ ಪರಿಸ್ತಿಥಿ ಚಿಂತಾಜನಕವಾಗಿದೆ. ಬ್ರೀಟೀಷರು ಮತ್ತು ಸಮಾಜ ಸುಧಾರಕರಾದ ಈಶ್ವರಚಂದ್ರ ವಿದ್ಯಾಸಗರ್ ಇಂತಹ ಸಂಪ್ರದಾಯಗಳನ್ನು ಬಹಿಶ್ಕರಿಸಿ, ಶಾಸನಾಧಿಕಾರ ಕಾರ್ಯವಿಧಾನದ ಮೂಲಕ ಸುಧಾರಣೆಮಾಡಿದರು. ಬ್ರಿಟೀಷರು ಸಾಂಪ್ರದಾಯ ಸಮಾಜದ ನಾಯಕರಿಂದ ವಿರೊಧಕ್ಕೆ ಒಳಗಾದ ನಂತರ ೧೮೬೫ರ ಭಾರತೀಯ ಉತ್ತರಾಧಿಕಾರ ಕಾಯ್ದೆಯು ಮಹಿಳೆಯರ ಆರ್ಥಿಕ ಭದ್ರತೆಯನ್ನು ವೈಯಕ್ತಿಕ ಕಾನೂನಿಂದ ನಾಗರೀಕ ಕ್ಷೇತ್ರಕ್ಕೆ ವರ್ಗಾಯಿಸುವ ಪ್ರಯತ್ನ ಮಾಡಿತು. ೧೮೬೪ರ ಭಾರತೀಯ ವಿವಾಹ ಕಾಯ್ದೆಯು ಕ್ರ್ಯೆಸ್ತ ವಿವಾಹಗಳೀಗೆ ಮಾತ್ರ ಸುಧಾರಣೆಯನ್ನು ತಂದಿತು. ಮಹಿಳೆಯರ ಎಳಿಗೆಗಾಗಿ ಕೆಲವು ಕಾನೂನುಗಳನ್ನು ಸುಧಾರಿಸಲಾಯಿತು, ಅವುಗಳೆಂದರೆ ೧೮೫೬ರ ಹಿಂದು ವಿಧವೆ ಪುನರ್ವಿವಾಹ ಕಾಯ್ದೆ, ೧೯೨೩ರ ವಿವಾಹಿತ ಮಹಿಳೆಯ ಆಸ್ತಿಯ ಕಾಯ್ದೆ ಮತ್ತು ೧೯೨೮ರ ಹಿಂದು ಪಿತ್ರಾರ್ಜಿತ ಕಾಯ್ದೆ, ಈ ಎಲ್ಲಾ ಸುಧಾರಣೆಗಳು ಮಹಿಳೆಯರಿಗೆ ಅರ್ಥಗರ್ಭಿತವಾಗಿ ಆಸ್ತಿಯ ಹಕ್ಕನ್ನು ನೀಡಿತು.

ಭಾರತದಲ್ಲಿ ಮಹಿಳೆಯರ ಸಮಾನತೆ ಹಕ್ಕಿನ ಕೂಗು ಆರಂಭದಲ್ಲಿ ಮಾತ್ರ ಕೇಳಲ್ಪಡುತ್ತಿತ್ತು. ಬ್ರಿಟೀಶ್ ಸರ್ಕಾರದ ಬಗ್ಗೆ ಅನಿಚ್ಚೆ ಜೊತೆಗೆ ಸುಧಾರಿಸಲಾಗಿದ್ದ ಕಾನೂನುಗಳನ್ನು ತಡೆಗಟ್ಟಿದರು. ಅಖಿಲ ಭಾರತೀಯ ಮಹಿಳಾ ಸಮ್ಮೇಳನವು ಪುರಷ ಪ್ರಧಾನ ಶಾಸನಕಾರರ ವಿರುದ್ಧ ತಮ್ಮ ನಿರಾಶೆಯನ್ನು ವ್ಯಕ್ತ ಪಡಿಸಿದರು. ಲಕ್ಷ್ಮಿ ಮೆನನ್ ೧೯೩೩ರಲ್ಲಿ ನಡೆದ ಅಖಿಲ ಭಾರತೀಯ ಮಹಿಳಾ ಸಮ್ಮೇಳನದಲ್ಲಿ ಹೇಳಿದ ಮಾತುಗಳೆಂದರೆ-

ನಾವು ನ್ಯಾಯಲಯಗಳಲ್ಲಿ ವಿಚ್ಚೇದನವನ್ನು ಕೇಳಿದರೆ ನಮ್ಮನ್ನು ಹಿಂದುಗಳಲ್ಲ ಎಂದು ನಿವೇದಿಸುತ್ತಾರೆ. ಶಾಸನ ಸಭೆಯಲ್ಲಿರುವ ಪುರುಷರು ನಮಗೆ ಉಪಯುಕ್ತವಾದ ಬದಲಾವಣೆಯನ್ನು ತರಲು ಸಹಾಯ ಮಾಡುವುದಿಲ್ಲ.

ಮಹಿಳೆಯರ ಸಂಸ್ಥೆಗಳು, ಅಸ್ತಿತ್ವದಲ್ಲಿರುವ ವೈಯಕ್ತಿಕ ಕಾನೂನುಗಳನ್ನು ಬದಲಾಯಿಸಲು ನಾಗರಿಕ ಸಾರ್ವತ್ರಿಕ ಮಸೂದೆಯ ಬೇಡಿಕೆಯನಿಟ್ಟರು. ದೇಶ್ಮುಖ್ ಬಿಲ್ ಎಂದು ಹೆಸರಾಗಿರುವ ೧೯೩೭ರ ಹಿಂದು ಮಹಿಳೆಯರ ಆಸ್ತಿ ಹಕ್ಕಿನ ಕಾಯ್ದೆಯು ಬಿ ಎನ್ ರಾವ್ ಮಂಡಲಿ ರಚನೆ ಮಾಡಲು ಮುಂದಾಯ್ತು. ಸಾಮಾನ್ಯ ಹಿಂದು ಕಾನೂನಿನ ಅವಶ್ಯಕತೆಯನ್ನು ನಿಶ್ಚ್ಯಿಸಲು ಈ ಮಂಡಲಿ ಅಸ್ತಿತ್ವಕ್ಕೆ ಬಂತು. ಈ ಮಂಡಲಿಯು ನಾಗರೀಕ ಸಾರ್ವತ್ರಿಕ ಮಸೂದೆಯನ್ನು ಜಾರಿ ಮಾದಲು ನಿರ್ಧರಿಸಿತು. ಈ ಮಂಡಲಿಯು ಮಹಿಳೆಯು ಸಮಾಜದ ಆಧುನಿಕ ಪ್ರವ್ರುತ್ತಿಯನ್ನು ಪಾಲಿಸಲು ಸಮಾನ ಹಕ್ಕನ್ನು ನೀಡೀತು. ಆದರೆ ಅವರ ತೇಜಕೇಂದ್ರ ಮುಖ್ಯವಾಗಿ ಧಾರ್ಮಿಕ ಗ್ರಂಥಗಳ ಅನುಗುಣವಾಗಿ ಹಿಂದು ಕಾನೂನನ್ನು ಸುಧಾರಣೆ ಮಾಡುವುದು. ಈ ಮಂಡಲಿಯು ೧೯೩೭ರ ಕಾಯ್ದೆಯನ್ನು ತಪಾಸಣೆ ಮಾಡೀ ನಾಗರಿಕ ವಿವಾಹ ಮಸೂದೆ ಮತ್ತು ಉತ್ತರಾಧಿಕರವನ್ನು ಶಿಫಾರಸ್ಸು ಮಾಡಿತು. ೧೯೪೪ರಲ್ಲಿ ಮತ್ತೆ ಜಾರಿಗೆ ಬಂದು ೧೯೪೭ರಲ್ಲಿ ಭಾರತೀಯ ಸಂಸತ್ತಿಗೆ ತನ್ನ ವರದಿಯನ್ನು ನೀಡಿತು.






ಪೋಸ್ಟ್ ಕಲೋನಿಯಲ್[೧೯೪೭-೧೯೮೫] ಭಾರತದ ಸಂಸತ್ತು ಹಿಂದೂ ಕಾನೂನು ಮಂಡಳಿಯ ವರದಿಯನ್ನು ೧೯೪೮-೧೯೫೧ ಮತ್ತು ೧೯೫೧-೧೯೫೪ ಅಧಿವೇಶನದ ಸಭೆಗಳಲ್ಲಿ ಚರ್ಚೆ ಮಾಡಿತು.ಭಾರತ ಗಣರಾಜ್ಯದ ಮೊದಲ ಮುಖ್ಯಮಂತ್ರಿ ಜವಹಾರ್ಲಾಲ್ ನೆಹರು, ಈತನ ಬೆಂಬಲಿಗರು ಮತ್ತು ಮಹಿಳಾ ಸದಸ್ಯರು ಭಾರತದ ಸಾರ್ವತ್ರಿಕ ನಾಗರೀಕ ಮಸೂದೆಯನ್ನು ಕರ್ಯಗತಗೊಳಿಸಬೇಕೆಂದು ಇಚ್ಚಿಸಿದರು. ಕಾನೂನು ಮಂತ್ರಿಯಂತೆ ಬಿ.ಆರ್. ಅಂಬೆಡ್ಕರ್ ಆವರು ಈ ಮಸೂದೆಯ ವಿವರಗಳನ್ನು ನೀಡುವ ಕಾರ್ಯ ವಹಿಸಿಕೊಂಡರು.ಸಂಪ್ರಾದಾಯ ಬದ್ದ ಹಿಂದೂ ಕಾನೂನುಗಳು ನಿರ್ದಿಷ್ಟ ಶಾಲೆ ಮತ್ತು ಸಂಪ್ರದಾಯಗಳಿಗೆ ಅನ್ವಯಿಸಿದ್ದವೆಂದು ಕಂಡುಬಂದಿದೆ ಏಕೇಂದರೆ ಏಕಪತ್ನಿತ್ವ, ವಿಚ್ಚೇದನ ಮತ್ತು ವಿಧವೆಯರು ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ಹೋಂದ್ದಿದ್ದಾರೆಂದು ಶಾಸ್ತ್ರಗಳಲ್ಲಿ ವ್ಯಕ್ತಪಡಿಸಲಾಗಿದೆ. ಹಿಂದೂ ಕಾನೂನುಗಳ ಮೇಲೆ ಅಂಬೆಡ್ಕರ್ ರವರ ಪುನಾರಾವರ್ತಿತ ದಾಳಿಯಿಂದಾಗಿ ಮತ್ತು ಮೇಲ್ ಜಾತಿಗಳ ಮೇಲೆ ಇವನಿಗಿರುವ ನಿರಾಸೆಯಿಂದಾಗಿ ಈತ ಸಭೆಯಲ್ಲಿ ಜನಪ್ರಿಯವಾಗಲಿಲ್ಲ.ಈತ ಧರ್ಮ ಗ್ರಂಥಗಳ ಬಗ್ಗೆ ಸಂಶೋಧನೆ ಮಾಡಿದ್ದು ಮತ್ತು ಹಿಂದೂ ಸಾಮಾಜದ ರಚನೆಯಲ್ಲಿ ದೋಷಗಳಿದೆ ಎಂದು ಪರಿಗಣಿಸಿದರು.ಈತನ ಪ್ರಾಕಾರ ಕಾನೂನು ಮಾತ್ರ ಇದನ್ನು ಸುಧಾರಣೆ ಮಾಡುತ್ತದೆ ಮತ್ತು ನಾಗರೀಕ ಮಸೂಧೆಯು ಇಂತಹ ಸದಾವಕಾಶವಾಗಿದೆ.

ಶಾಹ್ ಬಾನೊ ಕೇಸ್ ಭಾರತದಲ್ಲಿ 'ಹಿಂದು ಕೋಡ್ ಬಿಲ್'ಜಾರಿಯಾದ ನಂತರ ಭಾರತದ ಸಾಮಾನ್ಯ ನಾಗರೀಕರ ಮತ್ತು ಮುಸ್ಲೀಂ ಸಮುದಾಯದ ಜನರು ಆ ನೀತಿಯ ಅಂಶಗಳನ್ನು ತಮ್ಮ ವೈಯಕ್ತಿಕ ಕಾನೂನುಗಳಲ್ಲಿ ಅನ್ವಯ ಮಾಡಿಕೊಳ್ಳಲು ಪ್ರಾರಂಭಿಸಿದರು, ಆದರೂ ಅವರ ಕಾನೂನುಗಗಳಲ್ಲಿ ಸುದಾರಣೆ ಕಾಣಲಿಲ್ಲ. ೧೯೮೫ ರ ತನಕ ಶಾಹ್ ಬಾನೊ ಕೇಸ್ ನಲ್ಲಿ ಕಂಡುಬಂದಂತ ನಿರಂತರವಾದ ಜಾತ್ಯತೀತತೆ ಮತ್ತು ಸಾಂಪ್ರಾದಾಯಿಕ ಅಧಿಕಾರಗಳ ನಡುವೆ 'ಸಾರ್ವತ್ರಿಕ ನಾಗರೀಕ ಮಸೂದೆ' ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು.ಶಾಹ್ ಬಾನೊ ೭೩ ವರ್ಷದ ವೃದ್ದ ಮಹಿಳೆ ಇವರು ತಮ್ಮ ವಿಚ್ಚೇದಿತ ಗಂಡನಾದ ಮಹಮ್ಮದ್ ಅಹಮ್ಮದ್ ಖಾನ್ ನಿಂದ ಜೀವನ ನಿರ್ವಹಣಾ ವೆಚ್ಚವನ್ನು ಪಡೆಯಬೇಕಾಗಿತ್ತು. ಇವನು ತನ್ನ ವಿವಾಹವಾದ ೪೦ನೇ ವರ್ಷದ ಅವಧಿಯಲ್ಲಿ ೩ ಬಾರಿ 'ತಲಾಕ್' ನೀಡಿದ್ದನು ಮತ್ತು ಅವರಿಗೆ ಜೀವನ ನಿರ್ವಹಣಾ ವೆಚ್ಛವನ್ನು ನೀಡಲು ನಿರಾಕರಿಸಿದ್ದನು. ಮುಸ್ಲೀಂ ಸಮುದಾಯದಲ್ಲಿ ಏಕಮುಖೀಯ ವಿಚ್ಚೇದನ ವ್ಯವಸ್ಥೆಗೆ ಅವಕಾಶವನ್ನು ಕಲ್ಪಿಸಿತ್ತು,ಅಂದರೆ ವಿಚ್ಚೇದನಕ್ಕೆ ಗಂಡ ಹೆಂಡತಿ ಇಬ್ಬರ ಸಮ್ಮತಿಯ ಬದಲು ಗಂಡಿನ ಒಪ್ಪಿಗೆಯೇ ಮುಖ್ಯವಾಗಿತ್ತು. ಗಂಡ ಇಚ್ಚಿಸಿದಲ್ಲಿ ಹೆಂಡತಿಯ ಒಪ್ಪಿಗೆಯ ಬಗ್ಗೆ ಯಾವುದೇ ಮಾನ್ಯತೆ ನೀಡದೆ ವಿಚ್ಚೇದನ ಪಡೆಯಬಹುದಾಗಿತ್ತು. ೧೯೮೦ರಲ್ಲಿ ಸ್ಥಳೀಯ ನ್ಯಾಯಲಯವು ಶಾಹ್ ಬಾನೊ ತನ್ನ ಜೀವನ ನಿರ್ವಹಣಾ ವೆಚ್ಚವನ್ನು ಪಡೆಯಬಹುದೆಂದು ತಿಳಿಸಿತ್ತು, ಆದರೆ ಅವಳ ಗಂಡ ವಕೀಲನಾಗಿದ್ದು ಅವನು ಈ ತೀರ್ಪನ್ನು ತಿರಸ್ಕರಿಸಿದನು. ನಂತರ ಈ ಕೇಸನ್ನು ಸುಪ್ರೀಂ ಕೋರ್ಟ್ ಗೆ ವರ್ಗಾಯಿಸಲಾಯಿತು.[ಸೆಕ್ಷನ್ ೧೨೫ ರ ಪ್ರಕಾರ, ಜೀವನ ನಿರ್ವಹಣಾ ವೆಚ್ಚವನ್ನು ಹೆಂಡತಿ, ಮಕ್ಕಳು ಮತ್ತು ತಂದೆ-ತಾಯಿಯರಿಗೆ ನೀಡುವುದು]. 'ಆಲ್ ಇಂಡಿಯ ಕ್ರಿಮಿನಲ್ ಕೋಡ್' ಪ್ರಕಾರ ಈ ಸೆಕ್ಷನ್ ಎಲ್ಲಾ ಧರ್ಮದ ನಾಗರೀಕರಿಗೆ ಸಮಾನವಾಗಿ ಅನ್ವಯವಾಗುವಂತದ್ದು ಎಂದು ತಿಳಿಸಿತು. ಶಾಹ್ ಬಾನೊ ಕೇಸ್ ಜೊತೆಗೆ ಇಬ್ಬರು ಮುಸ್ಲೀಂ ಮಹಿಳೆಯರು ಕೂಡ ಇವಳಿಗಿಂತ ಮೊದಲೇ ಜೀವನ ನಿರ್ವಹಣಾ ವೆಚ್ಚವನ್ನು 'ಕ್ರಿಮಿನಲ್ ಕೋಡ್' ಅಡಿಯಲ್ಲಿ ೧೯೭೯ ಮತ್ತು ೧೯೮೦ ರಲ್ಲಿ ಪಡೆದಿದ್ದನು.