ಸದಸ್ಯ:Seemadeso/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೈಥಾಗರಸ್:

ಸಮೊಸ್‌ನ ಪೈಥಾಗರಸ್ ; ಒಬ್ಬ ಅಯಾನಿಯನ್‌ ಪಂಗಡದ ಗ್ರೀಕ್‌ ತತ್ವಜ್ಞಾನಿ. ಪೈಥಾಗರಿಯನಿಸಮ್‌ ಎಂಬ ಧಾರ್ಮಿಕ ಪಂಥದ ಚಳವಳಿನ್ನು ಹುಟ್ಟುಹಾಕಿದರು. ಇವರನ್ನು ಒಬ್ಬ ಮಹಾನ್‌ ಗಣಿತಜ್ಞ, ಸಂತ ಮತ್ತು ವಿಜ್ಞಾನಿಯೆಂದು ಗೌರವಿಸಲಾಗಿದೆ. ಆದರೂ, ಕೆಲವರು ಗಣಿತ ಮತ್ತು ನೈಸರ್ಗಿಕ ತತ್ವಶಾಸ್ತ್ರಕ್ಕೆ ಇವರ ಕೊಡುಗೆಯ ವ್ಯಾಪ್ತಿಯನ್ನು ಪ್ರಶ್ನಿಸಿದ್ದಾರೆ. 'ಗ್ರೀಕರಲ್ಲಿ ಅತ್ಯಂತ ಸಮರ್ಥ ತತ್ವಜ್ಞಾನಿ'ಯೆಂದು ಹೆರೊಡೊಟಸ್‌ ಅಭಿಪ್ರಾಯಪಟ್ಟಿದ್ದಾರೆ. ಅವರ ಹೆಸರು ಪೈಥಿಯನ್‌ ಅಪೊಲೊದೊಂದಿಗೆ ಸೇರಿಸಲಾಯಿತು. 'ಪೈಥಿಯನ್‌ (ಪೈಥ್‌-ಭವಿಷ್ಯವಾಣಿ=ಅಲ್ಲಿನ ಪವಿತ್ರ ಗ್ರಂಥ- ‌)ದಷ್ಟೇ (ಅಗೊರ್‌- )ನಿಜ ನುಡಿಯುತ್ತಿದ್ದರು' ಎಂದು ಅರಿಸ್ಟಿಪಸ್‌ ಪೈಥಾಗರಸ್‌ರ ಹೆಸರನ್ನು ವಿವರಿಸಿದ್ದಾರೆ. ಗರ್ಭಿಣಿಯಾಗಿದ್ದ ಅವರ ತಾಯಿಯು ಒಬ್ಬ ಮೇಧಾವಿ ವ್ಯಕ್ತಿಗೆ ಜನ್ಮ ನೀಡುವಳೆಂಬ ಪೈಥಿಯಾ ಭವಿಷ್ಯ ನುಡಿದ ಕಥೆಯನ್ನು ಇಯಾಂಬ್ಲಿಕಸ್‌ ಹೇಳುತ್ತಾರೆ. ಪೈಥಾಗರಸ್ ಎಂಬಾತ ಹುಟ್ಟಿ ಇಡೀ ಮನುಕುಲಕ್ಕೇ ಉಪಕಾರಿಯಾಗುತ್ತಾನೆ ಎಂದು ಆಗ ಭವಿಷ್ಯ ನುಡಿಯಲಾಗಿತ್ತು. ಈತ ಜಾಣ, ಆಕರ್ಷಕ ಹಾಗು ಅಪಾರ ಮನ್ನಣೆಯ ವ್ಯಕ್ತಿಯಾಗುತ್ತಾನೆಂದೂ ಹೇಳಲಾಗಿತ್ತು.