ಸದಸ್ಯ:Sathish5nov1995/sandbox

ವಿಕಿಪೀಡಿಯ ಇಂದ
Jump to navigation Jump to search

ಆಡಂ ಸ್ಮಿತ್ ಆರ್ಥಿಕ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು ಆಡ್ಂ ಸ್ಮಿತ್; ರಾಜಕೀಯಾರ್ಥಶಾಸ್ತ್ರದ ಪಿತನೆಂದೂ, ಆಂಗ್ಲ ಸಂಪ್ರದಾಯ ಪಂಥದ ಸಂಸ್ಥಾಪಕನೆಂದೂ, ಗೌರವಿಸಲ್ಪಡುತ್ತಾನೆ. ಆತನ "ವೆಲ್ತ್ ಆಫ಼್ ನೇಷನ್ಸ್" ಮಹಾಗ್ರಂಥವು ಒಂದು ಕ್ರಾಂತಿಯನ್ನೇ ಮಾಡಿ, ವಾಣಿಜ್ಯ ಪಂಥದ ಅಬಿಪ್ರಾಯಗಳನ್ನು ಅಸಂಗತವಾಗಿಸಿ, ಮುಕ್ತ ಆರ್ಥಿಕ ನೀತಿಯನ್ನು ಎತ್ತಿ ಹಿಡಿಯಿತು. ಎರಡು ಶತಮಾನಗಳಿಗೂ ಹಿಂದೆ ಪ್ರತಿಪಾದಲಿಸ ತನ್ನ ಆರ್ಥಿಕ ಅಭಿಪ್ರಾಯಗಳಲ್ಲಿ ಕೆಲವು ಇಂದಿನ ಬದಲಾಗುತ್ತಿರುವ ಜಗತ್ತಿನಲ್ಲಿ ಅನ್ವಯವಾಗುವುದನ್ನು ನೋಡಿದರೆ, ಆಡ್ಂ ಸ್ಮಿತ್ನ ಪ್ರತಿಭೆಯ ಅರಿವಾಗುತ್ತದೆ. ಆತನ ಪ್ರಖ್ಯಾತವಾದ ತೆರೆಗೆಯ ಸೂತ್ರಗಳು ಆಧುನಿಕ ಕಲ್ಯಾಣ ರಾಷ್ಟ್ರಗಳಲ್ಲಿ ತೆರೆಗೆಯ ತತ್ವದ ಮಾರ್ಗದರ್ಶಿಗಳಾಗಿವೆ. ಆರ್ಥಿಕ ತತ್ವಗಳ ಬಾಹೈಪಾ ರೂಪ ನಿರ್ಣಯ, ಅರ್ಥಶಾಸ್ತ್ರದ ವ್ಯಾಪ್ತಿಯ ನಿರ್ಧಾರ ಮತ್ತು ಉತ್ಪಾದನೆ, ಮೌಲ್ಯ ಹಾಗೂ ವಿತರಣಾ ಸಮಸ್ಯೆಗಳ ವಿಶ್ಲೇಷ್ನೆ ಮಾಡುವುದಕ್ಕೆ ಆಡ್ಂ ಸ್ಮಿತ್ ಕಾರಣಕರ್ತನಾಗಿದ್ದಾನೆ. ಹಿತಸಕ್ತಿಗಳ ಸಮ್ಮಿಳನದ ಬಗ್ಗೆ ಕ್ರಮಬದ್ಧ ಹೇಳಿಕೆ ನೀಡಿದವರಲ್ಲಿ ಆತ ಪ್ರಥಮನಾಗಿದ್ದ ಹಾಗೂ ಅರ್ಥಶಾಸ್ತ್ರಕ್ಕೆ ತುಷ್ಟಿಗುಣ ಸಂಪ್ರದಾಯವನ್ನು, ಪರಿಚಯಿಸಿದ್ದು ಕೂಡ ಆಡ್ಂ ಸ್ಮಿತಿನ ಮಹತ್ಕಾರ್ಯವಾಗಿದೆ. ಅದುದರಿಂದ ಆಡ್ಂ ಸ್ಮಿತ್, ಇಂದಿಗೂ ಕೂಡ ರಾಜಕಿಯಾರ್ಥಶಾಸ್ತ್ರದ ಜನಕ ಎಂದು ಗೌರವಿಸಲ್ಪಡುತ್ತಾನೆ.

ಜೀವನ ಚಿತ್ರಣ[ಬದಲಾಯಿಸಿ]

ಸ್ಕಾಟ್ಲಾಂಡಿನ ಎಡಿನ್ಬರ್ಗ್ ಪಟ್ಟಣದ ಸಮೀಪದ ಕಿರ್ತಾಲ್ಡಿ ಎಂಬಲ್ಲಿ ೧೭೨೩ರಲ್ಲಿ ಒರ್ವ ಸ್ಕಾಟಿಷ್ ನ್ಯಾಯವಾದಿಯ ಪುತ್ರನಾಗಿ ಆಡ್ಂ ಸ್ಮಿತ್ ಜನಿಸಿದ. ಆಡ್ಂ ಸ್ಮಿತ್ನ ತಂದೆ ಸುಂಕದ ಅದಿಕಾರಿ ಕೂಡಾ ಆಗಿದ್ದ. ೧೭೩೭ ರಿಂದ ೧೭೪೦ರ ವರೆಗೆ ಗ್ಲಾಸ್ಗೋ ವಿಶ್ವವಿದ್ಯಾಲಯದಲ್ಲಿ ಸ್ಮಿತ್ ಅಧ್ಯಯನ ಮಾಡುವಾಗ, ಆಗಿನ ಸರ್ವೋಷ್ಕ್ರುಷ್ಟ ತತ್ವ ಚಿಂತಕ ಹೆಚ್ಸನ್ ಆತನಿಗೆ ಗುರುವಾಗಿ ದೊರೆತ. ೧೭೪೦ರಿಂದ ೧೭೪೬ರ ವರೆಗೆ ಹೆಸರಾಂತ ಆಕ್ಸ್ ಫ಼ೊರ್ಡ್ ವಿಶ್ವವಿಧ್ಯಾನಿಲಯದಲ್ಲಿ ತನ್ನ ಅಧ್ಯಯನ ವನ್ನು ಸ್ಮಿತ್ ಮುದುವರಿಸಿದರು. ೧೭೪೭ರಿಂದ ೧೭೫೦ರ ವರೆಗೆ ಆತ ಎಡೆನ್ಬರ್ಗ್ ವಿಶ್ವವಿದ್ಯಾನಿಲಯದ ಆಂಗ್ಲ ಸಾಹಿತ್ಯ ಮತ್ತು ರಾಜಕಿಯಾರ್ಥಶಾಸ್ತ್ರದ ಬಗ್ಗೆ ಉಪನ್ಯಾಸಗಳನ್ನು ನೀಡಿದ. ಏತನ್ಮಧೈ ೧೭೪೯ರಲ್ಲಿ ಆತ ಫ಼ಿಲೊಸೊಫ಼ಿಕಲ್ ಎಸ್ಸೆ ಎಂಬ ಗ್ರಂಥ ಬರೆದ ನಾದರೂ ಅದು ಆತನ ಮರಣಾನಂತರವೇ ಪ್ರಕಟವಾಯಿತು. ೧೭೫೧ ರಲ್ಲಿ ಆತ ತರ್ಕಶಾಸ್ತ್ರದ ತಿಯರಿ ಆಫ಼್ ಮೊರಲ್ ಸೆನ್ಟಿಮೇನ್ಟ ಅವನಿಗೆ ಹೆಸರು ಮತ್ತು ಖ್ಯಾತಿಗಳೆರಡರಲ್ಲಿ ಒಟ್ಟಿಗೇ ತಂದಿತು. ಆಡ್ಂ ಸ್ಮಿತ್ ಗೊಡ್ಡು ತತ್ವವನ್ನು ಜೋತುಬೀಳದೆವಾಸ್ತವಿಕವಾದ ಬೌತಿಕತೆಗೆ ಪ್ರಾಧಾನ್ಯತೆ ನೀಡಿದುದನ್ನು ಈ ಪುಸ್ತಕದಲ್ಲಿ ಕಾಣಬಹುದು. ೧೭೬೪ ರಲ್ಲಿ ಪ್ರಾಧ್ಯಾಪಕ ಹುದ್ದೆಯನ್ನು ತ್ಯಜಿಸಿದು ಸ್ಮಿತ್, ಡ್ಯೂಕ್ ಆಫ಼್ ಬೆಕಲ್ಯೋನ ಜೊತೆ ಯೂರೂಪಿನ ಪ್ರವಾಸ ಕೈಗೊಂಡ. ಆತ ಡ್ಯೂಕನ ಶಿಕ್ಷಕ ಹಾಗೂ ಮಾರ್ಗದರ್ಶಿಯಾಗಿ ಕೆಲಸ ನಿರ್ವಹಿಸಿದ. ಯೂರೂಪಿನ ಪ್ರವಾಸವು ಸ್ಮಿತಿನ ಜ್ನಾನ ಹೆಚ್ಚಿಸಲು ಸಹಕಾರಿಯಾಗಿತ್ತು. ಈ ಪ್ರವಾಸಾವಧಿಯಲ್ಲಿ ಆತ ಸಮಕಾಲಿನ ಮಹಾನ್ ಚಿಂತಕರಾದ ಕ್ವಿನ್, ಡರ್ಗೋಟ್, ವಾಲ್ಟೆರ್ ಮುಂತಾದವರನ್ನು ಸಂಧಿಸಿದ. ೧೭೬೬ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿದ ಸ್ಮಿತ್ ತನ್ನ ಯುಗ ಪ್ರವರ್ತಕ ಉದ್ಗ್ರಂಥವಾದ "ವೆಲ್ತ್ ಆಫ಼್ ನೇಷನ್ಸ್" ಅನ್ನು ಬರೆಯಲಾರಂಬಿಸಿದ. ೧೭೭೬ರಲ್ಲಿ ಈ ಪುಸ್ತಕ ಪ್ರಕಟವಾಗುವದರೊಂದಿಗೆ ಆರ್ಥಿಕ ಜಗತ್ತಿಗೆ ಹೊಸ ಆಯಾಮವೊಂದು ದೊರಕಿತು. ೧೭೭೮ರಲ್ಲಿ ತನ್ನ ತಂದೆಯ ಹುದ್ದೆಯಾದ ಸುಂಕ ಪ್ರಾಧಿಕಾರದ ಅಧಿಕಾರಿಯಾಗಿ ಸ್ಮಿತ್ ನೇಮಕಗೊಂಡ. ಇದೇ ಹುದ್ದೆಯಲ್ಲಿ ಆತ ೧೭೯೦ರ ವರೆಗೆ, ಅಂದರೆ ಮರಣದವರೆಗೂ ಉಳಿದ.

ಆರ್ಥಿಕ ಚಿಂತನೆಗೆ ಸ್ಮಿತ್ತನ ಕಾಣಿಕೆ=[ಬದಲಾಯಿಸಿ]

ಸ್ಮಿತ್ತನ ಆರ್ಥಿಕ ಚಿಂತನೆಯನ್ನು ಆತನ ಮೇರು ಕೃತಿಯಾದ "ವೆಲ್ತ್ ಆಫ಼್ ನೇಷನ್ಸ್" ನಲ್ಲಿ ಕಾಣಬಹುದು. ಇದರ ಪ್ರಕಟಣೆಯೋಂದಿಗೆ ರಾಜಕಿಯಾರ್ಥ ಶಾಸ್ತ್ರದ ಆರಂಭಕ್ಕೆ ಬುನಾದಿ ದೊರೆಯಿತು. ಇದು ಯುಗ ಪ್ರವರ್ತಕ ಗ್ರಂಥವಾಗಿದ್ದು, ವಾಣಿಜ್ಯ ಪಂಥಕ್ಕೆ ಪ್ರಬಲ ಪಂಥಾಹ್ವಾನ ನೀಡಿತು.

ಸಂಪತ್ತಿನ ವ್ಯಾಖ್ಯೆ[ಬದಲಾಯಿಸಿ]

ಅರ್ಥಶಾಸ್ತ್ರವನ್ನು ಕರಾರುವಾಕ್ಕಾದ ಸಮರ್ಪಕ ಶಬ್ದಗಳಿಂದ ವ್ಯಾಖ್ಯಾನಿಸಿದವರಲ್ಲಿ ಆಡ್ಂ ಸ್ಮಿತ್ ಮೊದಲಿಗನೆನಿಸಿದ್ದಾನೆ. "ಅರ್ಥಶಾಸ್ತ್ರವು ಸಂಪತ್ತನ್ನು ಹೇಗೆ ಉತ್ಪಾದಿಸುವುದು ಮತ್ತು ಹಂಚುವುದು, ಎನ್ನುವುದನ್ನು ವಿವರಿಸುವಾಗ ಪ್ರಾಯೂಗಿಕ ವಿಜ್ನಾನ. ಆದುದರಿಂದ ಅದು ಸಂಪತ್ತಿನ ಶಾಸ್ತ್ರ ಎಂದಿದ್ದಾನೆ. ಅರ್ಥಶಾಸ್ತ್ರದ ಬಗ್ಗೆ ಆಡ್ಂ ಸ್ಮಿತ್ ನೀಡಿದ ವ್ಯಾಖ್ಯೆ ಹೀಗಿದೆ: "ರಾಜನೀತಿಜ್ನ ಅಥವಾ ಶಾಸಕರ ವಿಗ್ನಾನದ ಒಂದು ಅಂಗವೆಂದು ಪರಿಗಣಿಸಲ್ಪಡುವ ರಾಜಕೀಯ ಅರ್ಥಶಾಸ್ತ್ರವು ಎರಡು ನಿಶ್ಚಿತ ಉದ್ದೇಶಗಳನ್ನು ಸೂಚಿಸುತ್ತದೆ. ಮೊದಲನೆಯದು, ಜನದಿಗೆ ವಿಪುಲ ಆದಾಯವನ್ನೂ ಅಥವಾ ಜೀವನಾದಾರ ಲಭ್ಯವಾಗುವಂತೆ ಹೆಚ್ಚು ಸಂಪತ್ತನ್ನು ಒದಗಿಸುವುದು. ಎರಡನೆಯದಾಗಿ, ರಾಷ್ಟ್ರಕ್ಕೆ ಮತ್ತು ಸಾರ್ವಜನಿಕ ಸೇವೆಗಳಿಗೆ ಯಥೇಚ್ಛ ಆದಾಯವಾನ್ನು ಪೂರೈಸುವುದು.ಒಟ್ಟಿನಲ್ಲಿ ಅರ್ಥಶಾಸ್ತ್ರವು ಜನರನ್ನೂ, ರಾಷ್ಟ್ರವನ್ನೂ ಶ್ರೀಮಂತರನ್ನಾಗಿಸಲು ಉದ್ದೇಶಿಸುತ್ತದೆ."

ಆಡ್ಂ ಸ್ಮಿತ್ತನ ವ್ಯಾಖ್ಯೆಯನ್ನು ತಪ್ಪಾಗಿ ಅರ್ಥೈಸಿಕೊಂಡ ರಸ್ಕಿನ್, ಕಾರ್ಲ್ಯೆಲ್, ಡಿಕಿನ್ಸ್ ಮುಂತಾದ ಚಿಂತಿಕರು ಆಡ್ಂ ಸ್ಮಿತ್ತಿನ ಸಂಪತ್ತಿನ ವಾಖ್ಯೆಯನ್ನು ಕಟುವಾಗಿ ಟೀಕಿಸಿದರು. ಅರ್ಥಶಾಸ್ತ್ರವು ಕೇವಲ ಸಂಪತ್ತನ್ನು ಗಳಿಸಲು ಮತ್ತು ವ್ಯಯಿಸಲು ಮಾತ್ರ ತಿಳಿಸುವುದಾದರೆ ಅದೊಂದು "ಹಾದರದ ವಿಜ್ನಾನ; ಕೊಳಕು ಹಂದಿ ಸ್ವರೂಪದ ವಿಜ್ನಾನ; ನಿರಾಶಾದಾಯಕ ಕರಾಳ ವಿಜ್ನಾನ: ಸಂಪತೆಂಬ ದೆವ್ವವನ್ನು ಪೂಜಿಸುವ ಶಾಸ್ತ್ರ; ಧನಪಿಶಾಚಿಯ ಸುವಾರ್ತೆ" ಎಂದೆಲ್ಲಾ ಟೀಕಿಸಿದರು. ಆದರೆ ಆಡ್ಂ ಸ್ಮಿತ್ತಿನ ವ್ಯಾಖ್ಯೆ ತಪ್ಪಲ್ಲ. "ಸಂಪತ್ತು" ಎಂದರೆ ಮಾನವನ ಬಯಕೆಗಳ್ನ್ನು ತ್ರುಪ್ತಿಯೇ ಮಾನವನ ಆರ್ಥಿಕ ಚಟುವಟಿಕೆಗಳ ಉದ್ದೇಶವಾಗಿದೆ, ಎನ್ನುವುದರಲ್ಲಿ ಎರಡು ಮಾತ್ತಿಲ್ಲ. ಆದರೆ ಬದಲಾವಣೆಯನ್ನು ಜನ ಒಮ್ಮೆಗೇ ಒಪ್ಪಿಕೊಳ್ಳುವುದಿಲ್ಲ ಅದರಲ್ಲೂ ಆಡ್ಂ ಸ್ಮಿತ್ತನ ಜೀವಿತದ ಅವಧಿಯಲ್ಲಿ ಚರ್ಚಿನ ಪುರೊಹಿತ ವರ್ಗದ ಪ್ರಭಾವ ಬಲವಾಗೆದ್ದು, ಜನರ ಧಾರ್ಮಿಕ ಭಾವನೆಗಳು ಮೌಢ್ಯ ರೂಪದಲ್ಲಿ ಬೆಳೆದಿದ್ದವು. ಧಾರ್ಮಿಕ ಮೌಢ್ಯ ತುಂಬಿದ ಒಂದು ಸಮಾಜದಲ್ಲಿ ಲೌಕಿಕ ವಾದವನ್ನು ದಿಢೀರಾಗಿ ಪ್ರತಿಪಾದಿಸಿದರೆ ಅದು ಹೇಗೆ ವಿಫಲವಾಗುತ್ತಿತ್ತು ಎನ್ನುವುದಕ್ಕೆ ಆಡ್ಂ ಸ್ಮಿತ್ತನ ವ್ಯಾಖ್ಯೆ ಒಂದು ನಿದರ್ಶನವಾಗಿದೆ. ಆದರೆ ಸತ್ಯಕ್ಕೆ ಸೋಲು ಸಂಭವಿಸಬಹುದಾದರೂ, ಸದಾಕಾಲಾ ಸತ್ಯವನ್ನು ಮರೆ ಮಾಡ್ಲು ಸಾಧ್ಯವಾಗುವುದಿಲ್ಲ.

ಮೌಲ್ಯ ಸಿದ್ದಾಂತ[ಬದಲಾಯಿಸಿ]

ಸ್ಮಿತ್ತಿನು ಉಪಯೋಗದ ಮೌಲ್ಯ ಮತ್ತು ವಿನಿಮಯದ ಮೌಲ್ಯ ಇವುಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತಾನೆ. ತನ್ನ ಸುಪ್ರಸ್ಸಿದ್ದವಾದ "ವಜ್ರ-ನೀರಿನ ವಿರೋಧ್ಯಾಬ್ಯಾಸ"ದ ಮೂಲಕ ಆತ ತುಷ್ಟಿಗುಣವು ಮೌಲ್ಯದ ಏಕೈಕ ನಿರ್ದಾರಕ, ಎನ್ನುವ ಅಭಿಪ್ರಾಯವಾನ್ನು ತಳ್ಳಿಹಾಕುತ್ತಾನೆ. ಸ್ಮಿತ್ತನ ಪ್ರಕಾರ "ನೀರಿನಷ್ಟು ಉಪಯೋಗವಾದದ್ದು ಇನ್ನೋಂದಿಲ್ಲ. ಆದರೆ ಅದಕ್ಕಿರುವ ಕೊಳ್ಳುವ ಶಕ್ತಿ ಬಹಳ ಕಡಿಮೆ. ಇದಕ್ಕೆ ವಿರುದ್ದವಾಗಿ ಬಹಳ ಕಡಿಮೆ ಉಪಯೋಗ ಮೌಲ್ಯವಿರುವ ವಜ್ರ ತನಗೆ ಬದಲಾಗಿ ಬ್ರುಹತ್ ಪ್ರಮಾಣದಲ್ಲಿ ಇತರೆ ಸರಕುಗಳನ್ನು ಕೊಳ್ಳಬಹುದು." ಹಾಗಾಗಿ ತುಷ್ಟಿಗುಣದೊಂದಾಗಿಯೇ ಮೌಲ್ಯ ನಿರ್ಧಾರವಾಗುವುದಿಲ್ಲ.

ಈ ತನಕದ ಆಧಾರದಲ್ಲಿ ಸ್ಮಿತ್ತಿನು ಶ್ರಮ ಮೌಲ್ಯ ಸಿದ್ದಾಂತವನ್ನು ಪ್ರಸ್ತುತ ಪಡಿಸುತ್ತಾನೆ. ಮೌಲ್ಯ ನಿರ್ಧಾರ ವಿಧಾನವು ಅನೇಕ ವರ್ಷಗಳಿಂದ ಅರ್ಥಶಾಸ್ತ್ರದ ಕೇಂದ್ರ ಸಮಸ್ಯೆಯಾಗಿದ್ದರೂ ಸ್ಮಿತ್ತಿನು ಶ್ರಮವೇ ಮೌಲ್ಯದ ನೈಜ ಮೂಲವೆಂದು ನಂಬಿರುತ್ತಾನೆ. "ಶ್ರಮವು ಎಲ್ಲಾ ಸರಕುಗಳ ವಿನಿಮಯ ಮೌಲ್ಯದ ನೈಜ ಮಾಪಕ" ಎನ್ನುತ್ತಾರೆ ಸ್ಮಿತ್. ಅಂದರೆ ಒಂದು ವಸ್ತುವಿನ ಮೌಲ್ಯವು ಅದನ್ನು ಉತ್ಪಾಅದಿಸಲು ತಗಲುವ ಶ್ರಮ ಪ್ರಮಾಣವನ್ನು ಅವಲಂಬಿಸಿರುತ್ತದೆ, ಎನ್ನುವುದು ಸ್ಮಿತ್ತಿನ ಅಭಿಪ್ರಾಯ.