ಸದಸ್ಯ:Saptami.chincholi/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                                  ಶೂನ್ಯ ಬಂಡವಾಳ ಕೃಷಿ
   ಏನನ್ನು ಹೊರಗಡೆಯಿಂದ ಕೊಂಡು ತರದೇ, ನಮಗಾಗಿ ಪ್ರಕೃತಿ ಕೊಡಮಾಡಿದ ಕಾಮಧೇನುವಿನ ಉತ್ಪನ್ನಗಳನ್ನು ಸರಿಯಾದ ಕ್ರಮದಲ್ಲಿ ಅಳವಡಿಸಿ ಮಾಡುವ ವಿಧಾನವೇ ಶೂನ್ಯ ಬಂಡವಾಳ ಕೃಷಿ. ಶೂನ್ಯ ಬಂಡವಾಳ ಕೃಷಿ ರೈತರ ಗೊಬ್ಬರ ಮತ್ತು ಕೀಟನಾಶಕ ರೀತಿಯ ಒಳಹರಿವಿನ ವಾಣಿಜ್ಯ ವೆಚ್ಚ ಹಾಗೂ ಮಾರುಕಟ್ಟೆ ಅವಲಂಬನೆಯ ವಿರುದ್ಧ ಧ್ವನಿ ಎತ್ತುವ ಕೃಷಿಯ ಒಂದು ವಿಧಾನವಾಗಿದೆ.ಈ ವಿಧಾನವು ಸ್ಥಳೀಯವಾಗಿ ದೊರೆಯುವ ನೈಸರ್ಗಿಕವಾಗಿ ವಿಘಟನೆ ಹೊಂದಬಲ್ಲ ವಸ್ತುಗಳನ್ನು, ವೈಜ್ಞಾನಿಕ ಪರಿಸರ ಜ್ಞಾನವನ್ನು ಮತ್ತು ಆಧುನಿಕ ತಂತ್ರಜ್ಞಾನದ ಜೊತೆಗಿನ ಸಾಂಪ್ರದಾಯಿಕ ಕೃಷಿ ಅಭ್ಯಾಸಗಳ ಆಧಾರಿತವಾದ ನೈಸರ್ಗಿಕವಾಗಿ ನಡೆಯುವ ಜೈವಿಕ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ.ಶೂನ್ಯ ಬಂಡವಾಳ ಕೃಷಿ ಪದ್ಧತಿಯನ್ನು, ಕೃಷಿ ವಿಜ್ಞಾನಿಗಳಾದ ಸುಭಾಶ್ ಪಾಳೆಕರ್(ಸಾಂಪ್ರದಾಯಿಕ ಕೃಷಿ) ಮತ್ತು ಮಸನೊಬು ಫುಕುಒಕ(ನೈಸರ್ಗಿಕ ಕೃಷಿ) ಪ್ರೋತ್ಸಾಹ ನೀಡುತ್ತಿದ್ದಾರೆ.
   ರಾಸಾಯನಿಕ ಕೃಷಿಯಲ್ಲಿ ಕೃತಕ ಕೀಟನಾಶಕಗಳನ್ನು ಹಾಗೂ ನೀರಿನಲ್ಲಿ ಕರಗುವ ಕೃತಕವಾಗಿ ಶುದ್ಧೀಕರಿಸಿದ ಗೊಬ್ಬರವನ್ನು ಬಳಸಲಾಗುತ್ತದೆ. ಆದರೆ ಶೂನ್ಯ ಬಂಡವಾಳ ಕೃಷಿಯಲ್ಲಿ ನೈಸರ್ಗಿಕ ಕೀಟನಾಶಕಗಳನ್ನು ಮತ್ತು ಗೊಬ್ಬರವನ್ನು ಬಳಸಲಾಗುತ್ತದೆ.ಈ ಕೃಷಿ ಪದ್ಧತಿ ಒಳಗೊಂಡಿರುವ ತತ್ವಗಳು- ಬೆಳೆಗಳ ಸರದಿ, ಹಸಿರು ಗೊಬ್ಬರ, ಮಿಶ್ರಗೊಬ್ಬರ, ಜೈವಿಕ ಕೀಟ ನಿಯಂತ್ರಣ ಹಾಗು ಯಾಂತ್ರಿಕ ಕೃಷಿ. ಈ ಕ್ರಮಗಳು ಪರಿಸರವನ್ನು ಬಳಸಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತದೆ, ಮಣ್ಣಿನಲ್ಲಿ ಸಾರಜನಕವನ್ನು ಸ್ಥಿರವಾಗಿರಿಸಲು ಕಾಳುಗಳನ್ನು ಬೆಳೆಯಲಾಗುತ್ತದೆ, ನೈಸರ್ಗಿಕ ಕೀಟ ಪರಭಕ್ಷಕಗಳನ್ನು ಪ್ರೋತ್ಸಾಹಿಸಲಾಗಿದೆ, ಮಣ್ಣಿನ ಗುಣಮಟ್ಟವನ್ನು ವೃದ್ಧಿಸಲು ಬೆಳೆಗಳನ್ನು ಸರದೀಕರಿಸಲಾಗುತ್ತದೆ ಮತ್ತು ನೈಸರ್ಗಿಕ ವಸ್ತುಗಳಾದ ಪೊಟ್ಯಾಸಿಯಮ್ ಬೈಕಾರ್ಬನೇಟ್ ಮತ್ತು ಹಸಿ ಗೊಬ್ಬರವನ್ನು, ಕಳೆ ಮತ್ತು ರೋಗವನ್ನು ನಿಯಂತ್ರಿಸಲು ಬಳಸಲಾಗುತ್ತದೆ.
    ನಮ್ಮ ದೇಶೀಯ ಹಸುವಿನ ಗಂಜಲ, ಸಗಣಿ, ದ್ವಿದಳ ಧಾನ್ಯದ ಹಿಟ್ಟು, ಬೆಲ್ಲ ಮತ್ತು ಬದುವಿನ ಮಣ್ಣು. ಇವುಗಳ ಸರಿಯಾದ ಅನುಪಾತದಲ್ಲಿ ನೀರಿನಲ್ಲಿ ಮಿಶ್ರಣ ಮಾಡಿ ೭೨ ಗಂಟೆಗಳ ನಂತರ ಬೆಳೆಗಳಿಗೆ ಹಾಯಿಸುವುದರಿಂದ (ಅಂದರೆ ಪ್ರತಿ ೧೫ ದಿನಗಳಿಗೊಮ್ಮೆ) ಸಸ್ಯಗಳಿಗೆ ಬೇಕಾಗುವ ಏಲ್ಲಾ ಪೋಷಕಾಂಶಗಳು ದೊರೆಯುತ್ತದೆ. ಈ ವಿಧಾನದಿಂದ ರೋಗಭಾದೆ ಕಡಿಮೆ ಇದ್ದು, ಹೆಚ್ಚು ಇಳುವರಿ ಬರುತ್ತದೆ ಮತ್ತು ಈ ಉತ್ಪನ್ನಗಳ ಬಾಳಿಕೆ ಹೆಚ್ಚು, ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ಧಾರಣೆ ಕೂಡ ಹೆಚ್ಚು ಪಡೆಯಬಹುದು. 


ಕಾಮಧೇನು-ಕಲ್ಪವೃಕ್ಷ[ಬದಲಾಯಿಸಿ]

   ಸಸ್ಯ-ಮರಗಳು, ಪ್ರಾಣಿ-ಪಕ್ಷಿಗಳು, ಮಾನವನ ಮೃತ ಶರೀರದಂತಹ ಅನಂತ ಕಾಷ್ಠ ಪದಾರ್ಥಗಳ,ಸಾವಯವ ಪದಾರ್ಥಗಳ ಕಳೆಯುವಿಕೆಯಿಂದ ಉತ್ಪನ್ನಗೊಳ್ಳುವ ಜೀವದ್ರವ್ಯ(ಹ್ಯೂಮಸ್)ದ ತಯಾರಿಕೆಯ ಪ್ರಕ್ರಿಯೆಯಲ್ಲಿ ಕಾಷ್ಠಗಳ ವಿಘಟನೆಗೆ ಅನಂತಕೋಟಿ ಸೂಕ್ಷ್ಮಾಣುಜೀವಿಗಳು ದುಡಿಯುತ್ತವೆ. ನಮ್ಮ ದೇಶೀಯ ಆಕಳಿನ ೧ ಗ್ರಾಂ ಸಗಣಿಯಲ್ಲಿ ಅಂಥ ೩೦೦ ರಿಂದ ೫೦೦ ಕೋಟಿ ಸೂಕ್ಷ್ಮಜೀವಾಣುಗಳಿವೆ.ಸತತ ಪ್ರಯೋಗ ಅಧ್ಯಯನಗಳಿಂದ-'ನೈಸರ್ಗಿಕ ಕೃಷಿಗೆ ದೇಶೀ ಆಕಳ ಸಗಣಿ, ಗಂಜಲು ಬೇಕು; ಬೇರೇನೂ ಬೇಕಿಲ್ಲ ಬರೀ ದೇಶೀ ಆಕಳ ಸಗಣಿ ಮಾತ್ರದಿಂದಲೇ ಜಗತ್ತಿನ ಯಾವುದೇ ಬೆಳೆ ಬೆಳೆಯಬಹುದು; ಭಾರತೀಯ ಎಲ್ಲ ದೇಶೀ ತಳಿಗಳಿಗಿಂತ ಕಪ್ಪು ಬಣ್ಣದ ಕಪಿಲಾ ಆಕಳು ಶ್ರೇಷ್ಠ; ಸಗಣಿ ತಾಜಾ ಇದ್ದಷ್ಟು ಹಾಗೂ ಗೋಮೂತ್ರ ಹಳೆಯದಾದಷ್ಟು ಹೆಚ್ಚು ಫಲಪ್ರದ; ಅಧಿಕ ಹಾಲು ಕೊಡುವ ದೇಶೀ ಆಕಳಿನ ಸಗಣಿ ಗಂಜಲಿಗಿಂತ ಕಡಿಮೆ ಹಾಲು ಕೊಡುವ ದೇಶೀ ಆಕಳ ಸಗಣಿ ಮತ್ತು ಗಂಜಲು ಜೀವಾಮೃತ ತಯಾರಿಕೆಗೆ ಹೆಚ್ಚು ಫಲಪ್ರದವಾಗಿವೆ; ೧ ಆಕಳು ಪ್ರತಿದಿನಕ್ಕೆ ಸರಾಸರಿ ೧೧ ಕೆ.ಜಿ. ಸಗಣಿ ಹಾಕುವುದರಿಂದ ೧ ಜವಾರಿ ಆಕಳಿಂದ ಒಟ್ಟು ೩೦ ಎಕರೆ ನೈಸರ್ಗಿಕ ಕೃಷಿ ಮಾಡಬಹುದು'-ಎಂಬೆಲ್ಲ ಫಲಿತಾಂಶಗಳು ಕಂಡುಬಂದಿವೆ. ಜೆರ್ಸಿ, ಹೋಲ್ಸ್ಟಿನ್ಗಳಂಥ  ವಿದೇಶೀ ತಳಿ ಆಕಳಂತೆ ನಮ್ಮ ನಾಡ ಹಸುಗಳ ಹೆಚ್ಚಿನ ಆರೈಕೆ ಮುತುವರ್ಜಿ ಅಪೇಕ್ಷಿಸುವುದಿಲ್ಲ. ಇವುಗಳ ರೋಗ ನಿವಾರಕ ಸಾಮರ್ಥ್ಯದ ಸಗಣಿ, ಗಂಜಲಗಳಿಂದ ಕೃಷಿ ಭೂಮಿ ಸದೃಢವಾಗುತ್ತದೆ. ನಮ್ಮ ಹಸುಗಳ ಕರುಗಳಲ್ಲಿ ಅನುಕ್ಷಣವೂ ಜನ್ಮ ತಾಳುವ ಪಿಎಸ್ಬಿ, ಬ್ಯಾಸಿಲಸ್ ಸಿಲಿಕಸ್, ಥಿಯೋಆಕ್ಸಿಡೆಂಟ್ಸ್, ಮೈಕೋರೈಜಾ ಇತ್ಯಾದಿ ಕೋಟಿ ಕೋಟಿ ಜೀವಾಣುಗಳು ಕೃಷಿ ಕ್ಷೇತ್ರವನ್ನು ಅದ್ಭುತವಾಗಿ ಸಮೃದ್ಧಗೋಳಿಸುವಷ್ಟು ಶಕ್ತಿಶಾಲಿಗಳಾಗಿವೆ. ದೇಶೀ ಆಕಳ ಸಗಣಿಯ ಹೆಚ್ಚುವರಿ ಸಾಮರ್ಥ್ಯವೆಂದರೆ- ಪರಮಾಣು ವಿಕಿರಣಗಳ ಸೋರಿಕೆಯ ವೇಳೆಗೆ ಹೊರಬೀಳುವ  ಅಪಾಯಕಾರಿ ಆಲ್ಫಾ, ಬೀಟಾ ಹಾಗೂ ಗಾಮಾ ಕಿರಣಗಳನ್ನು ಹೀರಿಕೊಳ್ಳುವುದು. ಇವುಗಳ ಅಪಾಯದಿಂದ ಬಚಾವಾಗಲು ಮನೆಯ ಹೊರಗಡೆ ಆಕಳ ಸಗಣಿ ಬಳೆಯುವುದು ಪರಿಣಾಮಕಾರಿ ಪರಿಹಾರವಾಗಿದೆ. ದೇಶೀ ಎರೆಹುಳು ದಿನದಲ್ಲಿ ೧೩ ಅಡಿ ಆಳದೊಂದಿಗೆ ೩ ಸುತ್ತು ಸುತ್ತುತ್ತದೆ. 

ನೈಸರ್ಗಿಕ ಕೃಷಿ ರಥದ ನಾಲ್ಕು ಚಕ್ರಗಳು:[ಬದಲಾಯಿಸಿ]

೧)ಬೀಜಾಮೃತ ೨)ಜೀವಾಮೃತ ೩)ಮುಚ್ಚಿಗೆ ೪)ಗಾಳಿಯಾಡುವಿಕೆ

ಚಮತ್ಕಾರಿಕ ಪರಿಣಾಮಕ್ಕಾಗಿ ಶೇಕಡ.೧೦೦ ರಷ್ಟು ಶ್ರದ್ಧೆಯಿಂದ ಇವುಗಳ ಚಲನಶೀಲತೆಗೆ, ಅನುಷ್ಠಾನಕ್ಕೆ ರೈತರು ನಿಗಾವಹಿಸಬೇಕು.

ಬೀಜಾಮೃತ[ಬದಲಾಯಿಸಿ]

       ಬೀಜದ ಅಂಚಿನಲ್ಲಿ ಇರಬಹುದಾದ ಹಾನಿಕಾರಕ ಶಿಲೀಂದ್ರಗಳು ಹಾಗೂ ಬ್ಯಾಕ್ಟೀರಿಯಾಗಳು ಅಥವಾ ಅವುಗಳ ತತ್ತಿಗಯಳು, ಮೋಡ ಮುಸುಕುವ ತಂಪಿನ ದಿನಗಳಲ್ಲಿ ಪೈರನ್ನು ಬಾಧೆಪಡಿಸುತ್ತವೆ; ಮಣ್ಣಲ್ಲಿರಬಹುದಾದ ಅಂಥ ಹಾನಿಕಾರಕ ಜೀವಾಣುಗಳು, ಮಳೆ ಸುರಿದಾಗ ಬೇರಲ್ಲಿ ಬೆರೆತು ಇಡೀ ಸಸ್ಯದ ಭಾಗವನ್ನು ಆನುಸರಿಸಿ ಉಂಟುಮಾಡಬಹುದಾದ ಅವಾಂತರಗಳನ್ನು ಆರಂಭಿಕ ಹಂತದಲ್ಲೇ ತಡೆಗಟ್ಟುವ ತಂತ್ರಗಾರಿಕೆಯೇ ಬೀಜಾಮೃತದ ಬೀಜೋಪಚಾರ. ೧೦೦ ಕೆ.ಜಿ. ಬೀಜಕ್ಕಾಗಿ ೨೦ ಲೀ. ನೀರು+ ೫ ಕೆ.ಜಿ. ದೇಶೀ ಆಕಳ ಸಗಣಿ+ ೫ ಲೀ. ದೇಶೀ ಆಕಳ ಗಂಜಲು+ ೫೦ ಗ್ರಾಂ. ಸುಣ್ಣಗಳನ್ನೆಲ್ಲ ಬಿತ್ತನೆ ಹಿಂದಿನ ದಿನ ಸಂಜೆಯೆ ಬೆರೆಸಿ ಕಲಸಿ ಇರಿಸಬೇಕು. ಬಿತ್ತನೆ ದಿವಸ ಬೆಳಿಗ್ಗೆ ಆಯಾ ಬೀಜಗಳ ಸ್ವರೂಪ ಅವಂಬಿಸಿ ಈ ಬೀಜಾಮೃತವನ್ನು ಲೇಪಿಸಬೇಕು; ನಾಟಿ ಮಾಡುವ ಸಸಿಗಳ ಬೇರುಗಳನ್ನು ಹಾಗೂ ಬೀಜದ ಕಡ್ಡಿ-ತುಂಡುಗಳನ್ನು ಬೀಜಾಮೃತದಲ್ಲಿ ಅದ್ದಬೇಕು; ಅದನ್ನು ೨ ದಿವಸ ಇಟ್ಟು ಬಳಸಬಹುದು. ಬೀಜ ಮಣ್ಣಿಗೆ ಬಿದ್ದ ಒಡನೆಯೇ ಅದರ ರಕ್ಷಣೆಗೆ ಬೀಜಾಮೃತದಲ್ಲಿನ ಟ್ರೈಕೋಡರ್ಮಾ ಇತ್ಯಾದಿ ಜೀವಾಣುಗಳು ಭೂಸೇನಾ ತೆರನಾಗಿ ಕ್ರಿಯಾಶೀಲಗೊಳ್ಳೂತ್ತವೆ. ಹೀಗಾಗಿ ಬೀಜಾಮೃತವನ್ನು ಬೀಜ/ಸಸ್ಯಗಳ ಸಂರಕ್ಷಣೆಯ 'ಭೂಸೇನಾಪತಿ' ಎಂದೇ ವರ್ಣಿಸಬಹುದು.

ಜೀವಾಮೃತ[ಬದಲಾಯಿಸಿ]

     ಇದು ನೈಸರ್ಗಿಕ ಕೃಷಿಗೆ ಜೀವಸೆಲೆ, ಜೀವದ್ರವ್ಯವಾಗಿದೆ. ೨೦೦ ಲೀ, ನೀರು+೧೦ ಕೆ.ಜಿ. ದೇಶೀ ಆಕಳ ಸಗಣಿ+೧೦ ಲೀ. ದೇಶೀ ಆಕಳ ಗಂಜಲ+ ೨ ಕೆ.ಜಿ. ಕಪ್ಪು ಬೆಲ್ಲ+ ೨ ಕೆ.ಜಿ. ದ್ವಿದಳ ಧಾನ್ಯದ ಹಿಟ್ಟು+ ೨ ಹಿಡಿ ಹೊಲದ ಬದುವಿನ ಮಣ್ಣು. ಜೀವಾಮೃತ ಭೂಮಿಗೆ ಪೂರೈಕೆಯಾದ ೪ ದಿನಗಳಲ್ಲಿ, ಆಳದಲ್ಲಿ ಸಮಾಧಿ ಸ್ಥಿತಿಯಲ್ಲಿರುವ ದೇಶೀ ಎರೆಹುಳು ಹಾಗೂ ಜೀವಜಂತುಗಳು ಜಾಗೃತಗೊಂಡು ಮೇಲೆ ಬಂದು ಅವಿಶ್ರಾಂತವಾಗಿ ದುಡಿಯಲಾರಂಭಿಸುತ್ತದೆ. ಕೋಶವಿಭಜನೆಯಿಂದಾಗಿ ಸೂಕ್ಷ್ಮಾಣುಜೀವಿಗಳ ಸಂಖ್ಯೆಯನ್ನು ಪ್ರತಿ ೨೦ ನಿಮಿಷಕ್ಕೆ ದ್ವಿಗುಣಗೊಳಿಸುವ ಜೀವಾಮೃತವನ್ನು (ಹಾಲಿಗೆ ಸ್ವಲ್ಪ ಪ್ರಮಾಣದ ಮೊಸರು ಹೆಪ್ಪಾಗಿರುವಂತೆ) 'ಹೆಪ್ಪು' ಎಂದೇ ಹೇಳಬಹುದು.

ಮುಚ್ಚಿಗೆ[ಬದಲಾಯಿಸಿ]

       ಜೀವಾಮೃತ ಪೂರೈಕೆಯಾದೊಡನೆ ಕ್ರಿಯಾಶೀಲವಾಗುವ ದೇಶೀ ಎರೆಹುಳು ಭೂಮಿಯ ಆಳದ ಅನ್ನದ್ರವ್ಯಗಳನ್ನು ಹಿಕ್ಕೆಯ ರೂಪದಲ್ಲಿ ಭೂಮಿಯ ಮೇಲ್ಪದರಕ್ಕೆ ತಂದುಹಾಕುತ್ತದೆ. ಇವುಗಳೊಡನೆ ಅನಂತಾನಂತರ ಕೋಟಿ ಜೀವಜಂತುಗಳು, ಸೂಕ್ಷ್ಮಾಣುಜೀವಿಗಳು ಅವಿತರ ಕ್ರಿಯಾಶೀಲವಾಗಿರಲು ಭೂಮಿಯ ಮೇಲೆ ೨೫ ಡಿಗ್ರಿ ರಿಂದ ೩೨ ಡಿಗ್ರಿ ಸೆಂ.ಗ್ರೇ. ತಾಪಮಾನ ಹಾಗೂ ೬೫ ರಿಂದ ಶೇ.೭೨ ತೇವಾಂಶಗಳಿದ್ದು ಮೇಲ್ಮಣ್ಣು ನೆರಳಿನಿಂದ ಆವರಿಸಬೇಕು. ಇತೆಂಲ್ಲ ವಾತಾವರಣವನ್ನು ಕಲ್ಫಿಸುವುದೇ ಮುಚ್ಚಿಗೆಯ ಉದ್ದೆಶವಾಗಿದೆ. ನೈಸರ್ಗಿಕ ಕೃಷಿಯ ಕಾರಭಾರಿಗಳಾದ ಅಸಂಖ್ಯ ಜೀವಜಂತುಗಳಿಗೆ, ಸೂಕ್ಷ್ಮಾಣುಜೀವಿಗಳಿಗೆ ಮುಚ್ಚಿಗೆ ಸಾಕ್ಷಾತ್ 'ಅಮ್ಮನ ಸೆರಗೇ' ಆಗಿದೆ. ಮುಚ್ಚಿಗೆಯಲ್ಲಿ ೩ ಪ್ರಕಾರಗಳಿವೆ- ಮೃದಾಚ್ಛಾದನ ಅಥವಾ ಮಣ್ಣಿನ ಮುಚ್ಚಿಗೆ, ಕಾಷ್ಠಾಚ್ಛಾದನ ಅಥವಾ ಕಸ-ಕಡ್ಡಿ ತರಗೆಲೆಗಳ ಮುಚ್ಚಿಗೆ, ಅಂತರ್ ಬೆಳೆ ಮಿಶ್ರ ಬೆಳೆಗಳ ಮುಚ್ಚಿಗೆ 

ಗಾಳಿಯಾಡುವಿಕೆ[ಬದಲಾಯಿಸಿ]

     ಮಣ್ಣಿನಲ್ಲಿ ಗಾಳಿಯ ಸುಲಭ ಚಲನೆ ಅತ್ಯಾವಶ್ಯಕ. ಇದು ಬೆಳೆಯ ಬೆಳವಣಿಗೆಗೆ ಸಹಾಯಕಾರಿ ಹಾಗೂ ಅಗತ್ಯ.

ಉಲೇಖನಗಳು[ಬದಲಾಯಿಸಿ]