ವಿಷಯಕ್ಕೆ ಹೋಗು

ಸದಸ್ಯ:Sanketh H C/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಸಂಕೇತ್ ಹೆಚ್ ಸಿ " ಪ್ರಥಮ ಪದವಿ ವಿದ್ಯಾರ್ಥಿ {ಕಲಾ ವಿಭಾಗ } ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು { ಸ್ವಾಯತ್ತ } ಉಜಿರೆ ೫೭೪೨೪೦.

          ನಾನು "ಎಸ್ ಡಿ ಎಮ್" ಕಾಲೇಜಿನಲ್ಲಿ ಪ್ರಥಮ ಪದವಿ ಕಲಾ ವಿಭಾಗದಲ್ಲಿ ಓದುತ್ತಿದ್ದೇನೆ . ನಾನು ಐಚ್ಚಿಕ ಕನ್ನಡದ ವಿದ್ಯಾರ್ಥಿಯಾಗಿದ್ದು, ಅದರ ಜೊತೆಗೆ ಇತಿಹಾಸ ಹಾಗು ಗ್ರಾಮೀಣಾಭಿವೃದ್ಧಿ ಎಂಬ ವಿಷಯಗಳನ್ನು ಸಹ ಕಲಿಯುತ್ತಿದ್ದೇನೆ.ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದ ಕವನ,ಕಥೆ ಮುಂತಾದವುಗಳನ್ನು ಬರೆಯುವ ಅವ್ಯಾಸವನ್ನು ರೂಡಿಸಿಕೊಂಡಿದ್ದೇನೆ. ನನಗೆ " ಯುಗದ ಕವಿ" ಎಂದು ಪ್ರಸಿದ್ಧರಾದ 'ಕುವೆಂಪು' ಅವರು ನನ್ನ ನೆಚ್ಚಿನ ಕವಿ. ಅದರಲ್ಲೂ ಅವರ "ಮಲೆಗಳಲ್ಲಿ ಮದುಮಗಳು" ಕಾದಂಬರಿಯು ನನಗೆ ಬಹಳ ಅಚ್ಚುಮೆಚ್ಛು ಅಂತಾನೆ ಹೇಳಬಹುದು. 
         ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ ಹುಕ್ಕುಂದ ಎಂಬ ಗ್ರಾಮದಲ್ಲಿ ನನ್ನ ಜನನವಾಯಿತು. ತಂದೆ ಚಂದ್ರು ಹಾಗು ತಾಯಿ ಶಕುಂತಲಾ . ನನಗೆ ಒಬ್ಬ ಅಣ್ಣನಿದ್ದಾನೆ . ಅವನ ಹೆಸರು ಸಂಜೇಶ್.  ಪ್ರಸ್ತುತದಲ್ಲಿ ಅವನು ತಮಿಳುನಾಡಿಗೆ ಸೇರಿದ ಚೆನ್ನೈನಲ್ಲಿ ಕೆಲಸವನ್ನು ಮಾಡುತ್ತ ಇದ್ದಾನೆ. ಅಪ್ಪ ಹಾಗು ಅಮ್ಮ ಇಬ್ಬರೂ ಕಾಫೀ ತೋಟದಲ್ಲಿ ಕೆಲಸವನ್ನು ನಿರ್ವಹಿಸುತ್ತ ಇದ್ದಾರೆ. 
       ನಾನು ಮುಂದೆ ಕನ್ನಡ ವಿಷಯದಲ್ಲಿ ಪ್ರಾದ್ಯಾಪಕನಾಗಬೇಕೆಂಬ ಆಸೆ ನನ್ನಲ್ಲಿದೆ.ಅದರ ಸಲುವಾಗಿ ನಾನು ಹೆಚ್ಚಿನ ವಿಷಯಗಳನ್ನು ಕಲಿಯಲು ಬಯಸಿದ್ದೇನೆ.