ಸದಸ್ಯ:Sandhya K 2210571
ನನ್ನನ ಜೀವನದ ಪರಿಚಯ
ನನ್ನ ಬಾಲ್ಯ ಮತ್ತು ವಿದ್ಯಾಬ್ಯಾಸ
ಹೆಸರು ಸಂಧ್ಯಾ ನನ್ನ ತಂದೆಯ ಹೆಸರು ಕೃಷ್ಣಮೂರ್ತಿ ನನ್ನ ತಾಯಿ ಹೆಸರು ಮಲ್ಲರ್ ನನ್ನ ತಂದೆ ತೀರಿಕೊಂಡು 13 ವರ್ಷಗಳಾಗಿದೆ . ನನ್ನ ತಾಯಿ 17 ವರ್ಷಗಳಿಂದ ಕ್ರೈಸ್ಟ್ ಯುನಿವರ್ಸಿಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಫ್ರಾನ್ಸಿಸ್ಕನ್ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಗಿಸಿದ್ದೇನೆ . ಎರಡು ವರ್ಷ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ನನ್ನ 11 ಮತ್ತು 12ನೇ ತರಗತಿಯನ್ನು ಮುಗಿಸಿದ್ದೇನೆ. ನನಗೆ ನೀಲಿ ಬಣ್ಣವೆಂದರೆ ತುಂಬಾ ಇಷ್ಟ. ನನಗೆ ಸಿನಿಮಾ ಥಿಯೇಟರಿನಲ್ಲಿ ಸಿನಿಮಾ ನೋಡುವುದೆಂದರೆ ತುಂಬಾ ಇಷ್ಟ. ನನ್ನ ತಾಯಿ ಹಲವು ಕಷ್ಟಗಳನ್ನು ಅನುಭವಿಸಿದ್ದಾಳೆ. ನಾನು ಚೆನ್ನಾಗಿ ಓದಿ ಅವಳನ್ನು ಕಾಪಾಡುತ್ತೇನೆ. ನನಗೆ ಹಲವು ಕಡೆ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ. ಹಲವು ಕಡೆ ಪ್ರಯಾಣ ಮಾಡಿ ಹಲವು ವಿಷಯಗಳನ್ನು ತಿಳಿದುಕೊಳ್ಳುವುದೆಂದರೆ ತುಂಬಾ ಇಷ್ಟ. ನನಗೆ ಅಕ್ಕ ಒಬ್ಬಳು ಇದ್ದಾಳೆ. ಅವಳು ಟೈಲರಿಂಗ್ ಮಾಡುತ್ತಿದ್ದಾಳೆ. ನನ್ನ ತಂದೆಯ ನೆನಪು ಇಲ್ಲದೆ ನನ್ನ ತಾಯಿ ನನ್ನನ್ನು ಮತ್ತು ನನ್ನ ಅಕ್ಕಲನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ನಾನು ಚೆನ್ನಾಗಿ ಓದಿ ಒಂದು ಒಳ್ಳೆಯ ಕಂಪನಿನಲ್ಲಿ ಕೆಲಸ ಮಾಡಬೇಕೆಂದು ನನ್ನ ಕನಸಾಗಿದೆ. ನಾನು ಮೂರು ವರ್ಷ ಬಿಕಾಂ ಆದಮೇಲೆ ಎಂ. ಕಂ ಮಾಡಿ ಒಂದು ಒಳ್ಳೆಯ ಕಂಪನಿನಲ್ಲಿ ಒಂದು ಒಳ್ಳೆಯ ಉದ್ಯೋಗವನ್ನು ಮಾಡಿ ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ನನ್ನ ಕನಸಾಗಿದೆ. ನನ್ನ ಕನಸನ್ನು ನಾನು ನೆನೆಸು ಮಾಡಲು ನಾನು ಚೆನ್ನಾಗಿ ಓದಿ ಒಂದೊಳ್ಳೆ ಕೆಲಸವನ್ನು ಮಾಡುತ್ತೇನೆ. ನಮ್ಮ ಮನೆಯಲ್ಲಿ ನಾನು ಒಂದು ನಾಯಿಯನ್ನು ಸಾಕುತ್ತಿದ್ದೇನೆ . ಅದರ ಹೆಸರು ಪೋಲೋ . ಅವನು ಎಂದರೆ ನನ್ನ ತಾಯಿಗೆ ತುಂಬಾ ಇಷ್ಟ. ಅವನು ನನ್ನ ಮನೆಗೆ ಬಂದು ಒಂದು ವರ್ಷಗಳಾಗಿವೆ. ಅವನ ತರ ಒಂದು ಒಳ್ಳೆಯ ಜೀವಿ ನಾನು ನನ್ನ ಜೀವನದಲ್ಲಿ ನೋಡಿಲ್ಲ. ಅವನಿಗೆ ಆಹಾರ ಕೊಡುವುದಂದರೆ ನನಗೆ ಬಹಳ ಇಷ್ಟ. ನಾನು ನನ್ನ ಶಾಲೆಯ ಸಮಯವನ್ನು ತುಂಬಾ ಇಷ್ಟ ಪಟ್ಟಿದ್ದೇನೆ ಶಾಲೆಯಲ್ಲಿ ಇರಬಹುದೆಂದು ನನಗೆ ಈಗಲೂ ಅನಿಸುತ್ತದೆ. ನನ್ನ ಶಾಲೆಯ ಸ್ನೇಹಿತರೆಲ್ಲರನ್ನು ನಾನು ತುಂಬಾ ಕಳೆದುಕೊಳ್ಳುತ್ತಿದ್ದೇನೆ. ಅವರನ್ನು ನೋಡಿ ಅವರ ಜೊತೆ ಸಮಯವನ್ನು ಕಳೆದುಕೊಳ್ಳಬೇಕೆಂದು ಇಷ್ಟಪಡುತ್ತಿದ್ದೇನೆ. ಶಾಲೆಯ ಜೀವನ ತುಂಬಾ ಸಂತೋಷವಾಗಿತ್ತು. ನನ್ನ ಶಾಲೆ ಶಿಕ್ಷಕರಲ್ಲರು ತುಂಬಾ ಚೆನ್ನಾಗಿ ಪಾಠಗಳನ್ನು ಮಾಡುತ್ತಿದ್ದರು ಮತ್ತು ಅವರು ಕೂಡ ನಮ್ಮ ಜೊತೆ ಸಮಯವನ್ನು ಕಳೆದುಕೊಳ್ಳುತ್ತಿದ್ದರು. ನಾನು ಚೆನ್ನಾಗಿ ಓದಿ ನನ್ನ ಶಾಲೆಗೆ ಏನಾದರೂ ಒಂದು ಮಾಡಬೇಕೆಂದು ಇಷ್ಟಪಟ್ಟಿದ್ದೇನೆ. ನನಗೆ ಬಿರಿಯಾನಿ ಎಂದರೆ ತುಂಬಾ ಇಷ್ಟ. ಅದು ನನ್ನ ಅಮ್ಮನ ಕೈಯಲ್ಲಿ ಮಾಡಿಸಿಕೊಂಡು ತಿಂದರೆ ತುಂಬಾ ಇಷ್ಟ.
ನನ್ನ ಸ್ಫೂರ್ತಿ ವ್ಯಕ್ತಿ