ಸದಸ್ಯ:Salome Martis/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಣಕಾಸಿನ ನಿರ್ವಹಣೆ[ಬದಲಾಯಿಸಿ]

ಉತ್ಪಾದನಾ ಅಂಶಗಳಲ್ಲಿ (ಭೂಮಿ, ಕಾರ್ಮಿಕ,ಬಂಡವಾಳ ಮತ್ತು ಸಂಘಟನೆ ) ಬಂಡವಾಳ ಅಥವಾ ಹಣಕಾಸನ್ನು ಅತ್ಯಂತ ಪ್ರಮುಖ ಅಂಶವೆಂದು ಪರಿಗಣಿಸಲಾಗಿದೆ. ವ್ಯವಹಾರದ ಯಾವುದೇ ಚಟುವಟಿಕೆಗಳು ಹಣಕಾಸನ್ನು ಅವಲಂಬಿಸಿವೆ.ಏಕೆಂದರೆ ಹಣಕಾಸು ಎಂಬುದು ಯವುದೇ ವ್ಯವಹಾರದ ಮುಲಭೂತವಾದ ಅವಶ್ಯಕತೆಯಾಗಿರುತ್ತದೆ. ಒಬ್ಬ ವ್ಯಾಪರಸ್ಥನಿಗೆ ಸಾಕಶ್ಟು ಹಣಕಾಸು ಲಭ್ಯವಾಗದೇ ಇದ್ದಲ್ಲಿ ಆತನ ಎಲ್ಲಾ ಯೊಜನೆಗಳು ಕನಸಾಗಿಯೇ ಉಳಿಯುತ್ತವೆ ಆದುದರಿಂದ ಹಣಕಾಸಿನ ಸಮರ್ಪಕ ಬಳಕೆಯು ಅವಶ್ಯವೆನಿಸುತ್ತದೆ. ಯವುದೇ ಸಂಸ್ಥೆಗೆ ಅಧಿಕ ಹಣಕಾಸು ಅಥವಾ ಹಣಕಾಸಿನ ಕೊರತೆಯಂತಹ ಸನ್ನಿವೇಶಗಳು ಎದುರಾಗಬಹುದು. ಎಲ್ಲಾ ಸಂಸ್ಥೆಗಳ ಉದ್ದೇಶವೇನೆಂದರೆ ಅಪೇಕ್ಷಿತ ಅಥವಾ ಆದರ್ಶ ಹಣಕಾಸನ್ನು ಪಡೆಯುವುದು ಮತ್ತು ಈ ಹಣಕಾಸನ್ನು ದಕ್ಷವಾಗಿ ಮತ್ತು ಪರಿಣಾಮಕಾರಿಯಾಗಿ ಉಪಯೋಗಿಸಿ ವ್ಯವಹಾರದ ಮುಲೋದ್ದೆಶವನ್ನು ಈಡೇರಿಸುವುದರೊಂದೆಗೆ ಲಾಭ ಗರಿಷ್ಟಗೊಳಿಸುವುದು ಮತ್ತು ಸಂಪತ್ತನ್ನು ಗರಿಷ್ಟಗೊಳಿಸುವುದಾಗಿರುತ್ತದೆ. ಆದುದರಿಂದ ಹಣಕಾಸಿನ ಸಂಪನ್ಮೂಲಗಳನ್ನು ಸರಿಯಾಗಿ ನಿರ್ವಹಿಸಬೇಕು. ಹೀಗೆ ಹಣಕಾಸಿನ ನಿರ್ವಾಹಣೆ ಎಂಬುದು ಎಲ್ಲಾ ವ್ಯವಹಾರ ಸ್ಂಸ್ಥೆಗಳಿಗೆ ಒಂದು ಆಧ್ಯತೆಯ ಕಾರ್ಯವಾಗಿ ಹೊರಹೊಮ್ಮಿದೆ. ಹಣಕಾಸಿನ ನಿರ್ವಾಹಣೆ ಎಂದರೆ ವ್ಯವಹಾರದ ಉದ್ದೇಶಗಳನ್ನು ನೆರವೇರಿಸಲು ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಹಣವನ್ನು ನಿರ್ವಹಿಸುವುದಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಹಣಕಾಸಿನ ನಿರ್ವಾಹಣೆಯೆಂದರೆ ಕಾರ್ಯ ನಿರ್ವಾಹಣಾ ಚಟುವಟಿಕೆಯಾಗಿದ್ದು ವ್ಯವಹಾರದ ಉದ್ದೇಶಗಳಿಗೆ ಹಣ ಅಥವಾ ಬಡವಾಳವನ್ನು ಪಡೆಯುವುದಕ್ಕೆ ಮತ್ತು ಬಳಸುವುದಕ್ಕೆ ಸಂಬಂಧಿಸಿದೆ .