ಸದಸ್ಯ:Sajani Gowda/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ತುಳುವ ಜನಪದ - ಕೆಡ್ಡಸ[ಬದಲಾಯಿಸಿ]

ಮಾನವ ಬದುಕಿಗೂ ಬೇಟ ಅನ್ಯೋನ್ಯ ಸಂಬಂಧವಿದೆ . ಆದಿಮೂಲದಲ್ಲಿ ಮಾನವನಿಗೆ ಬೇಟೆಯೇ ಆಹಾರದ ಮೂಲವಾಗಿತ್ತು . ಸಮುದಾಯ ಕಾಡನ್ನು ಆಂಶಿಕವಾಗಿ ಕೃಷಿಗೆ ಪೂರಕವಾಗಿ ಬಳಸಿಕೊಂಡಿದೆ. [೧] ಕೃಷಿ ಸಂಸ್ಕೃತಿಗೆ ಮಾನವ ವರ್ಗಾವಣೆ ಮಾಡುವುದರ ಮೂಲಕ ಬೇಟೆ ಅವನಿಗೆ ರಕ್ಷಣೆಯ ನೆಪವಾಯಿತು . ಪ್ರಾಣಿಗಳ ಕ್ರೌರ್ಯ ಮೂಲ ಪ್ರವೃತ್ತಿ ಮಾನವ ಭಯಕ್ಕೆ ಕಾರಣವಾಗಿ ಅದು ಕೂಡ ಬೇಟೆಗೆ ಹೇತುವಾಯಿತು . ಮೂಲದ ಪೃವೃತ್ತಿ ಪೃವೃತ್ತಿಯಾಗಿ ಬೇಟೆ ಕ್ರಮೇಣ ಅರಸುಗಳ ವಿನೋದದ ಅಂಗವಾಗಿ ರೂಢಿಯಲ್ಲಿತ್ತು .[೨]

ಅವಧಿ[ಬದಲಾಯಿಸಿ]

ಕೆಡ್ಡಸಾಚರಣೆ ತುಳುವರ ಪೊನ್ನಿ ತಿಂಗಳ (ಫೆಬೃವರಿ ೯) ೨೭ನೇ ದಿನದಿಂದ ಆರಂಭವಾಗಿ ಕುಂಭ ಸಂಕ್ರಮಣಕ್ಕೆ ಮುಕ್ತಾಯಗೊಳ್ಳುತ್ತವೆ.

ದೈವಗಳು[ಬದಲಾಯಿಸಿ]

  • ಕೋಟಿ-ಚೆನ್ನಯ[೩]
  • ಮುಗೇರ್ಲ
  • ಉಳ್ಳಾಕುಲು

ಆಚರಣೆ ಮತ್ತು ವಿಧಿವಿಧಾನ[ಬದಲಾಯಿಸಿ]

ತುಳುನಾಡಿನಲ್ಲಿ ವಾರ್ಷಿಕಾವರ್ತನದಲ್ಲಿ ಆಚರಣೆಯಾಗುವ ಒಂದು ಹಬ್ಬ. ಕೃಷಿ ಸಂಬಂಧಿಯಾಗಿ ಇದರ ಆಚರಣೆಯಾಗುತ್ತದೆ. ಸಮೃದ್ಧಿ ಮತ್ತು ‍ಫಲಾಪೇಕ್ಷೆಯ ಆಶಯದಿಂದ ಇದು ಆಚರಣೆಯಾಗುತ್ತದೆ. ಕೆಡ್ಡಸ ಆಚರನಣೆಯನ್ನು ಭೂಮಿ ತಾಯಿಯ ಮಿಯಾದ ಹಬ್ಬವೆಂದು ಕರೆದು ಭೂಮಿಯನ್ನು ಸಾಮಾನ್ಯ ಸ್ತ್ರೀಯೆಂಬಂತೆ ಅವರು ಪರಿಭಾವಿಸಿದ್ದಾರೆ . ಹೆಣ್ಣಿನಂತೆ ಭೂಮಿಯು ಮುಟ್ಟಾಗುತ್ತಾಳೆಂದು ಪರಿಭಾವಿಸಿ , ಆ ನಂಬಿಕೆಯ ಪ್ರಕಾರ ಅವಳನ್ನು ಮಡಿಗೊಳಿಸುವ ದಿನವೆಂದು ಈ ಆಚರಣೆಯನ್ನು ನಡೆಸುತ್ತಾರೆ. ಕೆಡ್ಡಸ ಆಚರಣೆಯ ಎರಡನೇ ದಿನವನ್ನು 'ನಡುಕೆಡ್ಡಸ'ವೆಂದು ಕರೆದು ಆ ದಿನ 'ಕೆಡ್ಡಸ'ದ ಬೇಟೆಯನ್ನು ನಡೆಸುತ್ತಾರೆ.[೪] ಕೆಡ್ಡಸಾಚರಣೆಯಲ್ಲಿ ಮಾಂಸದೂಟವ ಮಾಡಲೇ ಬೇಕೆಂಬ ನಂಬಿಕೆಯೂ ಇದೆ. ಅಲ್ಲದೆ ಈ ಕೆಡ್ಡಸ ಆಚರಣೆ ಸಂದರ್ಭದಲ್ಲಿ ಕಾಡುಮೃಗಳಿಗೆ ಕಾಲು ಒಡೆಯುವ ರೋಗ ಬರುತ್ತದೆ ಎಂದು ಜನ ನಂಬುತ್ತಾರೆ. ಈ ಅರ್ಥದಲ್ಲಿ ಬೇಟೆ ಕೆಡ್ದಸ ಆಚರಣೆಯ ಉಪಾಂಗವಾಗಿ ಜರಗುತ್ತದೆ.ಋತುಮಾನದ ವ್ಯತ್ಯಾಸವಾಗಿ ಮೃಗಗಳಿಗೆ ಕಾಲುರೋಗ ಸಂಭವನೀಯವಾದರು,ಅದಕ್ಕಿಂತ ಮುಖ್ಯವಾಗಿ ,ತಮ್ಮ ಬೆಳೆಗೆ ತೊಂದರೆಯನ್ನುಂಟು ಮಾಡುವ ಮೃಗಗಳ ಬೇಟೆ ಮಾಡಲು ಅವಕಾಶವಾಗುತ್ತದೆ .ನಡು ಕೆಡ್ಡಸದ ದಿನ ಪೂರ್ವ ನಿರ್ಧರಿತದಂತೆ ಊರ ಜನ ಒಂದೆಡೆ ಸೇರುತ್ತಾರೆ.ಕಲ್ಲೊಂದನ್ನು ನೆಟ್ಟು -ಹಣ್ಣು -ತೆಂಗಿನಕಾಯಿ ಕಾಡು ಹೂಗಳನ್ನಿಟ್ಟು -ಕಾಡು ದೈವವನ್ನು ನೆನೆದು ಪ್ರಾರ್ಥಿಸುತ್ತಾರೆ. ಈಡೊಂದನ್ನು ಸಿಡಿಸುತ್ತಾರೆ. ಅರಣ್ಯ ಸೇರಿ ಗಡಿಭಾಗಗಳೆಲ್ಲಾ ಕೋವಿ-ಆಯುಧ ಹಿಡಿದವರು ನಿಲ್ಲುತ್ತಾರೆ. ಉಳಿದವರು ಕಾಡೊಳಗೆ ಬೊಬ್ಬೆ ಹಾಕುತ್ತಾ ಪ್ರಾಣಿಗಳನ್ನು ಓಡಿಸುತ್ತಾರೆ. ಬೇಟೆಯಾದರೆ ಆರಂಭದಲ್ಲಿ ಸೇರಿದಲ್ಲಿಗೆ ಮರಳಿ ಬರುತ್ತಾರೆ. ಬೇಟೆಯಾದ ಪ್ರಾಣಿಗಳನ್ನು ಬೇಟೆ ಮಾಡಿದವರಿಗೆ ನಿಯಮದಂತೆ, 'ಅಜಕಲು ಮಾಡಿ' ಮಾಂಸವನ್ನು ಹಂಚಿ ಉಳಿದ ಹೆಚ್ಚುವರಿ ಮಾಂಸವನ್ನು ಸೇರಿದ ಉಳಿದವರಿಗೆ ಸಮಾನವಾಗಿ ಹಂಚ್ಚುತ್ತಾರೆ. ಒಂದಷ್ಟು ಮಾಂಸವನ್ನು ಅಲ್ಲಿಯೆ ಅಡುಗೆ ಮಾಡಿ ಕಾಡ ದೈವಕ್ಕೆ ಬಡಿಸಿ ಬಳಿಕ ಪ್ರಸಾದವಾಗಿ ಸೇವಿಸುತ್ತಾರೆ. ಕೆಡ್ಡಸ ಆಚರಣೆಯಲ್ಲಿ 'ಮಾಂಸದೂಟ' ಮಾಡದಿದ್ದರೆ 'ದೇಹದ ಎಲುಬು' ನುಚ್ಚು ನೂರಾಗುತ್ತದೆ ಎಂಬ ನಂಬಿಕೆ ಇದೆ. ಅದಕ್ಕನುಗುಣವಾಗಿ ಬೇಟೆಯನ್ನು ಮಾಂಸದಡುಗೆಗೆ ಪೂರಕವಾಗಿಸುವ ಆಶಯ ಹೊಂದಿಸಿಕೊಳ್ಳಲಾಗಿದೆ. ಬೇಟೆಯಲ್ಲಿ ಬೇಟೆಯಾಗದಿದ್ದರೆ ಬದನೆ-ನುಗ್ಗೆ ಕಾಯಿಯನ್ನಾದರೂ ಅಡುಗೆ ಮಾಡಲೇಬೇಕೆಂಬ ನಂಬಿಕೆಯನ್ನು ಕೆಡ್ಡಸ ಆಚರಣೆ ಹಿನ್ನಲೆಯಲ್ಲಿ ರೂಪಿಸಲಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://www.tuluadda.com/keddasa-mother-earth-gets-menstruated-and-worshiped-on-the-day/keddasa/
  2. https://www.kannadaprabha.com/astrology/keddasa-festival-of-worshipping-mother-earth/269513.html
  3. http://www.tuluadda.com/keddasa-mother-earth-gets-menstruated-and-worshiped-on-the-day/keddasa/
  4. http://www.tuluadda.com/keddasa-mother-earth-gets-menstruated-and-worshiped-on-the-day/keddasa/