ಸದಸ್ಯ:S M HARIHARAN/ನನ್ನ ಪ್ರಯೋಗಪುಟ
ಅಮ್ಮಸಂದ್ರ ಸುರೇಶ್
[೨][೩][೪][೫][೬] ಲೇಖಕ, ಅಂಕಣಕಾರ ಮತ್ತು ಮಾಧ್ಯಮ ವಿಶ್ಲೇಷಕ,
ಜನನ : ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರ ಗ್ರಾಮದಲ್ಲಿ 20.06.1970ರಂದು, ತಂದೆ-ಶ್ರೀ ಕೆಂಪೇಗೌಡ ಮತ್ತು ತಾಯಿ-ಶ್ರೀಮತಿ ನರಸಮ್ಮನವರು.[೭]
ಶಿಕ್ಷಣ
ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟೂರು ಅಮ್ಮಸಂದ್ರ,
ಮಾಧ್ಯಮಿಕ ಮತ್ತು ಪ್ರೌಡ ಶಾಲಾ ಶಿಕ್ಷಣ-ದಂಡಿನಶಿವರ
ಶಿಕ್ಷಕರ ತರಬೇತಿ : ತುಮಕೂರಿನ ಶ್ರೀ ಸಿದ್ದಗಂಗಾ ಶಿಕ್ಷಕರ ತರಬೇತಿ ಸಂಸ್ಥೆಯಿಂದ ಟಿಸಿಹೆಚ್ ಅಧ್ಯಯನ.
ಪಿಯುಸಿ –ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜು, ಹುಲ್ಲೇಕೆರೆ, ತುರುವೇಕೆರೆ ತಾಲ್ಲೂಕು. (ಪಿಯುಸಿ ಯಲ್ಲಿ ಕಲಾ ವಿಭಾಗದಲ್ಲಿ ತುರುವೇಕೆರೆ ತಾಲೂಕಿಗೆ ಅತಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಸುರಭಿ ಸಂಗಮ ಮತ್ತು ಹಲವಾರ ಸಂಘ-ಸಂಸ್ಥೆಗಳಿಂದ ಗೌರವ ಸ್ವೀಕಾರ)
ಪದವಿ- (ಪತ್ರಿಕೋದ್ಯಮ,ಮನೋವಿಜ್ಞಾನ ಮತ್ತು ಐಚ್ಚಿಕ ಕನ್ನಡ)-ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರು.
ಸ್ನಾತಕೋತ್ತರ ಪದವಿ : ಮಾಸ್ಟರ್ ಆಫ್ ಸೈನ್ಸ್ ಇನ್ ಕಮ್ಯುನಿಕೇಷನ್ಸ್, ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು.
ಪಿ,ಹೆಚ್ ಡಿ : ಪ್ರಸಿದ್ದ ಮಾಧ್ಯಮ ತಜ್ಞರಾದ ಪ್ರೊ.ಎನ್ ಉಷಾರಾಣಿಯವರ ಮಾರ್ಗದರ್ಶನದಲ್ಲಿ “ಕನ್ನಡ ದಿನಪತ್ರಿಕೆಗಳಲ್ಲಿ ಕೃಷಿ ವರದಿ ಹಾಗೂ ಇನ್ನಿತರೆ ಬರಹಗಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸುವ ಮೂಲಕ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ 2013ರಲ್ಲಿ ಪಿ.ಹೆಚ್ ಡಿ ಪ್ರಧಾನ.
ಪತ್ರಿಕೋದ್ಯಮ ಸೇವೆ :
ಪದವಿಯಲ್ಲಿ ಪತ್ರಿಕೋದ್ಯಮವನ್ನು ವ್ಯಾಸಂಗ ಮಾಡುತ್ತಿರುವಾಗಲೇ ತುಮಕೂರಿನಲ್ಲಿ 1991ರಲ್ಲಿ “ಸುದ್ದಿ ಸವಾಲು” ಎಂಬ ಜಿಲ್ಲಾ ಮಟ್ಟದ ವಾರಪತ್ರಿಕೆಯನ್ನು ಆರಂಭಿಸುವ ಮೂಲಕ ಪತ್ರಿಕಾರಂಗ ಪ್ರವೇಶ. 1990 ರಿಂದ 1993ರವೆಗೂ ತುಮಕೂರು ಜಿಲ್ಲೆಯ ಪ್ರಮುಖ ವಾರಪತ್ರಿಕೆಗಳಲ್ಲೊಂದಾಗಿದ್ದ ಹಕ್ಕೋತ್ತಾಯ ವಾರಪತ್ರಿಕೆಗೆ ಅಂಕಣಕಾರರಾಗಿ ಸೇವೆ. 1994-1995ರಲ್ಲಿ ಬೆಂಗಳೂರಿನ ಉದಯವಾಣಿ ಪತ್ರಿಕಾ ಕಚೇರಿಯಲ್ಲಿ ಇಂಟರ್ನ್ಷಿಪ್, 1999 ರಿಂದ 2004 ರವರೆಗೆ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕು ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ (ಸ್ಟ್ರಿಂಜರ್) ಸೇವೆ. 2003 ರಿಂದ 2005ರವರೆಗೂ ರಾಜ್ಯ ಮಟ್ಟದ ದಿನಪತ್ರಿಕೆ ಜನವಾಹಿನಿ ದಿನಪತ್ರಿಕೆಯಲ್ಲಿ ಅಂಕಣಕಾರರಾಗಿ “ಮಾಧ್ಯಮ ವಿಶ್ಲೇಷಣೆ” ಎಂಬ ಶೀರ್ಷಿಕೆಯೊಂದಿಗೆ ಸುಮಾರು ಎರಡು ವರ್ಷಗಳಿಗೂ ಹೆಚ್ಚು ಸಮಯ ಅಂಕಣಗಳ ಬರಹ.
ಮಾಧ್ಯಮ, ಕೃಷಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಕನ್ನಡದ ರಾಜ್ಯ ಮಟ್ಟದ ದಿನಪತ್ರಿಕೆಗಳಾದ ಪ್ರಜಾವಾಣಿ, ಉದಯವಾಣಿ, ವಿಶ್ವವಾಣಿ, ಉದಯಕಾಲ ಮತ್ತು ವಾರ್ತಾಭಾರತಿ ಪತ್ರಿಕೆಗಳಲ್ಲಿ ಮತ್ತು ತರಂಗ ನಿಯತಕಾಲಿಕೆಯಲ್ಲಿ ಲೇಖನಗಳ ಬರವಣಿಗೆಯಲ್ಲಿ ತೊಡಗಿದ್ದಾರೆ. ಮೂವತ್ತು ವರ್ಷಗಳಿಂದ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಸತತವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಇದುವರೆಗೂ 500 ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಪ್ರಸ್ಥತ ಉದಯಕಾಲ ದಿನಪತ್ರಿಕೆ ಮತ್ತು ವೆಬ್ ನ್ಯೂಸ್ ಪೋರ್ಟಲ್ “ಕರ್ನಾಟಕ ಕಹಳೆ ಡಾಟ್ ಕಾಂ”ಗಳಿಗೆ ಅಂಕಣ ಬರಹ ಬರೆಯುತ್ತಿದ್ದಾರೆ. ಕನ್ನಡದ ಪ್ರಮುಖ ಮಾಧ್ಯಮ ವಿಶ್ಲೇಷಕರಲ್ಲಿ ಮಂಚೂಣಿಯಲ್ಲಿರುವ ಡಾ.ಅಮ್ಮಸಂದ್ರ ಸುರೇಶ್, ಮಾಧ್ಯಮಗಳ ಕುರಿತು ಸಾಕಷ್ಟು ವಿಶ್ಲೇಷಣಾ ಬರಹಗಳನ್ನು ಬರೆದಿದ್ದಾರೆ. ಮಾಧ್ಯಮ, ಅಭಿವೃದ್ಧಿ, ಸಂಸ್ಕೃತಿ ಮತ್ತು ಕೃಷಿಗೆ ಮೀಸಲಾದ “ಮಾಧ್ಯಮ ಲೋಕ” ಎಂಬ ಯೂ ಟ್ಯೂಬ್ ವಾಹಿನಿಯನ್ನು ಮುನ್ನೆಡೆಸುತ್ತಿದ್ದಾರೆ. ಮುದ್ರಣ ಮಾದ್ಯಮ, ಅಂತರ್ ಜಾಲ ಪತ್ರಿಕೋದ್ಯಮ, ಸಾಮಾಜಿಕ ಮಾಧ್ಯಮ ಹೀಗೆ ಮಾಧ್ಯಮದ ಬಹುತೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಉದಯಕಾಲ, ವಾರ್ತಾಭಾರತಿ, ವಿಶ್ವವಾಣಿ, ವರ್ಗಸಮರ, ಅಲೆಮಾರಿ ಬಂಧು, ರೈತಧ್ವನಿ ಸೇರಿದಂತೆ ವಿವಿಧ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಉದಯಕಾಲ ಪತ್ರಿಕೆಯಲ್ಲಿ ಬರೆಯುತ್ತಿರುವ 'ತಿರುಗಾಟ' ಅಂಕಣ ಹೆಚ್ಚು ಜನಪ್ರಿಯವಾಗಿದ್ದು ತೀರ ತಳ ಸಮುದಾಯಗಳಾದ ಅಲೆಮಾರಿ ಸಮುದಾಯಗಳ ನೋವು -ನಲಿವುಗಳ ಕುರಿತು ಈ ಅಂಕಣದಲ್ಲಿ ಬರೆಯುತ್ತಿದ್ದಾರೆ
ಪತ್ರಿಕಾ ಲೋಕದ ಜೊತೆಗೆ ಉತ್ತಮ ಲೇಖಕರೂ ಆಗಿರುವ ಡಾ.ಅಮ್ಮಸಂದ್ರ ಸುರೇಶ್ ಇದುವರೆಗೂ ಹದಿನೈದು ಕೃತಿಗಳನ್ನು ಬರೆದಿದ್ದಾರೆ.
ಕೃತಿಗಳು :

ಕನ್ನಡ ದಿನಪತ್ರಿಕೆಗಳಲ್ಲಿ ಕೃಷಿ ಸುದ್ದಿ (2013)
ಡಾ.ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ (2020)
ಕೊರೋನಾ ತಂದ ಅನಿವಾರ್ಯತೆಗಳು (2020)
ಅಂಬೇಡ್ಕರ್ ಬೆಳಕಿನಲ್ಲಿ ಪತ್ರಿಕೋದ್ಯಮ (2021)
ಅಭಿವೃದ್ಧಿಗಾಗಿ ಸಂವಹನ (2021)
ದೀಮಂತ ಪತ್ರಕರ್ತ ಡಾ.ಬಿ.ಆರ್.ಅಂಬೇಡ್ಕರ್ (2021)
ಮಹಾನಾಯಕನ ಮಹಾ ಕೊಡುಗೆಗಳು (2022)
ಅಸಮಾನತೆಯ ಉದಾರೀಕರಣ (2022)
ಪತ್ರಿಕೋದ್ಯಮದ ತೇರು ಎಳೆದವರು (2022)
ಮಾಧ್ಯಮ ಹಸಿ ಆಶಯ-ಹುಸಿ ನಿರೀಕ್ಷೆ (2022)
ನೆಲೆ ಇಲ್ಲದವರು (2022)
ಸಂವಿಧಾನ : ಜನ ಮಿಡಿತ-ನಾಡಿ ಮಿಡಿತ (2023)
ಪತ್ರಕರ್ತ ಗಾಂಧಿ (2023)
ಶೋಷಣೆಗಳ ಅನ್ವೇಷಣೆ (2023)
ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾಗಿರುವ ಡಾ.ಅಮ್ಮಸಂದ್ರ ಸುರೇಶ್, ಕರ್ನಾಟಕ ರಾಜ್ಯಾದಾದ್ಯಂತ ತಮ್ಮದೇ ಆದ ಓದುಗ ಬಳಗವೊಂದನ್ನು ಸೃಷ್ಟಿಸಿಕೊಂಡಿದ್ದಾರೆ.
ಉತ್ತಮ ಸಂಘಟಕರೂ ಆಗಿರುವ ಅವರು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ಪರಿವರ್ತನಾ ಸಂಸ್ಥೆ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಪ್ರಶಸ್ತಿ : ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ‘ಸೇವಾಭೂಷಣ’ ಪ್ರಶಸ್ತಿ, ‘ಅಕ್ಷರಬ್ರಹ್ಮ’ ಪ್ರಶಸ್ತಿ, ಕರುನಾಡ ರತ್ನ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಮತ್ತು ಹೊಯ್ಸಳ ಪ್ರಶಸ್ತಿ, ಮೈಸೂರಿನ ತನುಮನ ಸಂಸ್ಥೆ ಕೊಡ ಮಾಡುವ “ಬುದ್ಧನಾಡಭೂಷಣ ಪ್ರಶಸ್ತಿಗಳು, ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ 2022ನೇ ಸಾಲಿನ ಜಿ. ರೇವಯ್ಯ ದತ್ತಿ ಪ್ರಶಸ್ತಿ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ :
15.02.2023ರಂದು ನಡೆದ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಆಗುವ ಮೂಲಕ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗುವಲ್ಲಿ aಪ್ರಮುಖ ಪಾತ್ರ ವಹಿಸಿದ್ದಾರೆ.
https://www.bookbrahma.com/author/ammasandra-suresh https://kavishala.in/sootradhar/ammasandra-sures https://prajapragathi.com/ammasandra-suresh-elected-as-the-president-ofsahithya-sammelana/ https://newstrailindia.com/inner.php?id=4915 https://www.youtube.com/watch?v=wOw5Uyv5yWE https://starofmysore.com/appointed-to-sahitya-parishat/ https://andolana.in/districts/voice-of-the-oppressed-and-oppressed-dr-ammasandra-suresh/