ಸದಸ್ಯ:SURABHIIKS10
ಶ್ರೀ ಕಾಲಿಕ ದುರ್ಗಾಪರಮೇಶ್ವರಿ ದೇವಸ್ಥಾನವೂ ವಿದ್ಯಾರಣ್ಯಪುರದಲ್ಲಿದೆ . ಈ ದೇವಾಲಯಕ್ಕೆ ದೇಶದ ನಾನಾ ಭಾಗಗಳಿಂದ ಭಕ್ತರು ಬರುತ್ತಾರೆ. 1988ರಲ್ಲಿ ರಾಮಶಾಸ್ತ್ರೀಯವರಿಂದ ಸ್ತಪಿಸಲ್ಪಟ್ಟ ಈ ದೇವಾಲಯವು ಜಗದ್ವಿಖ್ಯಾತವಾಗಿದೆ. ಇದು ಬಹುದೇವತಾ ಸಂಕೀರ್ಣ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿಯೇ ಪ್ರಧಾನ ದೇವತೆ. ಶಕ್ತಿ ಗಣಪತಿ ಕೃಷ್ಣ ವಿಜಯದರಗಿ ಅಘೋರ ಕಾಳಿ ಶಕ್ತಿಸರಭೇಶ್ವರ ದಕ್ಷಿಣ ಮೂರ್ತಿ ಹಾಗೂ ಇತರ ದೇವತೆಗಳು ಇಲ್ಲಿ ಸ್ಥಾಪಿಸಲಾಗಿದೆ. ಪೂಜೆ ಪುನಸ್ಕಾರಗಳು ಹೋಮ ಹವನಗಳು ವೇದ ಘೋಷಣೆಗಳು ಮತ್ತು ಅನ್ನ ದಾಸೋಹಂದಾಗಿ ಈ ಕ್ಷೇತ್ರ ದೈವಿಕ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ಇಲ್ಲಿನ ದೇವತೆ ತುಂಬಾ ಸತ್ಯವೆಂದು ಜನರು ನಂಬಿದ್ದಾರೆ. ಯಾವುದೇ ಕಾರ್ಯವಾಗಲಿ ಇಲ್ಲಿ ಬಂದು ಪೂಜೆ ಮಾಡಿದರೆ ಅದು ಸಂಪೂರ್ಣವಾಗುತ್ತದೆ ಎಂದು ಜನರು ನಂಬುತ್ತಾರೆ. ನೊಂದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಭಗವತಿ ನಿವಾರಿಸಿ ಅವರು ತಿಳಿ ಮನಸ್ಸಿನಿಂದ ಹಿಂತಿರುಗುವಂತೆ ಮಾಡುತ್ತಾಳೆ. ಇದಕ್ಕಾಗಿಯೇ ಈ ಕ್ಷೇತ್ರಕ್ಕೆ ಶ್ವೇತ ಕ್ಷೇತ್ರ ಎಂಬ ಹೆಸರು ಬಂದಿದೆ.
ಪ್ರಧಾನ ದೇವತೆಯಾದ ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಿಯ ಎಡಬಲ ಕೈಗಳಲ್ಲಿ ಶಂಖ ಚಕ್ರ ಇರುವುದರಿಂದ ವಿಷ್ಣುದುರ್ಗ ಎಂದು ಸಹ ಕರೆಯುತ್ತಾರೆ. ಇಲ್ಲಿ ಧ್ವಜ ಸ್ತಂಭ ಬಹಳ ಪ್ರಮುಖವಾದದು. ದೇವಾಲಯಕ್ಕೆ ಪ್ರವೇಶವಾದ ಕೂಡಲೇ ಇಲ್ಲಿಂದಲೇ ದೇವಿಗೆ ನಮಸ್ಕಾರ ಮಾಡಬೇಕು. ಧ್ವಜಸ್ಥಂಭದ ಪಕ್ಕ ರಾಹುಕಾಲದ ದೇವಿ ಮತ್ತು ದೇವಿಯ ಮುಂದೆ ಒಂದು ಉದ್ದನೆಯ ಕಲ್ಲು ಹಾಸು ಇದೆ. ಇಲ್ಲಿ ನಿಂಬೆ ಹಣ್ಣಿನ ದೀಪಗಳನ್ನು ತಟ್ಟೆಯಲ್ಲಿ ಇಟ್ಟು ಹಚ್ಚುವುದು ಒಂದು ವಿಶೇಷ. ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ಮತ್ತು ಶ್ರೀ ಚಕ್ರ ಹಾಗೂ ಸಪ್ತ ಮಾತ್ರ ದೇವರುಗಳ ಸಮಕ್ಷಮದಲ್ಲಿ ಈ ದೀಪಾರಾಧನೆ ಮಾಡುವುದರಿಂದ ಭಕ್ತರ ಅಭಿಷ್ಟಗಳು ತಪ್ಪದೇ ನೆರವೇರುತ್ತದೆ ಎಂಬ ಪ್ರತೀ ರೀತಿ ಇದೆ. ಪ್ರತಿದಿನ ದೇವಿಗೆ ವಿಧವಿಧವಾದ ಅಲಂಕಾರವನ್ನು ಮಾಡಲಾಗುತ್ತದೆ. ಇಲ್ಲಿ ವಾರಕ್ಕೊಮ್ಮೆ ನೃತ್ಯಸೇವೆಯು ಆಗುತ್ತದೆ. ನೃತ್ಯಸೇವೆ ಗೆಂಡಲೇ ಒಂದು ರಂಗಸ್ಥಳವನ್ನು ಮಾಡಲಾಗಿದೆ ಅಲ್ಲಿ ದಸರಾ ಸಮಯದಲ್ಲಿ ಅಥವಾ ವಾರಕ್ಕೊಮ್ಮೆ ನೃತ್ಯ ಸೇವೆಯು ನಡೆಯುತ್ತಲೇ ಇರುತ್ತದೆ.