ಸದಸ್ಯ:SUJITH S/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೋಲೆಕ್ಸ್
ಸ್ಥಾಪನೆಲಂಡನ್,1905
ಸಂಸ್ಥಾಪಕ(ರು)ಹ್ಯಾನ್ಸ್ ವಿಲ್ಸ್ಡಾರ್ಫ್ ಮತ್ತು ಆಲ್ಫ್ರೆಡ್ ಡೇವಿಸ್
ಮುಖ್ಯ ಕಾರ್ಯಾಲಯ, ಸ್ವಿಟ್ಜರ್ಲ್ಯಾಂಡ್
ವ್ಯಾಪ್ತಿ ಪ್ರದೇಶವಿಶ್ವಾದ್ಯಂತ
ಪ್ರಮುಖ ವ್ಯಕ್ತಿ(ಗಳು)ಗಿಯಾನ್ ರಿಕಾರ್ಡೋ ಮಾರಿನಿ, ಸಿಇಒ
ಉದ್ಯಮವಾಚ್ ತಯಾರಿಕಾರು
ಆದಾಯDecrease US$4.7 ಬಿಲಿಯನ್(2016)
ಉಪಸಂಸ್ಥೆಗಳುಟ್ಯುಡರ್ ಎಸ್.ಎ
ಜಾಲತಾಣwww.rolex.com

ರೋಲೆಕ್ಸ್ ಎಸ್.ಎ ಸ್ವಿಸ್'ನ ಐಷಾರಾಮಿ ಗಡಿಯಾರ ತಯಾರಿಸುವ ಕಂಪನಿ ಆಗಿದೆ.ರೋಲೆಕ್ಸ್ ಹಾಗ ಅದರ ಅಂಗಸಂಸ್ಥೆಯಾದ ಟ್ಯುಡರ್ ಎಸ್.ಎ ವಿನ್ಯಾಸ,ತಯಾರಿಕೆ,ವಿತರಣೆ ಮತ್ತು ಕೈಗಡಿಯಾರ ಸೇವೆಗಳನ್ನು ಮತ್ತು ಅದರ ಮಾರಾಟ ರೋಲೆಕ್ಸ್ ಹಾಗೂ ಟ್ಯೂಡರ್ ಹೆಸರಿನ ಬ್ರ್ಯಾಂಡ್ ನಲ್ಲಿ ಮಾರಾಟ ಮಾಡುತ್ತಿದ್ದರು.ಹ್ಯಾನ್ಸ್ ವಿಲ್ಸ್ಡಾರ್ಫ್ ಮತ್ತು ಆಲ್ಫ್ರೆಡ್ ಡೇವಿಸ್ ಈ ಕಂಪನಿಯನ್ನು ಲಂಡನ್'ನ ಇಂಗ್ಲೆಂಡ ದೇಶದಲ್ಲಿ ೧೯೦೫ ಸ್ಥಾಪಿಸಿದರು.ನಂತರ ೧೯೧೯ರಲ್ಲಿ ರೋಲೆಕ್ಸ್ ಕಂಪನಿ ತನ್ನ ಕಾರ್ಯಾಚರಣೆಗಳನ್ನು ಜಿನೀವಾ,ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಮುಂದುವರಿಸಿತ್ತು.ಫೋರ್ಬ್ಸ್ ತನ್ನ ವಿಶ್ವದ ಅತ್ಯಂತ ಶಕ್ತಿಶಾಲಿ ಜಾಗತಿಕ ೨೦೧೬ ಬ್ರ್ಯಾಂಡ್ ಪಟ್ಟಿಯಲ್ಲಿ ರೋಲೆಕ್ಸ್'ಗೆ ೬೪ ನೇ ಸ್ಥಾನ ಲಭಿಸಿತು.ರೋಲೆಕ್ಸ್ ದೊಡ್ಡ ಐಷಾರಾಮಿ ಗಡಿಯಾರ ತಯಾರಿಸುವ ಬ್ರ್ಯಾಂಡ್ ಆಗಿದು ಇದು ದಿನಕ್ಕೆ ೨೦೦೦ ವಾಚ್ ಗಳನ್ನು ತಯಾರಿಸುತ್ತೆ.ರೋಲೆಕ್ಸ್ ಹ್ಯಾನ್ಸ್ ವಿಲ್ಸ್ಡಾರ್ಫ್ ಫೌಂಡೇಶನ್ ಒಡೆತನದಲ್ಲಿದು,ಇದು ಕುಟುಂಬದ ಖಾಸಗಿ ಟ್ರಸ್ಟ್ ಆಗಿರುವುದರಿಂದ ರೋಲೆಕ್ಸ್ ಕಂಪನಿ ಯಾವುದೇ ಕಾರ್ಪೊರೇಟ್ ತೆರಿಗೆ ನೀಡುವುದಿಲ್ಲ.

ಇತಿಹಾಸ[ಬದಲಾಯಿಸಿ]

ಹ್ಯಾನ್ಸ್ ವಿಲ್ಸ್ಡಾರ್ಫ್ ಮತ್ತು ಆಲ್ಫ್ರೆಡ್ ಡೇವಿಸ್ ಈ ಕಂಪನಿಯನ್ನು ಲಂಡನ ಇಂಗ್ಲೆಂಡ್ ದೇಶದಲ್ಲಿ ೧೯೦೫ ಸ್ಥಾಪಿಸಿದರು.ಆರಂಭಿಕ ಸಮಯದಲ್ಲಿ ಹ್ಯಾನ್ಸ್ ಮತ್ತು ಡೇವಿಸ್ ತಯಾರಿ ಮಾಡುತ್ತಿದ ಗಡಿಯಾರಗಳು W&D ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದರು.೧೯೦೮ ರಲ್ಲಿ ಹ್ಯಾನ್ಸ್ 'ರೋಲೆಕ್ಸ್' ಎಂಬ ಟ್ರೇಡ್ ಮಾರ್ಕ್'ಗೆ ನೊಂದಣಿ ಮಾಡಿಕೊಂಡರು. ರೋಲೆಕ್ಸ್ ಕಂಪನಿ ಬಂಗಾರದ ಕೈಗಡಿಯಾರಗಳನ್ನು ತಯಾರಿಸುತ್ತೆ ಅದಕ್ಕೆ ಬೇಕಾದ ಬಂಗಾರವನ್ನು ತಮ್ಮದೆಯಾದ ಕಂಪನಿಯಲ್ಲಿ ೨೪ ಕಾರಟ್ ಬಂಗಾರ ತಯಾರಿ ಮಾಡುತ್ತದೆ.ರೋಲೆಕ್ಸ್ ಕಂಪನಿ ಅಧ್ಬುತವಾದ ಗಡಿಯಾರ ತಯಾರಿಸುತ್ತೆ ಅದಕ್ಕೆ ಅವರು ೯೦೪'ಎಲ್ ಸ್ಟೇನ್ಲೆಸ್ ಸ್ಟಿಲ್ ಉಪಯೋಗಿಸುತ್ತ ಇದು ಬೇರೆ ಗಡಿಯಾರ ಕಂಪನಿಗೆ ಹೋಲಿಸಿದರೆ ರೋಲೆಕ್ಸ್ ಮಾಡುವ ಗಡಿಯಾರ ತುಂಬ ಸುಂದರವಾಗಿ ಮೂಡಿ ಬರುತ್ತದೆ. ೧೯೧೯'ರಲ್ಲಿ ವಿಲ್ಸ್ಡಾರ್ಫ್ ಇಂಗ್ಲೆಂಡ್ ದೇಶ ಬಿಟ್ಟು ರೋಲೆಕ್ಸ್ ಕಂಪನಿಯನ್ನು ಸ್ವಿಜರ್ಲ್ಯಾಂಡ್ ದೇಶದದಲ್ಲಿ ತೆರೆಯುತ್ತಾರೆ ಕಾರಣ ಇಂಗ್ಲೆಂಡ್ ದೇಶದಲ್ಲಿ ಯುದ್ಧದ ಸಮಯದಲ್ಲಿ ಐಷಾರಾಮಿ ಗಡಿಯಾರಗಳ ಮೇಲೆ ಆಮದು ಹಾಗೂ ರಫ್ತು ಸುಂಕ ಹೆಚ್ಚಾಗಿತ್ತು ಇದರಿಂದ ಅವರು ರೋಲೆಕ್ಸ್ ಕಂಪನಿಯನ್ನು ಸ್ವಿಜರ್ ಲ್ಯಾಂಡ್'ನಲ್ಲಿ ತರೆಯುತ್ತರೆ. ಡಿಸೆಂಬರ್ ೨೦೦೮ ರಲ್ಲಿ,"ವೈಯಕ್ತಿಕ ಕಾರಣಗಳಿಂದ" ಮುಖ್ಯ ಕಾರ್ಯನಿರ್ವಾಹಕ ಪ್ಯಾಟ್ರಿಕ್ ಹೈನಿಜರ್ ಹಠಾತ್ ನಿರ್ಗಮನದ ನಂತರ, ಕಂಪನಿ 1 ಬಿಲಿಯನ್ ಸ್ವಿಸ್ ಫ್ರಾಂಕ್ಸ್ ಕಳೆದುಕೊಂಡಿತು.

ನಾವೀನ್ಯತೆಗಳ[ಬದಲಾಯಿಸಿ]

ರೋಲೆಕ್ಸ್ ಕಂಪನಿಯ ಕೆಲವು ನಾವೀನ್ಯತೆಗಳು ಇಂತಿವೆ •೧೯೨೬ರಲ್ಲಿ ಮೊದಲ ಜಲನಿರೋಧಕ ಕೈಗಡಿಯಾರ. •ಡಯಲ್ ಮೇಲೆ ಸ್ವಯಂಚಾಲಿತವಾಗಿ ದಿನಾಂಕ ಬದಲಾಗುವ ಮೊದಲ ಕೈಗಡಿಯಾರ ೧೯೪೫ ರಲ್ಲಿ ರೋಲೆಕ್ಸ್ ಕಂಡು ಹಿಡಿಯುತ್ತದೆ.[೧] •೧೯೫೪'ರಲ್ಲಿ ಒಮ್ಮೆ ಎರಡು ಕಾಲಮಾನಗಳನ್ನು ತೋರಿಸುವ ಮೊದಲ ಕೈಗಡಿಯಾರ ರೋಲೆಕ್ಸ್ ಪರಿಚಯಿಸುತ್ತದೆ. •ಸ್ವಯಂಚಾಲಿತ ಕೈಗಡಿಯಾರಗಳು ಗಡಿಯಾರಗಳು. •ವಾಟರ್ ಪ್ರೂಫ್ ಕೈಗಡಿಯಾರಗಳು. •ರೋಲೆಕ್ಸ್ ವಾಟರ್ ಪ್ರೂಫ್ ಕೈಗಡಿಯಾರ ಕಂಡುಹಿಡಿದ ಮೊದಲ ಕಂಪನಿ ಯಾಗಿತ್ತು.ಅದು ೧೦೦ ಮೀ ಆಳದಲ್ಲಿ ಒತ್ತಡ ತಡೆದುಕೊಳ್ಳುವ ಶಕ್ತಿ ರೋಲೆಕ್ಸ್ ಕೈಗಡಿಯಾರದಲ್ಲಿ ಕಂಡುಬಂದಿತು. •ರೋಲೆಕ್ಸ್ ಕಂಪನಿಯು ಆಳವಾದ ಸಮುದ್ರಕ್ಕೆ ಡೈವಿಂಗ್ ಮಾಡುವವರಿಗೆ, ಕೇವಿಂಗ್, ಪರ್ವತಾರೋಹಿಗಳಿಗೆ,ಧ್ರುವ ಪರಿಶೋಧನೆ, ಮತ್ತು ವಾಯುಯಾನ ಕೆಲಸದಲ್ಲಿ ತೊಡಗಿಸಿ ಕೊಂಡವರಿಗೆ ಸೂಕ್ತವಾದ ಕೈಗಡಿಯಾರವನ್ನು ತಯಾರಿಸುತ್ತಿದ್ದರು. •ರೋಲೆಕ್ಸ್ ಸ್ವಿಸ್'ನ ಅತಿದೊಡ್ಡ ಕ್ರೋನೋಮೀಟರುಗಳ ಪ್ರಮಾಣಿತ ಕೈಗಡಿಯಾರಗಳನ್ನು ತಯಾರಿ ಮಾಡುವ ಕಂಪನಿಯಾಗಿದು.೨೦೦೫ ರಲ್ಲಿ ಅರ್ಧಕ್ಕಿಂತ ಹೆಚ್ಚು ವಾರ್ಷಿಕ ಉತ್ಪಾದನೆಯು ಕ್ರೋನೋಮೀಟರ್ ಪ್ರಮಾಣಿತ ಕೈಗಡಿಯಾರಗಳದಾಗಿದವು.ಇಲ್ಲಿಯವರೆಗೆ,ರೋಲೆಕ್ಸ್ ಅತ್ಯಂತ ಕ್ರೋನೋಮೀಟರ್ ಗಡಿಯಾರ ತಯಾರಿಸುವ‌ ಕಂಪನಿಯಾಗಿದೆ.

ಬ್ರ್ಯಾಂಡ್[ಬದಲಾಯಿಸಿ]

ರೋಲೆಕ್ಸ್ ಎಸ್ಎ ಕಂಪನಿ ,ರೋಲೆಕ್ಸ್ ಮತ್ತು ಟ್ಯುಡರ್ ಬ್ರಾಂಡ್ ಉತ್ಪನ್ನಗಳನ್ನು ಒದಗಿಸುತ್ತದೆ.[೨] ಮಾಂಟ್ರೆಸ್ ಟ್ಯೂಡರ್ ಎಸ್ಎ,ಟ್ಯುಡರ್ ಕೈಗಡಿಯಾರಗಳ ವಿನ್ಯಾಸ, ಅದರ ಮಾರಾಟ ಹಾಗೂ ಅದನ್ನು ತಯಾರಿಸುತ್ತಿತ್ತು.ರೋಲೆಕ್ಸ್ ಸಂಸ್ಥಾಪಕ ಹ್ಯಾನ್ಸ್ ವಿಲ್ಸ್ಡಾರ್ಫ್ ಟ್ಯುಡರ್ ಬ್ರ್ಯಾಂಡ್'ಗೆ ಹೊಸ ವಿನ್ಯಾಸ ತೊಟ್ಟು ಅದನ್ನು ರೋಲೆಕ್ಸ್ ವಿತರಕರಿಗೆ ಮಾರಾಟ ಮಾಡುತ್ತಿದ್ದರು ಈ ಕೈಗಡಿಯಾರಗಳ ಬೆಲೆ ರೋಲೆಕ್ಸ್'ಗೆ ಹೋಲಿಸಿದರೆ ಕಡಿಮೆಯಾಗಿತ್ತು. ಐತಿಹಾಸಿಕವಾಗಿ, ಟ್ಯೂಡರ್ ಕೈಗಡಿಯಾರಗಳು 'ಇಟಿಎ ಎಸ್ಎ' ಪೂರೈಕೆ ಚಲನೆಯನ್ನು ಬಳಸಿ ಮಾಂಟ್ರೆಸ್ ಟ್ಯೂಡರ್ ಎಸ್ಎ ಮೂಲಕ ತಯಾರಿಸಲಾಗುತ್ತಿತ್ತು.೨೦೧೫ ರಿಂದ, ಟ್ಯೂಡರ್‌ ಕೈಗಡಿಯಾರಗಳನ್ನು ತನ್ನ ಉಪಕರಣಗಳಿಂದ ತಯಾರಿಸಲು ಪ್ರಾರಂಭಿಸಿದೆ.ಟ್ಯೂಡರ್ ಅವರದ್ದೇ ಉಪಕರಣಗಳನ್ನು ಉಪಯೋಗಿಸಿ ತಯಾರಿಸಿದ ಮೊದಲ ಮಾದರಿ 'ನಾರ್ತ್‌ ಫ್ಲಾಗ್' ಬಿಡುಗಡೆಯಾಯಿತು.ಟ್ಯೂಡರ್ ಕೈಗಡಿಯಾರಗಳು ಮಾರಾಟ ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ಕೆನಡಾ, ಭಾರತ, ಮೆಕ್ಸಿಕೋ, ದಕ್ಷಿಣ ಆಫ್ರಿಕಾ, ಯುರೋಪ್, ದಕ್ಷಿಣ ಏಷ್ಯಾ, ದಕ್ಷಿಣ ಅಮೇರಿಕ, ವಿಶೇಷವಾಗಿ ಬ್ರೆಜಿಲ್, ಅರ್ಜೆಂಟೀನಾ ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಅನೇಕ ದೇಶಗಳು ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಲ್ಲಿ ಮಾರಾಟವಾಗುತ್ತದೆ. ಮಾಂಟ್ರೆಸ್ ಟ್ಯೂಡರ್ ಎಸ್ಎ ೨೦೦೪ ರಲ್ಲಿ ಯುನೈಟೆಡ್ ಸ್ಟೇಟ್ಸ್'ನಲ್ಲಿ ತನ್ನ ಕೈಗಡಿಯಾರ ಮಾರಾಟ ನಿಲ್ಲಿಸಿತ್ತು.ನಂತರ ೨೦೧೩ ರಲ್ಲಿ ಯುನೈಟೆಡ್ ಸ್ಟೇಟ್ಸ್'ಗೆ ಹಾಗೂ ೨೦೧೪ ರಲ್ಲಿ ಯುನೈಟೆಡ್ ಕಿಂಗ್ಡಮ್'ದಗೆ ಮರಳಿತು.

ರೋಲೆಕ್ಸ್ ಗಡಿಯಾರ ಮಾದರಿಗಳು[ಬದಲಾಯಿಸಿ]

ರೋಲೆಕ್ಸ್ ಕಂಪನಿಯು ವಿವಿಧ ರೀತಿಯ ಕೈಗಡಿಯಾರಗಳನ್ನು ತಯಾರಿ ಮಾಡುತ್ತದೆ ಅವುಗಳಲ್ಲಿ ಕೆಲವು ಡೇಟ್'ಜಸ್ತ್ ಡೇಟ್'ಜಸ್ತ್ 2 ಡೇಟ್'ಜಸ್ತ್ ಲೇಡಿ 31 ಡೇಟ್'ಜಸ್ತ್ ಪರ್ಲ್ ಮಾಸ್ಟರ್ 34 ರೋಲೆಕ್ಸ್ ಡೀಪ್ ಸೀ ಎಕ್ಸ್-ಪ್ಲೋರರ್ ಸಬ್-ಮರೈನರ್

ನಕಲಿ[ಬದಲಾಯಿಸಿ]

ರೋಲೆಕ್ಸ್ ಕೈಗಡಿಯಾರಗಳು ಅಕ್ರಮವಾಗಿ ಬೀದಿಯಲ್ಲಿ ಮಾರಾಟ ಮಾಡುತ್ತಾರೆ ಹಾಗೂ ಆನ್ಲೈನ್'ನಲ್ಲಿ ನಕಲಿ ರೋಲೆಕ್ಸ್ ಕೈಗಡಿಯಾರಗಳು ದೊರೆಯುತ್ತವೆ ಅವುಗಳ ಗುಣಮಟ್ಟ ಒರಿಜಿನಲ್ ರೋಲೆಕ್ಸ್'ಗಿಂತ ತುಂಬ ವ್ಯತ್ಯಾಸ ಕಂಡುಬರುತ್ತದೆ.ನಕಲಿ ಕೈಗಡಿಯಾರಗಳು ಸುಲಭವಾಗಿ ಆಭರಣ ಮತ್ತು ಇತರ ತಜ್ಞರು ಸುಲಭವಾಗಿ ಗುರುತಿಸಬಹುದಾಗಿದೆ.[೩]ಒ.ಜೆ ಸಿಂಪ್ಸನ್ ತನ್ನ ಕೊಲೆಯ ವಿಚಾರಣೆ ಸಂದರ್ಭದಲ್ಲಿ ಒಂದು ನಕಲಿ ಗಡಿಯಾರ ಧರಿಸಿದ್ದರು.

ಹ್ಯಾನ್ಸ್ ವಿಲ್ಸ್ಡಾರ್ಫ್ ಫೌಂಡೇಶನ್[ಬದಲಾಯಿಸಿ]

ರೋಲೆಕ್ಸ್ ಎಸ್ಎ,ಖಾಸಗಿ ಹ್ಯಾನ್ಸ್ ವಿಲ್ಸ್ಡಾರ್ಫ್ ಫೌಂಡೇಶನ್ ಒಡೆತನದಲ್ಲಿದೆ.ಇದು ಚಾರಿಟಿ(ಸೇವಾ ಕಾರ್ಯ) ಹೆಸರಿನಲ್ಲಿ ನೋಂದಣಿಯಾಗಿದೆ,ರೋಲೆಕ್ಸ್ ಕಂಪನಿ ಯಾವುದೇ ಕಾರ್ಪೊರೇಟ್ ಆದಾಯ ತೆರಿಗೆ ನೀಡುವುದಿಲ್ಲ.೨೦೧೧'ರಲ್ಲಿ ರೋಲೆಕ್ಸ್ ಕಂಪನಿಯ ವಕ್ತಾರರು ಕಂಪನಿ ಮಾಡಿದ ಧರ್ಮಾರ್ಥ ಕೊಡುಗೆ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.

ಉಲ್ಲೇಖ[ಬದಲಾಯಿಸಿ]

  1. http://w4.stern.nyu.edu/sternbusiness/fall_winter_2004/rolex.html
  2. https://www.tudorwatch.com/magazine/watchmaking#
  3. https://www.nytimes.com/2006/07/01/business/01pursuits.html?fta=y&_r=0