ಸದಸ್ಯ:SRIHARI L S/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ಸಾಹಿತಿ, ಕವನ ಬರೆಯುವವರು.ಸಾಹಿತಿ ಬರೆದದ್ದು ಸಾಹಿತ್ಯವಾದರೆ,ಕವಿ ಬರೆದದ್ದು ಕವಿತೆ,ಕವನ,ಕಾವ್ಯವಾಗುತ್ತದೆ.ಅಚ್ಚಕನ್ನಡದಲ್ಲಿ ಕಬ್ಬಿಗನೆಂಬ ಹೆಸರಿದೆ.ಕವಿಯ ಶಕ್ತಿ,ಸಾಮರ್ಥ್ಯದ ಬಗ್ಗೆ "ರವಿ ಕಾಣದ್ದನ್ನು ಕವಿ ಕಂಡ" ಎಂಬ ಮಾತಿದೆ. ಅಂದರೆ ಕವಿಯಾದವನು ಬರೀ ವಾಸ್ತವ ಮಾತ್ರವಲ್ಲದೆ, ಕಲ್ಪನೆ(Imagination)ಯ ಮೂಸೆಯಲ್ಲಿ ಮೂಡಿಬಂದದ್ದನ್ನು ಚಮತ್ಕಾರಿಕವಾಗಿ ಹಾಗೂ ರಮಣೀಯವಾಗಿ ರಚಿಸುತ್ತಾನೆ ಮತ್ತು ಕಣ್ಣಿಗೆ ಕಟ್ಟಿದಂತೆ ಚಿತ್ರಿಸುತ್ತಾನೆ ಎಂದರ್ಥವಾಗುತ್ತದೆ..........................

ಕವಿ[ಬದಲಾಯಿಸಿ]

ಕವಿತೆ

ಕವಿ ಎನ್ನುವುದು ಒಂದು ಸಂಸ್ಕೃತ ಪದ.ಕವಿ ಎನ್ನುವ ಪದವನ್ನು ಭಾರತದ ಹಲವಾರು ಭಾಷೆಗಳಲ್ಲಿ ಉಪಯೋಗಿಸಿದ್ದಾರೆ. ಕವಿ ಎಂದರೆ ಯೋಚಿಸುವವ, ಚಿಂತಿಸುವವ, ಬುದ್ದಿವಂತ, ತಿಳಿದುಕೊಳ್ಳುವವ ಮತ್ತು ಭಾವನೆಯನ್ನು ವ್ಯಕ್ತಪಡಿಸುವವ ಎಂದಾರ್ಥ. ನಮ್ಮ ಋಷಿಮುನಿಗಳೂ ಕೂಡ ಮಂತ್ರಗಳು, ವೇದಗಳನ್ನು ರಚಿಸಿದ್ದಾರೆ ಅವರುಕೂಡ ಕವಿಗಳು. ಕವಿ ಎನ್ನುವವನು ಯಾವುದಾದರು ಒಂದು ವಸ್ತುವ ಮತ್ತು ಒಂದು ಜೀವಿಯ ಗುಣಗಳನ್ನು ಅಥವಾ ಲಕ್ಷಣವನ್ನು ವರ್ಣಿಸುತ್ತಾನೆ. ರಾಜರಕಾಲದಲ್ಲಿ ರಾಜನ ಆಸ್ಥಾನದಲ್ಲಿ ಮನರಂಜನೆಗಾಗಿ ಹಾಡುಗಳು, ಕವಿತೆಗಳು, ಕಥೆಗಳು, ಗ್ರಂಥಗಳನ್ನು ಬರೆದು ವರ್ಣಿಸುತಿದ್ದವನೆ ಕವಿ ಇವನನ್ನು 'ಕವಿರಾಜ' ಎಂದು ಕರೆಯುತ್ತಾರೆ. ಕವಿಯ ಬಾಯಿಂದ ಮತ್ತು ಮನದಿಂದ ಬಂದ ಭಾವನೆಗಳೇ ಕವಿತೆಗಳಾಗುತ್ತವೆ. "ರವಿ ಕಾಣದ್ದನ್ನು ಕವಿ ಕಂಡ" ಎಂಬ ಮಾತಿದೆ. ಕವಿ ಒಬ್ಬ ಸುಂದರ ವರ್ಣನಕಾರ, ಕವಿ ಭಾವನೆಗಳನ್ನು ವಿವರವಾಗಿ ಲೇಖನ ರೂಪದಲ್ಲಿ ಅರ್ಥಕೊಡುವಂತವರು. ಕವಿಯು ಯಾವುದಾದರು ವಸ್ತುಗಳನ್ನು ಬರಿಗಣ್ಣಿನಿಂದ ನೋಡುವುದಸ್ಟೆಯಲ್ಲದೆ ಅದನ್ನು ಮನಸ್ಸಿನಲ್ಲಿ ಆಲಿಸುತ್ತಾರೆ. ಕವಿಯು ಪ್ರಕೃತಿಗೆ ಹೆಣ್ಣಿನ ಸ್ಥಾನ ಕೊಟ್ಟು ಬೆಟ್ಟ ಗುಡ್ಡಗಳು ಬಂಡೆಗಳಿಗೊಂದು ಆಕಾರ ಕೊಟ್ಟು ಅವನ ಮನೋಆನಂದವನ್ನು ವರ್ಣರಂಜಿತ ಬರಹಗಳಲ್ಲಿ ವರ್ಣಿಸಿದ್ದಾರೆ. ಕವಿಗಳು ಬರೆಯುವುದು ಓದುಗರರಿಗೆ ಕವಿ ನೋಡಿದ್ದ ದೃಶ್ಯ ಕಣ್ಣಿಗೆ ಕಟ್ಟಿದಂತಿರುತ್ತದೆ ಮತ್ತು ಓದುಗರ ಮನಸೆಳೆಯುವಂತಿರುತ್ತದೆ. ಕವಿಗಳು ತಮ್ಮ ಅನುಭವ, ಅನಿಸಿಕೆ, ಭಾವನೆಗಳನ್ನು ಲೇಖನದಲ್ಲಿರಿಸುತ್ತಾರೆ ಆ ಲೇಖನಗಳು ಯುವಪೀಳಿಗೆಗೆ ಮಾರ್ಗದರ್ಶನವಾಗುತ್ತವೆ. ಕನ್ನಡ ಭಾಷೆಯಲ್ಲಿಯೂ ಕೂಡ ಕವಿತೆ, ಕವನ ,ಹಾಡುಗಳನ್ನು ಬರೆದಿರುವ ಅನೇಕ ಕವಿಗಳಿದ್ದಾರೆ. 'ಪಂಪ' ಕನ್ನಡದ ಆದಿಕವಿ ಎಂದೆ ಪ್ರಸಿದ್ದನಾಗಿದ್ದಾನೆ.[೧] ನಂತರ ಕನ್ನಡವು ಅನೇಕ ಕಾಲ ಗಳನ್ನು ದಾಟುತ್ತ ನಾಡಿಗೆ ಅನೇಕ ಕವಿರತ್ನಗಳನ್ನು ಕೊಡುಗೆಯಾಗಿ ನೀಡುತ್ತಾ ಬಂದಿದೆ ಮತ್ತು ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತ ಬಂದಿದೆ. ಕವಿ ಎಂಬ ಪದಕ್ಕೆ ಅಚ್ಚಕನ್ನಡದಲ್ಲಿ ಕಬ್ಬಿಗನೆಂಬ ಹೆಸರಿದೆ. ಕನ್ನಡಾಂಬೆಯ ಮಕ್ಕಳಲ್ಲಿ ೮ ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ ಈ ಪ್ರಶಸ್ತಿಯು ಕವಿಗಳಿಗೆ ಕೊಡುವ ಅತ್ಯುತ್ತಮ ಪ್ರಶಸ್ತಿ ಎಂದು ಹೇಳಬಹುದಾಗಿದೆ. ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಕನ್ನಡ ಎಂಬ ಹಿರಮೆ ಕನ್ನಡಾಂಭೆಯದಾಗಿದೆ.[೨]

ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದ ಕವಿಗಳು[ಬದಲಾಯಿಸಿ]

೧.ಕುವೆಂಪು - ಶ್ರೀ ರಾಮಾಯಣ ದರ್ಶನಂ.

ಕುವೆಂಪು ರವರ ಮನೆ, ಕುಪ್ಪಳ್ಳಿ.

೨.ದ.ರಾ.ಬೇಂದ್ರೆ - ನಾಕುತಂತಿ

೩.ಶಿವರಾಮ ಕಾರಂತ - ಮೂಕಜ್ಜಿಯ ಕನಸುಗಳು

೪.ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಚಿಕ್ಕವೀರ ರಾಜೆಂದ್ರ

೫.ವಿ.ಕೃ.ಗೊಕಾಕ್ - ಭಾರತ ಸಿಂಧೂ ರಶ್ಮಿ

೬.ಗಿರೀಶ್ ಕಾರ್ನಾಡ್ - ಸಮಗ್ರ ಸಾಹಿತ್ಯ

೭.ಯು.ಆರ್.ಅನಂತಮೂರ್ತಿ - ಸಮಗ್ರ ಸಾಹಿತ್ಯ

೮.ಚಂದ್ರಶೇಖರ ಕಂಬಾರ - ಸಮಗ್ರ ಸಾಹಿತ್ಯ

  1. https://www.youtube.com/watch?v=sIBVyHIZ2NI
  2. https://kn.wikipedia.org/wiki/%E0%B2%9C%E0%B3%8D%E0%B2%9E%E0%B2%BE%E0%B2%A8%E0%