ಸದಸ್ಯ:SPOORTHI SHETTY/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾವಿನ ಕಡಿತ ಮತ್ತು ಆಂಟಿವೆನಮ್[ಬದಲಾಯಿಸಿ]

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ ಒಟ್ಟು ವಾರ್ಷಿಕ ಹಾವಿನಕಡಿತದಿಂದ ಸಾಯುತ್ತಿರುವವರ ಸಂಖ್ಯೆ ೧೩೦೦-೫೦೦೦೦ ವರೆಗೆ ಅಂದಾಜಿಸಲಾಗಿದೆ. ಏಳು ಲಕ್ಷಕ್ಕೂ ಹೆಚ್ಚು ಜನರು ಅಂಗವಿಕಲರಾಗುತಿದ್ದರೆ. 

ಒಟ್ಟು ಸಾವುಗಳಲ್ಲಿ ಶೇಕಡ ೦.೪೭% ಹಾವಿನಕಡಿತದ್ದಾಗಿದೆ.೯೭% ಗ್ರಾಮೀಣ ಪ್ರದೇಶಗಳಲ್ಲಿ ಹಾವಿನ ಕಡಿತಗಳು ಸಂಭವಿಸಿವೆ.ಪುರುಷರಿಗಿಂತ ಸ್ತ್ರೀಯರು ಹಾವಿನ ಕಡಿತಕ್ಕೆ ಒಳಪಟ್ಟಿದ್ದಾರೆ.ಅದರಲ್ಲಿ ೧೫-೨೯ ವರ್ಷಸಮೂಹಕ್ಕೊಳಗಾದವರೆ ಹೆಚ್ಚು.ಇವರೆಲ್ಲಾ ರೈತವರ್ಗ ಕುಟುಂಬಕ್ಕೆ ಸೇರಿದವರು. ಸರ್ಕಾರ ಬಹುತೇಕ ಕುಟುಂಬಗಳಿಗೆ ಪರಿಹಾರ ಸಹಿತ ಕೊಡುತಿಲ್ಲ.ಇದು ವಿಷಾಧನೀಯ ಸಂಗತಿ ಎಂದೆ ಹೇಳ ಬಹುದು.ಭಾರತದಲ್ಲಿ ಇರುವ ಒಟ್ಟು ಹಾವುಗಳಲ್ಲಿ ೮೦% ರಷ್ಟು ವಿಷರಹಿತ,೧೨% ಸ್ವಲ್ಪ ವಿಷಕಾರಿ ಮತ್ತ್ತು ಉಳಿದ ೮% ಮಾತ್ರ ವಿಷಕಾರಿ ಹಾವುಗಳು.ಇದರಲ್ಲಿ ಕೇವಲ ೪ ಹಾವುಗಳು ಭಾರತದಲ್ಲಿ ಅಧಿಕ ಜನರ ಸಾವಿಗೆ ಕಾರಣ ಅವುಗಳೆಂದರೆ, ನಾಗರ ಹಾವು,ಗರಗಸ ಮಂಡಲ ಹಾವು,ಕೊಳಕ ಮಂಡಲ ಹಾವು ಮತ್ತು ಕಟ್ಟು ಹಾವು.ಇವನ್ನು ಬಿಗ್ ೪ ಎಂದು ಕರೆಯಲಾಗುತ್ತದೆ.

ನಾಗರ ಹಾವು
ಕಟ್ಟು ಹಾವು
ಕೊಳಕ ಮ೦ಡಲ
ಗರಗಸ ಮ೦ಡಲ


ಹಾವಿನ ಕಡಿತವನ್ನು ಹೇಗೆ ತಡೆಗಟ್ಟಬಹುದು:[ಬದಲಾಯಿಸಿ]

ಹಾವುಗಳು ಎಲ್ಲೆಡೆ ಇವೆ,ಅದರೆ ನಾವು ನಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳ ಬೇಕು.ಮನೆಯಲ್ಲಿ ಹಾವುಗಳು ಆಹಾರದ ಹುಡುಕಾಟದಲ್ಲಿ ಜಾನುವಾರುಗಳನ್ನು, ವಿಶೇಷವಾಗಿ ಕೋಳಿಗಳನ್ನು ಬೇಟೆಯಾಡಲು ಬರಬಹುದು.ಅಥವಾ ಸ್ವಲ್ಪ ಕಾಲ ಅಡಗಿಕೊಳ್ಳುವ ಸ್ಥಳವನ್ನು ಹುಡುಕಿಕೊಂಡು ಬರಬಹುದು. ಸಾಧ್ಯವಾದರೆ, ನೆಲದ ಮೇಲೆ ಮಲಗುವುದನ್ನು ತಪ್ಪಿಸಿ.ನೆಲದ ಮೇಲೆ ಮಲಗಬೇಕಾದರೆ ಸೊಳ್ಳೆ ಪರದೆಯನ್ನು ಉಪಯೋಗಿಸಿ ಇದು ಸೊಳ್ಳೆಗಳಿಂದ ರಕ್ಷಿಸುತ್ತದೆ ಮತ್ತು ಇತರ ಕೀಟಗಳು, ಸೆಂಟಿಪಡೆಗಳು, ಚೇಳುಗಳು ಮತ್ತು ಹಾವುಗಳಿಂದ ಸುರಕ್ಷಿಸುತ್ತದೆ.ಮನೆ ಸ್ಪರ್ಶಿಸುವ ಮರದ ಕೊಂಬೆಗಳನ್ನು ಕತ್ತರಿಸಿ. ರಾತ್ರಿ ಸಮಯ ಮನೆಯ ಹೊರಗೆ ನಡೆದಾಡುವಾಗ ಪಾದರಕ್ಷೆ ಧರಿಸಿ ಮತ್ತು ಟಾರ್ಚನ್ನು ಉಪಯೋಗಿಸಿ. ಹಾವುಗಳನ್ನು ಸಾಧ್ಯವಾದಷ್ಟು ದೂರವಿರಿಸಿ.ಅನಗತ್ಯವಾಗಿ ಅವುಗಳನ್ನು ಮುಟ್ಟುವುದಾಗಲಿ ಮತ್ತು ಹಿಡಿಯುವುದಾಗಲಿ ಬೇಡ. ಹಾವಿನ ಕಡಿತಕ್ಕೆ ವೈಜ್ಞಾನಿಕ ಪ್ರಥಮ ಚಿಕಿತ್ಸಾ ವಿಧಾನವನ್ನು ಹೇಗೆ ಮಾಡಬೇಕೆಂಬುದು ಬಹಳ ಮುಖ್ಯ.ಇದು ಸಾವು ಮತ್ತು ಬದುಕಿನ ಪ್ರಶ್ನೆ.

ಪ್ರಥಮ ಚಿಕಿತ್ಸಾ ವಿಧಾನ[ಬದಲಾಯಿಸಿ]

೧.ಮೊದಲನೆಯದಾಗಿ ಆಂಬ್ಯುಲೆನ್ಸ್ ಗೆ ಕರೆಮಾಡ ಬೇಕು. ೨.ಹಾವುಕಚ್ಚಿದ ವ್ಯಕ್ತಿಯನ್ನು ಸಮಾಧಾನ ಪಡಿಸ ಬೇಕು, ಇಲ್ಲವಾದರೆ ಭಯದಿಂದ ರಕ್ತದೊತ್ತಡ ಹೆಚ್ಚಗಿ ವಿಷ ಬೇಗ ಮೈಯೆಲ್ಲ ಹರಡುತ್ತದೆ.ಅವರಿಗೆ ಬದುಕುವ ಬರವಸೆಯನ್ನು ನೀಡಬೇಕು. ೩. ನಂತರ ಹಾವುಕಚ್ಚಿದ ಜಾಗವನ್ನು ನಿಶ್ಚಲಗೊಳಿಸಬೇಕು , ಇಲ್ಲವಾದರೆ ಆ ಜಾಗವನ್ನು ಅಲುಗಾಡಿಸವುದರಿಂದ ರಕ್ತಚಲನೆ ಹೆಚ್ಚಾಗಿ ವಿಷ ಬೇಗಹರಡುತದ್ದೆ.ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಬೆಕು. ೪.ಆದಷ್ಟು ಬೇಗ ವ್ಯಕ್ತಿಯನ್ನು ಆಸ್ಪತ್ರೆಗೆ ಧಾವಿಸ ಬೇಕು. ಅನೇಕ ಬಾರಿ ನಾವು ಇದನ್ನು ಮಾಡುವುದರ ಬದಲು ಬೇರೆ ಅವೈಜ್ಞಾನಿಕ ವಿಧಾನವನ್ನು ಅನುಸರಿಸಿ ಅವರ ಸಾವಿಗೆ ಕಾರಣವಾಗುತ್ತೆವೆ.

ಅವೈಜ್ಞಾನಿಕ ವಿಧಾನ(ಇದನ್ನು ಅನುಸರಿಸಬಾರದು)[ಬದಲಾಯಿಸಿ]

೧.ಕಚ್ಚಿದ ಹಾವನ್ನು ಸಾಯಿಸಲು ಪ್ರಯತ್ನಿಸುವುದು ಇದನ್ನು ಮಾಡುವಾಗ ಮತ್ತೆ ಕಚ್ಚಿಸಿಕೊಳ್ಳುವುದು ಇದರಿಂದ ರಕ್ತದೊತ್ತಡ ಹೆಚ್ಚಗಿ ವಿಷ ಬೇಗ ಮೈಯೆಲ್ಲ ಹರಡಿ ಅಲ್ಲೆ ಸಾವನ್ನಪ್ಪ್ಪುವರು. ೨.ಹಾವುಕಚ್ಚಿದ ವ್ಯಕ್ತಿಯನ್ನು ತಾಂತ್ರಿಕನ ಬಳಿ ಕರೆದೊಯ್ಯುವುದು. ೩.ಹಾವುಕಚಿದ ಜಾಗವನ್ನು ಕೊಯ್ದು ಅದನ್ನು ಹೀರಿ ರಕ್ತ ಹೊರತಗೆಯುವುದು ,ಇದನ್ನು ಮಾಡುವುದರಿಂದ ಯಾವುದೆ ಪ್ರಯೋಜನವಾಗುವುದಿಲ್ಲ ಏಕೆಂದರೆ ವಿಷದ ಅಣುಗಳು ಆಗಲೆ ರಕ್ತದಲ್ಲಿ ಸೇರಿಹೋಗಿರುತ್ತದೆ ಆ ಚಿಕ್ಕ ಅಣಗಳನ್ನು ಬಾಯಿಂದ ಹೊರತಗೆಯಲು ಅಸಾದ್ಯ. ೪.ಹಾವುಕಚ್ಚಿದ ಜಾಗವನ್ನು ನೀರು ಅಥವ ಸಾಬೂನಿನಲ್ಲಿ ತೊಳೆಯುವುದು. ೫.ಹಾವುಕಚ್ಚಿದ ಜಾಗದ ಹಿಂದೆ ಗಟ್ಟಿಯಾಗಿ ಬಟ್ಟೆಕಟ್ಟುವುದು ,ಹೀಗೆ ಮಾಡುವುದರಿಂದ ಕ್ಷಣಿಕ ರಕ್ತ ಚಲನೆಯನ್ನು ನಿಲ್ಲಿಸ ಬಹುದು ಆದರೆ ಒಮ್ಮೆ ವ್ಯಕ್ತಿ ಆಸ್ಪತ್ರೆ ತಲುಪಿದಾಗ ವೈದ್ಯರು ಆ ಘಂಟನ್ನು ಬಿಚ್ಚಿದಾಗ ಒಮ್ಮೆಲೆ ರಕ್ತಚಲನೆ ಆ ಜಾಗದಿಂದ ಹೆಚ್ಚಗಿ ವಿಷ ಇಡಿ ಮೈ ಹರಡಬಹುದು ಮತ್ತು ಕೆಲವೊಮ್ಮೆ ರಕ್ತ ಚಲನೆ ಆ ಭಾಗಕ್ಕೆ (ಬಟ್ಟೆಕಟ್ಟಿರುವ ಕೆಳಗಿನ ಭಾಗ) ಮಾತ್ರ ಸೀಮಿತವಾದ್ದರಿಂದ ಆ ಇಡಿ ಭಾಗ ವಿಷದಿಂದ ಕೊಳೆಯುತ್ತಾ ಹೋಗುತ್ತದೆ ಈ ಕಾರಣದಿಂದ ವ್ಯಕ್ತಿ ಆ ಭಾಗವನ್ನೆ ಕಳೆದುಕೊಳ್ಳಬೇಕಾಗುತ್ತದೆ. ಇವೆಲ್ಲವನ್ನು ಮಾಡಿ ವ್ಯರ್ಥಕಾಲ ಹರಣ ಮಾಡುವುದರ ಬದಲು ಆ ವ್ಯಕ್ತಿಗೆ ವೈಜ್ಞಾನಿಕ ಪ್ರಥಮ ಚಿಕಿತ್ಸೆಮಾಡಿ ಆಸ್ಪತ್ರೆಗೆ ದಾಕಲಿಸಬೇಕು.ಆಂಟಿವೆನಮ್ ಒಂದೇ ವ್ಯಕ್ತಿಯ ಪ್ರಾಣ ಉಳಿಸಬಲ್ಲದ್ದು.

ಆಂಟಿವೆನಮ್:[ಬದಲಾಯಿಸಿ]

ಹಾವಿನ ಆಂಟಿವೆನಮ್ ಇಮ್ಯುನೊಗ್ಲಾಬ್ಯುಲಿನ್ಗಳು (ಆಂಟಿವೆನಮ್ಗಳು) ಹಾವಿನ ಕಡಿತಕ್ಕೆ ಏಕೈಕ ನಿರ್ದಿಷ್ಟ ಚಿಕಿತ್ಸೆಯಾಗಿದೆ. ಹಾವಿನ ಕಡಿತದ ಎನ್ನ್ನ್ವೆನ್ನೋಮಿಂಗ್ ಪರಿಣಾಮಗಳನ್ನು ಆಂಟಿವೆನಮ್ಗಳು ತಡೆಗಟ್ಟುತ್ತವೆ ಅಥವಾ ರಿವರ್ಸ್ ಮಾಡಬಹುದು,ಮರಣ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡಲು ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತವೆ.ಭಾರತದಲ್ಲಿ ಪಾಲಿವೆಲೆಂಟ್ ಆಂಟಿವೆನಮ್ ಅತ್ಯಂತ ಪರಿಣಾಮಕಾರಿ, ಈ ಸಿದ್ಧತೆಗಳನ್ನು WHO ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ಯಾಕೇಜಿನಲ್ಲೂ ಇರುತ್ತದೆ. ಪ್ರಸ್ತುತ, ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವ ಪ್ರತಿಜನರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಆಂಟಿವೆನಮ್ ನ ತುರ್ತು ಅವಶ್ಯಕತೆ ಇದೆ, ಅದರಲ್ಲೂ ನಿರ್ದಿಷ್ಟವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬಹುಮುಖ್ಯವಾಗಿದೆ.

ಓದುಗರಾದ ನಾವು ಹಾವಿನ ಕಡಿತದ ಬಗ್ಗೆ ಹೇಗೆ ಸಾಮಾನ್ಯಜನರಲ್ಲಿ ಅರಿವನ್ನುಟ್ಟಿಸಬಹುದು[ಬದಲಾಯಿಸಿ]

ಹಾವುಮನೆಗೆ ಬಂದಾಗ ಸ್ಥಳೀಯ ಹಾವಿನ ರಕ್ಷಕನನ್ನು ಕರೆಯಬೇಕು.ಹಾವಿನ ಕಡಿತವನ್ನು ತಡೆಯುವ ಮೇಲಿನ ಶಿಫಾರಸುಗಳನ್ನು ಪ್ರತಿ ಹಳ್ಳಿಗಳಲ್ಲೂ ಹೆಚ್ಚು ಜನರು ಸೇರುವಲ್ಲಿ ಮಾತನಾಡಬಹುದು.ರಾಷ್ಟ್ರೀಯ ಅಥವಾ ಸ್ಥಳೀಯ ಬಳಕೆಗಾಗಿ ಮಾರ್ಗದರ್ಶನಗಳು, ತರಬೇತಿ ಮಾಡ್ಯೂಲ್, ಕೈಪಿಡಿಗಳು,ವಿಡಿಯೋಕ್ಲಿಪ್ಗಳು ಮತ್ತು ಪೋಸ್ಟರ್ಗಳನ್ನು ಆಸ್ಪತ್ರೆ ಮತ್ತು ಶಾಲಾ-ಕಾಲೇಜಿನ ಗೋಡೆಗಳ ಮೇಲೆ ಪ್ರದರ್ಶಿಸಬಹುದು. ಗ್ರಾಮದಮಟ್ಟದಲ್ಲಿ,ಬೀದಿನಾಟಕ ಮತ್ತು ಬೊಂಬೆ ಪ್ರದರ್ಶನಗಳನ್ನು, ಹಾವಿನ ಕಡಿತದ ಸನ್ನಿವೇಶಗಳು ಪ್ರದರ್ಷಿಸಿ ಯಶಸ್ವಿಯಾಗಿ ಅರಿವನ್ನುಟ್ಟಿಸಬಹುದು.ರೇಡಿಯೊ,ಎಫ್ಎಂ ಮತ್ತು ಟಿವಿಗಳಂತಹ ಮಾಧ್ಯಮವನ್ನು ಪ್ರಚಾರಕ್ಕಾಗಿ ಬಳಸಬಹುದು.ಹಾವಿನ ಬಗ್ಗೆ ಮಾಹಿತಿಯನ್ನು ಹೆಚ್ಚು ಜನರಿಗೆ ತಲುಪುವಂತೆ ಮಾಡಲು, ಸಾಮಾಜಿಕ ನೆಟ್ವರ್ಕಿಂಗ್ (ಯೂಟ್ಯೂಬ್) ಆಯುಧದಂತೆ ಉಪಯೋಗಿಸಬಹುದು.

ಹಾವಿನಿಂದ ನಮಗಾಗುವ ಉಪಯೋಗಗಳು.[ಬದಲಾಯಿಸಿ]

ಹಾವುಗಳು ಅತ್ಯಂತ ಬೆಲೆಬಾಳುವವುಗಳಾಗಿವೆ ಏಕೆಂದರೆ ಅವುಗಳು ದಂಶಕಗಳ(ಇಲಿ), ಮತ್ತು ಕೀಟಗಳ ಸಂಖ್ಯೆಯನ್ನು ನಿಯಂತ್ರಿಸುವುದರಲ್ಲಿ ಪರಿಣಾಮಕಾರಿಯಾಗಿದ್ದು, ಹಾನಿಕಾರಕ ರಾಸಾಯನಿಕ ಕೀಟನಾಶಕಗಳನ್ನು ಅವಲಂಬಿಸದೆ, ಪರಿಸರವನ್ನು ತಗ್ಗಿಸಬಹುದು ಮತ್ತು ಇತರ ಪ್ರಾಣಿ ಜಾತಿಗಳನ್ನು ಕಾಪಾಡುತ್ತದೆ. ಹಾವು ರೈತನ ಮಿತ್ರನಾಗಿ ತನ್ನ ಕಾರ್ಯ ನಿರ್ವಹಿಸುತ್ತದೆ,ಹೇಗೆಂದರೆ ಇಲಿಗಳು ರೈತ ಬೆಳೆದಿರುವ ಬಹುಪಾಲುಬೆಳೆಯನ್ನು ನಾಶಮಾಡುತ್ತವೆ,ಅದೇ ಒಂದೆರೆಡು ಹಾವುಗಳಿದ್ದರೆ ಅಂತಹ ನೂರಾರು ಇಲಿಗಳನ್ನು ತಿಂದಹಾಕುತ್ತದೆ.ಹಾವುಗಳು ಪ್ರತಿವರ್ಷ ಲಕ್ಷಾಂತರ ಜನರನ್ನು ಉಳಿಸಲು ಸಹಾಯ ಮಾಡುತ್ತವೆ, ಏಕೆಂದರೆ ಕ್ಯಾನ್ಸರ್ಗಳು, ಹೃದಯ ಮತ್ತು ಪಾರ್ಶ್ವವಾಯು ರೋಗಿಗಳು, ಪಾರ್ಕಿನ್ಸನ್ಗಳು ಮತ್ತು ಇನ್ನಿತರ ಅನೇಕ ಗಂಭೀರ ಆರೋಗ್ಯದ ಕಾಯಿಲೆಗಳಿಗೆ ಹಾವುಗಳ ವಿಷವನ್ನು ಬಳಸಿಕೊಳ್ಳಲಾಗುತ್ತದೆ.ಇನ್ನು ಮುಂದೆ ಹಾವನ್ನು ನೋಡಿದರೆ ಅದನ್ನು ಸಾಯಿಸುವುದ ಬೇಡ,ಬದಲಿಗೆ ಅದನ್ನು ಸಂರಕ್ಷಿಸೋಣ. [೧] [೨] [೩] [೪]

  1. Whitaker Z. 1990. Snakeman. Penguin Books Ltd. 192 pp. ISBN 0-14-014308-4.
  2. "Neglected tropical diseases: Snakebite". World Health Organization. Archived from the original on 30 September 2015. Retrieved 19 May 2015.
  3. "Snake antivenoms: Fact sheet N°337". World Health Organization. February 2015. Archived from the original on 18 April 2017. Retrieved 16 May 2017.
  4. Haji, R. "Venomous snakes and snake bites" (PDF). Zoocheck Canada. Archived from the original (PDF) on 25 April 2012. Retrieved 25 October 2013.