ಸದಸ್ಯ:SPOORTHI SHETTY/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search
ಆನೆ

ಬಿಳಿಕಲ್ಲು ರಂಗಸ್ವಾಮಿ ಬೆಟ್ಟ[ಬದಲಾಯಿಸಿ]

ಟ್ರೆಕ್ಕಿಂಗ್

ಬಿಳಿಕಲ್ಲು ರಂಗಸ್ವಾಮಿ ಬೆಟ್ಟ ರಾಮನಗರ ಜಿಲ್ಲೆಯ [[ಕ ನಕಪುರ]] ತಾಲೂಕಿನಲ್ಲಿದೆ. ಇದು ಕನಕಪುರದಿಂದ ಸುಮಾರು ೧೫ ಕಿಲೋಮೀಟರ್ ದೂರದಲ್ಲಿದೆ. ಬೆಟ್ಟದ ತುದಿಯವರೆಗೂ ರಸ್ತೆ ಇದ್ದರೂ ಕೊನೆಯ ನಾಲ್ಕು ಕಿಲೋಮೀಟರ್ ಮಣ್ಣು ರಸ್ತೆಯಾಗಿದೆ. ಬೆಟ್ಟದ ತುದಿಯಲ್ಲಿ ರಂಗಸ್ವಾಮಿಯ ದೇವಸ್ಥಾನವಿದ್ದು, ಇದಕ್ಕೆ ಪ್ರತಿ ಶನಿವಾರ ಮಾತ್ರ ಪೂಜೆ ನಡೆಯುತ್ತದೆ.

 ಬಿಳಿಕಲ್ಲುರಂಗ ಸ್ವಾಮಿ ಬೆಟ್ಟ ಭಾರತ ದೇಶದ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ೭೦ ಕಿ.ಮೀ ದಕ್ಷಿಣದಲ್ಲಿರುವ ಕನಕಪುರ ತಾಲೂಕಿನ ಹಾರೋಹಳ್ಳಿ ಗ್ರಾಮದ ೧೨.೫೫೩೭ N , ೭೭.೫೧೨೪ E ಎದುರಿಗಿರುವ ಒಂದು     ಬೆಟ್ಟವಾಗಿದೆ. ನಯನ ಮನೋಹರವಾಗಿರುವ ಈ ಬೆಟ್ಟ ಸಮುದ್ರ ಮಟ್ಟದಿಂದ ೩೭೮೦ ಅಡಿ ಎತ್ತರದಲ್ಲಿದೆ. ಪ್ರಕೃತಿ ರಮಣೀಯದತ್ತವಾಗಿರುವ ಈ ಬೆಟ್ಟವು ಅದರ ಮೇಲಿರುವ ರಂಗನಾಥ ಸ್ವಾಮಿಯ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.
 ಬೆಟ್ಟದ ಅಂಚಿನಲ್ಲಿ ದೊಡ್ಡ ಗಾತ್ರದ ಬೆಣಚುಕಲ್ಲಿನ ಕೆಳಗೆ ದೇವಸ್ಥಾನ ಇರುವ ಕಾರಣ  ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುವಂತಿದೆ . ಬಂಡೆಯ ತುದಿ ಬಿಳಿ ಬಣ್ಣದಿಂದ ಕೂಡಿರುವ ಕಾರಣದಿಂದ ಬಿಳಿಗಿರಿ ಎಂದು ಪ್ರಸಿದ್ದಿಯಾಗಿದೆ.
 ದೆವಸ್ಥಾನದ ಪುರೋಹಿತರು ಗುಡ್ಡದ ಮೇಲೆ ವಾಸಿಸುತ್ತಾರೆ. ಇವರ ಬಳಿ ಆನೆಯ ಕಪಾಲವಿರುವುದರಿಂದ ಮೊದಲ ಬಾರಿ ಬರುವ  ಪ್ರವಾಸಿಗರು ಅದನ್ನು ನೋಡಿ ಆಕರ್ಷಿತರಾಗುತ್ತಾರೆ.
 ಇಲ್ಲಿನ ನಿಸರ್ಗ ಸೌಂದರ್ಯ ಅದ್ವಿತೀಯ . ನೀಲಿ ಆಕಾಶ , ತೆಂಕಣದಿಂದ ಬೀಸುವ ಗಾಳಿ , ಸ್ವಚ್ಛಂದವಾಗಿ ಹಾರುವ ಹಕ್ಕಿಗಳು , ಮುಳುಗುವ ಸೂರ್ಯನ ದೃಶ್ಯ ಮನಸ್ಸಿಗೆ ಅತ್ಯಂತ ಮುದನೀಡುತ್ತದೆ . ಈ ಶಿಖರ ಮುಗಿಲನ್ನು  ಚುಂಬಿಸುವಂತೆ ಕಾಣುತ್ತದೆ . ಮಳೆಗಾಲದಲ್ಲಿ ಇಲ್ಲಿನ್ನ ಸೌಂದರ್ಯ ಮಾತಿಗೆ ನಿಲುಕದ್ದು. ರಂಗಸ್ವಾಮಿ ಬೆಟ್ಟ ಪ್ರಕೃತಿಯನ್ನು ಆನಂದಿಸುವವರಿಗೆ ಹಾಗೂ ನಿಸರ್ಗ ಪ್ರಿಯರಿಗೆ ಹೇಳಿಮಾಡಿಸಿದ ಜಾಗ . ಚಾರಣಿಗರಿಗೆ ಅದರಲ್ಲೂ ಸಾಹಸಿಗರಿಗಂತೂ ಅಚ್ಚುಮೆಚ್ಚಿನ ತಾಣ . ದೈನಂದಿನ ಕೆಲಸದಿಂದ ಬೇಸತ್ತವರಿಗೆ ಮತ್ತು ಅದರ ಒತ್ತಡದಿಂದ ಮಣಿದವರಿಗೆ , ಎಲ್ಲವನ್ನು ಮರೆತು ಒಂದು ದಿನ ಪ್ರಕೃತಿಯ ಮಡಿಲಲ್ಲಿ ಕಳೆಯಲು ಈ ಜಾಗ ಉತ್ತಮ.

ಇದು ಅರಣ್ಯ ಸಂರಕ್ಷಿತ ಪ್ರದೇಶ . ಈ ಜಾಗ ಪೂರ್ವ ಘಟ್ಟಗಳಿಗೆ ಸೇರಿದೆ ಹಾಗೂ ಪೊದರಿನಿಂದ ಕಂಗೊಳಿಸುತ್ತಿದೆ. ಆನೆಗಳು ಮತ್ತು ಕೆಲವು ಸಾಧನವಾಹಕ ಪ್ರಾಣಿಗಳು ಇಲ್ಲಿ ಸರ್ವೇಸಾಮಾನ್ಯ . ಸುತ್ತಮುತ್ತಲಿನ ಅರಣ್ಯ ಆನೆಗಳಿಗೆ ಮತ್ತು ಸ್ಥಾನಿಕ ಜೀವಿಗಳಿಗೆ ನೆರವಾಗಿದೆ . ಈ ಜಾಗದಲ್ಲಿ ಅರ್ಕಾವತಿ ಹಾಗೂ ಕಾವೇರಿ ನದಿ ಕೂಡುವುದರಿಂದ ಸ್ಥಳಿಯರು ಸಂಗಮವೆಂದು ಕರೆಯುವರು . ಪ್ರತಿವರ್ಷ ಜನವರಿ ತಿಂಗಳಲ್ಲಿ ೧೪ ನೇ ದಿನ ಜಾತ್ರೆಯೊಂದನ್ನು ಬೆಟ್ಟದ ಮೇಲೆ ದೇವರ ಸಾನಿಧ್ಯದಲ್ಲಿ ನಡೆಸಲಾಗುತ್ತದೆ . ಆ ಸಮಯದಲ್ಲಿ ಜನರು ವಿವಿಧ ಕಡೆಯಿಂದ ಬಂದು ಪಾಲ್ಗೊಳ್ಳುತ್ತಾರೆ . ಬೆಟ್ಟದ ಸಮೀಪದಲ್ಲಿರುವ ಕನಕಪುರದ ಕೋಟೆಯನ್ನು ಜಗದೇವರಾಯರು ನಿರ್ಮಿಸಿದ್ದಾರೆ . ಬೆಟ್ಟಕ್ಕೆ ಬಂದವರು ಇದ್ದನ್ನೂ ನೋಡಿಯೇ ಹೋಗುತ್ತಾರೆ .
ಬೆಟ್ಟದ ತುದಿಯಿಂದ ನಿಂತು ನೋಡುವವರಿಗೆ ಕನಕಪುರದ ಸಾಲು , ಬಾಣಂತಿಮಾರಿ ಬೆಟ್ಟ ಎಲ್ಲವೂ ನೀಲಾಜಾಲವಾಗಿ ಕಾಣಿಸುತ್ತದೆ.

ನೈಸರ್ಗಿಕ ಸಂತೋಷವನ್ನು ಅನುಭವಿಸಲು ಸುಕ್ತವಾದ ಸ್ಥಳ ಪ್ರಕ್ರುತಿ ನಿಸರ್ಗ ನಮಗು ಹಾಗೂ ನಮ್ಮ ಆತ್ಮಕ್ಕೆ ಸಂಪರ್ಕ ವದಗಿಸುತ್ತದೆ.ಈ‌ ಎಲ್ಲಾ ಸುಖವನ್ನು ಅನುಭವಿಸಲು ಈ ಬಿಳಿಗಿರಿ ರಂಗಸ್ವಾಮಿ ಬೆಟ್ಟ ಹೇಳಿ ಮಾಡಿಸಿದ ಜಾಗ

[೧]

[೨]


 1. https://en.wikipedia.org/wiki/Bilikal_Rangaswamy_Betta
 2. https://www.thrillophilia.com/tours/rangaswamy-betta-night-trek