ಸದಸ್ಯ:SHIVANNA T.K/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[ನಮ್ಮೂರಿನ ಬಗ್ಗೆ ಒಂದು ಚಿಕ್ಕ ಮಾಹಿತಿ] ‌‌‌ ‌‌ ‌‌ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿರುವ ನಮ್ಮೂರಿನ ಹೆಸರು ,ಜೆ. ತಿಮ್ಮನ ಹಳ್ಳಿ .ಈ ಗ್ರಾಮದಲ್ಲಿ ಸುಮಾರು ೨೫ ಮನೆಗಳಿವೆ. ಸುಮಾರು ೧೦೦ ರಿಂದ ೧೨೦ ಮಂದಿ ಜನರಿದ್ದಾರೆ. ಈ ಗ್ರಾಮದ ಜನರ ಉದ್ಯೋಗ ವ್ಯವಸಾಯ. ಇಲ್ಲಿನ ಜನರು ಬೆಳೆಯುವಂತಹ ಮುಖ್ಯ ಬೆಳೆಗಳು ಜೋಳ ,ರಾಗಿ,ಭತ್ತ,ಶುಂಠಿ,ಆಲೂಗಡ್ಡೆ.ಇಲ್ಲಿ ಪ್ರಸಿದ್ಧವಾದ ಗ್ರಾಮದೇವತೆ, ಭೈರವೇಶ್ವರ ಕಾಳೇಶ್ವರ ದೇವಾಲಯಗಳಿವೆ. ಈ ಗ್ರಾಮದ ಹಲವಾರು ಮಂದಿ ಉನ್ನತ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಗ್ರಾಮದ ಸುತ್ತಲೂ ಕೆರೆ,‌ಬಾವಿ,‌ಹೊಳೆ,ನದಿಗಳಿವೆ. ಒಟ್ಟಾರೆಯಗಿ ಹೇಳುವುದಾದರೆ ಸುತ್ತಲೂ ‌ನೀರಿದ್ದು ಮಧ್ಯ ಭೂಮಿ ಇದ್ದ ಹಾಗೆ ಈ ಗ್ರಾಮದ ಸುತ್ತಲೂ ಕೆರೆ,ನದಿ ,ಬಾವಿ ,ಹೊಳೆಗಳಿವೆ.ಈ ಗ್ರಾಮದ ಜನರು ಸುಂದರವಾದ ಜೀವನವನ್ನು ಸುಖಮಯವಾಗಿ ಮತ್ತು ಸಂತೋಷವಾಗಿ ನಡೆಸುತ್ತಿದ್ದಾರೆ.