ಸದಸ್ಯ:Rupeshm364/ನನ್ನ ಪ್ರಯೋಗಪುಟ/cheque truncation system

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿ.ಟಿ.ಎಸ್ (Cheque Truncation System).[ಬದಲಾಯಿಸಿ]

ಸಿ.ಟಿ.ಎಸ್ - ಪ್ರಕ್ರಿಯೆ

ಸಿ.ಟಿ.ಎಸ್ (Cheque Truncation System) ಅಥಾವ ಐ.ಸಿ.ಎಸ್ (Image-based Clearing System) ಎನ್ನುವುದು ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡಿರುವ ಒಂದು ವ್ಯವಸ್ಥೆ. ಈ ವ್ಯವಸ್ಥೆಯ ಉದ್ದೆಶವೆನೆಂದರೆ ಬ್ಯಾಂಕಿನ ಚೆಕ್ಗಳನ್ನು ವೇಗವಾಗಿ ತೆರವುಗೊಳಿಸುವುದಾಗಿದೆ. ಈ ವ್ಯವಸ್ಥೆಯ ಪ್ರಕಾರ ಪಾವತಿಸುವ ಬ್ಯಾಂಕ್ ಶಾಖೆಗೆ ಪ್ರಸ್ತುತಪಡಿಸುವ ಬ್ಯಾಂಕಿನ ಮೂಲಕ ಒಂದು ಹಂತದಲೆ ಡ್ರಾಯರ್ (ಚೆಕ್ ಅನ್ನು ಬರೆದವನ್ನು) ನೀಡಿದ ಭೌತಿಕ ಚೆಕ್ನ ಹರಿವನ್ನು ನಿಲ್ಲಿಸುವ ಪ್ರಕ್ರಿಯೆಯಾಗಿದು, ಇದರ ಸ್ಥಳದಲ್ಲಿ ಚೆಕ್ನ ಎಲೆಕ್ಟ್ರಾನಿಕ್ ಚಿತ್ರಣವನ್ನು ತೆರವುಗೊಳಿಸುವ ಶಾಖೆಯ ಮೂಲಕ ಪಾವತಿಸುವ ಬ್ಯಾಂಕ್ ಶಾಖೆಗೆ ಕಳುಹಿಸಲಾಗುತ್ತದೆ ಅಥಾವ ರವಾನೆ ಮಾಡಲಾಹಗುತ್ತದೆ. ಈ ಎಲೆಕ್ಟ್ರಾನಿಕ್ ಚಿತ್ರಣದ ಜೊತೆಗೆ ಚೆಕ್ಕಿಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿಗಳಾದ MICR ಬ್ಯಾಂಡ್, ಪ್ರಸ್ತುತಿ ದಿನಾಂಕ, ಹಾಗೂ ಪ್ರಸ್ತುತಪಡೀಸುವ ಬ್ಯಾಂಕಿನ ಹೆಸರು ಮತ್ತು ಅದರ ಶಾಖೆಯ ಮಾಹಿತಿಯನ್ನು ಕಳುಹಿಸಲಾಗುತ್ತದೆ. ಹೀಗಾಗಿ ಸಿ.ಟಿ.ಎಸ್ ಇಂದ ಭೌತಿಕ ಚೆಕ್ಗಳನ್ನು ಒಂದು ಬ್ಯಾಂಕ್ಕಿಂದ ಮತ್ತೊಂದು ಬ್ಯಾಂಕ್ಕಿನ ಶಾಖೆಗಳಿಗೆ ಕಳುಹಿಸವಂತಿಳ್ಳ, ಇದನ್ನು ಹೊರತುಪಡಿಸಿ ಕೆಲವು ಅಸಾಧಾರಣ ಸಂದರ್ಭಗಳಲ್ಲಿ ಭೌತಿಕ ಚೆಕ್ಗಳ ಸಾರಿಗೆ ಅನ್ವಯವಾಗುತದೆ. ಇದರಿಂದ ಭೌತಿಕ ಚೆಕ್ಕಿನ್ನ ಸಾರಿಗೆ ಸಂಬಂಧಿತ ವೆಚ್ಚ ಕಡಿತಗೊಳ್ಳುತ್ತದೆ, ಚೆಕ್ ಪಾವತಿಗೆ ಬೇಕಾಗಿರುವ ಸಮಯವು ಕಡಿಮೆಯಾಗುತ್ತದೆ ಹಾಗೂ ಚೆಕ್ ಪ್ರಕ್ರಿಯೆಯ ಸಂಪುರ್ಣ ಚಟುವಟಿಕೆಗೆ ಸೊಬಗು ತರುತ್ತದೆ.

ಇತಿಹಾಸ.[ಬದಲಾಯಿಸಿ]

ಭಾರತೀಯ ರಿಸರ್ವ ಬ್ಯಾಂಕ್ ಮೊದಲ ಬಾರಿಗೆ ಸಿಟಿಎಸ್ ಅನ್ನು ರಾಷ್ಟ್ರೀಯ ರಾಜಧಾನಿಯಾದ ನವದೆಹಲಿಯಲ್ಲಿ ಫೆಬ್ರುವರಿ ೧, ೨೦೦೮ ರಂದು ಹತ್ತು ಹೆಸರಾಂತ ಬ್ಯಾಂಕೊಗಳಿಗೆ ಜಾರಿಗೊಳಿಸಿತು ಮತ್ತು ೩೦ ಎಪ್ರಿಲ್ ೨೦೦೮ ರಂದು, ಎಲ್ಲಾ ನವದೆಹಲಿಯ ಬ್ಯಾಂಕಗಳಿಗೆ ಸಿ.ಟಿ.ಎಸ್ ಅನ್ನು ಅಳವಡಿಸಿಕೊಳ್ಳಲು ಕೊನೆಯ ದಿನ ಎಂದು ನಿಗದಿಪಡಿಸಲಾಯಿತು. ಇದರ ಯಶಸ್ಸುನ್ನು ಕಂಡು ಸೆಪ್ಟೆಂಬರ್ ೨೪, ೨೦೧೧ ರಂದು ಚೆನ್ನೈನಲ್ಲಿ ಪ್ರಾರಂಭಿಸಲಾಯಿತು. ಸಾಂಪ್ರದಾಯಿಕ MICR ಆಧಾರಿತ ಚೆಕ್ ಪ್ರಕ್ರಿಯೆಯಿಂದ ಸಿ.ಟಿ.ಎಸ್ ಗೆ ವಲಸೆ ಬಂದ ನಂತರ ಈ MICR ಆಧಾರಿತ ಚೆಕ್ ನವದೆಹಲಿಯಲ್ಲಿ ಮತ್ತು ಚೆನ್ನೈನಲ್ಲಿ ಸ್ಥಗಿತಹೊಂಡಿತು.

ನವದೆಹಲಿ ಮತ್ತು ಚೆನ್ನೈನಲ್ಲಿ ಕಂಡ ಯಶಸ್ಸನ್ನು ಹಾಗೂ ಅದರ ಅನುಭವವನ್ನು ಆಧರಿಸಿ ಗ್ರಾಹಕರಿಗೆ ಮತ್ತು ಬ್ಯಾಂಕುಗಳಿಗೆ ಸೇರ್ಪಡೆಗೊಳ್ಳುವ ಪ್ರಯೋಜನಗಳನ್ನು ಆಧರಿಸಿ, ದೇಶಾದ್ಯಂತ ಸಿ.ಟಿ.ಎಸ್ ಅನ್ನು ಕಾರ್ಯಾಚರಣೆಯಲ್ಲಿ ತರಲು ನಿರ್ಧರಿಸಲಾಯಿತು. ಆಗಸ್ಟ್ ೧, ೨೦೧೩ ರಿಂದ ಸಿ.ಟಿ.ಎಸ್-೨೦೧೦ ನಿಯಮಗಳನ್ನು ಮಾತ್ರ ತೆರವುಗೊಳಿಸಲ್ಲು ಒಪಿಕೊಳ್ಳಲಾಗುತ್ತದೆ. ಆದರೆ ೧೭ ಜುಲೈ ೨೦೧೩ ರಂದು ಭಾರತೀಯ ರಿಸರ್ವ್ ಬ್ಯಾಂಕ್ ೩೧ ಡಿಸೆಂಬರ್ ೨೦೧೩ ಕ್ಕೆ ಕೊನೆಯ ದಿನವೆಂದು ವಿಸ್ತರಿಸಿತು.

ಪ್ರಯೋಜನಗಳು.[ಬದಲಾಯಿಸಿ]

ಸಿ.ಟಿ.ಎಸ್ ಅನ್ನು ಅನುಷ್ಠಾನಗೊಳಿಸುವ ಮೂಲಕ ಬ್ಯಾಂಕ್ಗಳು ಬಹು ಪ್ರಯೋಜನಗಳನ್ನು ಪಡೆಯುತ್ತವೆ, ಅದರಲ್ಲಿ ವಿಶೆಷವಾದದು ಏನೆಂದರೆ ಚೆಕ್ ಪಾವತಿಸಿದ ಅದೇ ದಿನದಂದು ಇಲ್ಲ ಮರುದಿನದಂದು ಚೆಕ್ ತೆರವುಗೊಳ್ಳತ್ತದೆ. ಸಿ.ಟಿ.ಎಸ್ ನಿಂದ ಉತ್ತಮ ಸಮನ್ವಯ/ಮರುಪರಿಶೀಲನೆ ಹಾಗೂ ಉತ್ತಮ ಗ್ರಾಹಕರ ಸೇವೆ ನೀಡುತ್ತದೆ. ಅಲ್ಲದೆ, ಪ್ರಸರಣ ಮಾರ್ಗವನ್ನು ಭದ್ರಪಡಿಸುವುದರ ಮೂಲಕ ಇದು ಕಾರ್ಯಾಚರಣೆಯ ಅಪಾಯವನ್ನು ಕಡಿಮೆಮಾಡುತ್ತದೆ. ಕೇಂದ್ರೀಕೃತ ಇಮೇಜ್ ಆರ್ಕೈವಲ್ ಸಿಸ್ಟಮ್ಗಳು ಡೇಟಾ ಸಂಗ್ರಹಣೆ ಮತ್ತು ಮರುಪಡೆಯುವಿಕೆ ಸುಲಭ ಎಂದು ಖಚಿತಪಡಿಸುತ್ತವೆ. ಕೈಯಿಂದ ಮಾಡಿವ ಕೆಲಸಗಳು ಕಡಿಮೆಯಾಗಿವೆ ಅದರಿಂದ ಕೆಲಸದ ಸಮಯದಲ್ಲಾಗುವ ದೋಷಗಳು ಕಡಿಮೆಯಾಗಲು ಸಿ.ಟಿ.ಎಸ್ ಕಾರಣವಾಗುತ್ತದೆ. ರಿಯಲ್-ಟೈಮ್ ಟ್ರಾಕಿಂಗ್ ಮತ್ತು ಚೆಕ್ಗಳ ಗೋಚರತೆ, ಕಡಿಮೆ ವಂಚನೆಗಳಿಗೆ ಸಹಯವಾಗಿದೆ. ಈ ಪರಿಹಾರದಿಂದ ಬ್ಯಾಂಕಗಳು ಪಡೆಯುವ ಇತರೆ ಪ್ರಯೋಜನ ಈ ಕೆಳಗಿವೆ,

  • ಕಡಿಮೆ ಅವಧಿಯಲ್ಲಿ ಚೆಕ್ ತೆರವುಗೊಳ್ಳುತ್ತದೆ.
  • ಉನ್ನತ ಪರಿಶೀಲನೆ ಮತ್ತು ಸಾಮರಸ್ಯ ಪ್ರಕ್ರಿಯೆ.
  • ನ್ಯಾಯವ್ಯಾಪ್ತಿಗೆ ಭೌಗೋಳಿಕ ನಿರ್ಬಂಧಗಳಿಲ್ಲ.
  • ಬ್ಯಾಂಕಗಳು ಮತ್ತು ಗ್ರಾಹಕರಿಗೆ ಒಂದೇ ರೀತಿಯ ಕಾರ್ಯಾಚರಣೆ ಸಾಮರ್ಥ್ಯ.
  • ಕಾರ್ಯಾಚರಣೆಯ ಮತ್ತು ಕಾಗದದ ತೀರುವೆಗೆ ಸಂಬಂಧಿಸಿದ ಅಪಾಯಗಳು ಕಡಿತವಾಗುತ್ತದೆ.
  • ಗ್ರಿಡ್ನಲ್ಲಿ ಇರುವ ಬ್ಯಾಂಕಿನ ಮೇಲೆ ಸಂಗ್ರಹಿಸಲಾದ ಚೆಕ್ ಸಂಗ್ರಹಣೆಗಾಗಿ ಸಂಗ್ರಹಣೆ ಶುಲ್ಕಗಳು ಇಲ್ಲ.

ಸಿ.ಟಿ.ಎಸ್ ಸಮಯವನ್ನು ಕಡಿಮೆಗೊಳಿಸುವ ಮೂಲಕ ಗ್ರಾಹಕರಿಗೆ ತೃಪ್ತಿಯನ್ನು ಹೆಚ್ಚಿಸಲಾಗಿದೆ ಹಾಗೂ ಉತ್ತಮ ಪರಿಶೀಲನೆಯಿಂದ ವಂಚನೆ ತಡೆಗಟ್ಟವಿಕೆ ನೀಡುತ್ತದೆ.

ಉಲ್ಲೇಖಗಳು[ಬದಲಾಯಿಸಿ]

[೧]

  1. https://rbi.org.in/Scripts/FAQView.aspx?Id=63