ಸದಸ್ಯ:Ruben joushuva

ವಿಕಿಪೀಡಿಯ ಇಂದ
Jump to navigation Jump to search
ರೂಬೆನ್
Ruben joushuva.jpg
ಜನನ
೨೯/೧೨/೧೯೯೬
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಬಿ.ಕಾ೦


ಪರಿಚಯ[ಬದಲಾಯಿಸಿ]

ಮಾನವನಿಗೆ ಹುಟ್ಟು ಸಾವುಗಳು ಸಹಜ.ಆದರೆ ಹುಟ್ಟಿದ ಮೇಲೆ ಅವನ ಜೀವನ ಸೊಗಸಾಗಿರಬೇಕು ಎಲ್ಲರೂ ಮೆಚ್ಚುವಂತಿರಬೇಕು.ಆಗ ಹುಟ್ಟಿದ್ದು ಸಾರ್ಥಕ. ನನ್ನ ಹೆಸರು ರೂಬೆನ್.ನಾನು '''ಕ್ರೈಸ್ಟ್ ವಿಶ್ವವಿದ್ಯಾಲಯ'''ದಲ್ಲಿ ಮೊದಲನೇ ವಷ‍ದ ಬಿ.ಕಾಂ,ವಿದ್ಯಾರ್ಥಿ.ನನ್ನ ತಂದೆಯ ಹೆಸರು ಚಿನ್ನರಾಜ ಜೋಶುವ,ತಾಯಿ ಸುಮತಿ,ಇವರ ಮುದ್ದಿನ ಮಗನಾಗಿ ದಿನಾಂಕ ೨೯-೧೨-೧೯೯೬ರಂದು ಜನಿಸಿದೆ.ನನಗೆ ಒಬ್ಬ ಅಕ್ಕ,ಅವರ ಹೆಸರು ರೂಬಿ,ಪದವಿಧರೆ. ನನ್ನ ತಂದೆ ಖಾಸಗಿ ಕಂಪನಿ ಒಂದರಲ್ಲಿ ಟೆಂಪೋ ಚಾಲಕರು.ತಾಯಿ ಗೃಹಿಣಿ.ತಂದೆ ತಾಯಿಗಳು ಸುಸಂಸ್ಕೃತರು,ಬಾಲ್ಯದಲ್ಲಿ ನಾನು ತುಂಬಾ ತುಂಟನಾಗಿದ್ದೆ.ಆದ್ದರಿಂದ ತಂದೆತಾಯಿಗಳಿಂದ ನಾನು ಬಹಳ ಸಾರಿ ಶಿಕ್ಷೆಗೆ ಒಳಗಾಗಿದ್ದಂತು ಮರೆಯಲಾಗದು.


ವಿದ್ಯಾಭ್ಯಾಸ[ಬದಲಾಯಿಸಿ]

ನಾನು ಪ್ರಾಥಮಿಕ ಶಾಲೆಯನ್ನು ಬೆಂಗಳೂರಿನ ಶ್ರೀನಿವಾಸ ನಗರ ಇಟ್ಟುಮಡುಗುವಿನಲ್ಲಿರುವ '''ವೆಬ್ ಸ್ಟರ್ಸ್ ಪ್ರೌಢಶಾಲೆ'''ಯಲ್ಲಿ ಮುಗಿಸಿದೆ.ಆಗ ನನಗೆ ತುಂಬಾ ಜನ ಸ್ನೇಹಿತರು ನನ್ನ ನೆಚ್ಚಿನ ತರಗತಿ ಶಿಕ್ಷಕರೊಂದಿಗೆ ನನ್ನ ಒಂದು ಗ್ರೂಪ್ ಫೋಟೊ ಈಗಲೂ ನನ್ನ ಬಳಿ ಇದೆ.ನಾನು ಹತ್ತನೇ ತರಗತಿಯನ್ನು ಮುಗಿಸಿ ನನ್ನ ಸ್ನೇಹಿತರ ಇಚ್ಚೆಯಂತೆ ಡಿಪ್ಲಮೋ ಸೇರಿಕೊಂಡೆ.ಆದರೆ ಸರಿಯಾಗಿ ಕ್ಲಾಸಿಗೆ ಹೋಗದ ಕಾರಣ ಪ್ರಥಮ ವರ್ಷದಲ್ಲಿ ಫೆಲಾದೆ.ಇದರಿಂದ ಬೇಸರಗೊಂಡು,ತಂದೆತಾಯಿಯರ ಮಾತಿನಂತೆ ಪಿಯುಸಿ ಕಾಮರ್ಸ್ ಸೇರಿದೆ.ಚೆನ್ನಾಗಿ ಓದಿ ಉತ್ತಮ ಅಂಕಗಳಿಂದ ಪಾಸಾದೆ.ತಂದೆತಾಯಿಗಳ ಮಾತನ್ನು ಕೇಳದೆ ಒಂದು ವರ್ಷವನ್ನು ಹಾಳುಮಾಡಿಕೊಂಡಿದ್ದು ನನಗೆ ತುಂಬಲಾರದ ನೋವನ್ನುಂಟು ಮಾಡಿದೆ.ಆದರೆ ಈಗ ಓಳ್ಳೆಯ ಕಾಲೇಜಿನಲ್ಲಿ ನನಗೆ ಸೀಟು ಸಿಕ್ಕಿದ್ದು ಅದನ್ನೆಲ್ಲಾ ಮರೆಯಿಸಿದೆ.

ಹವ್ಯಾಸಗಳು[ಬದಲಾಯಿಸಿ]

ನನಗೆ ಪುಸ್ತಕ ಓದುವ ಹವ್ಯಾಸ ಇದೆ.ಕನ್ನಡದ ಕತೆಗಳೆಂದರೆ ನನಗೆ ತುಂಬಾ ಇಷ್ಟ,ಅವುಗಳಲ್ಲಿ "ಅರೇಬಿಯನ್ ನೈಟ್ಸ್ ಕಥೆಗಳು" "ತೆನಾಲಿರಾಮಕೃಷ್ಣ ಕಥೆಗಳು".ಕೆಲವೊಂದು ರಹಸ್ಯಗಳನ್ನು ತಿಳಿಸುವ ಕಥೆಗಳಿಂದ ಓದುವ ಆಸಕ್ತಿಯನ್ನು ಬೆಳೆಸಿಕೊಂಡೆ.ಮತ್ತು ಜ್ಙಾನವನ್ನು ಬೆಳೆಸಿಕೊಂಡೆ.ಓದುವ ಹವ್ಯಾಸ ಹೆಚ್ಚಾಯಿತು.

ಮು೦ದಿನ ಜೀವನ[ಬದಲಾಯಿಸಿ]

ಈಗ ನಾನು ಓದುತ್ತಿರುವ ಕಾಲೇಜು ತುಂಬಾ ಸೊಗಸಾಗಿದೆ.ಉತ್ತಮ ಕ್ಯಾಂಪಸ್,ಓಳ್ಳೆಯ ವಾತಾವರಣ,ಉತ್ತಮ ಪ್ರಾಧ್ಯಾಪಕರು,ಉತ್ತಮವಾದ ಕಟ್ಟುನಿಟ್ಟಿನ ವ್ಯವಸ್ಥೆ,ಪರೀಕ್ಷೆ ವ್ಯವಸ್ಥೆ ಕೂಡಾ ತುಂಬಾ ಆಸಕ್ತಿದಾಯಕವಾಗಿದೆ.ಇಂತಹ ಕಾಲೇಜಿನಲ್ಲಿ ನನಗೆ ಸೀಟು ಸಿಕ್ಕಿದ್ದು ನನ್ನ ಅದೃಷ್ಟ.ಏಕೆಂದರೆ ನಾನು ಮುಂದೆ ಎಂ.ಬಿ.ಎ ಓದಬೇಕೆಂದು ನನ್ನ ಹಂಬಲ.ಅದಕ್ಕೆ ಪೂರಕವಾದ ಶಿಕ್ಷಣ ಈಗ ನನಗೆ ಕ್ರೈಸ್ಟ್ ಕಾಲೇಜಿನಲ್ಲಿ ದೊರೆಯುತ್ತಿರುವುದು ನನ್ನ ಅದೃಷ್ಟವೆಂದೇ ಹೇಳಬಹುದು.

ಆಶಯ[ಬದಲಾಯಿಸಿ]

ಜೀವನದಲ್ಲಿ ಸಾಧನೆ ಮುಖ್ಯ.ಆದರೆ ಸಾಧಿಸುವ ಛಲ ನಮ್ಮಲ್ಲಿರಬೇಕು,ಅಂದಾಗ ಮಾತ್ರ ನಾವು ನಮ್ಮ ಗುರಿಯನ್ನು ಮುಟ್ಟಬಹುದು.ನನಗೆ ದೊರೆಯುತ್ತಿರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡು ಸಾಧಿಸುವ ನನ್ನ ಪ್ರಯತ್ನದಲ್ಲಿ ಗುರುಹಿರಿಯರ ಮತ್ತು ದೇವರ ಕೃಪೆ ಆಶೀವಾದವಿರಲಿ ಎಂಬುದೇ ನನ್ನ ಪ್ರಾರ್ಥನೆ.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ: