ಸದಸ್ಯ:Royal pais/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರೆಡಿಟ್ ಪ್ರೊವೈಡರ್(ಸಾಲ ವಿತರಕರು) ಗ್ರಾಹಕರ ಖಾತೆಯನ್ನು ಅನುಮೋದಿಸಿದ ನಂತರವಷ್ಟೇ ಈ ಕ್ರೆಡಿಟ್ ಕಾರ್ಡ್‌ಗಳನ್ನು ಬ್ಯಾಂಕ್, ಕ್ರೆಡಿಟ್ ಯೂನಿಯನ್ ಕ್ರೆಡಿಟ್ ಕಾರ್ಡ್ ಜಾರಿಗೊಳಿಸುವ ವಿಭಾಗದ ಅಧಿಕಾರಿಗಳು ನೀಡುತ್ತಾರೆ ನಂತರದಲ್ಲಿ ವ್ಯಾಪಾರಿಗಳು ಈ ಕಾರ್ಡನ್ನು ಸ್ವೀಕರಿಸುವಂತಿದ್ದರೆ ಈ ಕಾರ್ಡ್ ಹೊಂದಿರುವವರು ಅವರ ಬಳಿಯಿಂದ ತಮಗೆ ಬೇಕಾಗುವ ವಸ್ತುಗಳನ್ನು ಖರೀದಿಸಬಹುದಾಗಿದೆ. ವ್ಯಾಪಾರಿಗಳು ಆಗಾಗ ತಾವು ಯಾವೆಲ್ಲಾ ಸ್ವೀಕೃತಿ ಗುರುತುಗಳಿರುವ ಕಾರ್ಡ್‌ಗಳನ್ನು - ಸಾಮಾನ್ಯವಾಗಿ ಕೆಲವೊಂದು ಲೋಗೋಗಳಿಂದ ರಚಿಸಿರುವ ಕಾರ್ಡ್‌ಗಳು - ಅಥವಾ ಇದರ ಬಗ್ಗೆ ಬಾಯ್ಮಾತಿನ ಮೂಲಕ ತಿಳಿದುಕೊಂಡು ಸ್ವೀಕರಿಸುತ್ತೇವೆಂಬುದರ ಬಗ್ಗೆ ಜಾಹೀರಾತು ನೀಡುತ್ತಾರೆ, ಅಂದರೆ ಕ್ರೆಡಿಟ್ ಕಾರ್ಡ್‌ನಲ್ಲಿರುವಂಟೆ “ ಕ್ರೆಡಿಟ್ ಕಾರ್ಡ್‌ಗಳು ಉತ್ತಮವಾಗಿವೆ” (ಇದರ ಉದ್ದೇಶಿತ ಅರ್ಥ “ಪ್ರಮುಖ ಬ್ರಾಂಡ್‌ಗಳು”) ಮೊದಲಿಗೆ ತಿಳಿದುಕೊಳ್ಳುತ್ತಾರೆ. “ನಾವು ಈ ಕಾರ್ಡ್(ಎಕ್ಸ್, ವೈ, ಝೆಡ್ ಬ್ರಾಂಡ್‌ನ ಕಾರ್ಡ್) ಗಳನ್ನು ” ಅಥವಾ “ ನಾವು ಕ್ರೆಡಿಟ್ ಕಾರ್ಡ್‌ಗಳನ್ನು ತೆಗೆದುಕೊಳ್ಳುವುದಿಲ್ಲ” ಎಂದೂ ಕೂಡ ಜಾಹೀರಾತು ನೀಡುತ್ತಾರೆ.

ಯಾವಾಗ ಗ್ರಾಹಕರು ಖರೀದಿಯನ್ನು ಮಾಡುತ್ತಾರೆಯೋ, ಆಗ ಈ ಕ್ರೆಡಿಟ್ ಕಾರ್ಡ್ ಬಳಕೆದಾರರು ಕಾರ್ಡ್ ನೀಡಿದವರಿಗೆ ಹಣ ಪಾವತಿಸಲು ಒಪ್ಪಿಗೆ ನೀಡುತ್ತಾರೆ. ಕಾರ್ಡ್ ಹೊಂದಿರುವವರು ಕಾರ್ಡ್‌ನ ಮಾಹಿತಿಯನ್ನು ಹೊಂದಿರುವ ರಶೀದಿಗಳಿಗೆ ಸಹಿ ಹಾಕುವ ಮೂಲಕ ಹಣ ಪಾವತಿಸಲು ತನ್ನ ಒಪ್ಪಿಗೆಯಿದೆ ಎಂಬುದನ್ನು ಸೂಚಿಸುತ್ತಾರಲ್ಲದೇ, ಪಾವತಿಸಬೇಕಾಗಿರುವ ಹಣದ ಮೊತ್ತವನ್ನು ಸೂಚಿಸುತ್ತಾರೆ ಅಥವಾ ತನ್ನ ಪರ್ಸನಲ್ ಐಡೆಂಟಿಫಿಕೇಶನ್ ನಂಬರ್(ವ್ಯಕ್ತಿಯ ಗುರುತಿನ ಸಂಖ್ಯೆ) ಪಿನ್ ನಂಬರನ್ನು ದಾಖಲಿಸುತ್ತಾರೆ. ಹಾಗೆಯೇ, ಅನೇಕ ವ್ಯಾಪಾರಿಗಳು ಕಾರ್ಡ್ ನಾಟ್ ಪ್ರೆಸೆಂಟ್ ಟ್ರಾನ್ಸಾಕ್ಷನ್ (ವ್ಯವಹಾರದಲ್ಲಿ ಈಗ ಕಾರ್ಡ್ ಬಳಕೆ ಇಲ್ಲ) (ಸಿ ಎನ್ ಪಿ) ಎಂದು ಕರೆಯಲಾಗುವ ವ್ಯವಸ್ಥೆ ಎಂಬುದನ್ನು ಪರಿಗಣಿಸಿ ಕೂಡ ಕೆಲವೊಮ್ಮೆ ಅಧಿಕೃತವಾಗಿ ಬಾಯ್ಮಾತಿನ ಮೂಲಕ ಇಲ್ಲವೇ ದೂರವಾಣಿ ಮತ್ತು ಅಂತರ್ಜಾಲ (ಇಂಟರನೆಟ್)ದ ಮೂಲಕ ಅಧಿಕೃತವಾಗಿ ಎಲೆಕ್ಟ್ರಾನಿಕ್ ಮಾಧ್ಯಮ ಬಳಸಿಕೊಂಡು ತಮ್ಮ ವ್ಯವಹಾರ ವ್ಯವಸ್ಥೆಯನ್ನು ತಿಳಿಸುತ್ತಾರೆ.

ಈಗ ಎಲೆಕ್ಟ್ರಾನಿಕ್ ಪರಿಶೀಲನಾ ವ್ಯವಸ್ಥೆಯ ಸಹಾಯದಿಂದ ವ್ಯಾಪಾರಿಗಳು ಕೆಲವೇ ಕ್ಷಣಗಳಲ್ಲಿ ಕ್ರೆಡಿಟ್ ಕಾರ್ಡ್ ಸೂಕ್ತವಾಗಿದೆಯೇ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರ ಖಾತೆಯಲ್ಲಿ ಖರೀದಿ ಪ್ರಮಾಣಕ್ಕಾಗುವ ಸಾಕಷ್ಟು ಹಣಕಾಸು ಇದೆಯೇ ಎಂಬುದನ್ನು ಪತ್ತೆಹಚ್ಚಲು ಅನುಕೂಲ ಕಲ್ಪಿಸುತ್ತದಲ್ಲದೇ, ಗ್ರಾಹಕರು ಸಾಮಾನುಗಳನ್ನು ಖರೀದಿಸುವ ಸಂದರ್ಭದಲ್ಲಿಯೇ ಅದನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ವ್ಯಾಪಾರಿಯು ತಾನು ಹಣಕಾಸು ಪಡೆಯುವ ಬ್ಯಾಂಕನ್ನು ಸಂಪರ್ಕಿಸುವ ಮೂಲಕ, ಕ್ರೆಡಿಟ್ ಕಾರ್ಡ್ ಪಾವತಿಯ ಅಂತಿಮ ಹಂತವನ್ನು ಅಥವಾ ಪಾಯಿಂಟ್ ಆಫ್ ಸೇಲ್/ಮಾರಾಟದ ಅಂಶದ ವ್ಯವಸ್ಥೆ (ಪಿ ಒ ಎಸ್)ಯನ್ನು ಬಳಸಿಕೊಂಡು ಈ ಪರಿಶೀಲನೆಯನ್ನು ನಡೆಸಬಹುದಾಗಿದೆ.

ಈ ಕಾರ್ಡ್ನಿಂದ ಅದರಲ್ಲಿರುವ ಕಾಂತೀಯ ಪಟ್ಟಿ/ಮ್ಯಾಗ್ನೇಟಿಕ್ ಸ್ಟ್ರೈಪ್ ಯಿಂದ ಅಥವಾ ಕಾರ್ಡ್ನಲ್ಲಿರುವ ಚಿಪ್ ನಿಂದ ಮಾಹಿತಿಯನ್ನು ಪಡೆಯಬಹುದಾಗಿದ್ದು, ಯುನೈಟೆಡ್ ಕಿಂಗ್ಡಮ್ ಮತ್ತು ಐರ್ಲೆಂಡ್‌ನಲ್ಲಿ ಈ ಚಿಪ್ ಮತ್ತು ಪಿನ್ ಎನ್ನಲಾಗುವ ಎರಡನೆಯ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು ಅದನ್ನು ಇ ಎಮ್ ವಿ ಕಾರ್ಡ್ ಆಗಿ ಬಳಸಲಾಗುತ್ತದೆ.

ಕಾರ್ಡ್ ನಾಟ್ ಪ್ರೆಸೆಂಟ್ ಟ್ರಾನ್ಸಾಕ್ಷನ್ ವ್ಯವಸ್ಥೆಯಲ್ಲಿ ಕಾರ್ಡನ್ನು ತೋರಿಸಲಾಗುವುದಿಲ್ಲ (ಉದಾ, ಇ –ಕಾಮರ್ಸ್, ಮೈಲ್ ಆರ್ಡರ್, ಮತ್ತು ಟೆಲಿಫೋನ್ ಸೇಲ್ಸ್ನಂತಹ ಸಂದರ್ಭದಲ್ಲಿ) ವ್ಯಾಪಾರಿಗಳು ಪೂರಕವಾಗಿ ಗ್ರಾಹಕರು ಕಾರ್ಡನ್ನು ಭೌತಿಕ ರೂಪದಲ್ಲಿ ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಾರೆ ಹಾಗೆಯೇ ಅವರು ಅಧಿಕೃತ ಗ್ರಾಹಕರೆಂಬುದನ್ನು ಖಚಿತಗೊಳಿಸುವುದಕ್ಕಾಗಿ, ಕೆಲವೊಂದು ಪೂರಕ ಮಾಹಿತಿಗಳಾದ ಕಾರ್ಡ್‌ನ ಹಿಂಬದಿಯಲ್ಲಿ ಮುದ್ರಿತಗೊಂಡಿರುವ ಸೆಕ್ಯೂರಿಟಿ ಕೋಡ್, ಅವಧಿ ಮುಗಿಯುವ ದಿನಾಂಕ ಮತ್ತು ಬಿಲ್ಲಿಂಗ್ ವಿಳಾಸ ಇತ್ಯಾದಿಯನ್ನು ಪಡೆಯುತ್ತಾರೆ.


ಪ್ರತಿ ತಿಂಗಳೂ ಕೂಡ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅವರು ಕಾರ್ಡಿನಿಂದ ಖರೀದಿಸಿದ ಮೊತ್ತದ ಬಗ್ಗೆ, ಯಾವುದೇ ಹೆಚ್ಚುವರಿ ಶುಲ್ಕ, ಮತ್ತು ಅವರು ಹೊಂದಿರುವ ಬಾಕಿ ಮೊತ್ತದ ಬಗ್ಗೆ ಒಂದು ಲೆಕ್ಕಪಟ್ಟಿಯನ್ನು ಕಳುಹಿಸಲಾಗುತ್ತದೆ. ಈ ಲೆಕ್ಕಪಟ್ಟಿಯನ್ನು ಸ್ವೀಕರಿಸಿದ ನಂತರ ಕಾರ್ಡ್ ಹೊಂದಿರುವ ಗ್ರಾಹಕರು ಅವನು ಅಥವಾ ಅವಳು ಶುಲ್ಕದಲ್ಲಿನ ಅಸಮರ್ಪಕತೆಯ ಬಗ್ಗೆ ಸಮಸ್ಯೆಗಳಿದ್ದಲ್ಲಿ ಚರ್ಚಿಸಬಹುದಾಗಿದೆ.(ಅನಧಿಕೃತ ಕ್ರೆಡಿಟ್ ಕಾರ್ಡ್ನ ಬಳಕೆಗೆ ಕಾರ್ಡ್ ಹೊಂದಿರುವವರು $೫೦ ನಷ್ಟು ದಂಡ ತೆರಲರ್ಹರಾಗುತ್ತಾರೆ ಮತ್ತು ಅಮೆರಿಕಾದ ನಿರ್ಬಂಧಗಳ ಮಾಹಿತಿಗಾಗಿ ಫೇರ್ ಕ್ರೆಡಿಟ್ ಬಿಲ್ಲಿಂಗ್ ಆ‍ಯ್‌ಕ್ಟ್ ಅನ್ನು ನೋಡಿರಿ.15 U.S.C. § 1643) ಇಲ್ಲದಿದ್ದಲ್ಲಿ, ಕಾರ್ಡ್ ಹೋಲ್ಡರ್ ನಿಗದಿತ ದಿನಾಂಕಕ್ಕೆ ನಿಗದಿಗೊಳಿಸಿದ ಬಿಲ್ಲಿನ ಕನಿಷ್ಠ ಮೊತ್ತವನ್ನು ಪಾವತಿಸಬೇಕು ಅಥವಾ ಬಾಕಿಯಿರುವ ಸಂಪೂರ್ಣ ಮೊತ್ತದವರೆಗೆ ಹೆಚ್ಚಿನ ಮೊತ್ತವನ್ನು ಪಾವತಿಸುವ ಆಯ್ಕೆಯನ್ನು ತೆಗೆದುಕೊಳ್ಳಬೇಕು. ಸಾಲ ನೀಡುವವರು ಒಂದೊಮ್ಮೆ ಸಂಪೂರ್ಣ ಬಾಕಿ ಮೊತ್ತವನ್ನು ಪಾವತಿಸದಿದ್ದರೆ ಅದಕ್ಕೆ ಬಡ್ಡಿ ಯನ್ನು ವಿಧಿಸುತ್ತಾರೆ (ವಿಶಿಷ್ಟವಾಗಿ ಸಾಲದ ಇತರ ರೂಪಗಳಿಗಿಂತ ಭಿನ್ನವಾಗಿ ಇಲ್ಲಿ ಹೆಚ್ಚಿನ ಪ್ರಮಾಣದ ಬಡ್ಡಿಯನ್ನು ವಿಧಿಸುತ್ತಾರೆ) ಇದಕ್ಕೆ ಪೂರಕವಾಗಿ, ಕ್ರೆಡಿಟ್ ಕಾರ್ಡ್ ಹೊಂದಿದವರು ನಿಗದಿತ ದಿನಾಂಕದಂದು ಕನಿಷ್ಟ ಪ್ರಮಾಣದ ಮೊತ್ತವನ್ನು ಭರಿಸಲು ವಿಫಲವಾದಲ್ಲಿ, ಸಾಲ ನೀಡಿದವರು ಬಳಕೆದಾರರ ಮೇಲೆ “ಲೇಟ್ ಫೀ(ವಿಳಂಬ ಶುಲ್ಕ) ” ಮತ್ತು/ಅಥವಾ ಇತರ ದಂಡಗಳನ್ನು ವಿಧಿಸಬಹುದು. ಇದನ್ನು ಕಡಿಮೆಗೊಳಿಸುವುದಕ್ಕಾಗಿ, ಕೆಲವೊಂದು ಹಣಕಾಸು ಸಂಸ್ಥೆಗಳು ಅಟೋಮ್ಯಾಟಿಕ್ ಹಣಪಾವತಿ ವ್ಯವಸ್ಥೆಯನ್ನು ಏರ್ಪಾಡು ಮಾಡುತ್ತವೆ, ಇದರಲ್ಲಿ ಗ್ರಾಹಕರ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತ ಪಾವತಿಯನ್ನು (ಅಟೋಮ್ಯಾಟಿಕ್ ಪೇಮೆಂಟ್) ಕಳೆದುಕೊಳ್ಳುವ ವ್ಯವಸ್ಥೆ ಮಾಡಿಕೊಂಡಿವೆ. ಕಾರ್ಡ್ ಹೊಂದಿರುವವರು ತನ್ನಲ್ಲಿ ಸಾಕಷ್ಟು ಹಣಕಾಸು ನಿಧಿಗಳನ್ನು ಹೊಂದಿರುವವರೆಗೆ ಇಂತಹ ದಂಡಗಳನ್ನು ತಪ್ಪಿಸಬಹುದಾಗಿದೆ.