ಸದಸ್ಯ:Roshnidsilva/sandbox3

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂಚಲಾ ಶ್ರೀಕಂಠಯ್ಯ[ಬದಲಾಯಿಸಿ]

ಎಂ.ಆರ್. ನಾಗಪ್ಪ ಹಾಗೂ ಸುಬ್ಬಲಕ್ಷ್ಮಮ್ಮ ದಂಪತಿಗೆ ಮೈಸೂರಿನಲ್ಲಿ ೧೯೪೭ರ ಜುಲೈ೬ರಂದು ಜನಿಸಿದ ಚಂಚಲಾ ಚಿಕ್ಕಂದಿನಿಂದಲೂ ಸಾಹಿತ್ಯ, ಸಂಗೀತಗಳ ಕಡೆಗೆ ಒಲವು ಬೆಳೆಸಿಕೊಂಡವರು.

ವಿಧ್ಯಾರ್ಹತೆ[ಬದಲಾಯಿಸಿ]

ಮನಶಾಸ್ತ್ರದಲ್ಲಿ ಪದವಿ ಮತ್ತು ಪತ್ರಿಕೊದ್ಯಮದಲ್ಲಿ ಡಿಪ್ಲೋಮ ಮಾಡಿರುವರು.

ಜೀವನ[ಬದಲಾಯಿಸಿ]

ಮಂಗಳೂರಿನ ಸುರತ್ಕಲ್ ನಲ್ಲಿರುವ ಪ್ರಾದೇಶಿಕ ತಾಂತ್ರಿಕ ಮಹಾವಿಧ್ಯಾಲಯದಲ್ಲಿ ಸಿವಿಲ್ ವಿಭಾಗದ ಹೆಚ್.ಆರ್.ಶ್ರೀಕಂಠಯ್ಯನವರನ್ನು ವಿವಾಹವಾದರು. ಸುರತ್ಕಲ್ ನ ಪರಿಸರ ಅಲ್ಲಿನ ಸಾಹಿತ್ಯ ಸ್ನೆಹಿತರು, ಹಸಿರು ತುಂಬಿದ ಪ್ರದೇಶಗಳು,ಚಂಚಲಾ ರವರ ಸಾಹಿತ್ಯಕ್ಕೆ ಪ್ರೇರಣೆಯಾಯಿತು. ಇವರ ಸಾಹಿತ್ಯ ಪ್ರಕಾರಗಳು ಅಂದಿನ ಸಣ್ಣ ಕತೆಗಳು,ಕವನ, ವೈಚಾರಿಕ ಲೇಖನ,ಹಾಸ್ಯ ಬರಹಗಳು ಇತ್ಯಾದಿಗಳನ್ನು ಬರೆಯುತ್ತಲೇ ಬಂದ್ದಿದ್ದಾರೆ. ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆಕಾಶವಾಣಿಯಲ್ಲಿಯೂ ಇವರ ಕಾರ್ಯಕ್ರಮ ಬಿತ್ತರಗೊಂಡಿದೆ.

ಆಸಕ್ತಿ[ಬದಲಾಯಿಸಿ]

ನಾಟಕ ಹಾಗು ಸಂಗೀತ. ಮಂಗಳೂರಿನ ಶ್ರೀ ಕೆ.ಎಮ್.ದಾಸ್ ಅವರಲ್ಲಿ ಕೆಲಕಾಲ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ

ಕಥಾ ಸಂಕಲನ[ಬದಲಾಯಿಸಿ]

  • ಹೊಸ್ತಿಲು
  • ಎರದನೆ ಹೆಂಡತಿಯೂ ಆತ್ಮಹತ್ಯೆಯೂ
  • ಬಿಂಬಿತಗಳು