ಸದಸ್ಯ:Rohith kashi/ನನ್ನ ಪ್ರಯೋಗಪುಟ/shiv nadar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವ್ ನಾದರ್[ಬದಲಾಯಿಸಿ]

ಶಿವ್ ನಾದರ್ ರವರು ಒಬ್ಬ ಭಾರತೀಯ ಕೈಗಾರಿಕೊದ್ಯಮಿಗಳು ಮತ್ತು ಲೋಕೋಪಕಾರಿಗಳು. ಇವರು ಹೆಚ್.ಸಿ.ಎಲ್ ಸಂಸ್ಥೆಯ ಮತ್ತು ಶಿವ್ ನಾದರ್ ಫೌಂಡೆಷನ್ ನ ಸ್ಥಾಪಕರು ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರೆ. ನಾದರ್ ರವರು ಹೆಚ್.ಸಿ.ಎಲ್ ಸಂಸ್ಥೆಯನ್ನು ೧೯೭೦ರ ದಶಕದಲ್ಲಿ ಸ್ಥಾಪಿಸಿದರು, ನಂತರ ಅದನ್ನು ಐಟಿ ಹಾರ್ಡವೇರ್ ಕಂಪನಿಯಾಗಿ ಬದಲಾಯಿಸಿದರು. ಐಟಿ ಕೈಗಾರಿಕೋದ್ಯಮಗಳ ಕಡೆ ಒದಗಿಸಿದ ಸೇವೆಯನ್ನು ಕಂಡು ೨೦೦೮ರಲ್ಲಿ ನಾದರ್ ರವರಿಗೆ ಪದ್ಮ ಭೂಷಣ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದರು. ೧೯೯೧೦ರ ಶತಕದಲ್ಲಿ ಶಿವ್ ನಾದರ್ ಸಂಸ್ಥೆಯ ಮೂಲಕ ಶೈಕ್ಶಣಿಕ ಕ್ಷೆತ್ರಕ್ಕೆ ಅಪಾರ ಸೇವೆಯನ್ನು ಒದಗಿಸಿದ್ದರೆ. ಇವರು ತಮಿಳು ಕಾದಂಬರಿಕಾರ ರಮನಿಚಂದ್ರನ್ ರವರ ಸಹೋದರರು.

ಶಿವ್ ನಾದರ್ ಕಾಲೇಜಿನ ಗುರುತು

ಜೀವನ[ಬದಲಾಯಿಸಿ]

ನಾದರ್ ರವರು ೧೪ ಜುಲೈ ೧೯೪೫ರಲ್ಲಿ ತೂತುಕುಡಿ ಜಿಲ್ಲೆಯ ತಿರುಚೂರಿನ ಬಳಿ ಇರುವ ಮೂಲೈಪೊಶಿ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಶಿವಸುಬ್ರಮಣ್ಯ ನಾದರ್ ಮತ್ತು ತಾಯಿ ಸುಂದರಿ ದೇವಿ.


ಶಿಕ್ಷಣ[ಬದಲಾಯಿಸಿ]

ಇವರು ತಮ್ಮ ಶಿಕ್ಷಣವನ್ನು, ಹೈಸ್ಕೂಲ್ ಅನ್ನು ಕುಂಭಕೊಣ್ಂನ ಟೌಣ್ ಹೈಯರ್ ಸೆಕೆಡರಿ ಸ್ಕೂಲ್ನಲ್ಲಿ ಮುಗಿಸಿದ ನಂತರ ಪ್ರಿ-ಯೂನಿವರ್ಸಿಟಿಯನ್ನು ಮದುರೈನ ಅಮೇರಿಕನ್ ಕಾಲೀಜಿನಲ್ಲಿ ಮುಗಿಸಿ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನ್ಯರಿಂಗ್ನನ್ನು ಪಿ ಎಸ್ ಜಿ ಕಾಲೇಜು ಕೊಯಂಬತೂರಿನಲ್ಲಿ ಮುಗಿಸಿದರು.


ವೃತ್ತಿ ಜೀವನ[ಬದಲಾಯಿಸಿ]

ನಾದರ್ ರವರು ತಮ್ಮ ವೃತ್ತಿ ಜೀವನವನ್ನು೧೯೬೭ರಲ್ಲಿ ವಾಲ್ಚ್ಂದ್ ಗ್ರೂಪ್ ನ ಕೂಪರ್ ಎಂಜಿನಿಯರಾಗಿ ಪುಣೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ನಂತರ ಅವರು ತಮ್ಮ ಸ್ವಂತ ಸಾಹಸೋದ್ಯಮವನ್ನು ತಮ್ಮ ಸ್ನಹಿತರೊಂದಿಗೆ ಮೈಕ್ರೋಕಾಂಪ್ ಎಂಬ ಉದ್ಯಮವನ್ನು ಆರಂಭಿಸಿದರು. ಆ ಸಂಸ್ಥೆಯ ಟೆಲೆಡಿಜಿಟಲ್ ಕ್ಯಲ್ಕುಲೇಟರ್ ಗಳನ್ನು ಭಾರತೀಯ ಮ್,ಆರುಕಟ್ಟೆಯಲ್ಲಿ ಮಾರಾಟಮಾಡಲು ಶುರುಪದಿಸಿದರು. ನಂತರ ಹೆಚ್ ಸಿ ಎಲ್ ಸಂಸ್ಥೆಯನ್ನು ೧೯೭೬ರಲ್ಲಿ ರೂ೧೮೭೦೦೦ ಬಂಡವಾಳದೊಂದಿಗೆ ಸ್ಥಾಪಿಸಿದರು. ೧೯೮೦ರಲ್ಲಿ ಹೆಚ್ ಸಿ ಎಲ್ ಸಂಸ್ಥೆಯು ಫಾರ್ ಈಸ್ಟ್ ಕಂಪ್ಯೂಟರ್ಸ್ನೋಂದಿಗೆ ಸಾಹಸೋದ್ಯಮಮಾಡಿ ಒಂದೆ ವರ್ಷದಲ್ಲಿ ೧೦ಲಕ್ಷ ರೂಪಾಯಿಯ ಲಾಭವನ್ನು ಮಾದಿದರು.ಬಂದಿರುವ ಲಾಭದಿಂದ ಆ ಸಂಸ್ಥೆಯ ಅತಿ ಹೆಚ್ಚು ಷೇರುಗಳನ್ನು ಹೊಂದಿದ್ದರು.

೧೯೯೬ ರಲ್ಲಿ ನಾದರ್ ರವರು ಎಸ್ ಎಸ್ ಎನ್ ಎಂಬ ಎಂಜಿನಿಯರ್ ಕಾಲೇಜನ್ನು ತಮ್ಮ ತಂದೆಯ ನೆನಪಿಗೆ ಚೆನ್ನೈನಲ್ಲಿ ಸ್ಥಾಪಿಸಿದರು. ಅಸ್ಟೆ ಅಲ್ಲದೆ ನಾದರ್ ರವರು ಕಾಲೇಜಿನ ಎಲ್ಲಾ ಚಟುವತಿಕೆಗಳಲ್ಲು ಸಕ್ರಿಯವಾಗಿ ಪಾಲ್ಗೊಳ್ಳುವುದೇ ಅಲ್ಲದೆ ತಮಗೆ ಬಂದ ೧೦ಲಕ್ಶ ಲಾಭದಿಂದ ಪಡೆದ ಷೇರುಗಳನ್ನು ಉಡುಗೊರೆಯಾಗಿ ಕಾಲೇಜಿಗೆ ಕೊಟ್ಟರು.೨೦೦೬ರಲ್ಲಿ, ನಾದರ್ ರವರು ತಮ್ಮ ಕಾಲೇಜಿನ ವಿದ್ಯಾರ್ಥಿಗಳು ಸಂಶೋಧನೆಗಾಗಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಹೋಗಬಹುದೆಂದು ಘೋಶಿಸಿದರು. ೨೦೦೫ರಲ್ಲಿ ಇಂಡಿಯನ್ ಸ್ಕೂಲ್ ಒಫ಼್ ಬಿಸಿನೆಸ್ ನ ಕಾರ್ಯನಿರ್ವಾಹಕ ಮಂಡಳಿಗೆ ಸೇರಿಕೊಂಡರು. ಮಾರ್ಚ್ ೨೦೦೮ರಲ್ಲಿ ಎಸ್ ಎಸ್ ಎನ್ ಟ್ರಸ್ತ್ನವರು ೨ ವಿದ್ಯಾಗ್ಯಾನ್ ಎಂಬ ಶಾಲೆಗಳನ್ನು ಯು ಪಿ ನಲ್ಲಿ ಸ್ಥಾಪಿಸುವುದಾಗಿ ಘೋಶಿಸಿದರು, ಅದರೊಂದಿಗೆ ಉಚಿತ ವಿದ್ಯಾರ್ಥಿ ವೇತನವನ್ನು ೨೦೦ ಮಕ್ಕಳಿಗೆ ಕೊಡಲಾಯಿತು. ನಾದರ್ ರವರು ಓದಿರು ಟೌನ್ ಹೈಸ್ಕೂಲ್ ಗೆ ೨೦೧೧ರಲ್ಲಿ ಭೇಟ್೯ಇ ನೀಡಿ, ೮೦ ಲಕ್ಷ ಬೆಳೆಬಾಳುವ ಕಂಪ್ಯೂಟರ್ ಮತ್ತು ಹಲವು ಉಪಕರಣಗಳನ್ನು ದಾನ ಮಾಡಿದರು. ಐಐಟಿ ಖರ್ಗಪುರ್ನಲ್ಲಿ ಗವರ್ನರಗಳ ಮಂಡಳಿಯ ಅಧ್ಯಕ್ಷರಾಗಿ ೨೦೧೪ರ ವರೆಗು ಸೇವೆ ಸಲ್ಲಿಸಿದ್ದಾರೆ. [೧]

==ಪ್ರಶಸ್ತಿ ಮತ್ತು ಪುರಸ್ಕಾರಗಳು==. ೨೦೦೮ರಲ್ಲಿ, ಭಾರತ ಸರ್ಕಾರವು ತಮ್ಮ ಐಟಿ ಉದ್ಯಮಗಳ ಕಡೆ ಮಾಡಿರುವ ಸೇವೆಗಳನ್ನು ಗುರುತಿಸಿ ಪದ್ಮ ಭೂಶಣ ನೀಡಿತು. ೨೦೦೭ರಲ್ಲಿ ಮದ್ರಾಸು ವಿಶ್ವವಿದ್ಯಾಲಯವು ಇವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿದರು, ಅದೇ ವರ್ಷ ಇ ಅಂಡ್ ವೈ ನ ವಾಣಿಜ್ಯೋಧ್ಯಮಿಯಾಗಿ ಗುರುತಿಸಿತು. ೧೯೯೫ರಲ್ಲಿ ಡೆಟೆಕ್ವೆಸ್ಟ್ ಐಟಿ ಮನುಶ್ಯರಾಗಿದ್ದರು ೨೦೦೬ರಲ್ಲಿ, ಆಲ್ ಇಂಡಿಯ ಮ್ಯಾನೇಜ್ಮೆಮ್ಟ್ ಅಸ್ಸೋಸಿಏಷನ್ ನಿಂದ ಫ಼ೆಲ್ಲೊಶಿಪ್ ಪಡೆದುಕೊಂಡರು. ೨೦೧೦ರಲ್ಲಿ ಡೆಟಕ್ವೆಸ್ಟ್ ನ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು.

[೨]

  1. https://en.wikipedia.org/wiki/Shiv_Nadar
  2. http://snu.edu.in/