ಸದಸ್ಯ:Rohini 03/sandbox

ವಿಕಿಪೀಡಿಯ ಇಂದ
Jump to navigation Jump to search

Badami cave temples karnataka

ಧಾರ್ಮಿಕ ಪ್ರವಾಸೋದ್ಯಮ, ಸಾಮಾನ್ಯವಾಗಿ ಅದನ್ನು ನಂಬಿಕೆ ಪ್ರವಾಸೋದ್ಯಮ ಎಂದು ಕರೆಯಲಾಗುತ್ತದೆ.ಜನರು ಪ್ರತ್ಯೇಕವಾಗಿ ಅಥವಾ ಗುಂಪಾಗಿ ತೀರ್ಥಯಾತ್ರೆ, ತಿಳಿಪುಗ ಅಥವಾ ವಿರಾಮ ಉದ್ದೇಶಗಳಿಗಾಗಿ ಗುಂಪುಗಳಲ್ಲಿ ಪ್ರಯಾಣ ಅಲ್ಲಿ ಪ್ರವಾಸೋದ್ಯಮ,ಒಂದು ವಿಧೆ.ಧಾರ್ಮಿಕ ಉದ್ದೇಶಗಳಿಗಾಗಿ ಪ್ರವಾಸಿಗರು,ಪವಿತ್ರ ಸ್ಥಳಗಳು ಮತ್ತು ಧಾರ್ಮಿಕ ಕೇಂದ್ರಗಳು ಭೇಟಿ ಆರು ತಿಂಗಳಿಗಿಂತ ಹೆಚ್ಚು ಕಾಲ ಇರುವ ದೇಶ ಬಿಟ್ಟು ವ್ಯಕ್ತಿ. ಧಾರ್ಮಿಕ ಪ್ರವಾಸೋದ್ಯಮ ಸೇವೆಗಳು ಮತ್ತು ಧಾರ್ಮಿಕ ಕೇಂದ್ರಗಳ ಪ್ರಯಾಣ ಪ್ರವಾಸಿಗರ ಅವಶ್ಯಕತೆಗಳನ್ನು ಸಂಬಂಧಿಸಿದ ಚಟುವಟಿಕೆಗಳ ಅರ್ಥ ಬೇಕು ಅಡಿಯಲ್ಲಿ ತನ್ನ ವಎಂದಿನ ಪರಿಸರದಿಂದ ಹೊರಗಿನ ಇವೆ. ಕನ್ನಡನಾಡು ಧಾರ್ಮಿಕ ಕ್ಷೇತ್ರಗಳ ಬೀಡು. ಇಲ್ಲಿ ಹಲವಾರು ಯಾತ್ರಾ ಸ್ಥಳಗಳು,ಗಿರಿಕ್ಷೇತ್ರಗಳು, ಸಿದ್ಧರು ಸ್ಂತರು ನೆಲೆಸಿದ ತಾಣಗಳು,ತಿರ್ಥಗಳು,ಮಠಮಾನ್ಯಗಳು ಇವೆ. ಯಾತ್ರಿಕರು ಇಲ್ಲಿಗೆಲ್ಲ ದಿಂಪ್ರತಿ ಎಂಬಓತೆ ಬರುತ್ತಿರುತ್ತರೆ. ಪ್ರವಾಸಿಗಳು ಅಪಾರು ಸಂಖ್ಯೆಯಲ್ಲಿ ಬಂದು ಸಾಧ್ಯವಾದರೆ ಒಂದೆರಡು ದಿನ ತಂಗಿ ಎಲ್ಲವನ್ನು ನೋಡಿ ನೆಮ್ಮದಿ ಪಡೆದು ಹಿಂತಿರುಗುತ್ತಾರೆ. ಈ ನಾಡಿನ ಹಲವು ಕ್ಷೇತ್ರಗಳಲ್ಲಿ ಗೊತ್ತುಪಡಿಸಿದ ದಿನಗಳಲ್ಲಿ ಜಾತ್ರೆ,ರಥೋತ್ಸವಗಳು ನಡೆದು ಭಕ್ತರು ಬಂದು ಸೇರಲು ಅವಕಾಶವಾಗಿರುತ್ತದೆ..ಹಬ್ಬ ಹರಿದಿನಗಳಲ್ಲಿ ದೇವಾಲಯಗಳಲ್ಲಿ ಜನ ಸಂದಣಿ ಜೋರು. ಯಾತ್ರಿಕರ ಗುಂಪು , ಮೈಸುರಿ ನಲ್ಲಿ ನವರಾತ್ರಿ ಕಾಲದಲ್ಲಿ ನ್ಡೆಯುವ ದಸ್ರರಾ ಉತ್ಸವಕ್ಕೆ ವಿದೇಶಗಳಿಂದಲೂ ಪ್ರವಾಸಿಗಳು ಬರುವರು.

ಕೆಲವು ಧಾರ್ಮಿಕ ಪ್ರವಾಸೋದ್ಯಮದ ಉದಾಹರಣೆಗಳು :-

೧) ಧರ್ಮಸ್ಥಳ[ಬದಲಾಯಿಸಿ]

   ದಕ್ಷಿಣ ಭಾರತದ ಧಾರ್ಮಿಕ ಪ್ರವಾಸೋದ್ಯಮದಲ್ಲಿ ಒಂದು ಪ್ರಸಿದ್ಧವಾದ ಸ್ಥಳ. ಮಂಗಳೂರಿಗೆ ೭೨ ಕಿ.ಮೀ. ದೂರದಲ್ಲಿದೆ. ನೇತ್ರಾವತಿ ನದಿ ತೀರದ ಕ್ಷೇತ್ರದ ಪ್ರಕೃತಿ ರಮಣೀಯ ಪ್ರದೇಶ. ಇಲ್ಲಿನ ದೇವಸ್ಥಾನ ಮಂಜುನಾಥ ಸ್ವಾಮಿಗೆ ಸಮೀಪವಾಗಿದೆ. ಧರ್ಮಸ್ಥಳಕ್ಕೆ ಹಿಂದೆ 'ಕುಡುಮ' ಎಂಬ ಹೆಸರಿದ್ದಿತು.ಈ ಪದ ಕೊಡು ಎಂಬುದರಿಂದ ಬಂದಿದು.ಕೊಡು ಎಂದರೆ ಧರ್ಮಮಾಡು ಎಂಬ ಅರ್ಥವಾಗುವುದ ರಿಂದ ಕಾಲಕ್ರಮದಲ್ಲಿ ಈ ಸ್ಥಳಕ್ಕೆ ಧರ್ಮಸ್ಥಳ ಎಂಬ ಹೆಸರು ಬಂದಿದೆ ಎಂದು ಹೇಳುತ್ತಾರೆ. ಇನ್ನೊಂದು ಐತಿಹ್ಯ ಹೀಗಿದೆ: ಒಮ್ಮೆ ಧರ್ಮ ದೇವತೆಗಳ ಅಪ್ಪಣೆಯ ಮೇರೆಗೆ ಒಬ್ಬ ಜೈನ ಹೆಗ್ಗಡೆ ಅಣ್ಣಪ್ಪಸ್ವಾಮಿ ಎಂಬ ದೂತನ ಮೂಲಕ ಕಾಶಿಯಿಂದ ಶಿವಲಿಂಗವನ್ನು ತರಿಸಿ ಇಲ್ಲಿ ಸ್ಥಾಪಿಸಿದರೆಂದೂ ಧರ್ಮದೇವತೆಗಳ ಅಪ್ಪಣೆಯ ಮೇರೆಗೆ ಈ ಸ್ಥಾಪನೆ ನ್ಡೆದ ಕಾರಣ ಈ ಸ್ಥಳಕ್ಕೆ ಧರ್ಮಸ್ಥಳ ಎಂಬ ಹೆಸರು ಬಂದಿತೆನ್ನುತ್ತರೆ.ಇಲ್ಲಿನ ಶಿವಲಿಂಗವು ಮಂಜಿನಂತೆ ಮಂಜುಳ್ವಾದುದರಿಂದ ಲಿಂಗಕ್ಕೆ ಮಂಜುನಾಥ ಎಂಬ ಹೆಸರು ಬಂದಿತೆಂಬ ಐತಿಹ್ಯವಿದೆ. ಮಂಗಳೂರಿನ ಕದ್ರಿ ಮಠವು ಈ ಧರ್ಮಸ್ಥಳ್ ಮಂಜುನಾಥನ ಪೀಠಕ್ಕೆ ಮೂಲವೆಂದು ಸಹ ಜನ ಹೇಳುತ್ತಾರೆ. ಧರ್ಮಸ್ಥಳಕ್ಕೆ ಮೊದಲು ಮಲರ್ಮಾಡಿ ಎಂದು ಕರೆದಿದ್ದರೆ, ದೇವರಾಜ ಹೆಗ್ಗಡೆಯವರ ಕಾಲದಲ್ಲಿ ಇಲ್ಲಿಗೆ ಬಂದಿದ್ದ ಸೋದೆ ಮಠದ ವಾದಿರಾಜ ಸ್ವಾಮಿಗಳು ಊರಿಗೆ ಧರ್ಮಸ್ಥಳ ಎಂದು ಕರೆದರು.

ಧರ್ಮಸ್ಥಳದಲ್ಲಿನ ಉತ್ಸವಗಳು: ೧. ನವೆಂಬರ್-ಡಿಸೆಂಬರ್ : ಕಾರ್ತಿಕ ಬಹುಳ ದಶಮಿಯಿಂದ ಅಮಾವಸ್ಯವರೆಗೆ ಲಕ್ಷದೀಪೋತ್ಸವ. ೨. ಶಿವರಾತ್ರಿ ಕಾಲ ರಥೋತ್ಸವ ೩. ಮೇಷ ಸಂಕ್ರಮಣದ ಒಂಬತ್ತು ದಿನ ವಿಶೇಷ ಒತ್ಸವಗಳು೪.೧೨ ವರ್ಷಗಳಿಗೋಮ್ಮೆ ೧೩ ದಿನಗಳ್ ಕಾಲ ನಡಾವಳಿ ಮಹೋತ್ಸವ.

೨) ಬನವಾಸಿಯ ಮಧುಕೇಶ್ವರ

Banavasi Madhukeshwara temple

   ಬನವಾಸಿ ಕದ್ಂಬ ರಾಜರು ಆಳಿದ ಪ್ರದೇಶ. ಇದು ಕನ್ನ್ಡ್ರು ಆದಿಕವಿ ಪಂಪನ ಪ್ರಶಂಸೆಗೆ ಪಾತ್ರವಾಗಿದೆ. ಹಿಂದೆ ಈ ಊರಿಗೆ ಕೌಮೂದಿ,ಬೈಂದಿವಿ, ಜಯಂತಿ, ವೈಜಯಂತಿಪುರ ವ್ಂಬ ಹೆಸರು ಗಳ್ಳಿದ್ದವು.ಬೌದ್ಧಧರ್ಮ ಪ್ರಛಾರವಿದ್ದ ಕಾಲವೊ ಒಂದಿತ್ತು.ಇಲ್ಲಿ ಪ್ರಾಚೀನ ಕಾಲದ ಮಧುಕೆಶ್ವರ ದೇವಸ್ಥಾನವಿದೆ. ಮಧು ಎಂಬ ರಾಕ್ಷಸನನ್ನು ವಿಷ್ಣುವು ಕೊಂದು ಶಿವನನ್ನು ಲಿಂಗದಲ್ಲಿ ಆವಾಹಿಸಿದ್ದರಿಂದ ಮಧುಕೇಶ್ವರಲಿಂಗ ಎನಿಸಿದೆ.ಸಪೀಠಮಧುಕೇಶ್ವರ ಲಿಂಗ ಸುಮಾರು ಐದು ಅಡಿ ನಾಲ್ಕು ಅಂಗುಲ ಎತ್ತರವಿದ್ದು ಜೇನು ತುಪ್ಪ್ದ ಬಣ್ಣ್ವನ್ನು ಹೊಂದಿದೆ. ಕತ್ತಲೆಯಲ್ಲೂ ಈ ಲಿಂಗ ಮಿಂಚುತ್ತದೆ. ಎಡ ಭಾಗದಲ್ಲಿ ಪಾರ್ವತಿದೇವಿ ಗುಡಿ ಇದೆ. ಇದೋಂದು ಪುಣ್ಯಕ್ಷೇತ್ರ.

೩) ಮುರುಡೇಶ್ವರ

Murdeshwara

  ಭಟ್ಕಳ ಹೊನ್ನಾವರಗಳ ನ್ಡುವೆ ಇದೆ. ಇಲ್ಲಿ ಕಡಲಕಿನಾರೆಯಲ್ಲಿ ಕಂದುಗಿರಿ ಎಂಬ ಗುಡ್ಡುದ ಮೇಲೆ ಮುರುಡೇಶ್ವರನ ದೊಡ್ಡ ಗುಡಿ ಇದೆ.ಈಗ ಇದು ಅತ್ಯಾರೂಪುಗೊಂಡು ವೈಭವಯುತವಾಗಿದೆ.ಸುಂದರ ಪ್ರಾಕ್ರತಿಕ ಆವರಣವಿದೆ. ಮುರುಡೇಶ್ವರ ಎಂಬುದು ಮೂಲ ಹೆಸರು.

೪) ಯಾಣ

  ಯಾಣ ನೊಡಲು ತ್ರಾಣ ಬೇಕು ಎನ್ನುವರು. ಇಲ್ಲಿಗೆ ಬರುವುದೇಕಠಿಣ. ಕುಮಟಾದಿಂದ ೨೪ ಕಿ.ಮಿ. ದೂರದಲ್ಲಿದೆ. ಇದು ಪ್ರಸಿದ್ದ ಕ್ಷೇತ್ರ . ಭೈರವೇಶ್ವರನ ಗವಿಯನ್ನೊಳಗೊಂಡ ಸುಣ್ಣ ಕಲ್ಲಿನ ಹೆಬ್ಬಂಡೆ ೧೫೦ ಅಡಿ ಎತ್ತರವಿದೆ. ಒಳಗಿನ ಭೈರವೇಶ್ವರ ಗುಹೆ ೧೨೦ ಅಡಿ ಉದ್ದ ೧೦ ಅಡಿ ಎತ್ತರ ಇದೆ. ಭೈರವೇಶ್ವರ ಲಿಂಗದ ಯವಾಗಲೂ ನೀರು ಬೀಳುತ್ತಿರುತ್ತವೆ. ಶಿವರಾತ್ರಿಯಲ್ಲಿ ಭೈರವೇಶ್ವರನ ಜಾತ್ರೆ ಸೇರುತ್ತದೆ.

೫) ಶಿರಿಸಿ

Shiras Cow and Bull at Cecret Lake 07-25-12

  ಶಿರಿಸಿ ಎಂಬುದು ಶಿರಿಸ್ ಎಂಬ ಸಂಸ್ಕ್ರುತ ಪದದ ತದ್ಭವ ಎನ್ನುವರು.ಶಿರಸ್ ಎಂದದೆ ತಲೆ. ಇಲ್ಲಿ ಮಾರಿಕಾಂಬಾ ಗುಡಿ ಇದೆ. ತುಂಬಾ ವಿಸ್ತಾರವಾದ ದೇವಾಲಯ. ಇಲ್ಲಿಗೆ ಬರುವ ಯಾತ್ರಿಕರಿಗೆ ಲೆಕ್ಕವಿಲ್ಲ. ಮೂರು ವರ್ಷಗಳಿಗೂಮ್ಮೆ ಮಾರಿಕಾಂಬಾ ಜಾತ್ರೆ ಇರುತ್ತ್ದೆ. ಮಾರಿಕಾಂಬಾ ವಿಗ್ರಹ ಮರದಿಂದ ಮಾಡಿದುದಾಗಿರುತ್ತದೆ.

೬) ಬೀದರ್

Bidar Madrasa, Northern End of East Facade

  ಹಿಂದೆ ಚಾಳುಕ್ಯ ಅರಸರ ಹಾಗೂ ಬಹುಮನಿ ಸುಲ್ತಾನರ ರಾಜಧಾನಿಯಾಗಿದ್ದಿತು.ಇಲ್ಲಿ ಸುರಕ್ಷಿತ ಕೋಟೆ ಇದೆ.

೬) ಅಬುಲ್ ಫೈಜರ ದರ್ಗ

  ಬೀದರ್ನ ಒಂದು ಐತಿಹಾಸಕ ಸ್ಥಳ. ಹಜರತ್ ಶಹಾ ಅಬುಲ್ ಫೈಜರ ದರ್ಗ ಎಂದು ಕರೆಯೂವರು. ಹಜರತ್ ಶಹಾ ಅಬುಲ್ ಫೈಜರು ಕಲಬುರ್ಗಿಯ ಪ್ರಸಿದ್ಧ ಮುಸಲ್ಮಾನ ಸಂತ ಖಾಜಾ ಬಂದೇ ನವಾಜರ ಮೊಮ್ಮಗ. ತಾತನಂತೆ ಪ್ರಸಿದ್ಧ ಪವಾಡ ಪುರುಷ. ಇವರು ಅನೇಕ ಪವಾಡಗಳನ್ನು ಮೆರೆದರು. ದರ್ಗದ ಒಳಗೆ ಇವರು ಗೋರಿ ಇದೆ. ಇವರ ದರ್ಶನಕ್ಕೆ ನಾನಾ ಭಾಗಗಳಿಂದ ಯಾತ್ರಿಕರು ಬರುತ್ತರೆ. ದರ್ಗ ಭವ್ಯ ಕಟ್ಟಡ.

೭) ಝರಣಿ ನರಸಿಂಹ ಗುಹಾಲಯ

  ಇದೊಂದು ಪವಿತ್ರ ಸ್ಥಳ. ನೈಸರ್ಗಿಕ ಅದ್ಭುತಗಳಲ್ಲಿ ಒಂದು. ಗುಹೆ ಸುಮಾರು ಎರಡು ಫರ್ಲಾಂಗ್ ಉದ್ದವಿದ್ದು ಸದಾಕಾಲ ನೀರು ಹರಿಯುತ್ತದೆ.

೮) ಅಳಂದ

  ಒಂದು ತಾಲೂಕು ಕೇಂದ್ರ. ಜಿಲ್ಲೆ ಗುಲ್ಬರ್ಗ. ಕಲಬುರಗಿ ವಾಯುವ್ಯದಲ್ಲಿ ೪೮ ಕಿ.ಮೀ. ದೂರದಲ್ಲಿದೆ. ಇಲ್ಲಿ ರಾಘವ ಛೈತನ್ಯ ಪರಾತ್ಪರ ಗುರುಗಳ ಸಮಾಧಿ, ಲಾಡ್ಲೆ ಮುಷೈಕರ ದರ್ಗಾಗಳಿದ್ದು ಪ್ರಸಿದ್ಧವಾಗಿದೆ. ಈ ಊರು ಪವಿತ್ರ ಯಾತ್ರಾಸ್ಥಳ.

೯) ಗಾಣಗಾಪುರ

  ಪ್ರಸಿದ್ಧ ಯಾತ್ರಾಸ್ಥಳ. ಈದು ಚೆನ್ನೈ-ಮುಂಬಯಿ ರೈಲುಮಾರ್ಗ ದಲ್ಲಿ ಗಾಣಗಾಪುರ ರೈಲು ನಿಲ್ದಾಣಕ್ಕೆ ೧೬ ಕಿ.ಮೀ. ದೂರದಲ್ಲಿದೆ.ಅಫಜಲಪುರ ತಾಲ್ಲೂಕಿನಲ್ಲಿದೆ.ಇಲ್ಲಿ ನರಸಿಂಹ ಸರಸ್ವತಿ ದತ್ತ ಮಹಾರಾಜರ ದೇವಾಲಯವಿದೆ. ಆಮರಜ ಮತ್ತು ಭಿಮಾ ನ್ದಿಗಳ ಸಂಗಮದಲ್ಲಿದ್ದು ಪವಿತ್ರಕ್ಷೇತ್ರವಾಗಿದೆ.ಇಲ್ಲಿಗೆ ಕರ್ನಾಟಕ ಹಾಗು ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಭಕ್ತರು ಬರುವರು. ಪ್ರತಿವರ್ಷ ನಡೆಯುವ ಜಾತ್ರೆಗೆ ಲಕ್ಷದಷ್ಟು ಜನ ಸೇರುವರು. ದೇವಲ ಗಾಣಗಾಪುರ ಎಂದು ಊರಿಗೆ ಹೆಸರಿದೆ.

೧೦) ಯಾದಗಿರಿ

YadaGiriGutta 3

   ಇಲ್ಲಿ ಮೈಲಾರ ಲಿಂಗ ದೇವಸ್ಥಾನ ಖ್ಯಾತಿವೆತ್ತಿದ್ದು, ಪ್ರತ್ತಿ ವರ್ಷ ದೊಡ್ಡ ಜಾತ್ರೆ ಸೇರುತ್ತ್ದೆ. ಇದು ತಾಲ್ಲೂಕು ಕೇಂದ್ರ. ಇಲ್ಲಿಗೆ ೪೦ ಕಿ.ಮೀ. ದೂರದಲ್ಲಿ ಸಗರ ಎಂಬಲ್ಲಿ ಶೇಕ್ ಸೂಫಿ ಸರಮಸ್ತ ಸಾಹೇಬರ ದರ್ಗಾ ಇದೆ.

ಪ್ರತಿ ವರ್ಷ ಉರುಸ್ ನಡೆಯುತ್ತದೆ. ಶಿವಶರಣರಲ್ಲಿ ಪ್ರಸಿದ್ಧರಾದ ಸಗರ ಬ್ರಹ್ಮಯ್ಯ ಈ ಊರಿನವರು.

೧೧) ಅಮರೇಶ್ವರ

   ರಾಯಚೂರು ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ.ಶಿವಶರಣರಲ್ಲಿ ಪ್ರಸಿದ್ಧವಾದ ಆಯ್ದಕ್ಕಿ ಮಾರಯ್ಯ , ಹೆಂಡ್ತಿ ಲಕ್ಕಮ್ಮ ಇದೇ ಊರಿನವರು.

೧೨) ಕಳಲೆ

   ನಂಜನಗೂಡಿಗೆ ೧೦ ಕಿ.ಮೀ. ದೂರದಲ್ಲಿರುವ ಒಂದು ಸುಪ್ರಸಿದ್ಧ ವೈಷ್ಣವ ಕ್ಷೇತ್ರ. ವೇಣುಪುರಿ ಎಂದು ಹೆಸರಾಗಿದ್ದಿತು. ಇಲ್ಲಿ ಲಕ್ಷ್ಮೀಕಾಂತ ದೇವಾಲಯವಿದೆ. ಛೈತ್ರ ಮಾಸದಲ್ಲಿ ಜಾತ್ರೆ ರಥೋತ್ಸವಕ್ಕೆ ಸಾವಿರಾರು ಭಕ್ರರು ಸೇರುತ್ತಾರೆ. ಹೊಯ್ಸಳ ವಾಸ್ತುಶಿಲ್ಪದ ಲಕ್ಷ್ಮೀಜ್ನಾರ್ಧನ ಮೂರ್ತಿ ದೇವಾಲಯ ವಿಸ್ತರವಾಗಿದೆ.

೧೩) ಹಿಮವತ್ ಗೋಪಾಲಸ್ವಾಮಿ ಬೆಟ್ಟ

   ದಕ್ಷಿಣ ಗೋವರ್ಧನಗಿರಿ ಎನಿಸಿರುವ ಗೋಪಾಲಸ್ವಾಮಿ ಬೆಟ್ಟ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಗುಂಡ್ಲುಪೇಟೆಗೆ ೧೬ ಕಿ.ಮಿ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ೪೭೦೦ ಅಡಿ ಎತ್ತರ. ಕಮಲಾದ್ರಿ ಎಂದು ಪುರಾಣದ ಹೆಸರು. ಬೆಟ್ಟದ ಮೇಲೆ ಗೋಪಾಲಸ್ವಾಮಿ ದೇವಸ್ಥಾನವಿದೆ. ಈ ಕ್ಷೇತ್ರದಲ್ಲಿ ಯಾವಾಗಲೂ ಬೆಟ್ಟವು ಹಿಮದಿಂದ ಕೂಡಿದ್ದು ಬೆಟ್ಟಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ್ ವ್ಂಬ ಹೆಸರಿದೆ.
   ಗೋಪಾಲಕ್ರಷ್ಣ, ಗೋಪಾಲಕರು, ಕಾಮಧೇನು, ರುಕ್ಮಿಣಿ-ಸತ್ಯ ಭಾಮೆಯರ ಮೂರ್ತಿ,ರಾಮಾನುಜಾಚಾರ್ಯರು, ಆಳ್ವಾರರ ಮೂರ್ತಿಗಳಿವೆ. ಮಾರ್ಚ್ ತಿಂಗಳಿನಲ್ಲಿ ಇಲ್ಲಿ ರಥೋತ್ಸವ ಜರುಗುತ್ತದೆ.

೧೪) ಮೈಸೂರು ಅರಮನೆ ಪರಿಸರ

Mysoore Palace

    ಮೈಸೂರು ನಗರದ ಅರಮನೆ ವಿಶ್ವವಿಖ್ಯಾತ. ಈ ಅರಮನೆಯ ಸುಂದರ ಪರಿಸರದಲ್ಲಿ ಇರುವ ದೇವಾಲಯಗಳಿಂದಾಗಿ ಇದೋಂದು ಪುಣ್ಯಕ್ಷೇತ್ರವೂ ಆಗಿದೆ. ಈ ದೇವಾಲಯಗಳು ಹೀಗಿವೆ :
     ೧) ಶ್ವೇತವರಾಹ ಸ್ವಾಮಿ
     ೨) ಕ್ರಷ್ಣ
     ೩) ಆಂಜಿನೇಯ
     ೪) ತ್ರಿಣೇಸ್ವರ
     ೫) ಗಣಪತಿ
     ೬) ಪ್ರಸನ್ನ ಲಕ್ಷ್ಮೀರಮಣ
     ೭) ನಂಟ ನಾರಾಯಾಣ
     ೮) ಅರವಿಂದ ಲಕ್ಷ್ಮಿ
     ೯) ವೇಣುಗೋಪಾಲ
   ಇವುಗಳಿಂದಾಗಿ ಇಡೀ ಸಂಕೀರ್ಣ ಒಂದು ವಿಷ್ಣು ಕ್ಷೆತ್ರ ಎನಿಸಿದೆ.

೧೫) ಹೊಸ ಹೊಳಲು

    ವರಾಹಸ್ವಾಮಿ ದೇವಾಲಯಗಳು ಕಡಿಮೆಯೇ. ಕೆ.ಆರ್. ಪೇಟೆ ತಾಲೂಕಿನ ಹೊಸ ಹೊಳಲು ಪುಣ್ಯಕ್ಷೇತ್ರ. ಇಲ್ಲಿ ವರಾಹನಾಥನ ದೇವಾಲಯ ಹಾಗೂ ಲಕ್ಷ್ಮೀನಾರಾಯಣ ದೇವಾಲಯಗಳಿವೆ. ಇಲ್ಲಿನ ಆಂಜನೇಯಸ್ವಾಮಿಗೆ 'ರಾಗದ ಹಬ್ಬ' ಎಂಬ ವಿಶೇಷ ಹಬ್ಬ್ ಏಪ್ರಿಲ್ನಲ್ಲಿ ಜರುಗುತ್ತದೆ.

೧೬) ಗೊರೂರು

    ಹಾಸನ ಜಿಲ್ಲೆ ಅರಕಲಗೂಡಿಗೆ ೯ ಕಿ.ಮೀ. ದೂರದ ಗೊರೂರು ಹೇಮಾವತಿ ನದಿ ದಡದ ವೈಷ್ಣವ ಕ್ಷೇತ್ರ.ಇಲ್ಲಿ ಯೋಗಾನರಸಿಂಹ, ಪರವಾಸುದೇವರ ದೇವಾಲಯಗಳಿವೆ.ಕರಿಶಿಲೆಯ, ಯೋಗಮುದ್ರಿಯ ಪರವಾಸುದೇವರ ದೇವಾಲಯಗಳಿವೆ. ಕರಿಶಿಲೆಯ,ಯೋಗಮುದ್ರಿಯ ಪರವಾಸುದೇವ ಐದು ಅಡಿ ಎತ್ತ್ರದ ಭವ್ಯ ಕೃತಿ. ಯೋಗಾನೃಸಿಂಹನ ಕೃಪೆಗಾಗಿ ಭಕ್ತರು ಇಲ್ಲಿಗೆ ಬರುತ್ತಿರುತ್ತಾರೆ.


ಹೊರಗಿನ ಕೊಂಡಿಗಳು-


ಉಲ್ಲೇಖನಗಳು-