ಸದಸ್ಯ:Raviraj Kumar/ನನ್ನ ಪ್ರಯೋಗಪುಟ
ಹಣದ ಅಪಮೌಲೀಕರಣ
ಹಣದ ಅಪಮೌಲೀಕರಣ ಎಂದರೆ ರೂಪಾಯಿಯ ಬೆಲೆಯನ್ನು ವಿದೇಶಿ ಹಣದ ಎದುರು ನಿಯಂತ್ರಿಸುವುದು ಅಥವಾ ಅದರ ಮೌಲ್ಯವನ್ನು ಕಡಿತಗೊಳಿಸುವುದು. ಹಣದ ಅಪಮೌಲ್ಯದಿಂದ ರಫ್ತುದಾರರು ಹೊಸ ಸವಾಲುಗಳನ್ನು ಎದುರಿಸುತ್ತಾರೆ. ಹಾಲಿ ಮತ್ತು ಹೊಸ ಮಾರುಕಟ್ಟೆಯಲ್ಲಿ ರಫ್ತುದಾರರಿಗೆ ತಮ್ಮ ಛಾಪನ್ನು ಮೂಡಿಸಲು ಇದು ಪ್ರಶಸ್ತವಾದ ಸಮಯವಾಗಿದೆ.
ರಫ್ತು ಕ್ಷೇತ್ರವು ತಂತ್ರಜ್ಞಾನವನ್ನು ಉತ್ತಮಗೊಳಿಸಲು, ವೆಚ್ಚಗಳನ್ನು ಕಡಿತಗೊಳಿಸಲು, ಗುಣಮಟ್ಟವನ್ನು ಉತ್ತಮಗೊಳಿಸಲು ಉತ್ಪಾದನಾ ಸ್ಪರ್ಧಾ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸಲು ಹಾಗೂ ಕಡಿಮೆ ವೇತನದ ಕೆಲಸಗಾರರ ದಕ್ಷತೆಯನ್ನು ಸುದಾರಿಸಲು ಸಹಾಯಕವಾಗಿದೆ. ಭವಿಷ್ಯದಲ್ಲಿ ರಫ್ತುಗಾರಿಕೆಯನ್ನು ಪ್ರೋತ್ಸಾಹಿಸಲು ಇದಕ್ಕಿಂತ ಉತ್ತಮ ಅವಕಾಶ ದೊರಕುತ್ತದೆ. ಹಣವನ್ನು ಅಪಮೌಲೀಕರಣಗೊಳಿಸುವುದರಿಂದ ಸಂಪತ್ತು ಕೇವಲ ಕೆಲವರ ಪಾಲಾಗದೆ ಎಲ್ಲರಿಗೂ ಸಮಾನವಾಗಿ ಹಂಚಿಹೋಗುತ್ತದೆ. ಇದರಿಂದಾಗಿ ರಫ್ತುದಾರರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.
ಅರ್ಥವ್ಯವಸ್ಥೆಯಲ್ಲಿ ರೂಪಾಯಿಯ ಅಪಮೌಲೀಕರಣದ ಬಗ್ಗೆ ಸರಿಯಾದ ನಿಯಮಗಳನ್ನು ರೂಪಿಸುವುದರಿಂದ ಸಮತೋಲನವನ್ನು ಕಾಯ್ದಿರಿಸಿಕೊಳ್ಳಬಹುದು. ಇದು ಬೆಳವಣಿಗೆಯನ್ನು ಹೊಂದುತ್ತಿರುವ ದೇಶಗಳಲ್ಲಿ ಒಂದಾದ ಭಾರತದಲ್ಲಿ ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.