ವಿಷಯಕ್ಕೆ ಹೋಗು

ಸದಸ್ಯ:Ravi RMR

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದು ದಿನದ ಪ್ರವಾಸಿ ತಾಣ ಹಾಗೂ ಪುಣ್ಯ ಕ್ಷೇತ್ರ ದ ಪರಿಚಯ. ತುಮಕೂರು ಜಿಲ್ಲೆಯ ಮಧುಗಿರಿ_ತಾಲ್ಲೂಕು_ಕಸಬಾ ಹೋಬಳಿ ಡಿ.ವಿ ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತುಗೋಟಿ ಹಾಗೂ ಹಕ್ಕಿಪಕ್ಕದ ಗ್ರಾಮಗಳಿಗೆ ಹತ್ತಿರವಿರುವ_ಹತ್ತಿರದ ದೇವರು#ಕೋಟೆಕಲ್ಲಪ್ಪ_ದೇವರ_ಬಗ್ಗೆ_ಒಂದಿಷ್ಟು_ಮಾಹಿತಿ. ಶ್ರೀ ಕೋಟೆ ಕಲ್ಲಪ್ಪ ನಬೆಟ್ಟವು ಮಧುಗಿರಿ- ಸಿರಾ ಮುಖ್ಯರಸ್ತೆಯಿಂದ 6km ದೂರದಲ್ಲಿದ್ದು ದಕ್ಷಿಣ ದಿಕ್ಕಿನಲ್ಲಿದೆ. ಇದು ಭೂಮಿಗಿಂತ ಎತ್ತರ ಪ್ರದೇಶ, ಒಳ್ಳೆಯ ತಂಪಾದ ಗಾಳಿಯ ವಾತಾವರಣ , ಬೆಟ್ಟದ ಮೇಲೆ ನಿಂತು ನೋಡಿದರೆ ಪ್ರಕೃತಿ ಸೌಂದರ್ಯದ ಸೊಬಗು ಮನಸ್ಸನ್ನು ತಲ್ಲಣಗೊಳಿಸುತ್ತದೆ.

ಶ್ರೀ ಕೋಟೆ ಕಲ್ಲಪ್ಪ ಸ್ವಾಮಿ # ಮಧುಗಿರಿ ಹಾಗೂ ಸುತ್ತಮುತ್ತಲಿನ ಹಾಗೂ ರಾಜ್ಯದ ಹಲವಾರು ಭಾಗದಿಂದ ಹವಾರು ಜನರು ತಮ್ಮ ತಮ್ಮ ಸೇವೆ ಸಲ್ಲಿಸಲು ಸಿಹಿ ಅಥವಾ ಖಾರ ಕುರಿ, ಕೋಳಿಗಳನ್ನು ಬಲಿಕೊಟ್ಟು ಅನ್ನಸಂತರ್ಪಣೆ ಮಾಡಿ ಹರಕೆ ಪೂಜೆಗಳನ್ನ ತೀರಿಸುತ್ತಾರೆ. ವಿಶೇಷವಾಗಿ ಶ್ರಾವಣ ಮಾಸದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ ಹಾಗೆಯೇ ಜನರು ತಾವು ಅಂದುಕೊಂಡ ಕೆಲಸ ನೇರವೇರಲು ದೇವರಲ್ಲಿ ಹೂ ಬೇಡುವ ಆಚರಣೆ ಇದೆ ಹೆಚ್ಚಿನ ಜನರು ನಂಬಿಕೆಯು ಆಗಿದೆ ಇಲ್ಲಿನ ಅರ್ಚಕರು ಶ್ರೀಮಾನ್ ವೆಂಕಟರಂಗಯ್ಯನವರು ಅರ್ಚಕರಾಗಿ ಪೂಜೆ ಕಾರ್ಯ ನೇರವೇರಿಸುತ್ತಿದರೆ ಈ ಕೋಟೆ ಕಲ್ಲಪ್ಪ ನಿಗೆ ದಂತಕಥೆಗಳು ಹಾಗೂ ಸತ್ಯಾಂಶ ನಿದರ್ಶನಗಳಿವೆ . ಈ ಹಿಂದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನರು

ತಿರುಪತಿ ತಿಮ್ಮಪ್ಪ ನನ್ನು ಆರಾಧಿಸುತ್ತಿದ್ದರಂತೆ. ಇದಕ್ಕೆ ನಿದರ್ಶನವಾಗಿ ಹಿಂದಿನವರ ಹೆಸರುಗಳನ್ನ ಗಮನಿಸಬಹುದು.

ತಿಮ್ಮಪ್ಪನು_ಕೋಟೆ_ಕಲ್ಲಪ್ಪನಾದುದು. ಈ ದೇವಸ್ಥಾನವು ಕಟ್ಟಡ ಕಟ್ಟುವುದರೊಂದಿಗೆ ನಿರ್ಮಿತವಾಗಿಲ್ಲ. ಪ್ರಕೃತಿದತ್ತವಾಗಿದೆ. ಒಂದು ದೊಡ್ಡ ಬಂಡೆಯೂ ಪಶ್ಚಿಮದಿಂದ ಪೂರ್ವಕ್ಕೆ ಭಾಗಿ ಒಂದು ಬಂಡೆಯ ಮೇಲೆ ಕೂತಿರುತ್ತದೆ. ಗರ್ಭಗುಡಿಯು ಬಂಡೆ ಸಿಡಿದು ನಿರ್ಮಿತವಾಗಿದೆ. ಗರ್ಭಗುಡಿಗೆ ಛಾವಣಿ ನಿರ್ಮಿಸಿರುವುದಿಲ್ಲ. ಇದು ಸ್ವಾಮಿ ಅಪ್ಪಣೆ ಎಂದು ದಂತಕಥೆಯಿಂದ ತಿಳಿದುಬಂದ ವಿಚಾರ. ಈಗಲೂ ಸಹ ಇದೇ ಮಾದರಿಯಲ್ಲಿ ಇದೆ. #ಭಾಗಿರುವ_ಬಂಡೆಯ ಉತ್ತರ ಭಾಗದಲ್ಲಿ ಕಲ್ಲಿನಿಂದ ನಿರ್ಮಿಸಿದ ಸುಮಾರು 5.5 ಅಡಿ ಎತ್ತರದ

ಬಾಗಿಲು_ಚೌಕಟ್ಟು ಇಟ್ಟಿದ್ದಾರೆ. ಹಿಂದೆ ಇದಕ್ಕೆ ಆಲದ_ಮರದ_ಹಲಗೆಯ ಭಾಗಿಲನ್ನ ಇಟ್ಟಿದ್ದರಂತೆ. ಭಕ್ತಳೊಬ್ಬಳು #ದಬ್ಬೆಗಟ್ಟದಿಂದ ಬೆಟ್ಟದ ಮಾರ್ಗವಾಗಿ ಗಂಡನ ಮನೆಯಲ್ಲಿ ಕಿರುಕುಳವನ್ನ ತಾಳಲಾರದೆ ಇದೆ ಬೆಟ್ಟದ ಮಾರ್ಗವಾಗಿ ತನ್ನ ತವರೂರಾದ #ತಾಯಗೊಂಡನಹಳ್ಳಿ ಗೆ ಹೋಗುತ್ತಿದ್ದಾಗ ಸ್ವಾಮಿಯು ಆ ಭಾಗಿಲನ್ನ ಒದ್ದು ಆ ಭಕ್ತಳ ಸಲುಹಿ ಬುದ್ದಿ ಹೇಳಿ ಗಂಡನ ಮನೆಗೆ ಕಳುಹಿಸಿದಳಂತೆ. ಆಗ ಒದ್ದ ಭಾಗಿಲು ಮಧುಗಿರಿ ಸಿರಾ ರಸ್ತೆಯಲ್ಲಿರುವ

ಬೆಟ್ಟದ_ತಿಮ್ಮನಹಳ್ಳಿಯ ಈಗಿನ #ಹರಿಹರಪುರದ ಹತ್ತಿರ ಬಿದ್ದ ಭಾಗಿಲು #ಮರವಾಗಿ ಬೆಳೆದಿರುತ್ತದೆ. ಈಗಲೂ ಸಹ ನಾವು ಕಣ್ಣಾರೆ ನೋಡಬಹುದು. ಈ ಮರ ಇರುವ ಹೊಲದ ಎಲ್ಲೆಗೆ #ದ್ಯಾವರು_ದಿನ್ನೆ ಎಂದು ಕರೆಯುತ್ತಾರೆ. ಈಗಲೂ ಸಹ ದಬ್ಬೆಗಟ್ಟ ಗ್ರಾಮದವರು ಅಂದಿನಿಂದಲೂ ಬೆಟ್ಟದ ಮೇಲೆ ಪ್ರತಿವರ್ಷ #ಶ್ರಾವಣಮಾಸದಲ್ಲಿ_ಹರಿಸೇವೆ ಮಾಡುತ್ತಾರೆ.ಇಂದಿಗೂ ಸಹ ಈಗಿನವರು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಕೋಟೆ_ಕಲ್ಲಪ್ಪನೆಂದು_ಹೆಸರು_ಬರಲು_ಕಾರಣ ತಿಮ್ಮಪ್ಪ ನೆಲಸಿದ ಈ ಬೆಟ್ಟದ ಮೇಲೆ ಕೋಟೆ ಇದೆ. ಈಗ ಅದು ಶಿಥಿಲವಾಗಿದ್ದು ಕೋಟೆಯ ಗೋಡೆಗಳ ಅವಶೇಷವನ್ನ ನಾವೂ ಈಗಲೂ ಕಾಣಬಹುದು. ಈಗ ಅವಶೇಷಗಳ ನಿದರ್ಶನವಾಗಿ ಅಂದು ಅವರು ರಾಗಿ, ಜೋಳ ಇತ್ಯಾದಿ ದವಸಗಳನ್ನ ಹಿಟ್ಟು ಮಾಡಲು ಬಳಸುತ್ತಿದ್ದ ಸಾಧನ ಎಂದರೆ #ರಾಗಿಬೀಸುವ_ಕಲ್ಲು ಈಗ ಈ ದೇವಸ್ಥಾನದಲ್ಲಿ ಇದೆ. ಈ ದೇವಸ್ಥಾನದ ಬೆಟ್ಟದಲ್ಲಿರುವ ಕೋಟೆಗೆ ಹೊಂದಿಕೊಂಡು ಕಲ್ಲು ಬಂಡೆಗಳ ಮಧ್ಯೆ ನೆಲಸಿರುವುದರಿಂದ #ಕೋಟೆಕಲ್ಲಪ್ಪ ಎಂಬ ಹೆಸರಿನಿಂದ ಪ್ರಸಿದ್ದಿ ಪಡೆದು ಭಕ್ತರನ್ನ ಸಲಹುತ್ತಿದ್ದಾನೆ. ಹಿಂದಿನ ಮಾಜಿ ಶಾಸಕರಾದ ಶ್ರೀಮಾನ್ ಕೆ.ಎನ್ ರಾಜಣ್ಣನವರು ಸ್ಥಳೀಯ ಶಾಸಕರು ಅನುದಾನ ಬಳಸಿ ಉತ್ತಮವಾದ ರಸ್ತೆ ನಿರ್ಮಾಣಕ್ಕೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿರುತ್ತಾರೆ ಇವರ ಈ ಉತ್ತಮ ಕೆಲಸದಿಂದ ರಾತ್ರಿವೇಳೆ ಬೆಟ್ಟದಲ್ಲಿ ಜನರು ರ್ನಿಭಯದಿಂದ ರಾತ್ರಿ ಕಳೆಯುತ್ತಾರೆ ಹಾಗೆ ಪ್ರಸ್ತುತ ಶಾಸಕರು ಆದ ಶ್ರೀಮಾನ್ ಎಂ.ವಿ. ವೀರಭದ್ರಯ್ಯ ನವರು ಶೌಚಾಲಯಕ್ಕೆ ಅನುದಾನ ಬಿಡುಗಡೆ ಮಾಡಲಾಗಿದ್ದು ಕಾಮಗಾರಿ ಪೂರ್ಣ ಹಂತದಲ್ಲಿ ಇದೆ ಇನ್ನು ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಉತ್ತಮ ಗುಣಮಟ್ಟದ ಕೆಲಸವನ್ನು ನೀಡಬೇಕೆಂದು ಮನವಿ ಸಲ್ಲಿಸುತ್ತ ಎಲ್ಲರಿಗೂ ದೇವರು ಕೃಪೆ ಇರಲಿ ಸಾಧ್ಯವಾದಾಗ ಬೀಡುವಿನ ವೇಳೆಯಲ್ಲಿ ನೀವು ಕೂಡ ದೇವರ ದರ್ಶನ ಪಡೆದು ದೈವ ಕೃಪೆಗೆ ಪಾತ್ರರಾಗಬೇಕೆಂದು ಪ್ರಾರ್ಥಿಸುತ್ತೇನೆ.

ಸತ್ಯ ಹಾಗೂ ಅಸತ್ಯದ ಬಗ್ಗೆ ನಿಖರವಾದ ಮಾಹಿತಿ ಇಲ್ಲ  ಅರ್ಚಕರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನರ ಹೇಳುವ ಕಥೆ ಅವಲಂಬಿಸಿದೆ. 


ವಂದನೆಗಳೊಂದಿಗೆ.. .. ರವಿ.ಆರ್ ಡಿ.ವಿ ಹಳ್ಳಿ.