ಸದಸ್ಯ:Ranjitha171

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

==ಪರಿಚಯ==

ಈ ಪುಟ್ಟ ವಿವರಣೆಯನ್ನು ಬರೆಯುತ್ತಿರುವ ನನ್ನ ಹೆಸರು ರಂಜಿತಾ. ನಾನು ಹುಟ್ಟಿದು ಬೆಂಗಳೂರಿನಲ್ಲಿ. ರಂಜಿತಾ ಎಂಬ ನನ್ನ ಹೆಸರಿನ ಭಾವನೆ ಏನೆಂದರೆ ಎಲ್ಲರನ್ನು ರಂಜಿಸುವುದು .ನನ್ನ ತಂದೆಯ ಹೆಸರು ರಾಮಸ್ವಾಮಿ ಹಾಗು ತಾಯಿಯ ಹಸರು ಜಾನಕಿ. ನನ್ನ ಜನನದ ನಂತರ ನಾವು ಹುಬ್ಬಳಿಯ ಬಳಿಯಿರುವ ಮುಂಡಗೋಡ್ ಎಂಬ ಪುಟ್ಟ ಗ್ರಾಮಕ್ಕೆ ಹೋದೆ. ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ರೋಟರಿ ಶಾಲೆಯಲ್ಲಿ ಮಾಡಿದೆನು. ಆ ಶಾಲೆಯಲ್ಲಿ ನನಗೆ ಓದಿಗಿಂತಲೂ ಹಲವಾರು ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಿತ್ತು. ರೋಹಿಣಿ ಎಂಬ ಶಿಕ್ಷಕಿ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ್ದವರಾಗಿದ್ದರು. ನಾನು ಹಾಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಲು ಅವರು ನನಗೆ ಸ್ಪೂರ್ತಿಯಾಗಿದ್ದರು. ನನಗೆ ಸಂಗೀತದಲ್ಲಿ ಬಹಳ ಆಸಕ್ತಿ ಇದೆ. ಚಿಕ್ಕ ವಯಸ್ಸಿನಿಂದಲು ಅನೇಕ ಹಾಡಿನ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದ್ದಿದ್ದೇನೆ. ದೇಶಭಕ್ತಿ ಗೀತೆಸ್ಪರ್ಧೆಯಲ್ಲಿ ಭಾಗವಹಿಸಿದ ನನಗೆ ಬಹುಮಾನವಾಗಿ ಒಂದು ಪುಸ್ತಕವನ್ನು ನೀಡಿದ್ದರು. ಅದರ ಹೆಸರು "ಅಪ್ಪಾ ಎಂದರೆ ಆಕಾಶ". ಈ ಪುಸ್ತಕದಲ್ಲಿರುವ ಅನೇಕ ವಿಚಾರಗಳು ನನಗೆ ಯಾವ ರೀತಿ ಜೀವನದಲ್ಲಿ ಸವಾಲುಗಳನ್ನು ಎದುರಿಸ ಬೇಕೆಂಬುದನ್ನು ತಿಳಿಸಿಕೊಟ್ಟಿತು.

==ಹವ್ಯಾಸ, ಆಸಕ್ತಿಗಳು==

ನನಗೆ ಮೊದಲಿನಿಂದಲು ಕ್ರೀಡೆಯಲ್ಲಿ ಆಸಕ್ತಿ ಕಡಿಮೆ. ಅನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ಹೋದೆನು. ನನ್ನ ಫ್ರೌಡ ಶಿಕ್ಷಣ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ ಮಾಡಿದೆನು. ಈ ಶಾಲೆಯಲ್ಲಿ ನನಗೆ ಓದಲು ಹಾಗು ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು. ಫ್ರೌಡ ಶಿಕ್ಷಣ ಮಾಡುತ್ತಿರುವಾಗ ನನಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿಯಿತ್ತು. ಆಗ ನನಗೆ ಒಬ್ಬ ದೊಡ್ಡ ವಿಜ್ಞಾನಿ ಆಗಾಬೇಕೆಂಬ ಕನಸು ಕಂಡ್ಡಿದ್ದೇನು. ಈ ಶಾಲೆಯಲ್ಲಿ ನಾನು ಹಲವಾರು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡೇನು. ಅವುಗಳೆಂದರೆ ದಿನವು ಡೈರಿಯಲ್ಲಿ ದಿನಚರಿಯನ್ನು ಬರೆಯುವುದು, ಅನೇಕ ಹೊಸ ವಿಷಯಗಳನ್ನು ಸಂಗ್ರಹಿಸುವುದು, ದಿನವು ದಿನಪತ್ರಿಕೆಯನ್ನು ಓದುವುದು, ಕವನಗಳನ್ನು ರಚಿಸುವುದು. ಮೊದ-ಮೊದಲು ಸಾಂಸ್ಕ್ರತಿಕ ವಿಷಯದಲ್ಲಿ ಆಸೆಯಿದ್ದ ನನಗೆ ಈ ಶಲೆಯೆಲ್ಲಿ ಓದಲು ಕೂಡ ಆಸಕ್ತಿ ಬೆಳೆಯಿತು. ಈ ಶಾಲೆಯಲ್ಲಿ ನನಗೆ ಉಮಾವತಿ ಎಂಬ ಶಿಕ್ಷಕಿ ನನಗೆ ಅಚ್ಚುಮೆಚ್ಚು. ಅನಂತರ ನಾನು ಹತ್ತನೆ ತರಗತಿಗೆ ಬಂದಾಗ ನನಗೆ ವಾಣಿಜ್ಯ ವಿಷಯದಲ್ಲಿ ಆಸಕ್ತಿ ಬೆಳೆಯಿತು. ನಾನು ಫ್ರೌಡ ಶಿಕ್ಷಣವನ್ನು ಮುಗಿಸಿ ಅಣ್ಣನ ರೀತಿ ಮುಂದೆ ಎಂ.ಬಿ.ಎ ಪದವಿ ಪಡೆದು ಉತ್ತಮ ವ್ಯಕ್ತಿ ಆಗಬೇಕೆಂಬ ಹಂಬಲ ಬೆಳೆಯಿತು .ಆಗಲೇ ನಾನು ಕೂಡ ಪತ್ರಿಕೆಯಲ್ಲಿ ಬರಬೇಕೆಂಬ ಆಸೆ ಕಂಡೆನು.

==ಪಟ್ಟಣದ ಜೀವನ==

ನನ್ನ ತಂದೆ-ತಾಯಿಯನ್ನು ವಿದೇಶಕ್ಕೆ ಕರೆದುಕೊಂಡು ಹೋಗಬೇಕೆಂಬ ಕನಸು ನನ್ನದಾಯಿತು. ನೃತ್ಯದಲ್ಲಿಯೂ ಕೂಡ ನನಗೆ ಆಸಕ್ತಿಯಿದೆ. ಹಾಲವಾರು ಬಾರಿ ಪ್ರತಿಭಾ ಕಾರಂಜಿಯಲ್ಲಿ ಕನ್ನಡ ಜಾನಪದ ನೃತ್ಯವನ್ನು ಮಾಡ್ಡಿದ್ದೇನೆ. ಅನಂತರ ನನ್ನ ವಿದ್ಯಾಭ್ಯಾಸವನ್ನು ಸಿರ್ಸಿಯ ಎಂ.ಇ.ಎಸ್.ಕಾಲೇಜಿನಲ್ಲಿ ಮಾಡಿದೆನು. ದ್ವೀತಿಯ ಪಿ.ಯು.ಸಿನಲ್ಲಿ ಉತ್ತಮ ಅಂಕಗಳನ್ನು ಪಡೆದೆನು .ಓದಿನ ವಿಚಾರದಲ್ಲಿ ನನ್ನ ಮನೆಯವರು ಅತ್ಯಂತ ಪ್ರೋತ್ಸಾಹ ನೀಡಿದ್ದರು, ಈಗಲೂ ನೀಡುತ್ತಿದ್ದಾರೆ. ಮುಂದಿನ ವಿದ್ಯಾಭ್ಯಾಸಕ್ಕಾಗಿ ನನ್ನ ಅಣ್ಣನ ಸಲಹೆಯಂತೆ ಬೆಂಗಳೂರಿಗೆ ಬಂದು ಕ್ರೈಸ್ಟ್ ಯೂನಿರ್ವಸಿಟಿಯಲ್ಲಿ ಸೇರಿಕೊಂಡೆನು. ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಬಿಟ್ಟು ಹಾಸ್ಟೆಲಿಗೆ ಹೋದ ನನಗೆ ಇಲ್ಲಿಯ ವಾತಾವರಣ ಮೊದಲಿಗೆ ತೊಂದರೆಯಾಗುತ್ತಿತ್ತು. ಆದರೆ ಈಗ ಇಲ್ಲಿ ಇರುವುದು ನನಗೆ ತುಂಬ ಖುಷಿಯಾಗುತ್ತಿದೆ. ಪುಟ್ಟ ಹಳ್ಳಿಯಲ್ಲಿದ್ದ ನಾನು ಇಲ್ಲಿ ಬಂದು ಅನೇಕ ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಅವುಗಳೆಂದರೆ ಮೊಬೈಲ್ ಬಳಸುವುದು ,ಇಂಗ್ಲೀಷ್ ಮಾತನಾಡುವುದು, ಹೀಗೆ ಮುಂತಾದವು. ಆದರೆ ನನ್ನಲ್ಲಿರುವ ಅನೇಕ ಗುಣಗಳು ಉದಾಹರಣೆಗೆ ಕೋಪ, ತಾಳ್ಮೆಗೆಡುವುದು ಮುಂತದವು ನನ್ನ ಬೆಳವಣಿಗೆಗೆ ಅಡ್ದಿ ಆಗುತ್ತಿವೆ. ಸಾಂಸ್ಕ್ರತಿಕ ವಿಚಾರಗಳಲ್ಲಿ ಮಾತ್ರವಲ್ಲದೆ ಹಲವಾರು ಕಾರ್ಯಕ್ರಮದಲ್ಲಿ ಭಗವಹಿಸುತ್ತಿದ್ದೀನಿ. ಪ್ರಸ್ತುತ ಈ ವಿದ್ಯಾಲಯದಲ್ಲಿ ಸಿ.ಎಸ್.ಎ.ಎಂಬ ಯೋಜನೆಯಲ್ಲಿ ಭಾಗವಹಿಸಿ ಬಡುಮಕ್ಕಳಿಗೆ ಪುಟ್ಟ ಸಹಾಯವನ್ನು ಮಾಡುತ್ತಿದ್ದೆನೆ.ಇಲ್ಲಿಯು ಕೂಡ ಭಾಷಾ ಉತ್ಸವದಲ್ಲಿ ಜಾನಪದ ಗೀತೆಗೆ ನೃತ್ಯ ಮಾಡಿದ್ದೇನೆ. ಆದರೂ ನಾನು ಕಂಡ ಕನಸು ಇನ್ನು ಪೂರ್ಣಗೊಂಡಿಲ್ಲ .ನನ್ಣ ತಂದೆ ತಾಯಿಗೆ ಉತ್ತಮ ಮಗಳಾಗಿ ಬಾಳಬೇಕು. ಸಮಾಜ ಸೇವೆಯನ್ನು ಮಾಡಬೇಕೆಂದು ಆಸೆ ಪಟ್ಟಿದ್ದೇನೆ. ಎಲ್ಲರಿಗೂ ಮಾದರಿಯಾಗುವ ಗುಣ ನನ್ನಲ್ಲಿ ಇನ್ನು ಹೆಚ್ಚು ಬೆಳೆಸಿಕೊಳ್ಳಬೇಕು.

ಧನ್ಯವಾದಗಳು.