ಸದಸ್ಯ:Ranjana Reddy/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Criando criterios busca Zoho CRM

ವಿದ್ಯುನ್ಮಾನ ಗ್ರಾಹಕ ಸಂಬಂಧ ನಿರ್ವಹಣಾ (ಇ-ಸಿ.ಆರ್.ಎಂ) ನ ಕಾರ್ಯಗಳಾದ ಇಂಟ್ರಾನೆಟ್, ಎಕ್ಸ್ಟ್ರಾನೆಟ್ ಮತ್ತು ಇಂಟರ್ನೆಟ್ ಬಳಕೆಯಿಂದ ಒಳಗೊಳ್ಳುತ್ತದೆ. ಎಲೆಕ್ಟ್ರಾನಿಕ್ ಸಿ.ಆರ್.ಎಂ[೧] ಗ್ರಾಹಕರಿಗೆ ಸಂಬಂಧ ವ್ಯವಸ್ಥಾಪಕವನ್ನು ಮಾಹಿತಿ ತಂತ್ರಜ್ನಾನ ಬಳಕೆಯಿಂದ ಮಾಡ ಬಹುದು. ಒಂದು ಉದ್ಯಮವಾದ ಇ.ಸಿ.ಆರ್.ಎಂ ಐಟಿ ಬಳಕೆಯಿಂದ ಆಂತರಿಕ ಸಂಸ್ಥೆಯ ಸಂಪನ್ಮೂಲಗಳನ್ನು ಸಂಯೋಜಿಸಿ ಮತ್ತು ಬಾಹ್ಯ "ಮಾರ್ಕೆಟಿಂಗ್" ತಂತ್ರಗಳನ್ನು ಅರ್ಥ ಮಾಡಿಕೊಂಡು, ಗ್ರಾಹಕರ ಅಗತ್ಯಗಳನ್ನು ಪೂರೈಸುವ ಕಾರ್ಯ ಮಾಡ ಬಹುದು.

ಆರ್.ಎಂ ನಿಂದ ಸಿ.ಆರ್.ಎಂ[ಬದಲಾಯಿಸಿ]

ಸಂಬಂಧ ಮಾರ್ಕೆಟಿಂಗ್(ಆರ್.ಎಂ) ಎಂಬ ಪರಿಕಲ್ಪನೆಯನ್ನು ೧೯೮೩ರಲ್ಲಿ ಮಾರಾಟ ವಿಭಾಗದ ಪ್ರೊಫೆಸರ್ ಲಿಯೊನಾರ್ಡ ಬೆರ್ರಿ[೨] ಸ್ಥಾಪಿಸಿದರು. ಬೆರ್ರಿರವರು ಆರ್.ಎಂ ನನ್ನು ಹೀಗೆ ಪರಿಗಣಿಸಿದರು, ಅದು ಆಕರ್ಶಿಸುವ, ನಿರ್ವಹಿಸುವ, ಮತ್ತು ಸಂಸ್ಥೆಯಲ್ಲಿ ಗ್ರಾಹಕ ಸಂಬಂಧ ಹೆಚ್ಚಿಸುವ ಗುಣಗಳನ್ನು ಒಳಗೊಂಡಿರುವ ಪರಿಕಲ್ಪನೆ. ಕೆಲವು ವರ್ಷಗಳು ಕಳೆಯುತ್ತಲೆ ಹೊಸ ಸಂಸ್ಥೆಗಳು ತಂತ್ರಜ್ನಾನಗಳನ್ನು ಬಳಸಲು ಆರಂಭಿಸಿದರು. ಅದರ ಪರಿಣಾಮವಾಗಿ ಗ್ರಾಹಕ ಸಂಬಂಧ ನಿರ್ವಹಣಾ(ಸಿ.ಆರ್.ಎಂ) ಬಂದಿತು.
ಸಿ.ಆರ್.ಎಂ ಮತ್ತು ಇ.ಸಿ.ಆರ್.ಎಂ ನ ಮುಖ್ಯ ವ್ಯತ್ಯಾಸವೇನೆಂದರೆ ಸಿ.ಆರ್.ಎಂ ತಂತ್ರಜ್ನಾನದ ಬಳಕೆಯನ್ನು ಗುರುತಿಸುವುದಿಲ್ಲ ಆದರೆ ಇ.ಸಿ.ಅರ್.ಎಂ ಮಾಹಿತಿ ತಂತ್ರಜ್ನಾನದ ಮೂಲಕ ಆರ್.ಎಂ ಯೋಜನೆಗಳನ್ನು ಕಾರ್ಯಗೊಳಿಸುತ್ತದೆ.

ಸಿ.ಆರ್.ಎಂ ರಿಂದ ವ್ಯತ್ಯಾಸಗಳು[ಬದಲಾಯಿಸಿ]

ಸಿ.ಆರ್.ಎಂ ಮತ್ತು ಇ.ಸಿ.ಆರ್.ಎಂ ನಡುವಿನ ಪ್ರಮುಖ ವ್ಯತ್ಯಾಸಗಳು: ಗ್ರಾಹಕ ಸಂಪರ್ಕಗಳು

  • ಸಿ.ಆರ್.ಎಂ - ಚಿಲ್ಲರೆ ಅಂಗಡಿ, ಫೋನ್ ಮತ್ತು ಫ್ಯಕ್ಸ್ ಮೂಲಕ ಗ್ರಾಹಕ ಸಂಪರ್ಕಿಸ ಬಹುದು.`
  • ಇ.ಸಿ.ಆರ್.ಎಂ - ಎಲ್ಲಾ ಸಾಂಪ್ರದಯಿಕ ವಿಧಾನಗಳನ್ನು ಇಂಟರ್ನೆಟ್, ಇಮೇಲ್, ವೈಯರ್ಲೆಸ್ ತಂತ್ರಜ್ನಾನಗಳ ಜೊತೆಗೆ ಬಳಸಲಾಗುತ್ತದೆ.

ಸಿಸ್ಟಮ್ ಇಂಟರ್ಫೇಸ್

  • ಸಿ.ಆರ್.ಎಂ - ಇ.ಆರ್.ಪಿ ವ್ಯವಸ್ಥೆಗಳ ಬಳಕೆ ಕೈಗೊಳ್ಳುತ್ತದೆ.
  • ಇ.ಸಿ.ಆರ್.ಎಂ - ಇ.ಆರ್.ಪಿ, ಮಾಹಿತಿ ಉಗ್ರಾಣ, ಮಾಹಿತಿ ಸರಹದ್ದು ಮೂಲಕ ಮತ್ತೆ ಕೊನೆಯಲ್ಲಿ ಸಂವಹನ ಮಾಡ ಬಹುದು.

ಸಿಸ್ಟಮ್ ಓವರ್ಹೆಡ್

  • ಸಿ.ಆರ್.ಎಂ - ವೆಬ್ ಶಕ್ತಗೊಂಡ ಅನ್ವಯಗಳನ್ನು ಗ್ರಾಹಕ ವೀಕ್ಷಿಸಲು ವಿವಿಧ ಅನ್ವಯಗಳ ಡೌನ್ಲೋಡ್ ಮಾಡಬೇಕು. ಅದು ವಿವಿಧ ಕಾರ್ಯಕ್ರಮಕ್ಕೆ ಮರು ಬರೆಯಬೇಕು.
  • ಇ.ಸಿ.ಆರ್.ಎಂ - ಗ್ರಾಹಕರು ಬೌಸರ್ನನ್ನು ಬಳಸುತ್ತಾರೆ.

ವೈಯಕ್ತಿಕ ಬದಲಾವಣೆ(ಕಸ್ಟಮೈಸೇಶನ್) ಮತ್ತು ಮಾಹಿತಿ ವೈಯಕ್ತೀಕರಣ

  • ಸಿ.ಆರ್.ಎಂ - ಅಭಿಪ್ರಯಗಳು ವೀಕ್ಷಕರ ಮೇಲೆ ಅವಲಂಬಿಸಿರುತ್ತದೆ ಮತ್ತು ವೈಯಕ್ತಿಕ ಅಭಿಪ್ರಾಯಗಳ ಲಭ್ಯವಿರುವುದಿಲ್ಲ. ಒಂದೊಂದು ವೈಯಕ್ತೀಕರಣಕ್ಕೆ ಪ್ರೋಗ್ರಾಮ್ನಲ್ಲಿ ಬದಲಾವಣೆ ಅಗತ್ಯವಿರುತ್ತದೆ.
  • ಇ.ಸಿ.ಆರ್.ಎಂ - ವೈಯಕ್ತೀಕಗೊಳಿಸಲು ಮಾಲಿಕನ ಅಭಿಪ್ರಾಯಗಳ ಮೇಲೆ ಅವಲಂಬಿಸುತ್ತದೆ. ಒಬ್ಬ ವ್ಯಕ್ತಿಗೆ ಅಭಿಪ್ರಾಯವನ್ನು ಕಸ್ಟಮೈಸ್ ಮಾಡುವ ಸಾಮರ್ಥ್ಯ ಇದೆ.

ವ್ಯವಸ್ಥೆ ಗಮನ

  • ಸಿ.ಅರ್.ಎಂ - (ಆಂತರಿಕ ಬಳಕೆಗೆ ದಾಖಲಿಸಲಾಗಿದೆ) ಕೆಲಸ ಕಾರ್ಯ ಮತ್ತು ಉತ್ಪನ್ನಗಳನ್ನು ಆಧರಿಸಿ ವ್ಯವಸ್ಥೆ(ಸಿಸ್ಟಮ್) ವಿನ್ಯಾಸಗೊಳಿಸಲಾಗಿದೆ. ವೆಬ್ ಅಪ್ಲಿಕೇಶನ್ಗಳನ್ನು ಒಂದು ಇಲಾಖೆ ಅಥವಾ ವ್ಯಾಪಾರ ಘಟಕಕ್ಕಾಗಿ ವಿನ್ಯಾಸಗೊಳಿಸಲಾಗಿದೆ.
  • ಇ.ಸಿ.ಅರ್.ಎಂ - (ಬಾಹ್ಯ ಬಳಕೆಗೆ ದಾಖಲಿಸಲಾಗಿದೆ) ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ವ್ಯವಸ್ಥೆ ವಿನ್ಯಾಸವಾಗಿದೆ. ವೆಬ್ ಅಪ್ಲಿಕೇಶನ್ಗಳನ್ನು ಉದ್ಯಮ ವ್ಯಾಪಕ ಬಳಕೆಗೆ ವಿನ್ಯಾಸಗೊಳಿಸಲಾಗಿದೆ.

ವ್ಯವಸ್ಥೆ ನಿರ್ವಹಣ ಮತ್ತು ಬದಲಾವಣೆ

  • ಸಿ.ಅರ್.ಎಂ - ಅನುಷ್ಠಾನ ಹೆಚ್ಚುಸಮಯ ಒಳಗೊಳ್ಳುತ್ತದೆ ಮತ್ತು ನಿರ್ವಹಣೆಗೆ ಹೆಚ್ಚು ದುಬಾರಿಯಾಗುತ್ತದೆ ಏಕೆಂದರೆ ವ್ಯವಸ್ಥೆ ವಿವಿಧ ಸ್ಥಳಗಳಲ್ಲಿ ಮತ್ತು ವಿವಿಧ ಸರ್ವರ್ಗಳಲ್ಲಿ ನಡೆಯುತ್ತದೆ.
  • ಇ.ಸಿ.ಆರ್.ಎಂ - ಸಮಯ ಮತ್ತು ವೆಚ್ಚ ಕಡಿತ. ಅನುಷ್ಠಾನ ಮತ್ತು ನಿರ್ವಹಣೆ ಒಂದು ಸ್ಥಳದಲ್ಲಿ ಮತ್ತು ಒಂದು ಸರ್ವರ್ನಲ್ಲಿ ನಡೆಯುತ್ತದೆ.

ಇ.ಸಿ.ಆರ್.ಎಂ ನ ಪ್ರಯೋಜನಗಳನ್ನು[ಬದಲಾಯಿಸಿ]

  • ಗ್ರಾಹಕ ಸಂಬಂಧ, ಸೇವೆ ಮತ್ತು ಬೆಂಬಲದ ಅಭಿವೃದ್ಧಿ
  • ಸೂಕ್ತ ಪ್ರಸ್ತಾಪದೊಂದಿಗೆ ಗ್ರಾಹಕರ ವರ್ತನೆಯೊಂದಿಗೆ ಹೊಂದಾಣಿಕೆ
  • ಹೆಚ್ಚಿದ ಗ್ರಾಹಕ ತೃಪ್ತಿ ಮತ್ತು ನಿಷ್ಠೆ
  • ಹೆಚ್ಚಿನ ದಕ್ಷತೆಯನ್ನು ಮತ್ತು ವೆಚ್ಚ ಕಡಿತ
  • ಹೆಚ್ಚಿದ ವ್ಯಾಪಾರ ಆದಾಯ

ವಿವಿಧ ಹಂತಗಳು[ಬದಲಾಯಿಸಿ]

ಇ.ಸಿ.ಅರ್.ಎಂ ವ್ಯಾಪ್ತಿಯನ್ನು ವಿಶದೀಕರಿಸುವಾಗ ಮೂರು ವಿವಿಧ ಹಂತಗಳ ವಿಂಗಡಿಸ ಬಹುದು:

  • ೧. ಫೌಂಡೇಶನ್ ಸೇವೆಗಳು:

ಕನಿಷ್ಠ ಅಗತ್ಯ ಸೇವೆಗಳಾದ ವೆಬ್ಸೈಟ್ ಪರಿಣಾಮಕಾರಿತ್ವ ಮತ್ತು ಜವಾಬ್ದಾರಿ ಹಾಗು ಬೇಡಿಕೆಗಳ ಈಡೇರಿಕೆಯನ್ನು ಒಳಗೊಂಡಿರುತ್ತದೆ.

  • ೨. ಗ್ರಾಹಕ ಕೇಂದ್ರಿತ ಸೇವೆಗಳು:

ಈ ಸೇವೆಗಳು ಸಲುವಾಗಿ ಆರ್ಡರ್ ಟ್ರ್ಯಾಕಿಂಗ್, ಉತ್ಪನ್ನ ಸಂರಚನೆ ಮತ್ತು ಕಸ್ಟಮೈಸೇಶನ್ ಹಾಗು ಭದ್ರತೆ/ಟ್ರಸ್ಟ್ ಸೇರುತ್ತದೆ.

  • ೩. ಮೌಲ್ಯವರ್ಧಿತ ಸೇವೆಗಳು:

ಇವುಗಳು ಆನ್ಲೈನ್ ಹರಾಜು ಮತ್ತು ಆನ್ಲೈನ್ ತರಬೇತಿ ಹಾಗು ಶಿಕ್ಷಣ ನಂತಹ ಹೆಚ್ಚುವರಿ ಸೇವೆಗಳನ್ನು ಒಳಗೊಂಡಿರುತ್ತದೆ. ಸ್ವಯಂ ಸೇವೆಗಳು ಸಿ.ಅರ್.ಎಂ ಚಟುವಟಿಕೆಗಳಲ್ಲಿ ಹೆಚೆಚ್ಚು ಪ್ರಮುಖ ಹರಡಿದೆ. ಇಂಟರ್ನೆಟ್ ಮತ್ತು ಇ.ಸಿ.ಆರ್.ಎಂ ಏರಿಕೆ ಸ್ವಯಂ ಸೇವಾ ಚಟುವಟಿಕೆಗಳಿಗೆ ಆಯ್ಕೆಗಳನ್ನು ವಿಸ್ತರಿಸುತ್ತಾ ಬಂದಿದೆ.

ಇ.ಸಿ.ಆರ್.ಎಂ ಯಶಸ್ಸಿನ ಕ್ರಮಗಳು[ಬದಲಾಯಿಸಿ]

Automated online assistant

ಅನೇಕ ಅಂಶಗಳು, ಇ.ಸಿ.ಆರ್.ಎಂ ನ ಯಾವುದೇ ಹಂತವನ್ನು ಅನುಷ್ಠಾನ ಮಾಡುವುದರಲ್ಲಿ ಯಶಸ್ವಿ ಪಾತ್ರ ವಹಿಸಿಕೊಂಡಿವೆ. ಈ ರೀತಿಯ ಯೋಜನೆಯ ಕಾರ್ಯಸಾಧ್ಯತೆಗೆ ನಾಲ್ಕು ಅನುಷ್ಠಾನ ಕ್ರಮಗಳಿವೆ:

  • ಗ್ರಾಹಕ ಕೇಂದ್ರಿತ ತಂತ್ರಗಾರಿಕೆಗಳನ್ನು ಅಭಿವೃದ್ಧಿಗೊಳಿಸುವುದು.
  • ಕೆಲಸದೊತ್ತಡ ನಿರ್ವಹಣಾ ವ್ಯವಸ್ಥೆಗಳ ಮರುವಿನ್ಯಾಸ.
  • ರಿ-ಇಂಜಿನಿಯರಿಂಗ್ ಕೆಲಸ ಪ್ರಕ್ರಿಯೆಗಳು.
  • ಸರಿಯಾದ ತಂತ್ರಜ್ನಾನಗಳ ಪೋಷಣೆ

ಮೊಬೈಲ್ ಸಿ.ಆರ್.ಎಂ[ಬದಲಾಯಿಸಿ]

ಮೊಬೈಲ್ ಸಿ.ಆರ್.ಎಂ[೩] ಎಲೆಕ್ಟ್ರಾನಿಕ್ ಸಿ.ಆರ್.ಎಂ ನ ಒಂದು ಉಪವಿಭಾಗ. ಮೊಬೈಲ್ ಸಿ.ಆರ್.ಎಂ ಅನ್ನು ಹೀಗೆ ವರ್ಣಿಸಲಾಗಿದೆ, "ಒಂದು ದಾರಿಯಲ್ಲಿ ಅಥವ ಪರಸ್ಪರ ಸಂಪರ್ಕ, ಮಾರಾಟಕ್ಕೆ ಸಂಬಂಧ ಪಟ್ಟಿರುವುದು, ಮಾರ್ಕೆಟಿಂಗ್ ಮತ್ತು ಗ್ರಾಹಕ ಸೇವೆ ಚಟುವಟಿಕೆಗಳನ್ನು ಮೊಬೈಲ್ ಮೂಲಕ ಗ್ರಾಹಕ ಸಂಬಂಧವನ್ನು ಗ್ರಾಹಕ ಮತ್ತು ಕಂಪನಿ ನಡುವೆ ಕಟ್ಟುವುದಕ್ಕೆ ಮತ್ತು ಪಾಲಿಸುವುದಕ್ಕೆ."

ಮೊಬೈಲ್ ಸಿ.ಆರ್.ಎಂ ನ ಪ್ರಯೋಜನಗಳು

  • ಮೊಬೈಲ್ ಚಾನೆಲ್ ಗ್ರಾಹಕರೊಂದಿಗೆ ಹೆಚ್ಚು ವೈಯಕ್ತಿಕ ನೇರ ಸಂಪರ್ಕವನ್ನು ಸೃಷ್ಟಿಸುತ್ತದೆ.
  • ಇದು ನಿರಂತರವಾಗಿ ಸಕ್ರಿಯವಾಗಿರುತ್ತದೆ ಮತ್ತು ಅಗತ್ಯ ವ್ಯಕ್ತಿಗಳು ಮಾಹಿತಿಯನ್ನು ಬಳಸಿಕೊಂಡು ತ್ವರಿತವಾಗಿ ಕ್ರಮ ತೆಗೆದುಕೊಳ್ಳಲು ಅನುಮತಿಸುತ್ತದೆ.
  • ಸಾಮಾನ್ಯವಾಗಿ ಇದು ಒಂದು ಹೆಚ್ಚು ಮತ್ತು ಗುಣಮಟ್ಟದ ಜವಾಬ್ದಾರಿ ಅನುಮತಿಸುವ ಚಾನಲ್ ಆಗಿದೆ.
  • ಒಟ್ಟಾರೆ ಇದು ಸಂಬಂಧಗಳನ್ನು ಬಲಗೊಳಿಸುತ್ತದೆ ಹಾಗು ಗ್ರಾಹಕ ಮತ್ತು ಕಂಪನಿ ನಡುವೆ ನಿಷ್ಠೆ ಬೆಂಬಲಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]