ಸದಸ್ಯ:Ramakrushna rama/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
    ಪ್ರಜ್ಞೆ೯ಟಕ  ವತ೯ಮಾನದ ತಲ್ಲಣಗಳು

" ಸಾವಿರಾರು ವಷ೯ಗಳ ಸಾಹಿತ್ಯ ಪರಂಪರೆಯುಳ್ಳ ಕನ್ನಡಭಾಷೆ ಜಗತ್ತಿನ ಶ್ರೀಮಂತ ಭಾಷೆಗಳಲ್ಲಿ ಒಂದಾಗಿದೆ. ಕನ್ನಡಸಂಸ್ಕ್ರತಿ ಬಹುಮುಖೀ ಸಂಸ್ಕ್ರತಿಯಾಗಿದ್ದು ತನ್ನ ವೈವಿಧ್ಯತೆಗೆ ಹೆಸರಾಗಿದೆ. ಸಹನೆ, ಕನ್ನಡಸಂಸ್ಕ್ರತಿಯ ಮೂಲಗುಣ. ಎಲ್ಲಾ, ಜಾತಿ, ಧಮ೯ಗಳು, ಭಾಷೆ, ಉಪಭಾಷೆಗಳು, ಸಂಸ್ಕ್ರತಿ, ಉಪಸಂಸ್ಕ್ರತಿಗಳು ಶತಶತಮಾನಗಳ ಕಾಲ ಸಹಬಾಳ್ವೆ ಮಾಡಿದ್ದು ಇಲ್ಲಿಯ ವಿಶೇಷ.


ಆಳ್ವಾಸ್ ನುಡಿಸಿರಿ ೨೦೧೪ರ ೧೧ನೇ ಕನ್ನಡ ನಾಡು  ನುಡಿಯ ರಾಷ್ಟ್ರೀಯ ಸಮ್ಮೇಳನದ ಉದ್ಘಾಟಕರೂ, ನಾಡಿನ  ಹಿರಿಯ  ಸಾಹಿತಿಗಳೂ  ಆದ  ಶ್ರೀ  ನಾ.ಡಿಸೋಜ ಅವರೆ, ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಸಮ್ಮೇಳನದ  ರೂವಾರಿಗಳಾದ  ಡಾ. ಎಂ ಮೋಹನ ಆಳ್ವ  ಅವರೆ  ಮತ್ತು  ನನ್ನ  ಆತ್ಮೀಯ  ಮಿತ್ರರೂ, ಕನಾ‍೯ಟಕ  ಸಕಾ೯ರದ ಯುವ ಜನಸೇವೆ ಮತ್ತು  ಮೀನುಗಾರಿಕೆ ಸಚಿವರೂ ಆದ  ಶ್ರೀ ಕೆ. ಅಭಯಚಂದ್ರ ಜೈನ್  ಅವರೆ, ಮಾಜಿ ಸವಿಚರಾದ  ಶ್ರೀ  ಕೆ. ಅಮರನಾಥ ಶೆಟ್ಟಿ ಅವರೆ, ಶ್ರೀಮತಿ  ಅಮರನಾಥ ಶೆಟ್ಟ ಅವರೆ, ಹಿರಿಯಾದ  ಶ್ರೀ  ಮುಜಾರುಗುತ್ತ ಆನಂದ ಆಳ್ವ ಅವರೆ, ಪುರಸಭಾಧ್ಯಕ್ಷರಾದ ಶ್ರೀಮತಿ  ಸುಪ್ರಿಯಾ ಡಿ.ಶೆಟ್ಟಿ ಅವರೆ, ಈ ಸಲದ ಆಳ್ವಾಸ್ ನುಡಿಸಿರಿ ಸಮ್ಮೇಳನದ ಸವಾ೯ಧ್ಯಕ್ಷತೆಯನ್ನು  ವಹಿಸಲು ಡಾ. ಎಂ ಮೋಹನ್ ಆಳ್ವ ಅವರು  ನನ್ನನ್ನು ಕೋರಿದಾಗ ನನಗೆ ಆಶ್ಚಯ೯ವೂ, ಸಂತೋಷವೂ ಆಯಿತು.  ಅವರ  ಔದಯ೯ ಮತ್ತು ವಿಶ್ವಾಸಕ್ಕೆ  ಮಣಿದು  ಸಂಕೋಚದಿಂದಲ್ಲೇ ಆಹ್ವಾನವನ್ನು ಸ್ವೀಕರಿದ್ದೇನೆ. 
 ಕಳೆದ ವಷ೯ ನಡೆದ ಆಳ್ವಾಸ್ ನುಡಿಸಿರಿಯ ೧೦ನೇ ಸಮ್ಮೇಳನದ ಸವಾ‍೯ಧ್ಯಕ್ಷರಾದ ಡಾ. ಬಿ,ಎ ವಿವೇಕ ರೈ ಅವರು ತಮ್ಮ ಭಾಷಣದಲ್ಲಿ  ನಾಡುನುಡಿಯ  ಬಗ್ಗೆ ಬಹಳ ಮೌಲಿಕವಾದ  ಚಿಂತನೆಗಳನ್ನು  ಮಂಡಿಸಿ  ನಮ್ಮೇಲ್ಲರ ಕಣ್ತೆರೆಸಿದ್ದಾರೆ. ೨೦೦೬ನೇ ಸಾಲಿನ ನುಡಿಸಿರಿ ಸಮ್ಮೇಳನಕ್ಕೆ  ಉದ್ಘಾಟಕನಾಗಿ ಆಗಮಿಸಿ ನನ್ನ ಭಾವನೆಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಅವಕಾಶವನ್ನು ಡಾ. ಎಂ ಮೋಹನ ಆಳ್ವ ಅವರು  ನನಗೆ ದೊರಕಿಸಿ ಕೊಟ್ಟಿದ್ದರು. ಆ ವಷ೯ ಸಮ್ಮೇಳನದ  ಸವಾ‍೯ಧ್ಯಕ್ಷರಾಗಿದ್ದ  ಜ್ಞಾನಪೀಠಿ ಪ್ರಶಸ್ತಿ  ಪುರಸ್ಕ್ರತ ಸಾಹಿತಿ ಡಾ. ಚಂದ್ರಶೇಖರ ಕಂಬಾರರು ಜಾಗತೀಕರಣದ  ಸಂದಭ‍೯ದಲ್ಲಿ  ಕನ್ನಡಭಾಷೆ ಮತ್ತು ಸಂಸ್ಕ್ರತಿಗೆ ಎದುರಾಗಿರುವ  ಆತಂಕವನ್ನು  ಗುರುತಿಸಿದ್ದರು. ಆಳ್ವಾಸ್ ನುಡಿಸಿರಿ  ಪ್ರಥಮ  ಸಮ್ಮೇಳನದ  ಸವಾ‍೯ಧ್ಯಕ್ಷರಾಗಿದ್ದು  ಹಿರಿಯ  ಬಂಡಾಯ ಸಾಹಿತಿ  ಶ್ರೀ ಬರಗೂರು  ರಾಮಚಂದ್ರಪ್ಪನವರು ತಮ್ಮ ಭಾಷಣದಲ್ಲಿ " ಕೆಂಡದ ಒಡಲಲ್ಲಿ ಕೊಂಡ ಹಾಯುತ್ತಲೇ ಶುಭಾದಶೋಧ  ನಡೆಸಿದ್ದು ಕನ್ನಡ ಮನಸ್ಸು" ಎಂದು ಹೇಳಿದ್ದರು. ಈ  ಹಿರಿಯರೆಲ್ಲ ಹಚ್ಚಿದ ಕನ್ನಡ ಜ್ಯೋತಿಯ ಬೆಳಕಿನ ನನ್ನ  ಕೆಲವು ಅಲೋಚನೆಗಳನ್ನು  ತಮ್ಮೊಡನೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. 
 ಸಾವಿರರು ವಷ೯ಗಳ ಸಾಹಿತ್ಯ ಪರಂಪರೆಯುಳ್ಳ ಕನ್ನಡಭಾಷೆ ಜಗತ್ತಿನ ಶ್ರೀಮಂತಿ ಭಾಷೆಗಳಲ್ಲಿ  ಒಂದಾಗಿದೆ. ಕನ್ನಡಸಂಸ್ಕ್ರತಿ ಬಹುಮುಖಿ ಸಂಸ್ಕ್ರತಿಯಾಗಿದ್ದು ತನ್ನ ವೈವಿಧ್ಯತೆ ಹೆಸರಾಗಿದೆ. ಸಹನೆ, ಕನ್ನಡಸಂಸ್ಕ್ರತಿಯ ಮೂಲಗುಣ. ಎಲ್ಲಾಜಾತಿ,ಧಮ೯ಗಳು, ಭಾಷೆ, ಉಪಭಾಷೆಗಳು, ಸಂಸ್ಕ್ರತಿ, ಉಪಸಂಸ್ಕ್ರಗಳುಇ ಶತಶತಮಾನಗಳ ಕಾಲ ಸಹಬಾಳ್ವೆ ಮಾಡಿದ್ದು ಇಲ್ಲಿಯ ವಿಶೇಷ. ಆಗಾಗ ಸಣ್ಣ  ಪ್ರಮಾಣದ ಸಂಘಷ೯ಗಳು ಸಂಭವಿಸಿದರೂ, ಅದನ್ನು ಅರಗಿಸಿಕೊಂಡು ಮೀರಿ ಬೆಳೆಯುವ ಶಕ್ತಿಯನ್ನು ಕನ್ನಡಭಾಷೆ ತೋರುತ್ತ ಬಂದಿದೆ. ಪ್ರಸ್ತುತ ಕನ್ನಡಭಾಷೆಗೆ ಒದಗಿರುವ ಗಂಡಾಂತರ ಕನ್ನಡಪ್ರೇಮಿಗಳನ್ನು ಆತಂಕಕ್ಕೆ ಈಡುಮಾಡಿದೆ. ನಮ್ಮ ಕಣ್ಮಂದೆಯೇ  ನಮ್ಮ ಮಕ್ಕಳು  ಕನ್ನಡದಿಂದ  ದೂರವಾಗಿ ಸಂಸ್ಕ್ರತಿಯ ಬೇರುಗಳನ್ನು ಕಳೆದುಕೊಂಡು  ತ್ರಿಶಂಕು ಸ್ಥಿತಿಯತ್ತ ಸಾಗುತ್ತಿರುವ ದುರಂ<ತವನ್ನು ನಾವು ನೋಡುತ್ತಿದ್ದೇವೆ. ಮಅತನಾಡಲು ಕಲಿಯುತ್ತಿರುವ  ನಕ್ಕಳುಬ ಕೂಡ ಇಂಗ್ಲೀಷಿನಲ್ಲೇ ತೂದಲುತ್ತಿರುವುದನ್ನು ನೋಡಿದರೆ ಸಂಕಟವಾಗುತ್ತದೆ. 
೧೯೨೧ ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಭಾರತ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ  ಸರ್.ಎಂ. ಪುಟ್ಟಣ್ಣಚೆಟ್ಟ ಅವರು ಹೇಳಿದ ಒಂದು ಪ್ರಸಂಗ ನೆನಪಾಗುತ್ಯತದೆ. " ಕನ್ಯಾಪಿತೃ" ವೊಬ್ಬ ತನ್ನ ಮಗಳನ್ನು  ಸೂಕ್ತ  ವರನಿಗೆ  ಕೊಟ್ಟು ಮದುವೆ  ಮಾಡಿದ್ದ. ಅಳಿಯನಾದವನು ಮಾವಕ್ಷೇಮ ಸಮಾಚಾರವನ್ನು ವಿಚಾರಿಸಿ ಒಮದು ಪತ್ರ ಬರೆದ. ಪತ್ರವನ್ನು ಒಡೆದ ನೋಡಿದ  ಮಾವ, ಪತ್ರದಲ್ಲಿರುವ ವಿಷಯಗಳನ್ನು ಓದುವುದಕ್ಕಿಂತ  ಮೊದಲ್ಲೇ  ಕೂಗಾಡಲು  ತೊಡಗಿದ.  ಅಳಿಯನ ಮೇಲೆ  ಕಿಡಿಕಾರ ತೊಡಗಿದ, ಮಾವನ  ಕೋಪಕ್ಕೆ ಕಾರಣವೇನೆಂರೆ ಅಳಿಯ ಪತ್ರವನ್ನು ಕನ್ನಡದಲ್ಲಿ ಬರೆದದ್ದು. ಇವನು ಕನ್ನಡದಲ್ಲಿ ಪತ್ರ ಬರೆಯುತ್ತಾನೆಂದು ಗೊತ್ತಿದ್ದರೆ ನನ್ನ ಮಗಳನ್ನು ಇವನಿಗೆ  ಕೊಟ್ಟು ಮದುವೆ ಮಾಡುತ್ತಿರಲಿಲ್ಲ ಎಂದು ಇಂಗ್ಲೀಷ್ ಪ್ರೇಮಿ ಮಾವ ರೇಗಾಡಿದ . ಆದರೆ ಇಂಗ್ಲೀಷ್ ಮಾವ ಅಸಹಾಯಕಗಿದ್ದು, ಆಗಲ್ಲೇ ಮಗಳು ಮದುವೆಯಾಗಿ ಗಂಡನ ಮನೆ ಸೇರಿ ಆಗಿತ್ತು. 
 ಈ ಮಾತನ್ನು ಸುಮಾರು ತೊಂಬತ್ತು ವಷ೯ಗಳ ಹಿಂದೆ ಪುಟ್ಟಣ್ಣಚೆಟ್ಟರು ಹೇಳಿದ್ದರೂ ಕೂಡ, ಇಂಗ್ಲೀಷ್ ಮಾವಂದಿನ  ಸಂತಾನ ಹೆಚ್ಚುತ್ತಲೇ ಇದೆ. ಪ್ರಾಥಮಿಕ  ಪೂವ‍೯ಶಿಕ್ಷಣವನ್ನು  ತಮ್ಮ ಮಕ್ಕಳಿಗೆ ಆಂಗ್ಲ ಭಾಷೆಯಲ್ಲೇ ಕೊಡಿಸಬೇಕೆಂಬ ಗೀಳನ್ನು  ಹಚ್ಚಿಕೊಂಡ ಪೋಷಕರು ಬೆಳಗಿನ ಜಾವದ ಚಳಿಯಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಮುಂದೆ ನಡುಗುತ್ತ ಸರತಿಯ ಸಾಲಿನಲ್ಲಿ ನಿಲದ್ಲುವುದನ್ನು ಕಂಡಾಗ ವ್ಯಥೆಯಾಗುತ್ತದೆ. ಕೆಲವು ಶಾಲೆಗಳಲ್ಲಿ ವಿದ್ಯಾವಂತರಲ್ಲದೆ ತಂದೆ ತಾಯಿಯರ ಮಕ್ಕಳಿಗೆ ಪ್ರವೇಶವಿಲ್.  ಹೆತ್ತವರಿಗೂ ಆಂಗ್ಲಭಾಷೆ ಪರಿಜ್ಞಾನ ಕಟ್ಟಾಯ. ಶಾಲೆಗೆ ಸೇರಿದ  ಮಕ್ಕಳು ಅಕಸ್ಮತ್ ಕನ್ನಡದಲ್ಲಿ ಮಾತಾಡಿದರೆ ಅವರಿಗೆ ದಂಡ, ಬತ್ತದೇಟು. ಶುಲ್ಕದ  ವಿಷಯ ಬಂದರೆ ಬಡವರು ಬೆಚ್ಚಿ ಬೀಳುವಂತಾಗುತ್ತದೆ. ಏಂಕೆಂದರೆ  ಶಾಲೆಯ ಆಡಳಿತ ಮಂಡಳಿಯವರಿಗೆ  ಪೋಷಕರು ಕೇಜಿಗಟ್ಟಲೆ ರೂಪಾಯಿಗನ್ನು ಕಕ್ಕಬೇಕು.  ಇದಕ್ಕೆ ಪರಿಹಾರವೇನು? ಏಕರೂಪ ಶಿಕ್ಷಣ ನೀತಿಯೇ  ಇದಕ್ಕೆ  ಪರಿಹಾರ. ಇತ್ತೀಚ್ಚೆಗೆ  ಬಂದ  ಸವೋ೯ಚ್ಚ ನ್ಯಾಯಾಲಯದ  ತೀಪು‍ ಗಾಯದ  ಮೇಲೆ ಬರೆ ಎಳೆದಂತಾಗಿದೆ.  ಪ್ರಾಥಮಿಕ ಶಿಕ್ಷಣದ  ಭಾಷಾಮಾಧ್ಯಮದ ಆಯ್ಕೆ ಪೋಷಕರಿಗೆ ಬಿಟ್ಟುದ್ದು ಎಂಬ ತೀಪು೯ ಬಡವರು ಮತ್ತು ಶ್ರೀಮಂತರ  ನಡುವೆ ಕ್ಷಣಿಕ ಕಂದಕವನ್ನು ಹೆಚ್ಚಿಸುವುದಲ್ಲದೆ, ವಗ೯ವ್ಯವಸ್ಥೆಯನ್ನು ಪೋಷಣೆ ಮಾಡಿದಂತಾಗುತ್ತದೆ.  ನಮ್ಮ ಸಕಾ೯ರ ಈ ತೀಪು೯ನ್ನು ವಿರೋಧಿಸಿ  ಕೊಡಲ್ಲೇ ಮೇಲ್ಮನವಿಯನ್ನು  ಸಲ್ಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಇತ್ತೀಚಿನ ಕೇಂದ್ರ ಸಕಾ೯ರ ರಾಜ್ಯಗಳ  ಮೇಲೆ ಹಿಂದಿ ಹೇರಿಕೆಯನ್ನು ಮಾಡುತ್ತಿರುವುದು ಖಂಡನೀಯ.