ಸದಸ್ಯ:Rakshitha mp/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ನೇಹಿತರು ಈ ಜಗತ್ತಿನಲ್ಲಿ ಸ್ನೇಹಕ್ಕೆ ಮತ್ತು ಸ್ನೇಹಿತರಿಗೆ ಇರುವ ಬೆಲೆ ಅಪಾರ. ಸ್ನೇಹಿತರಲ್ಲಿ ಎರಡು ರೀತಿಯ ಸ್ನೇಹಿತರು ಇರುತ್ತಾರೆ. ಒಬ್ಬರು ಜೀವಕ್ಕೆ ಜೀವ ಕೊಡುವ ಸ್ನೇಹಿತರು ಮತ್ತು ಇನ್ನೊಬ್ಬರು ಸ್ನೇಹ ಎಂಬ ಹೆಸರಿನಲ್ಲಿ ಮೋಸ ಮಾಡುವವರು. ಹೀಗೇ ಇರುವ ಜಗತ್ತಿನಲ್ಲಿ, ನಾನೂ ಹೇಳಿದ ಹಾಗೇ ಎರಡು ರೀತಿ ಸ್ನೇಹಿತರ ಪರಿಚಯ ಇರಬಹುದು. ಈಗಿನ ಜಗತ್ತಿನಲ್ಲಿ ಒಳ್ಳೆಯ ಸ್ನೇಹಿತರನ್ನು ಕಾಣುವುದು ಕಡಿಮೆ. ನಾನೂ ಹೇಳಿದ ಹಾಗೇ ಒಳ್ಳೆಯಅ ಸ್ನೇಹಿತರು ಯಾವಾಗಲೂ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ, ನಮ್ಮ ಸುಖ ದು:ಖಗಳಲ್ಲಿ ಭಾಗಿಯಾಗುತ್ತಾರೆ. ಆದರೆ ಸ್ನೇಹ, ಗೆಳೆತನ ಎಂಬ ಹೆಸರಿನಲ್ಲಿ ಮೋಸ ಮಾಡುವವರು ನಮಗೆ ಯಾವಾಗಲೂ ನಮಗೆ ಕೆಟ್ಟದನ್ನು ಬಯಸುತ್ತಾರೆ. ನಾವು ಜೀವನದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕುವುದನ್ನು ಕಂಡರೆ ಅವರಿಗೆ ಹೊಟ್ಟೆ ಕಿಚ್ಚು ಆಗುತ್ತದೆ. ಆದಷ್ಟು ನಮ್ಮನ್ನು ಹಿಂದೆ ಹಾಕಲು ಪ್ರಯತ್ನ ಪಡುತ್ತಾರೆ. ಆದರೆ ಆ ಪ್ರಯತ್ನ ವಿಫಲವಾಗುತ್ತದೆ. ಆದ್ದರಿಂದ ಯಾವಾಗಲೂ ಸಜ್ಜನರ ಸಂಗವನ್ನು ಮತ್ತು ಒಳ್ಳೆಯ ಸ್ನೇಹಿತರ ಜೊತೆ ಇರಬೇಕು. ಸ್ನೇಹಿತರನ್ನು ಮತ್ತು ಗೆಳೆತನವನ್ನು ಬೆಳೆಸುವಾಗ ಜಾಗ್ರತೆಯಿಂದ ಇರಬೇಕು.