ಸದಸ್ಯ:Rakshitha Kumari/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಳ್ವಾಸ್ ಪ್ರಾಥಮಿಕ ಶಾಲೆ...

ಶಿಕ್ಷಣಕ್ಕೆ ಮತ್ತೊಂದು ಹೆಸರು ಆಳ್ವಾಸ್ ಶಿಕ್ಷಣ ಸಂಸ್ಥೆ. ಮೂಡಬಿದ್ರೆಯಿಂದ ೭ ಕಿ.ಮೀ ದೂರದಲ್ಲಿರುವ ಪುತ್ತಿಗೆಯಲ್ಲಿ ಆ‍ಳ್ವಾಸ್ ಪ್ರಾಥಮಿಕ ಶಾಲೆಯಿದೆ. ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮ ತರಗತಿಗಳು ಒಂದೇ ಕಟ್ಟಡದಲ್ಲಿದೆ. ಒಳಹೊಕ್ಕುತ್ತಿದ್ದಂತೆ ಮಕ್ಕಳನ್ನು ಸ್ವಾಗತಿಸುವ ವಿವಿಧ ಕಲಾಕೃತಿಗಳು, ಬಣ್ಣ ಬಣ್ಣದ ಕೋಳಿಗಳು, ತಲೆ ಎತ್ತಿ ನಿಂತಿರುವ ಪುಟ್ಟ ಆನೆ, ರಾಧಾ ಕೃಷ್ಣರ ಕಂಚಿನ ವಿಗ್ರಹ, ಆಧುನಿಕತೆಯಲ್ಲಿ ಮಿಳಿತವಾಗಿರುವ ಶಿಕ್ಷಣ ವ್ಯವಸ್ಥೆಯನ್ನು ಬಿಂಬಿಸುವ ಸಿಮೆಂಟ್ ಕಲಾಕೃತಿಗಳು, ಎದುರಿಗೆ ನಿಂತಿರುವ ಗಣೇಶ ವಿಗ್ರಹ, ಸಿಂಹ, ಮೊಲ, ಜಿಂಕೆಗಳು ಕಂಡು ಬರುತ್ತದೆ.

   ಆಳ್ವಾಸ್ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ ಶಾಲೆ ಒಂದು ರೀತಿಯಲ್ಲಿ ಮಿನಿ ಮ್ಯೂಸಿಯಂ. ಅದರ ಕಲ್ಪನೆಯೇ ಅಂತಹದ್ದು. ವಿದ್ಯಾಥರ್ಿಗಳಲ್ಲಿ ವಿದ್ಯೆಯ ಜೊತೆ ಜೊತೆಗೆ ಕಲಾತ್ಮಕ ಜ್ಞಾನವನ್ನು ಹೆಚ್ಚಿಸುವ ಪರಿಕಲ್ಪನೆಯಲ್ಲಿ ಈ ಶಾಲೆಯನ್ನು ರೂಪಿಸಲಾಗಿದೆ. ವಿದ್ಯಾಗಿರಿ ಸಮೀಪದ ಪುತ್ತಿಗೆ ಎಂಬ  ಹಳ್ಳಿ ಪ್ರದೇಶದಲ್ಲಿ ಈ ಶಾಲೆಯನ್ನು ನಿಮರ್ಿಸಲಾಗಿದ್ದು, ಹಸಿರ ಮಡಿಲಲ್ಲಿ ನಿಂತಿರುವ ಶಾಲಾ ಕಟ್ಟಡ  ಒಂದು ಅದ್ಭುತ. ಆಳ್ವಾಸ್ ಶಾಲೆಯ ಆವರಣ, ಕ್ಲಾಸ್ ರೂಂಗಳು, ಗೋಡೆಗಳು ಎಲ್ಲವೂ ಕಲಾಮಯ. ಹಸಿರ ನಡುವೆ ತಲೆ ಎತ್ತಿರುವ ಆಳ್ವಾಸ್ ಶಾಲೆ ಮಕ್ಕಳು ಉದ್ಯಾನವನದಲ್ಲಿದ್ದಂತೆ ಕಂಡು ಬರುತ್ತದೆ. ಇದು ಕಲೆ, ಸಂಸ್ಕೃತಿ, ಶಿಕ್ಷಣದ ಮಿಳಿತ. ಪ್ರೈಮರಿಯ ಪುಟ್ಟ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ನಿಮರ್ಿಸಿರುವ ಶಾಲೆಯ ಪುಟ್ಟ ಪುಟ್ಟ ಮೆಟ್ಟಿಲುಗಳನ್ನು ಗಮನಿಸಿದಾಗಲೇ ಮಕ್ಕಳ ಮೇಲಿನ ಪ್ರೀತಿ, ಕಾಳಜಿ ಎದ್ದು ಕಂಡು ಬರುತ್ತದೆ.  
   ಚಿತ್ರಸಿರಿಯಲ್ಲಿ ರಚಿಸಲ್ಪಟ್ಟ ಯಾವೊಂದು ಚಿತ್ರಗಳನ್ನೂ ಹಾಳು ಮಾಡದೆ ಶಾಲಾ ಗೋಡೆಯಲ್ಲಿ ವೇದಿಕೆ ನೀಡಲಾಗಿದೆ. ಒಂದೊಂದು ಚಿತ್ರವನ್ನೂ ಅಮೂಲ್ಯವೆಂಬಂತೆ ತೆಗೆದಿರಿಸಿ ಶಾಲೆಯಲ್ಲಿ ಬಣ್ಣದ ಚಿತ್ರಲೋಕವನ್ನೇ ತರೆಯಲಾಗಿದೆ. ಗೋಡೆಯಲ್ಲಿ ನೇತು ಹಾಕಲಾಗಿರುವ ಸುಂದರ ಚಿತ್ರ(ಪೇಂಟಿಂಗ್)ಗಳು ತಮ್ಮದೇ ಆದ ಕಥೆಯ ಮೂಲಕ ಮಕ್ಕಳನ್ನು ಆಕಷರ್ಿಸುತ್ತದೆ. ಶಿಲ್ಪಸಿರಿಯ ಮೂಲಕ ನೂತನವಾಗಿ ಮಾಡಲಾಗಿರುವ ಸಿಮೆಂಟ್ನ ಕಲಾಕೃತಿಗಳು ಆಧುನಿಕ ಶಿಕ್ಷಣ ಹಾಗೂ ಮಕ್ಕಳು ಪರಿಕಲ್ಪನೆಯಲ್ಲಿ ಮೂಡಿಬಂದಿದ್ದು ಶಾಲಾ ಆವರಣದಲ್ಲಿ ಕಂಗೊಳಿಸುತ್ತಿದೆ. 
    ಕಂಚು, ಮಣ್ಣಿನಲ್ಲಿ ಮಾಡಿದ ಬಣ್ಣ ಬಣ್ಣದ ಕಲಾಕೃತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಪಶ್ಚಿಮ ಬಂಗಾಳದ ಡೋಕ್ರಾ, ಮೈಸೂರು ಆಟರ್್, ರಾಜಸ್ತಾನ, ಮಣಿಪುರದ ಸಾಂಪ್ರದಾಯಿಕ ಕಲಾಕೃತಿಗಳು, ಮೆಟಲ್ ಶೀಟ್ನಿಂದ ಮಾಡಿದ ಕಲಾಕೃತಿ ಹೀಗೆ ಹಲವಾರು ಶೈಲಿಯ ನೂರಾರು ಕಲಾಕೃತಿಗಳು ಶಾಲಾ ಆವರಣದಲ್ಲಿದೆ. ಒಂದೊಂದು ಕಲಾಕೃತಿಗಳೂ ಸಾವಿರಾರು ರೂಪಾಯಿ ಬೆಲೆಬಾಳುತ್ತದೆ. ಆದರೂ ಯಾವುದೇ ರೀತಿಯಲ್ಲಿ ಗಾಜಿನ ಕಿಟಕಿಗಳನ್ನು ಮುಚ್ಚದೆ ಮಕ್ಕಳು ಕಲಾಕೃತಿಗಳನ್ನು ಮುಟ್ಟಿ, ಆನಂದಿಸುವ ಸಲುವಾಗಿ ತೆರೆದೇ ಇಡಲಾಗಿದೆ. ಕಲಾಕೃತಿಗಳನ್ನು ಶಾಲಾ ಮುಂಭಾಗದಲ್ಲಿ ಸಾಲಾಗಿ ಜೋಡಿಸಲ್ಪಟ್ಟಿದ್ದು ಮ್ಯೂಸಿಯಂನಂತೆ ಕಂಡು ಬರುತ್ತದೆ. ಒಂದೊಂದು ಕಲಾಕೃತಿಗಳೂ ಒಂದೊಂದು ಅರ್ಥವನ್ನು ಹೇಳುವುದು ವಿಶೇಷ. ಪುಟ್ಟ ಮಕ್ಕಳು ವಿರಾಮದ ಸಮಯದಲ್ಲಿ ಇವುಗಳನ್ನು ನೋಡುತ್ತಾ, ಕೈಯಾಡಿಸುವುದನ್ನು ನೋಡುವುದೇ ಒಂದು ಚಂದ.
    ಬರೇ ಆವರಣದಲ್ಲಿ ಮಾತ್ರವಲ್ಲಗೇಟಿನ ಬಳಿ, ಕೌಂಪೌಂಡ್ನ ಸುತ್ತಲೂ ಈ ಕಲಾಕೃತಿಗಳನ್ನು ಇರಿಸಲಾಗಿದೆ. ಈ ಆಧುನಿಕ ಕಾಲದಲ್ಲಿ ಶಾಲಾ ಆವರಣದಲ್ಲಿ ಕಾಲಿರಿಸುತ್ತಿದಂತೆ ಡಿಜಿಟಲ್ ಕ್ಲಾಸ್, ಸ್ವಿಮ್ಮಿಂಗ್ ಫೂಲ್, ಫೂಟ್ಬಾಲ್ ಕೋಟರ್್ಗಳೆಂದು ಕಾಣುವ ಶಾಲೆಗಳ ಪೈಕಿ ಆಳ್ವಾಸ್ ಶಾಲೆ ಭಿನ್ನವಾಗಿ ಕಾಣುತ್ತದೆ. ಆಧುನಿಕ ಶಿಕ್ಷಣದ ಜೊತೆಜೊತೆಗೆ ಮಕ್ಕಳಲ್ಲಿ ಸದಭಿರುಚಿಯನ್ನು ಬೆಳೆಸುವ ಕೆಲಸ ಆಳ್ವಾಸ್ ಶಾಲೆಯ ಆವರಣದಿಂದಲೇ ಶುರುವಾಗುತ್ತದೆ. ಇನ್ನು ಶಿಕ್ಷಣದಲ್ಲೂ ಯಾವುದೇ ರಾಜಿ ಮಾಡಿ ಕೊಳ್ಳದೆ ಸಂಸ್ಕೃತಿ, ಕ್ರೀಡಾ ಮನೋಭವನೆಯನ್ನೂ ಎಳೆಯರ ಮನಸಲ್ಲಿ ಬಿತ್ತುತ್ತಿದೆ.  

ರಕ್ಷಿತಾ ಕುಮಾರಿ ತೋಡಾರು ದ್ವಿತೀಯ ಎಂ.ಸಿ.ಜೆ ಆಳ್ವಾಸ್ ಕಾಲೇಜು, ಮೂಡಬಿದ್ರೆ