ಸದಸ್ಯ:Raksha shanbhag/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                   ಬಾಳು ಬೆಳಗಿತು 

ಚಿತ್ರದ ಬಗ್ಗೆ[ಬದಲಾಯಿಸಿ]

'ಬಾಳು ಬೆಳಗಿತು' ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ೧೯೭೦ ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ಕಥೆಯನ್ನು ಬರೆದವರು ಮತ್ತು ನಿರ್ದೇಶಿಸಿದವರು ಸಿದ್ಧಲಿಂಗಯ್ಯ, ಈ ಚಿತ್ರದ ಪ್ರಮುಖ ತಾರಾಗಣವು ಡಾ|| ರಾಜಕುಮಾರ್, ಜಯಂತಿ, ಭಾರತಿ ಮತ್ತು ದ್ವಾರಕೀಶರವರನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ರಾಜಕುಮಾರರವರು ದ್ವಿಪಾತ್ರದಲ್ಲಿ ಶಂಕರ್ ಮತ್ತು ಪಾಪಣ್ಣನಾಗಿ, ಜಯಂತಿಯವರು ಲಲಿತಾರಾಗಿ, ಭಾರತಿಯವರು ಲಕ್ಷ್ಮಿಯಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರವು ಡಾ|| ರಾಜಕುಮಾರರವರ ೧೦೦ ನೇ ಚಿತ್ರವಾಗಿದೆ.

ರಾಜಕುಮಾರರವರ ಪ್ರತಿಮೆ

ಈ ಚಿತ್ರದ ಕಥೆಯು ವಿವಾಹಿತ ವ್ಯಕ್ತಿಯು ಮತ್ತೊಮ್ಮೆ ವಿವಾಹವಾಗಲು ನಿರ್ಧರಿಸುವುದನ್ನು ಹಾಗೂ ಅದರಿಂದ ಆತನ ಬದುಕು ಹೇಗೆ ಇಬ್ಬರು ಮಹಿಳೆಯರ ನಡುವೆ ಹಂಚಿಕೆಯಾಗುತ್ತದೆ ಎಂಬುದರ ಕುರಿತು ಆಗಿದೆ. 'ಬಾಳು ಬೆಳಗಿತು' ಚಿತ್ರದ ಸಂಗೀತವನ್ನು ನಿರ್ದೇಶಿಸಿದವರು ವಿಜಯಭಾಸ್ಕರ. ಈ ಚಿತ್ರದ ಗೀತೆಗಳಿಗೆ ಸಾಹಿತ್ಯವನ್ನು ಬರೆದವರು ಚಿ|| ಉದಯಶಂಕರ ಮತ್ತು ವಿಜಯನರಸಿಂಹ.

ಈ ಚಿತ್ರವು ೪ ಹಾಡುಗಳನ್ನು ಒಳಗೊಂಡಿದೆ. ಚೆಲುವಾದ ಮುದ್ದಾದ ಹಾಡನ್ನು ಪಿ.ಬಿ, ಶ್ರೀನಿವಾಸ್ ಮತ್ತು ಪಿ, ಸುಶೀಲ, ಕಮಲದ ಹೂವಿಂದ ಹಾಗೂ ನೀತಿವಂತ ಬಾಳಲೇಬೇಕು ಹಾಡನ್ನು ಪಿ,ಬಿ,ಶ್ರೀನಿವಾಸ್, ಹೆಣ್ಣು ಆಡಿದಾಗ ಹಾಡನ್ನು ಎಲ್, ಆರ್, ಈಶ್ವರಿಯವರು ಹಾಡಿದ್ದಾರೆ, [೧]

ಈ ಚಿತ್ರವನ್ನು ಕೆ, ಎಸ್, ಪ್ರಸಾದ್, ಬಿ,ವಿ, ಶ್ರೀನಿವಾಸ ಮತ್ತು ಎ. ಎಸ್, ಭಕ್ತವತ್ಸಲಮ್ ಅವರು ಚಿತ್ರಶ್ರೀ ಅಂತಾರಾಷ್ಟ್ರೀಯ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಈ ಚಿತ್ರದ ಸಹಾಯಕ ನಿರ್ದೇಶಕರಾಗಿ ಭಾರ್ಗವ, ಸಂಭಾಷಣಾಕಾರರಾಗಿ ಚಿ|| ಉದಯಶಂಕರ್, ನೃತ್ಯ ನಿರ್ದೇಶಕರಾಗಿ ಉಡುಪಿ ಬಿ|| ಜಯರಾಮ್, ಕಲಾಕಾರರಾಗಿ ಬಿ, ಎಸ್, ಕೇಶವರಾವ್, ವಸ್ತ್ರವಿನ್ಯಾಸಕರಾಗಿ ಎಮ್, ನಾಥ್, ವಾಲಯುದ್ಧಮ್ ನಾಗರಾಜ, ಪ್ರಸಾಧನಕಾರರಾಗಿ ಎಮ್,ಎಸ್, ಸುಬ್ಬಣ್ಣ, ರಾಜಗೋಪಾಲ್, ದೊರೈಸ್ವಾಮಿ, ಶ್ರೀನಿವಾಸನ್, ಪ್ರಚಾರ ವಿನ್ಯಾಸಕರಾಗಿ ಈಶ್ವರ್, ಸುಖಜೀವ್, ನಿರ್ಮಾಣ ನಿಯಂತ್ರಕರಾಗಿ ಎಸ್, ಶ್ರೀನಿವಾಸಯ್ಯ, ನಿರ್ಮಾಣ ವ್ಯವಸ್ಥಾಪಕರಾಗಿ ಕೆ, ಕುಪ್ಪಸ್ವಾಮಿ, ಭೂಪತಿ, ಸೇತು ಮತ್ತು ರಾಜು ಛಾಯಾಗ್ರಾಹಕರಾಗಿ ಆರ್, ಚಿಟ್ಟಿಬಾಬು, ಮತ್ತು ಸಂಕಲನಕಾರರಾಗಿ ಪಿ, ಭಕ್ತವತ್ಸಲಮ್ ಕಾರ್ಯವನ್ನು ನಿರ್ವಹಿಸಿದ್ದಾರೆ, [೨]

ಈ ಚಿತ್ರವನ್ನು ತೆಲುಗಿನಲ್ಲಿ 'ಮಂಚಿವಾಡು', ತಮಿಳಿನಲ್ಲಿ 'ಉರುಕ್ಕು ಉಜೈಪ್ಪವನ್', ಹಿಂದಿಯಲ್ಲಿ 'ಜಂಬುಲಿಂಗಮ್' ಆಗಿ ನಿರ್ಮಿಸಿದ್ದಾರೆ,

‍ಚಿತ್ರದ ಕಥೆ[ಬದಲಾಯಿಸಿ]

ಚಿತ್ರಕಥೆ: 'ಬಾಳು ಬೆಳಗಿತು' ಚಿತ್ರದಲ್ಲಿ ರಾಜಕುಮಾರರವರು ಶಂಕರ್ ರಾಗಿ ಶ್ರೀಮಂತ ಹುಡುಗಿಯನ್ನು ಮದುವೆಯಾಗಿರುತ್ತಾರೆ, ಆದರೆ ಪಾಪಣ್ಣನಾಗಿ ಬಡ ಹುಡುಗಿಯನ್ನು ಮರುಮದುವೆಯಾಗುತ್ತಾರೆ, ಕಥೆಯಲ್ಲಿ ನಿಜವಾಗಿಯೂ ಇಬ್ಬರೂ ವ್ಯಕ್ತಿಗಳಿರುತ್ತಾರಾ? ಅಥವಾ ಯಾವುದಾದರೂ ರಹಸ್ಯ ಇದರ ಹಿಂದಿರುತ್ತಾದಾ/ ಇಬ್ಬರು ಮಹಿಳೆಯರ ನಡುವೆ ಅನುಭವಿಸುತ್ತಿರುವ ಸಂದಿಗ್ಧತೆಯನ್ನು ಚಿತ್ರದ ನಾಯಕನು ಹೇಗೆ ನಿಭಾಯಿಸುತ್ತಾನೆ ಎಂಬುದರ ಕುರಿತು ಚಲನಚಿತ್ರ ಇದಾಗಿದೆ, ಈ ಚಿತ್ರದಲ್ಲಿ ಕಲಾವಿದರು ಉತ್ತಮವಾಗಿ ಅಭಿನಯಿಸಿದ್ದಾರೆ,

ನಿರ್ದೇಶಕರ ಬಗ್ಗೆ[ಬದಲಾಯಿಸಿ]

ನಿರ್ದೇಶಕರ ಬಗ್ಗೆ: ಸಿದ್ಧಲಿಂಗಯ್ಯರವರು ಕನ್ನಡ ಚಲನಚಿತ್ರ ಕಂಡ ಅತ್ಯುತ್ತಮ ನಿರ್ದೇಶಕರಾಗಿದ್ದಾರೆ, ಇವರು ಕನ್ನಡದಲ್ಲಿ ಅನೇಕ ಚಿತ್ರಕಥೆಗಳನ್ನು ಬರೆದಿದ್ದಾರೆ. ಇವರ ಮೊತ್ತ ಮೊದಲ ನಿರ್ದೇಶನದ ಚಿತ್ರವು 'ಮೇಯರ್ ಮುತ್ತಣ್ಣ' ೧೯೬೯ ರಲ್ಲಿ ಬಿಡುಗಡೆಯಾಯಿತು. ಇವರ ಎರಡನೇ ನಿರ್ದೇಶನದ ಚಲನಚಿತ್ರ 'ಬಾಳು ಬೆಳಗಿತು', ಇವರು ಬಂಗಾರದ ಮನುಷ್ಯ,ಭೂತಯ್ಯನ ಮಗ ಅಯ್ಯು ಇತ್ಯಾದಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇವರು ನಿರ್ದೇಶಕರಾಗಿ ನೀಡಿರುವ ಕೊಡುಗೆಗೆ 'ಪುಟ್ಟಣ್ಣ ಕಣಗಾಲ್' ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ, [೩]

ನಾಯಕನಟನ ಬಗ್ಗೆ[ಬದಲಾಯಿಸಿ]

ನಾಯಕನಟನ ಬಗ್ಗೆ: ಡಾ|| ರಾಜಕುಮಾರ್ ರವರ ನಿಜವಾದ ಹಸರು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು. ಇವರನ್ನು ಕರ್ನಾಟಕದ ಜನರು ಪ್ರೀತಿಯಿಂದ ಅಣ್ಣಾವ್ರು ಎಂದು ಕರೆಯುತ್ತಾರೆ. ರಾಜಕುಮಾರ್ ರವರು ಕನ್ನಡ ಚಿತ್ರರಂಗದ ಮೇರುನಟ ಮತ್ತು ಉತ್ತಮ ಗಾಯಕರಾಗಿದ್ದರು. ಇವರನ್ನು ಅಭಿಮಾನಿಗಳು ದೇವತಾ ಮನುಷ್ಯ, ಬಂಗಾರದ ಮನುಷ್ಯ, ಕರ್ನಾಟಕ ರತ್ನ, ವರನಟ, ರಾಜಣ್ಣ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ರಾಜಕುಮಾರ್ ರವರು ಕನ್ನಡ ಚಿತ್ರರಂಗವನ್ನು ಪ್ರವೇಶಿಸುವ ಮೊದಲು ಗುಬ್ಬಿವೀರಣ್ಣರವರ ಗುಬ್ಬಿ ನಾಟಕ ಕಂಪನಿಯಲ್ಲಿ ತಮ್ಮ ೮ ನೇ ವಯಸ್ಸಿನಿಂದ ಅನೇಕ ನಾಟಕಗಳಲ್ಲಿ ಅಭಿನಯಿಸುತ್ತ ಬಂದರು. ಇವರ ಮೊಟ್ಟಮೊದಲ ಸಿನಿಮಾ ಬೇಡರ ಕಣ್ಣಪ್ಪ ೧೯೫೪ ರಲ್ಲಿ ಬಿಡುಗಡೆಯಾಯಿತು. ಆ ನಂತರದಲ್ಲಿ ಇವರು ಸುಮಾರು ೨೨೦ ಕನ್ನಡ ಚಿತ್ರಗಳಲ್ಲಿ ನಟಿಸುತ್ತಾರೆ. ಇವರ ಕೊನೆಯ ಸಿನಿಮಾ "ಶಬ್ಧವೇದಿ" ೨೦೦೦ ದಲ್ಲಿ ಬಿಡುಗಡೆಯಾಗಿ ಉತ್ತಮ ಪ್ರದರ್ಶನವನ್ನು ಕಂಡಿದೆ.

ರಾಜಕುಮಾರರವರಿಗೆ ಗೌರವ ಡಾಕ್ಟರೇಟ್ ನೀಡಿದ ವಿಶ್ವವಿದ್ಯಾಲಯ

ವೀರಪ್ಪನ್ ರಾಜಕುಮಾರ್ರವರನ್ನು ಅವರ ೭೧ ನೇ ವಯಸ್ಸಿನಲ್ಲಿ ಗಾಜಿನೂರಿನ ನಿವಾಸದಿಂದ ಅಪಹರಿಸುತ್ತಾನೆ. ೧೦೮ ದಿನಗಳ ನಂತರ ಅವರು ಬಿಡುಗಡೆಯಾಗುತ್ತಾರೆ. ರಾಜಕುಮಾರರವರು ತಮ್ಮ ೭೭ ನೇ ವಯಸ್ಸಿನಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ೧೨-೦೪-೨೦೦೬ ರಲ್ಲಿ ಹೃದಯಾಘಾತದಿಂದ ನಿಧನರಾಗುತ್ತಾರೆ.

ರಾಜಕುಮಾರ್ ರವರನ್ನು ಅಪಹರಣ ಮಾಡಿದ ಸ್ಥಳ

ರಾಜಕುಮಾರ್ ರವರಿಗೆ ಸಲ್ಲಿಸಿದ ಪ್ರಶಸ್ತಿಗಳು[ಬದಲಾಯಿಸಿ]

ರಾಜಕುಮಾರ್ ರವರು ತಮ್ಮ ಚಿತ್ರಜೀವನದಲ್ಲಿ ೧೧ ಕರ್ನಾಟಕ ರಾಜ್ಯಪ್ರಶಸ್ತಿ, ೧೦ ದಕ್ಷಿಣ ಫಿಲ್ಮ್ ಫೇರ್ ಪ್ರಶಸ್ತಿ, ೧೯೯೨ ರಲ್ಲಿ ರಾಷ್ತ್ರ ಪ್ರಶಸ್ತಿ ಯನ್ನು 'ಜೀವನಚೈತ್ರ' ಚಿತ್ರದ 'ನಾದಮಯ' ಹಾಡಿನ ಹಿನ್ನೆಲೆಧ್ವನಿಗಾಗಿ ಪಡೆದಿದ್ದಾರೆ. ೨೦೦೨ ರಲ್ಲಿ ಎನ್.ಟಿ.ಆರ್. ಪ್ರಶಸ್ತಿಯನ್ನು ಪಡೆದಿದ್ದಾರೆ, ಮೈಸೂರು ವಿಶ್ವವಿದ್ಯಾಲಯವು ಇವರಿಗೆ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ. ಭಾರತ ಸರ್ಕಾರವು ೧೯೮೩ ರಲ್ಲಿ ಪದ್ಮಭೂಷಣವನ್ನು ಮತ್ತು ೧೯೯೫ ರಲ್ಲಿ ಭಾರತೀಯ ಚಲನಚಿತ್ರಕ್ಕೆ ಇವರು ನೀಡಿರುವ ಕೊಡುಗೆಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ.

ಉಲ್ಲೇಖನಗಳು[ಬದಲಾಯಿಸಿ]

  1. http://www.imdb.com/title/tt1389437/
  2. https://kannadamoviesinfo.wordpress.com/2013/01/26/balu-belagithu-1970/
  3. https://en.wikipedia.org/wiki/Baalu_Belagithu