ಸದಸ್ಯ:Raghavendra shantgeri/ಲಕ್ಕುಂಡಿಯ “ಅತಿಬಂಗ” ಶಿವನ ಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಕ್ಕುಂಡಿಯಲ್ಲಿ “ಅತಿಬಂಗ” ಶಿವನ ಅಪರೂಪದ ಮೂರ್ತಿ

ತ್ರಿಭಂಗ ವಿನ್ಯಾಸದ ಶಿವನ ಪ್ರತಿಮೆ/ಶಿಲ್ಪಗಳು ಅಂತೆಯೇ ಅತಿಭಂಗ ಅಥವಾ ಅತಿಭಂಗ ದೇಹವಿನ್ಯಾಸದ ಶಿವನ ಶಿಲ್ಪಗಳು ಅತಿ ಕಡಿಮೆ. ಇಂತಹದ್ದೊAದು ಅಪರೂಪದ ಅಪೂರ್ವ ಪ್ರತಿಮೆ ಲಕ್ಕುಂಡಿಯಲ್ಲಿದೆ,

‘ನಟರಾಜ’ ಶಿವನ ಆನಂದ ತಾಂಡವ, ಊರ್ದ್ವತಾಂಡವ ಹೀಗೆ ಹಳವಾರು ನೃತ್ಯಭಂಗಿಗಳಿವೆ. ಜಗತ್ತಿನ ಅಜ್ಞಾನವನ್ನು ತುಳಿದು ಜ್ಞಾನದ ಬೆಳಕನ್ನು ಹರಿದಿದ್ದನ್ನು ತಾಂಡವ ನೃತ್ಯ ಸೊಚಿಸುತ್ತದೆ.ವ್ಯೋಮಕೇಶಿಯಾಗಿ ‘ಅವಸ್ಮಾರಮೂರ್ತಿ’ಯನ್ನು ಧಮನ ಮಾಡುತ್ತಾ ನರ್ತಿಸುತ್ತಿರುವ ನಟರಾಜನ ತಾಂಡವನೃತ್ಯಕ್ಕೆ ಲೋಹಶಿಲ್ಪದಲ್ಲಿ ಪ್ರಾಮುಖ್ಯ ಇದ್ದರೆ, ದೇಗುಲಗಳಲ್ಲಿ ಗಜಾಸುರಸಂಹಾರದ ಚಿತ್ರಣ ಹೆಚ್ಚಾಗಿ ಕಾಣಿಸಿಕೊಳ್ಳತ್ತದೆ. ತಾಂಡವ ನೃತ್ಯದಲ್ಲಾಗಲಿ, ಗಜಾಸುರನ್ನು ಸಂಹರಿದ ಬಳಿಕ ಮಾಡಿದ ನೃತ್ಯದಲ್ಲಾಗಲಿ ಶಿವನನ್ನು ‘ತ್ರಿಬಂಗಿ’ಯಲ್ಲಿ ಕಾಣಿಸಲಾಗಿರುತ್ತದೆ. ಬಹಳ ಅಪರೂಪವಾಗಿ ಅತಿಭಂಗಿ ಅಥವಾ (ಅತಿಭಂಗ)ಯಲ್ಲೂ ಕಂಡರಿಸಲಾಗಿದೆ. ಅತಿಭಂಗ ದೇಹ ವಿನ್ಯಾಸದಲ್ಲಿರುವ ಶಿವನ ವಿಗ್ರಹಗಳು ಬಹಳ ಅಪರೂಪದ ವಿಗ್ರಹಗಳಾಗಿದ್ದು, ಆ ಕಾರಣಕ್ಕಾಗಿ ಅತ್ಯಂತ ಪ್ರಾಮುಖ್ಯ ಪಡೆದಿದೆ. ಅದು ಲಕ್ಕುಂಡಿಯ ಕಾಶೀ ವಿಶ್ವನಾಥ ದೇವಾಲಯದ ಭಿತ್ತಿಯಲ್ಲಿರುವ ಶಿವನ ಶಿಲ್ಪ. ಕಾಶೀ ವಿಶ್ವನಾಥ ಮಂದಿರ, ಲಕ್ಕುಂಡಿಯ ಪ್ರಮುಖ ದೇವಾಲಯ, ಇಲ್ಲಿ ಕಲ್ಯಾಣ ಚಾಲುಕ್ಕರ-ಹೊಯ್ಸಳ ಎರಡೂ ಶೈಲಿಗಳ ಸೊಬಗನ್ನು ಕಾಣಬಹುದಾಗಿದೆ. ಈ ದೇವಾಲಯದ ಭಿತ್ತಿಯಲ್ಲಿರುವ ಶಿಲ್ಪಗಳ ಸಾಲಿನಲ್ಲಿವೆಯೇ ಸುಮಾರು ಒಂದೊವರೆ ಅಡಿಯ ಬಹಳ ಅಪರೂಪದ ಅತಿಭಂಗಿ/ಅತಿಭAಗ ನೃತ್ಯಶೈಲಿಯಲ್ಲಿರುವ ‘ಗಜಾಸುರ’ ಧಮನ ಮೂರ್ತಿಯ ವಿಗ್ರಹವಿದೆ. ಈ ಶಿಲ್ಲಪದ ಕಂಡರನೆಯಲಿ ಶಿವನಿಗೆ ದಶಭುಜಗಳಿವೆ. ನಾಲ್ಕು ಕೈಗಳ ಗಜಾಸುರನನ್ನು ಕೊಂದ ಬಳಿಕ ಆನೆಯ ಚರ್ಮವನ್ನು ಸುಲಿದು ಬಿಡಿಸಿ ಹಿಡಿದಿವೆ. ಉಳಿದಂದೆ ಬಲಭಾಗದ ಒಂದು ಕೈಯಲ್ಲಿ ತ್ರಿಶೂಲ ಹಿಡಿದಿದ್ದ ಕುರುಹಾಗಿ ಭಗ್ನಗೊಂಡ ತ್ರಿಶೂಲ ಅವಶೇಷಕಾಣಿಸುತ್ತದೆ. ಮತ್ತೊಂದು ಕೈಯಲ್ಲಿ ಪಾಶ ಇದೆ. ಉಳಿದಂದೆ ಐದು ಕೈಗಳು ಭಗ್ನಗೊಂಡಿದ್ದರಿAದ ಶಿಲ್ಪಶಾಸ್ತçದ ಆದರದಲ್ಲಿ ಆ ಕೈಗಳಲ್ಲಿ ಜಪಮಾಲೆ, ಢಮರು, ಕಪಾಲ ಇದ್ದಿರಬಹುದೆಂದು ಊಯಿಸಬಹುದು. ಶಿವಣ ಸುತ್ತ ಹಗರಣಗಳನ್ನು ಗುರುತಿಸಬಹುದು. ಮೃದಂಗ ನುಡೊಇಒಸುತ್ತಿರುವ ನಂದಿಯೂ ಇದ್ದಾನೆ. ಮೂರ್ತಿಯ ಎಡಬದಿಯಲ್ಲಿ ಅಸುರ ಸಂಹಾರದಿAದ ನಿರಾಳಗೊಂಡ ಗಣಪತಿ ಸಂತೋಷಚಿತ್ತವಾಗಿ ನೃತ್ಯದಲ್ಲಿ ತೊಡಗಿದ್ದರೆ, ಪ್ರಸಂಗದ ಭೀಕರತೆಗೆ ಬೆದರಿದ ಪಾರ್ವತಿ ಗಣೇಶನ ಪಕ್ಕದಲ್ಲಿ ನಿಂತಿದ್ದಾಳೆ. ಅಸುರ ಸಂಹಾರದ ಕಾಲದಲ್ಲಿ ದೆವತೆಗಳ ಮುಖದಲ್ಲಿ ಶಾಂತರಸದ ಅಭಿವ್ಯಕ್ತಿ ಇರುತ್ತದೆ. ಆದರೆ ಇಲ್ಲಿ ಶಿವನ ಮುಖವು ವಿರೂಪಗೊಂಡಿರುವುದರಿAದ ಮುಖದ ಭಾವನೆ ಗೊಚರಿಸುದಿಲ್ಲ. ಶಿವನಿಗೆ ಕೀರಿಟ, ಕಂಠಾಭರಣವ, ತೋಳಿನ ಆಭರಣ ಮೊದಲಾದ ಅಂಲಕಾರಗಳಿವೆ. ಇತರೆ ದೇವಾಲಯಗಳಲ್ಲಿ ಅಥವಾ ದಾರುಶಿಲ್ಪದಲ್ಲಿ ಶಿವನು ಗಜಾಸೂರನ ಆನೆಮುಖದ ಮೇಲೆ ಕಾಲಿಟ್ಟಿರುವಂತೆ ಚಿತ್ರಿಸಲಾಗಿದೆ. ಶಿಲ್ಪದ ಎರಡೂ ಕಡೆ ಆನೆಯ ಕಾಲೂಗಳು ಕಾಣಿಸುತ್ತವೆ. ಆದರೆ ಇಲ್ಲಿ (ಲಕ್ಕುಂಡಿಯಲ್ಲಿ) ಶಿವ ಆನೆಯ ರೂಪದೊಳಗಿದ್ದ ವೇಶದಾರಿ ಅಸುರರನ್ನು ಹೊರಗೆದು ತುಳಿದಿರುವ ಕಾರಣ ರಕ್ಕಸನಿಗೆ ಆನೆಯ ತಲೆ ಇಲ್ಲ, ಬದಲಾಗಿ ಸುಲಿದ ಚರ್ಮದ ಬಲಭಾಗದಲ್ಲಿ ಆನೆಯ ತಲೆ ಕಾಣಿಸುತ್ತಿದೆ. ಆನೆಯ ಬೆನ್ನಿನ ಚರ್ಮ ಇರುವುದರಿಂದ ಕಾಲುಗಳು ಕಾಣುತ್ತಿಲ್ಲ. ಜತೆಗೆ ಶಿವನ ಮೈಮೇಲಿನ ಜಟಾಮುಖಟ, ಕರ್ಣಾಭರನ, ಕೈ ಮತ್ತು ಸೊಂಟದ ಆಭರಣಗಳು ಗಮನ ಸೇಳೆಯುತ್ತವೆ. ಇ ವಿಗ್ರಹದಲ್ಲಿ ಕಂಡುಬರುವುದು ಅತಿ ವಿಶೇಷವಾದ ಅತಿಭಂಗ ದೇಹವಿನ್ಯಾಸ. ಭಂಗ ಅಥವಾ ದೇಹವಿನ್ಯಾಸಕ್ಕೆ ನಾಟ್ಯ ಶಾಸ್ತçದಲ್ಲೂ ಮಹತ್ವವಿದೆ. ಇದರಲ್ಲಿ ‘ತ್ರಿಭಂದ’ ಬಳಕೆ ಹೆಚ್ಚಾಗಿ ಅಭಿವ್ಯಕ್ತವಾಗುತ್ತದೆ. ಕುತ್ತಿಗೆ ಎದೆ ಕಾಲುಗಳಲ್ಲಿ ಬಾಗುವಿಕೆ ಇದ್ದು ದೇಹದ ಸುಮಾರಾಗಿ ಎಸ್ ಆಕಾದಲ್ಲಿ ಬಾಗುವುದು ತ್ರಿಭಂಗ, ಅಸದರಲ್ಲಿನ ‘ಅತಿರೇಕವೆ’ ಅತಿಭಂಗ. ಇಲ್ಲಿ ಗಮನಿಸಭೇಕಾದ ಅಂಶವೆAದರೆ, ತ್ರಿಭಂಗಿಯಲ್ಲಿರುವAತೆ ಕುತ್ತಿಗೆ, ನಡು ಮತ್ತು ಕಾಉಳಲ್ಲಿ ಬಾಗುವಿಕೆ ಇದೆ. ತ್ರಿಭಂಗ ಸಹಜ ಸ್ಥಿತಿಯಲ್ಲಿ ದೇಹದ ಎದುರು ಭಾಗ ಮಾತ್ರ ಕಾಣಿಸುತ್ತದೆ. ಎದುರಿನಿಂದ ಮಾತ್ರ ತ್ರಿಭಂಗವನ್ನು ನಿಖರವಾಗಿ ಗಮನಿಸಬಹುದು. ಆದರೆ ಇಲ್ಲಿ ವಿಶೇಷವೆನೆಂದರೆ ವಿಗ್ರಹವನ್ನು ಗಮನವಿಟ್ಟು ನೋಡಿದಾಗ ಮುಖ ಜತೆಜತೆಗೆ ವೃಷ್ಠ ಭಾಗವೂ ಜತೆಗೆ ಕಾಲಿನ ಹಿಮ್ಮಡಿಗಳು ಕಾಣಸಿಗುತ್ತವೆ! ಏಕಕಾಲದಲ್ಲಿ ದೇಹದ ಮುಂಭಾಗವು ಹಿಂಭಾಗವು ಕಾಣಸಿಗುತ್ತಿರುವುದರಿಂದ ಇದನ್ನು ಅತಿಭಂಗ ಎನ್ನಲಾಗುತ್ತದೆ. ಶಿಲ್ಪಗಳ ಕೆತ್ತನೆಯಲ್ಲಿ ಇದು ನಿಜಕ್ಕೊ ಅಪರೂಪದ ಉದಾರಣೆ. ದೇಹದಲ್ಲಿ ಮೂರು ಭಾಗುವಿಕೆಯ ಜತೆಗೆ ಇಡೀ ಹಗ್ಗವನ್ನು ತಿರುಚಿದಂತೆ ತಿರುಚಿಕೊಂಡಿರುವುದು ಕಾಣಸಿಗುತ್ತದೆ. (ನಾಗಮುರಿಗೆ). ಈ ಕಾರಣದಿಂದಾಗಿ ಶಿಲ್ಪವನ್ನು ಪಾರ್ಶ್ವಗಳಿಂದ ನೋಡಿದಾಗಲೂ ತ್ತರಭಂಗವನ್ನು ಗುರುತಿಸಡಬಹುದಾಗಿದೆ. ಶಿಲ್ಪದಲ್ಲಿ ಇಷ್ಟೆಲ್ಲಾ ತಿರುಚುವಿಕೆ ಎಲ್ಲೂ ಅದರ ಸಹಜ ಭಾಗುವಿಕೆ ಎಂದು ಆನ್ನಿಸುವುದಿಲ್ಲಾ! ಬಾದಾಮಿ ಚಾಲುಕ್ಯರ ಅವನತಿಯ ನಂತರ ಪ್ರಾಬಲ್ಯಕ್ಕೆ ಬಂದ ಕಲ್ಯಾಣ ಚಾಲುಕ್ಯರು ಮುಂದುವರೆಸಿದ ಶಿಲ್ಪಕಲೆಯ ಪ್ರೆöಯೋಗಗಳ ಒಂದು ಅಪೂರ್ವ ಉದಾರಣೆಯೇ ಈ ‘ಅತಿಭಂಗದ ಗಜಾಸುರ ದಮನಮೂರ್ತಿ ಯಾಗಿದೆ. ಇಂತಹ ಶಿಲ್ಪಗಳು ವಿರಳಾತಿವಿರಳ.