ಸದಸ್ಯ:REENU INFANCIA/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಯಾನನ್[ಬದಲಾಯಿಸಿ]

Coll. Marcè CL - Canon A1 1978-1985

ಕ್ಯಾನನ್ ಜಪಾನಿ ದೇಶದ ಬಹುರಾಷ್ತ್ರೀಯ ನಿಗಮ;ಆಪ್ಟಿಕಲ್ ಉತ್ಪನ್ನಗಳು ಸೇರಿದಂತೆ ಕ್ಯಾಮರಾ,ಕ್ಯಾಮ್ಕಾರ್ಡರ್ಗಳು,ಫೋಟೋಕಾಪಿಯರ್ಸ್,ಸ್ಟೆಪರ್ಸ್,ಮುದ್ರಕ ಗಳು ಮತ್ತು ವ್ಯದ್ಯಕೀಯ ಉಪಕರಣಗಳ ತಯಾರಿಕೆಯಲ್ಲಿ ವಿಶೇಷತೆ ಪಡೆದುಕೊಂಡಿದೆ. ಇದರ ಪ್ರಧಾನ ಕಛೇರಿ ಟೊಕಿಯೊ,ಜಪಾನ್. ಕ್ಯಾನನಿನ ಹತ್ತಿರ ಟೊಕಿಯೊ ಸ್ಟಾಕ್ ಎಕ್ಸ್ಚೇಂಜಿನ ಪ್ರಾಥಮಿಕ ಪಟ್ಟಿಯು ಮತ್ತು ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜಿನ ದ್ವಿತೀಯ ಪಟ್ಟಿ ಇದೆ. ಈ ಕಂಪನಿಯನ್ನು ಮೊದಲು "ಸಿಕಿಕೋಗಕು ಕೆನ್ಕುಶೊ" ಎಂದು ಹೆಸರಿಸಲಾಗಿತ್ತು. ೧೯೩೪ರಲ್ಲಿ ಕ್ಯಾನನ್ ಕಂಪನಿಯು 'ಕ್ವಾವಾನ್', ಜಪಾನಿನ ಮೊಟ್ಟ ಮೊದಲ ೩೫ ಮಿ.ಮೀ ಫೋಕಲ್ ಪ್ಲೇನ್ ಆಧಾರಿತ ಶಟರ್ ನ ಮೂಲಮಾದರಿಯನ್ನು ನಿರ್ಮಿಸಿತು. ೧೯೪೭ರಲ್ಲಿ ಕಂಪನಿಯ ಹೆಸರನ್ನು 'ಕ್ಯಾನನ್ ಕ್ಯಾಮರಾ ಕಂಪನಿ ಸಂಘಟನೆ' ಎಂದು ಮತ್ತು ೧೯೬೯ನಲ್ಲಿ 'ಕ್ಯಾನನ್ ಸಂಘಟನೆ' ಎಂದು ಹೆಸರಿಸಲಾಯಿತು. ಕ್ಯಾನನ್ ನ ಹೆಸರನ್ನು ಭೋಧಿಸತ್ವ ಗ್ವಾನ್ ಇನ್ ಎಂಬ ಬೌದ್ಧರ ಹೆಸರಿನಿಂದ ಪಡೆಯಲಾಗಿದೆ.

ಉತ್ಪನ್ನಗಳು[ಬದಲಾಯಿಸಿ]

ಕ್ಯಾನನ್ ಗ್ರಾಹಕ ಚಿತ್ರಣ ಉತ್ಪನಗಳಾದ ಮುದ್ರಣಗಳು, ಸ್ಕ್ಯಾನರ್ಗಳು, ದುರ್ಬೀನುಗಳು, ಕಾಂಪ್ಯಾಕ್ಟ್ ಡಿಜಿಟಲ್ ಕ್ಯಾಮರಾಗಳು, ಮಸೂರಗಳು, ವೀಡಿಯೊ ಕ್ಯಾಮ್ಕಾರ್ಡಗಳು ಮತ್ತು ಡಿಜಿಟಲ್ ದೃಶ್ಯ ಪರಿಹಾರಗಳನ್ನು ತಯಾರಿಸುತ್ತದೆ.'ವ್ಯವಹಾರ ಪರಿಹಾರಗಳು' ವಿಭಾಗ ಬಹು ಕ್ರಿಯಾತ್ಮಕ ಮುದ್ರಣಗಳು, ಕಪ್ಪು-ಬಿಳಿ ಮತ್ತು ಬಣ್ಣ ಕಛೇರಿ ಮುದ್ರಣಗಳು, ಕ್ಯಾಲ್ಕುಲೇಟರ್ಸ್, ಪ್ರೆಸೆಂಟರ್ಸ್, ದೊಡ್ಡ ರೂಪದ ಮುದ್ರಣಗಳು, ಸ್ಕ್ಯಾನರ್ಗಳು, ಬಿಳಿ-ಕಪ್ಪು ಮತ್ತು ಬಣ್ಣ ಉತ್ಪಾದನೆಗಳನ್ನು ಮತ್ತು ಈ ಉತ್ಪಾದನೆಗಳನ್ನು ಬೆಂಬಲಿಸುವ ಸಾಫ್ಟ್ವೇರ್ ಗಳನ್ನು ನೀಡುತ್ತದೆ.

ಇತಿಹಾಸ[ಬದಲಾಯಿಸಿ]

ಕ್ಯಾನನ್ ೧೯೮೪ರಿಂದ ಡಿಜಿಟಲ್ ಕ್ಯಾಮರಾಗಳ ತಯಾರಿಕೆ ಯಲ್ಲಿ ಮತ್ತು ಹಂಚಿಕೆ ಯಲ್ಲಿ ಆರ್.ಸಿ.-೭೦೧ ನಿಂದ ಆರಂಭಗೊಂಡು ಇನ್ನ ಷ್ಟು ಆವಿಷ್ಕಾರಗಳಲ್ಲಿ ತೊಡಗಿದೆ. ಆರ್.ಸಿ. ಸರಣಿಯ ನಂತರ ಪವರ್ ಶಾಟ್ ಸರಣಿಯ ಡಿಜಿಟಲ್ ಕ್ಯಾಮರಾಗಳು ಮುಂದೂಡುತ್ತಾ ಇವೆ.ಆದಾಯದಲ್ಲಿ ಕ್ಯಾನನಿನ ದೊಡ್ಡ ವಿಭಾಗ ಎಂದರೆ ಬಹುಕ್ರಿಯಾತ್ಮಕ ಕಾಪಿಯರ್ ಡಿವಿಷನ್. ಕ್ಯಾನನ್ ಎರಡು 'ಎಮ್.ಎಸ್.ಎಕ್ಸ್ ಹೋಮ್ ಕಂಪ್ಯೂಟರ್ ಮೊಡೆಲ್' ಗಳನ್ನು ೧೯೮೩ರಲ್ಲಿ ಪರಿಚಯಿಸಿತು, ವಿ-೧೦ ಮತ್ತು ವಿ-೨೦. ಎರಡು ಮಾಡೆಲ್ ಗಳು ಹೆಚ್ಚುವರಿ ವೈಶಿಷ್ಟ್ಯಗಳನ್ನು ಒದಗದೆ ಕನಿಷ್ಠ ವ್ಯಾಪ್ತಿಯನ್ನು ನೀಡಿತು. ವಿ-೨೦ ಮಾಡೆಲ್ ಶೂಟಿಂಗ್ ಡೇಟಾವನ್ನು ಟಿ-೯೦ ಕ್ಯಾನನ್ ಕ್ಯಾಮೆರಾದಿಂದ ಪಡೆಯಲು ಸಾಧ್ಯವಾಯಿತು. ಕ್ಯಾನನ್ ತನ್ನ ಐ.ಬಿ.ಎಮ್. ಪಿ.ಸಿ ಯ ಬಿಡುಗಡೆಯ ಮೊದಲು ಕ್ಯಾನನ್ ಎ.ಎಸ್.೪೦೦ ಪಿ.ಸಿ. ೬೪೦*೪೮೦ ಕಲರ್ ಡಿಸ್ ಪ್ಲೆ ಕಂಪ್ಯೂಟರನ್ನು ಸಹ ಮಾರಾಟ ಮಾಡಿತು. ಈ ಕಂಪ್ಯೂಟರ್ ಇಂಟೆಲ್ ೮೦೮೬ ಪ್ರೊಸೆಸರ್ ಮೇಲೆ ಆಧಾರಿತ ಮತ್ತು ಸಿ.ಪಿ./ಎಮ್ ಅಥವಾ ಎಮ್.ಎಸ್.ಡೋಸ್ ಅನ್ನು ಬಳಸಿತು. ಇದರಲ್ಲಿ ೫ ಎಮ್.ಬಿ. ಹಾರ್ಡ್ ಡ್ರೈವಿನ ಆಯ್ಕೆ ಸಹ ಉಂಟು.

ಕಾರ್ಯಚರಣೆಗಳು[ಬದಲಾಯಿಸಿ]

ಕಾನನ್ ಮೂಲಮಾದರಿ ವರ್ಚುವಲ್ ರಿಯಾಲಿಟಿ ಹೆಡ್ಸೆಟ್ (ಕಾನನ್ ವೆ.ಆರ್.) ಅನ್ನು ಅಭಿವೃಧಿ ಮಾಡುತ್ತಿದೆ. ಈ ಹೆಡ್ಸೆಟ್ ಇತರ ವಿ.ಆರ್. ಸಾಧನಗಳಿಗಿಂತ ವಿಶಾಲ ಕೋಣ (೧೨೦ ಡಿಗ್ರೀಸ್) ವನ್ನು ನೋಡುವ ಅವಕಾಶ ನೀಡುತ್ತದೆ. ಈ ಹೆಡ್ಸೆಟ್ ಮಾರುಕಟ್ಟೆಯಲ್ಲಿ ಇನ್ನು ಲಭ್ಯವಿಲ್ಲ. ಕ್ಯಾನನಿನ ವಿಶ್ವ ಪ್ರಧಾನ ಕಛೇರಿ ಶಿಮೊಮಾರುಕೊ, ಓಹ್ತಾ-ಕು, ಟೊಕಿಯೊ, ಜಪಾನ್ ನಲ್ಲಿದೆ. ಕ್ಯಾನನಿನ ಪ್ರಾದೇಶಿಕ ಪ್ರಧಾನ ಕಛೇರಿಗಳೆಂದರೆ ಅಮೇರಿಕಾ, ಯುರೋಪ್, ಮಧ್ಯ ಪೂರ್ವ, ಆಫ್ರಿಕಾ, ಜಪಾನ್, ಏಷ್ಯಾ ಮತ್ತು ಓಷಿಯಾನಿಯಾ (ಆಸ್ಟ್ರೇಲಿಯಾ ಮತ್ತು ನ್ಯೂ ಜೀಲ್ಯಾಂಡ್ ಸೇರಿದಂತೆ). ಕ್ಯಾನನಿನ ಹತ್ತಿರ ಎರಡು ಪ್ರಮುಖ ಉಪಸಂಸ್ಥೆಗಳಿವೆ: ಕ್ಯಾನನ್ ಯುರೋಪಾ ಎನ್.ವಿ. ( ಮೂಲತವಾಗಿ ಅಂಸ್ವೆಲ್ವೆನ್, ನೆದರ್ಲ್ಯಾಂಡ್ಸ್) ಮತ್ತು ಕ್ಯಾನನ್ ಯುರೋಪ್ ಲಿಮಿಟೆಡ್ (ಮೂಲತವಾಗಿ ಉಕ್ಸ್ ಸೇತುವೆ, ಯು.ಕೆ.). ೨೬ ಡಿಸೆಂಬರ್, ೨೦೦೩ರಲ್ಲಿ ಕ್ಯಾನನ್ ಇಂಕ್. ೩ ದೇಶೀಯ ಕ್ಯಾನನ್ ಗುಂಪಿನ ಕಂಪನಿಗಳಿಗೆ ಪುನರ್ರಚನೆ ಯೋಜನೆಗಳನ್ನು ಘೋಷಿಸಿತು. ಈ ಒಳಗೊಂಡಿರುವ ಪುನರ್ರಚನೆ ಏನೆಂದರೆ ಎರಡು ಕಂಪನಿಗಳ ವಿಲೀನ ಮತ್ತು ಒಂದು ಕಂಪನಿಯನ್ನು ನೂಲುವುದು.

ದಾನದ ಚಟುವಟಿಕೆಗಳು[ಬದಲಾಯಿಸಿ]

೨೦೦೮ರಲ್ಲಿ ಚೀನಾದಲ್ಲಿ ನಡೆದ ಭೂಕಂಪಕ್ಕೆ ಕ್ಯಾನನ್ ಅಂದಾಜು ೫ ದಶಲಕ್ಷ ಜನರಿಗೆ ಸಹಾಯ ಮಾಡಲು ಹಣಕಾಸಿನ ಬೆಂಬಲವನ್ನು ದಾನ ಮಾಡಿದೆ. ಭೂಕಂಪದ ಕೆಲವೇ ದಿನಗಳಲ್ಲಿ ಚೀನಾದ ರೆಡ್ ಕ್ರಾಸ್ ಸೊಸೈಟಿಗೆ ಆರ್.ಎಂ.ಬಿ. ೧ ಮಿಲಿಯನ್ ದೇಣಿಗೆ ನೀಡಲಾಯಿತು. ಕ್ಯಾನನ್ ಇಂಕ್., ಜಪಾನ್, ಶೀಘ್ರದಲ್ಲೇ ಆರ್.ಎಂ.ಬಿ ೧೦ ಮಿಲಿಯನ್ ದೇಣಿಗೆಯನ್ನು ಅನುಸರಿಸಿತು. ಕ್ಯಾನನ್ ೧೯೮೩ರಲ್ಲಿ ಇಂಗ್ಲೀಷ್ ಫುಟ್ ಬಾಲ್ ಲೀಗ್ ನ ದಿ ಫುಟ್ ಬಾಲ್ ಲೀಗ್ ನ ಮೊದಲ ಪ್ರಶಸ್ತಿ ಪ್ರಯೋಜಕರು. ೧೯೮೩ ರಿಂದ ೧೯೮೬ ವರೆಗೆ ದಿ ಕ್ಯಾನನ್ ಲೀಗ್ ಎಂದು ಹೆಸರಿಸಲ್ಪಟ್ಟ ಈ ದಿನವು ಪ್ರಾಯೋಜಕತ್ವವನ್ನು ಟು ವೃತ್ತಿಪತ್ರಿಕೆ ವಹಿಸಿಕೊಂಡಿತು. ೧೯೬೭ ರಿಂದ ೨೦೦೩ ರವರೆಗೂ ಕ್ಯಾನನ್ ಗ್ರೇಟರ್ ಹಾಟ್ಫೋರ್ಡ್ ಓಪನ್ (ಈಗ ಟ್ರಾವೆಲರ್ಸ್ ಚಾಂಪಿಯನ್ ಷಿಪ್) ಪ್ರಾಯೊಜಿಸಿದೆ. ಪರಿಸರ ಸ್ನೇಹಿ ಸಂಸ್ಥೆಯ ವರದಿಯ ಪ್ರಕಾರ ಕ್ಲೀನ್ ಏರ್ ಕೂಲ್ ಪ್ಲಾನೆಟ್ ಕ್ಯಾನನ್ ಅನ್ನು ೫೬ ಕಂಪನಿಗಳ ಪಟ್ಟಿಯಲ್ಲಿ ಹವಾಗುಣ ಸ್ನೇಹಿ ಕಂಪನಿಗಳ ಆಯ್ಕೆ ಮಾಡಿದೆ.

ಉಲ್ಲೇಖಗಳು[ಬದಲಾಯಿಸಿ]

[೧]

  1. https://en.wikipedia.org/wiki/Canon_Inc.