ಸದಸ್ಯ:RAKSHITHA SUSHMA N

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ[ಬದಲಾಯಿಸಿ]

ನನ್ನ ಹೆಸರು ರಕ್ಷಿತಾ ಸುಷ್ಮಾ ಎನ್. ನಾನು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಗ್ರಾಮದಲ್ಲಿ ವಾಸಿಸುತಿದ್ದೇನೆ . ನಾನು ಹುಟ್ಟಿದ್ದು ಬೆಂಗಳೂರಿನಲ್ಲಿ, 07 ನೇ ಅಕ್ಟೋಬರ್ 2001ರಂದು. ನನ್ನ ತಂದೆಯ ಹೆಸರು ನಾಗರಾಜಚಾರಿ ಮತ್ತು ನನ್ನ ತಾಯಿಯ ಹೆಸರು ಲತಾ ಸಿ. ನನ್ನ ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದಾರೆ. ನನ್ನ ತಾಯಿ ಗೃಹಿಣಿ. ನಾನು ಪ್ರತಿದಿನ ಮುಂಜಾನೆ ಆರು ಗಂಟೆಗೆ ಏಳುತ್ತೇನೆ. 6 ರಿಂದ 6:30 ಯವರೆಗೆ ನಾನು ವ್ಯಾಯಾಮ ಮಾಡುತ್ತೇನೆ. ನಂತರ ನಿತ್ಯ ಕ್ರಿಯಾದಿ ಗಳನ್ನು ಮುಗಿಸಿ ಕನಿಷ್ಠ 15 ರಿಂದ 20 ನಿಮಿಷದವರೆಗೆ ದೇವರ ಧ್ಯಾನವನ್ನು ಮಾಡುತ್ತೇನೆ. ನಂತರ ಅಮ್ಮ ತಯಾರಿಸಿದ ಉಪಾಹಾರವನ್ನು ಸೇವಿಸಿ, ಕಾಲೇಜಿಗೆ ಹೊರಡಲು ತಯಾರಾಗುತ್ತೇನೆ.

ಶಿಕ್ಷಣ[ಬದಲಾಯಿಸಿ]

ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸ ವನ್ನು ಚಂದಾಪುರ ಗ್ರಾಮದ ಲಾರ್ವೆನ್ ಪಬ್ಲಿಕ್ ಶಾಲೆಯಲ್ಲಿ ಮುಗಿಸಿದೆ. 8 ನೇ ತರಗತಿಯವರೆಗೂ ಐ.ಸಿ.ಯಸ್.ಇ ಪಠ್ಯ ಕ್ರಮದಲ್ಲಿ ಮುಗಿಸಿದೆ. ನಾನು ಚಿಕ್ಕಂದಿನಿಂದಲೂ ಶೈಕ್ಷಣಿಕವಾಗಿ ಸದಾ ಮುಂದಿದ್ದೆ. ಬಾಲ್ಯದಿಂದಲೂ ನನಗೆ ಶೈಕ್ಷಣಿಕದ ಕಡೆ ಒಲವಿದ್ದು ಕ್ರೀಡೆ ಯ ಬಗ್ಗೆ ಆಸಕ್ತಿ ಕಡಿಮೆ ಇತ್ತು. ಆದ್ದರಿಂದ ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸಲಿಲ್ಲ. ನಾನು ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ.ರಸಪ್ರಶ್ನೆ ಸ್ಪರ್ಧೆ ಗಳಲ್ಲಿ ಭಾಗವಹಿಸಿ ಮೊದಲನೆಯ ಬಹುಮಾನವನ್ನು ಮೂರು ಬಾರಿ ಪಡೆದಾಗ ಬಹಳ ಸಂತೋಷವಾಗಿತ್ತು. ರಸಪ್ರಶ್ನೆ ಅಲ್ಲದೇ, ಚಿತ್ರ ಬಿಡಿಸುವುದು, ಹಾಡುವುದು ಇವೆಲ್ಲದರಲ್ಲೂ ಭಾಗವಹಿಸಿದ್ದೆ . ನಾನು ಏಳನೇ ತರಗತಿಯಲ್ಲಿದ್ದಾಗ ಸಿರಿಗನ್ನಡ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ ಅದರಲ್ಲಿ ನಾನು ರಾಜ್ಯಕ್ಕೆ ನಾಲ್ಕನೇ ಸ್ಥಾನವನ್ನು ಗಳಿಸಿದ್ದೆ. ನಾನು 9ನೇ ಮತ್ತು 10ನೇ ತರಗತಿಯನ್ನು ಆನೇಕಲ್ ತಾಲೂಕಿನ ನೆರಳೂರು ಗ್ರಾಮದ ಸ್ವಾಮಿ ವಿವೇಕಾನಂದ ವಿದ್ಯಾನಿಕೇತನ ಶಾಲೆಯಲ್ಲಿ ವ್ಯಾಸಂಗ ಮಾಡಿದೆ. ಆ ಶಾಲೆಯ ಉತ್ತಮ ಮತ್ತು ಸ್ಪೂರ್ತಿ ತುಂಬುವ ಮಾರ್ಗದರ್ಶಿ ಶಿಕ್ಷಕರಿಂದ ಮತ್ತು ನನ್ನ ಪರಿಶ್ರಮದಿಂದ 2016-17 ನೇ ಸಾಲಿನಲ್ಲಿ ನಾನು ಹತ್ತನೇ ತರಗತಿಯಲ್ಲಿ ಶೇಕಡ 97ರಷ್ಟು ಅಂಕಗಳನ್ನು ಗಳಿಸಿ ಶಾಲೆಗೆ ಮೊದಲಿಗಳಾದೆ. ನನ್ನ ಉತ್ತಮವಾದ ಸಾಧನೆಗೆ ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಆಗಿನ ರಸಗೊಬ್ಬರ ಖಾತೆ ಕೇಂದ್ರ ಸಚಿವರಾಗಿದ್ದ ಶ್ರೀ ಅನಂತ್ ಕುಮಾರ್ ರವರಿಂದ ನೆನಪಿನ ಕಾಣಿಕೆ ಮತ್ತು ಪ್ರಶಂಸಾ ಪತ್ರ ಪಡೆದ ಕ್ಷಣ ಅವಿಸ್ಮರಣೀಯ. ನನಗೆ, ಪೋಷಕರಿಗೆ, ಮತ್ತು ನನ್ನ ಶಿಕ್ಷಕರಿಗೆ ಬಹಳ ಸಂತೋಷವಾಯಿತು. ನಂತರ ನಾನು ಮೊದಲನೆ ಮತ್ತು ದ್ವಿತೀಯ ಪಿಯುಸಿಯನ್ನು ಆನೇಕಲ್ ತಾಲೂಕಿನ ನೆರಳೂರು ಗ್ರಾಮದ ಎಸ್.ವಿ. ವಿ.ಎನ್ ಪಿಯು ಕಾಲೇಜಿನಲ್ಲಿ ಮುಗಿಸಿದೆ. ಅಲ್ಲಿನ ಶಿಕ್ಷಕರು ಕೂಡ ನನಗೆ ಓದಿನಲ್ಲಿ ಪ್ರೋತ್ಸಾಹಿಸಿದರು. ನಾನು ದ್ವಿತೀಯ ಪಿಯುಸಿಯಲ್ಲಿ ಶೇಕಡ 97ರಷ್ಟು ಅಂಕಗಳಿಸಿ ಕಾಲೇಜಿಗೆ ಮೊದಲಿಗಳಾದೆ. ನನಗೆ ಪ್ರವಾಸ ಮಾಡುವುದೆಂದರೆ ಬಹಳ ಇಷ್ಟ. ಏಳನೇ ತರಗತಿಯಲ್ಲಿದ್ದಾಗ ನಾನು ನನ್ನ ಸ್ನೇಹಿತರೊಂದಿಗೆ ಬೇಲೂರು, ಹಳೇಬೀಡು, ಮತ್ತು ಸೋಮನಾಥಪುರ ಗಳಿಗೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದೆ. ಪ್ರವಾಸದ ನೆನಪುಗಳು ಅವಿಸ್ಮರಣೀಯ. ಕಳೆದ ವರ್ಷ ಮೇ ತಿಂಗಳಲ್ಲಿ ನನ್ನ ಪೋಷಕರೊಂದಿಗೆ ಮೈಸೂರು ಮತ್ತು ಊಟಿ ಪ್ರವಾಸ ಹೋಗಿದ್ದು ಕೂಡ ಅವಿಸ್ಮರಣೀಯವಾಗಿದೆ ಊಟಿಯಲ್ಲಿನ ನೈಸರ್ಗಿಕ ಸೌಂದರ್ಯವನ್ನು ನೋಡಿ ನಾನು ಮನಸೋತುಹೋದೆ.

ನನ್ನ ಹವ್ಯಾಸಗಳು ಮತ್ತು ಗುರಿ[ಬದಲಾಯಿಸಿ]

ಅರಮನೆ
ಮೈಸೂರು ಅರಮನೆ

ನಾನು ನನ್ನ ಬಿಡುವಿನ ಸಮಯದಲ್ಲಿ ಹಾಡನ್ನು ಕೇಳುತ್ತೇನೆ. ಪ್ರತಿದಿನ ಹೊಸ ವಿಷಯವನ್ನು ಕಲಿಯಲು ಇಷ್ಟಪಡುತ್ತೇನೆ. ಆದ್ದರಿಂದ ವಾರ್ತಪತ್ರಿಕೆಗಳನ್ನು ಮತ್ತು ವಾರ್ತ ವಾಹಿನಿಗಳನ್ನು ವೀಕ್ಷಿಸುತ್ತೇನೆ. ಮನಸ್ಸಿಗೆ ಹೆಚ್ಚು ಒತ್ತಡ ಉಂಟಾದಾಗ ಟಿವಿಯಲ್ಲಿ ಕಾರ್ಟೂನ್ ವೀಕ್ಷಿಸುತ್ತೇನೆ ಮತ್ತು ಸಂಗೀತವನ್ನು ಆಲಿಸುತ್ತೇನೆ. ಐಎಎಸ್ ಅಧಿಕಾರಿ ಆಗಬೇಕೆಂದು ನನ್ನ ಗುರಿ. ಹಣಗಳಿಕೆ ನನ್ನ ಗುರಿಯಲ್ಲ. ನಮ್ಮ ಸಮಾಜದಲ್ಲಿ ದೀನದಲಿತರ ಬದುಕು ನರಕವಾಗಿದೆ ಆದ್ದರಿಂದ ನಾನು ದೀನದಲಿತರಿಗೆ ನನ್ನ ಕೈಲಾದಮಟ್ಟಿಗೆ ಸಹಾಯ ಮಾಡಿ ಅವರಿಗೆ ನೆರವಾಗಬೇಕೆಂಬುದು ನನ್ನ ಗುರಿ. ತೋಟಗಾರಿಕೆ ನನ್ನ ನೆಚ್ಚಿನ ಹವ್ಯಾಸ. ಬಾಲ್ಯದಿಂದಲೂ ನನಗೆ ಮಣ್ಣಿನ ಮೇಲೆ ವ್ಯಾಮೋಹ. ಆದ್ದರಿಂದ ನಾವಿರುವ ಈ ಪಟ್ಟಣದ ನಮ್ಮ ಮನೆಗೂ ಕೈತೋಟವಿದೆ. ನಮ್ಮ ಮನೆಯ ಟೆರೇಸ್ ಮೇಲೆ ಹಲವು ಗಿಡಗಳನ್ನು ಹಚ್ಚಿದ್ದೇನೆ. ಅನೇಕ ಹೂವು ಹಣ್ಣಿನ ಗಿಡಗಳನ್ನು ನಾಟಿ ಮಾಡಿದ್ದೇನೆ.

ಈಗಿನ ಶಿಕ್ಷಣ[ಬದಲಾಯಿಸಿ]

ಈಗ ನಾನುಕ್ರೈಸ್ಟ್ ಯುನಿವರಸಿಟಿಯಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದೇನೆ. ನನಗೆ ವಿದ್ಯಾಲಯದ ಪರಿಸರಕ್ಕೆ ಹೊಂದಿಕೊಳ್ಳಲು ಇನ್ನೂ ಹೆಚ್ಚು ಸಮಯ ಬೇಕಾಗಿದೆ. ಈ ಕಾಲೇಜಿಗೆ ಹಲವಾರು ರಾಜ್ಯ ಮತ್ತು ದೇಶಗಳಿಂದ ವಿದ್ಯಾರ್ಥಿಗಳು ಬಂದು ವ್ಯಾಸಂಗ ಮಾಡುತ್ತಾರೆ. ಈ ಕಾಲೇಜಿಗೆ ಸೇರಬೇಕೆಂದು ನನ್ನ ಕನಸಾಗಿತ್ತು. ಅದರಲ್ಲೂ ಹಲವಾರು ಜನ ಈ ಕಾಲೇಜಿನ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದರು. ಈ ಕಾಲೇಜಿನಲ್ಲಿ ಓದಿನ ಕಡೆ ಹೆಚ್ಚು ಪ್ರಾಶಸ್ತ್ಯ ನೀಡುವುದಲ್ಲದೆ ಇತರೆ ಚಟುವಟಿಕೆಗಳಿಗೂ ಹೆಚ್ಚು ಒತ್ತು ನೀಡುತ್ತಾರೆ. ಹಾಡುವುದು, ನೃತ್ಯ, ಕಲೆ, ಕ್ರೀಡೆ, ಚರ್ಚೆ ನಡೆಸುವುದು ಹೀಗೆ ಹಲವಾರು ವಿಷಯಗಳನ್ನು ವಿದ್ಯಾರ್ಥಿಗಳನ್ನು ತೊಡಗಿಸುತ್ತಾರೆ. ವಿದ್ಯಾರ್ಥಿಗಳು ಕೇವಲ ಓದುವುದಲ್ಲದೇ ಹಲವಾರು ಚಟುವಟಿಕೆಗಳಲ್ಲಿ ನಿರತರಾಗಿ ಜೀವನದಲ್ಲಿ ಯಾವುದೇ ಭಯವಿಲ್ಲದೆ ಮುನ್ನುಗ್ಗಬೇಕು ಎಂಬುದು ಈ ವಿಶ್ವವಿದ್ಯಾಲಯದ ಗುರಿಯಾಗಿದೆ. ಆದ್ದರಿಂದ ನನ್ನ ಮುಂದಿನ ಗುರಿಯನ್ನು ಸಾಧಿಸಲು ನನ್ನ ಸ್ವಇಚ್ಛೆಯಿಂದ ಈ ಕಾಲೇಜಿಗೆ ಸೇರಿಕೊಂಡೆ. ಈ ಕಾಲೇಜಿನಲ್ಲಿ ನೀಡುವ ಶೈಕ್ಷಣಿಕ ಚಟುವಟಿಕೆಗಳಿಂದ ಧೈರ್ಯವಾಗಿ ಎಲ್ಲರ ಮುಂದೆ ಮಾತನಾಡುವುದನ್ನು ಕಲಿತಿದ್ದೇನೆ. ನನ್ನ ಆತ್ಮಸ್ಥೈರ್ಯ ಹೆಚ್ಚಾಗಿದೆ, ಖುಷಿಯಾಗಿದೆ.