ಸದಸ್ಯ:Priyankasahana/sandbox

ವಿಕಿಪೀಡಿಯ ಇಂದ
Jump to navigation Jump to search
                                ನ್ಯಾನೋ ತಂತ್ರಜ್ಞಾನ 
   ಯಾವುದೇ ಕಾಯಿಲೆಗಳನ್ನು ಗುಣಪಡಿಸುವುದು ಅಥವಾ ತಡೆಗಟ್ಟುವುದು, ಯೌವ್ವನವನ್ನು ಲಂಬಿಸುವುದು ಅಥವಾ ವೃದ್ಧಾಪ್ಯವನ್ನು ನಿಧಾನಗೊಳಿಸುವುದು, ಪರಿಸರದ ಮಾಲಿನ್ಯವನ್ನು ಹೆಚ್ಚಿನ ಶ್ರಮ ಮತ್ತು ಖರ್ಚಿಲ್ಲದೆ ಶುದ್ಧಗೊಳಿಸುವುದು, ವಿಶ್ವದ ಆಹಾರ ಕೊರತೆಯನ್ನು ನೀಗಿಸುವುದು ಆ ಮೂಲಕ ಮಾನವನ ಹಸಿವನ್ನು ಇನ್ನಿಲ್ಲವಾಗಿಸುವುದು, ರಸ್ತೆ, ವಾಹನ, ಉಪಗ್ರಹಗಳ ನಿರ್ಮಾಣ ಮುಂತಾದ ಎಲ್ಲ ಕೆಲಸಗಳನ್ನು ಮಾಡುವುದು ಈ ತಂತ್ರಜ್ಞಾನಕ್ಕೆ ಸಾಧ್ಯ ಎಂಬ ವಾದನವನ್ನು ಕೇಳಿದಾಗ ಇದೇನು ಹುಚ್ಚು ಅನಿಸದಿರಲು ಸಾಧ್ಯವಿಲ್ಲ. ಾದರೆ ಈ ಶತಮಾನ ಮಧ್ಯದ ಹೊತ್ತಿಗೆ ಇದು ಸಾದ್ಯವಾಗಲಿದೆ ಎಂದು ವಿಜ್ಞಾನಿಗಳು ವಾದಿಸಿದ್ದಾರೆ. ವಿಜ್ಞಾನ ಪ್ರಪಂಚದಲ್ಲಿ ಇಂಥ ಮಹತ್ತರ ಕುತೂಹಲಕ್ಕೆ ಕಾರಣವಾಗಿರುವ ತಂತ್ರಜ್ಞಾನವೇ "ನ್ಯಾನೋ ತಂತ್ರಜ್ಞಾನ". 
                                ನ್ಯಾನೋ ಮೀಟರ್ 

ನ್ಯಾನೋ ಎಂಬ ಪದ ನ್ಯಾನೋ ತಂತ್ರಜ್ಞಾನ ಜತೆ ಸೇರಿ ಈ ತಂತ್ರಜ್ಞಾನಕ್ಕೊಂದಿ ವಿಶೆಷತೆಯನ್ನು ಕಲ್ಪಿಸಿಕೊಟ್ಟಿದೆ. ಏಕೆಂದರೆ, ನ್ಯಾನೋ ಎಂಬುದು ಒಂದು ಅಳತೆಯ ಮೂಲಮಾನ. ನೀವು ಮನೆಯಲ್ಲಿ ಶಾಲೆಯಲ್ಲಿ ಬಳಸುವ ನಿಮ್ಮ ಕಂಪಾಸ್ ಬಾಕ್ಸ್ ನಲ್ಲಿರುವ ಸ್ಕೇಲಿನಲ್ಲಿ ೧ಸೆಂ.ಮೀ. ಅಳತೆಯನ್ನು ಗಮನಿಸಿರಿ. ಅದರಲ್ಲಿ ೧೦ ಭಾಗಗಳಿರುವುದನ್ನು ಗುರುತಿಸುತ್ತೀರಿ. ಈ ಒಂದೋಂದು ಭಾಗವೂ ೧ಮೀ. ಮೀಟರ್ ಎಂಬುದು ನಿಮಗೆ ತಿಳಿದಿದೆ. ಈ ೧ಮಿಮೀ ಅನ್ನು ೧೦ ಲಕ್ಷ ಭಾಗಗಳಾಗಿ ತುಂಡರಿಸಿದರೆ, ಅದರಲ್ಲಿನ ೧ಭಾಗವೇ ೧ ನ್ಯಾನೋ ಮೀಟರ್ ಈ ಅಳತೆಯ ಗಾತ್ರವು ಹೆಚ್ಚು ಕಡಿಮೆ ಪರಮಾಣುಗಳ ಮಟ್ಟದಲ್ಲಿದ್ದು ಆ ಹಂತದಲ್ಲಿಯೇ ಕೆಲಸ ಮಾಡಲು ಸೂಕ್ತ ಗಾತ್ರದ್ದಾಗಿದೆ.