ಸದಸ್ಯ:Priyanka.M 573/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search


ನನ್ನ ಹೆಸರು ಪ್ರಿಯಾಂಕ. ನಾನು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನನ್ನ ಪದವಿ ಮಾಡುತ್ತಿದ್ದೇನೆ

ನನ್ನ ಪ್ರೀತಿ ಹಾಗು ನನ್ನ ನೆನಪು[ಬದಲಾಯಿಸಿ]

ಕ್ರೈಸ್ಟ್ ವಿಶ್ವವಿದ್ಯಾಲಯ
. ನನಗೆ ಬಹಳ ಇಷ್ಟವಾದುದು ಅಥವಾ ಇಷ್ಟವಾದುದು ಎಂದರೆ ನನ್ನ ತಂದೆ ತಾಯಿ. ನಾನು ಹೀಗೆ ಇಂಥಹ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದೇನೆ ಎಂದರೆ ಅದು ಕೇವಲ ನನ್ನ ತಂದೆ ತಾಯಿಯರ ಪ್ರೋತ್ಸಾಹದಿಂದ ಮಾತ್ರ. ನಾನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಬಯಸುವ ಹಲವಾರು ಸನ್ನಿವೇಷಗಳು
ಇವೆ. ಆ ಸನ್ನಿವೇಷಗಳು ನನ್ನ ಮೇಲೆ ಇಲ್ಲವೇ ನನ್ನ ಮನಸ್ಸಿನ ಮೇಲಾಗಲೀ ಒಂದಾದರು ಮಾಸದಂತ ಗುರುತು ಬಿಟ್ಟಿವೆ. ಇವುಗಲ್ಲಿ ಒಂದೆಂದರೆ ನಾನು ಬಾಲ್ಯಾವಸ್ಥೆಯಲ್ಲಿದ್ದಾಗ ನನ್ನ ಅಣ್ಣ ಸೈಕಲ್ ಚಲಿಸುವುದನ್ನು
ಹೇಳಿಕೊಡುವಾಗ ನನ್ನನ್ನು ಬೀಳಿಸಿದ. ಆಗ ಆ ಸನ್ನಿವೇಷದಲ್ಲಿ ನನ್ನ ಮೇಲಾದ ಗುರುತು, ಆ ಗುರುತನ್ನು ನೋಡಿದರೆ, ಆ ದಿನವು ನಡೆದ ಎಲ್ಲಾ ಖುಷಿ,ನೋವು,ನನ್ನ ತಾಯಿಯಿಂದ ಸಿಕ್ಕ ಹೊಡೆತ ಇವೆಲ್ಲವೂ ನನ್ನ ಕಣ್ಣ ಮುಂದೆ
ನೈಜವಾಗಿ ಬಂದಂತಾಗುತ್ತದೆ. ನನ್ನ ಆ ಕ್ಷಣ ನೆನಪಿಸಿಕೊಳ್ಳುವಾಗ ಮತ್ತೊಂದು ಘಟನೆಯು ನನ್ನ ನೆನಪಿನ ಬುತ್ತಿಯಿಂದ ಹೊರಬರುತ್ತದೆ.

ನನ್ನ ಪ್ರವಾಸ ಕಥನ[ಬದಲಾಯಿಸಿ]

ಅದೇನೆಂದರೆ ನಾನು ಹತ್ತನೆಯ ತರಗತಿಯಲ್ಲಿದ್ದಾಗ ನಾನು ಹಾಗು ನನ್ನ ಗೆಳತಿಯರು,ನನ್ನ ಶಿಕ್ಷಕ ವೃಂದದವರೂ....ಹಾಗು ಎಲ್ಲರೂ ಸಹಕೂಡಿ ಶಾಲೆಯ ವತಿಯಿಂದ ಒಂದು ಪ್ರವಾಸಕ್ಕೆ ಹೊರಟ್ಟಿದ್ದೆವು.

ಅಂದು ನಾನು ಅನೇಕ ಐತಿಹಾಸಿಕ ತಾಣಗಳನ್ನು, ದೇವಾಲಯಗಳನ್ನು,ಎಲ್ಲವನ್ನೂ ಕಂಡೆ. ಅದರೊಡನೆ ಅನೇಕ ಮನರಂಜನೆಯನ್ನೂ ಪಡೆದೆ. ಹೇಳಬೇಕಾದರೆ ಅದೇ ಮೊದಲ ಬಾರಿಗೆ ನಾನು ಪ್ರವಾಸಕ್ಕೆ ಹೋಗಿದ್ದು. ಅದು ಎಲ್ಲಿಗೆಂದರೆ, ಮೇಲುಕೋಟೆಯ ಯೋಗನರಸಿಂಹನ ದೇವಾಲಯಕ್ಕೆ,ಅಲ್ಲೇ ಪಕ್ಕದಲ್ಲಿದ್ದ ವೇಣುಗೋಪಾಲ ದೇವಾಲಯಕ್ಕೆ,ಬಲಮುರಿಯ ಕಾವೇರಿ ಸಂಗಮ, ಹಾಗು ಮೈಸೂರಿನಲ್ಲಿರುವ ಟಿಪ್ಪುಸುಲ್ತಾನ್ ಮತ್ತು ಹೈದರಾಲಿಯ ದೇಹವನ್ನು ಅಂತಕ್ರಿಯೆ ಮಾಡಿರುವ ಆ ಅರಮನೆಗೂ ಸಹ ಭೇಟಿಕೊಟ್ಟೆವು. ನಿಜಕ್ಕೂ ಆ ದಿನ ನನ್ನೊಡನೆ "ಪ್ರವಾಸ ಕಥನ"ವೆಂಬ ಹೆಸರೊಂದಿಗೆ ನನ್ನೊಡನೆಇಂದೂ ನನ್ನ ನೆನಪಿನ ಬುತ್ತಿಯಲ್ಲಿ ಜೀವಂತವಾಗಿದೆ.

ಕಾವೇರಿ ಸಂಗಮ

ನನ್ನ ಮರೆಯಲಾಗದಂತ ದಿನ[ಬದಲಾಯಿಸಿ]

ಇನ್ನೊಂದು ಕ್ಷಣವೆಂದರೆ, ಅಂದು ಮೊದಲಬಾರಿಗೆ ನನ್ನ ತಂದೆ ತಾಯಿ ಇಬ್ಬರೂ ಅಷ್ಟು ಖುಷಿಯಾಗಿರುವುದನ್ನು ಕಂಡ ದಿನ. ಹಾಗು ನಾನು ಸಹ ಊಹಿಸಿಲ್ಲವಾದಂತ ದಿನ. ಅದೇನೆಂದರೆ,ನನ್ನ ಎಸ್.ಎಸ್.ಎಲ್.ಸಿ ಯ

ಪಲಿತಾಂಷವು ಹೊರಬಿದ್ದಂತ ದಿನ. ನನಗೆ ೯೪% ಸಿಕ್ಕಿತ್ತು. ಆ ದಿನವನ್ನು ನಾನು ಇಂದೂ ಮರೆಯಲಾರೆ.ಆ ದಿನದ ದಿನಪತ್ರಿಕೆಯಲ್ಲಿ ನನ್ನ ಮಿತ್ರರೊಂದಿಗೆ ನನ್ನ ಭಾವಚಿತ್ರವೂ ಪ್ರಕಟವಾಗಿತ್ತು. ಆ ಪತ್ರಿಕೆಯನ್ನು ನನ್ನ ತಂದೆಯವರು ಅವರ ಮಿತ್ರರಿಗೆ, ಬಂಧುಗಳಿಗೆ,ನೆರೆಹೊರೆಯವರಿಗೆ ಎಲ್ಲರಿಗೂ ತೋರಿ ಸಿಹಿ ಹಂಚಿ ಖುಷಿಪಟ್ಟಿದನ್ನು ಇಂದೂ ಮರೆಯಲಾರೆ. ಬಹುಷಃ ನಾನು ಆ ಒಂದು ದಿನವಾದರು ನನ್ನ ತಂದೆ ತಾಯಿಯನ್ನು ಖುಷಿ ಪಡುವಂತೆ ಮಾಡಿದೆನಲ್ಲಾ -ವೆಂಬ ಮನಃಶಾಂತಿ ಸಿಕ್ಕಿತು.

ನನ್ನ ಗುರಿ[ಬದಲಾಯಿಸಿ]

ಮಲೆನಾಡಿನ ಮಲೆ
ಇವೆಲ್ಲದರೊಡನೆ ನನಗೆ ಹಲವಾರು ಕನಸು ಹಾಗು ಗುರಿಗಳೂ ರೂಪುಗೊಂಡವು.
    ಮೊದಲಿಗೆ ೧. ನಾನು ಯಶಸ್ವಿಯಾಗಿ ನನ್ನ ಪದವಿ ಮುಗಿಸಬೇಕೆಂದು 
         ೨. ನಾನು ಓದಿದ ಶಾಲೆಯಲ್ಲೇನಾನು ಒಬ್ಬ ಶಿಕ್ಷಕಿಯಾಗಬೇಕೆಂದು.
         ೩.ಕವಿಗಳ ನಾಡು ಎಂದು ಕರೆಯುವ ಶಿವಮೊಗ್ಗದ, ಮಲೆನಾಡಿನ ಹಚ್ಚ ಹಸಿರಿನಲ್ಲಿ ನನ್ನ ಪೂರ್ಣ ಪರಿವಾರದೊಂದಿಗೆ ಒಮ್ಮೆ ಜೀವಿಸಬೇಕೆಂದು. 
        ಮತ್ತೊಂದು ಮುಖ್ಯವಾಗಿ ಹೇಳಬೇಕಾದರೆ, ಹೇಗೆ ನನ್ನ ತಂದೆ ತಾಯಿ ನನ್ನನ್ನು ಪುಟ್ಟ ಮಗುವ ಹಾಗೆ ನೊಡಿಕೊಳ್ಳುತ್ತಾರೊ ಹಾಗೆ ನಾನು ಅವರ ವೃಧಾವಸ್ಥೆಯಲ್ಲಿ ಅವರನ್ನು ಪುಟ್ಟ ಮಕ್ಕಳ ಹಾಗೆ ನೋಡಿಬೇಕೆಂದು

ಹಾಗು ಅವರ ಜವಾಬ್ದಾರಿಯನ್ನು ನನ್ನ ಹೆಗಲೇರಿಸಿಕೊಳ್ಳಬೇಕೆಂದು.

ಇವೆಲ್ಲಾ ಕನಸುಗಳು ಒಂದೊಂದೂ ಕ್ಷಣವೂ ನನ್ನನ್ನು ಕಾಡುತ್ತವೆ. ಹಾಗು ಇವೆಲ್ಲ ಕನಸುಗಳು ಇಂದೂ ನನ್ನ ಮನದಲ್ಲಿ ಒಂದು ಜ್ವಾಲಾಗ್ನಿಯಾಗಿ ಬಿಡದಂತೆ ಉರಿಯುತ್ತಿರುತ್ತದೆ. ಹಾಗು ನಾನೆಂದಿಗೂ ಆ ಬೆಂಕಿಯನ್ನು ಆರಲು ಬಿಡುವ ಸಾಧ್ಯತೆಯೇ ಇಲ್ಲ.