ವಿಷಯಕ್ಕೆ ಹೋಗು

ಸದಸ್ಯ:Prerana b v/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೆಕ್‌ಡೊನಾಲ್ಡೀಕರಣಗೊಂಡ ಸಮಾಜ

[ಬದಲಾಯಿಸಿ]

ಪೀಠಿಕೆ :-ಆಧುನಿಕತೆಯ ಕುರಿತು ಸಮಾಜಶಾಸ್ತ್ರಜ್ಞರ ವಿಚಾರಗಳು

[ಬದಲಾಯಿಸಿ]
ಮೆಕ್‌ಡೊನಾಲ್ಡೀಕರಣಗೊಂಡ ಸಮಾಜ

ಆಧುನಿಕತೆಯ ವಿವಿಧ ಪ್ರಕ್ರಿಯೆಗಳ ಕುರಿತು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸಿದ ಸಿದ್ಧಾಂತವೇ ಮೆಕ್‌ಡೊನಾಲ್ಡೀಕರಣ. ಈ ‘ಆಧುನಿಕ’ ಆಧುನಿಕತೆಯನ್ನು ವಿಶಿಷ್ಟ ರೀತಿಯಲ್ಲಿ ತಿಳಿಸುವ ಪ್ರಯತ್ನವನ್ನು ಅಮೆರಿಕಾದ ಸಮಾಜಶಾಸ್ತ್ರಜ್ಞರಾದ ಜಾರ್ಜ್ ರಿಟ್‌ಝರ್ ಪ್ರಯತ್ನ ಮಾಡಿದ್ದಾನೆ. ಜಗತ್ತಿನಲ್ಲಿ ಉಂಟಾದ ಆಧುನಿಕತೆ ಪ್ರಕ್ರಿಯೆ ಕೇವಲ ಇತ್ತೀಚಿನದಷ್ಟೇ ಅಲ್ಲ ದೀರ್ಘವಾದ ಇತಿಹಾಸವಿರುವ ಆಧುನಿಕತೆಯು ವಸಾಹತುಶಾಹಿತ್ವದಿಂದಲೇ ಪ್ರಾರಂಭವಾಯಿತು ಎಂದರೆ ತಪ್ಪಾಗಲಾರದು. ಆಧುನೀಕರಣ ಪರಿಕಲ್ಪನೆಗಳು ಮೇಲ್ನೋಟಕ್ಕೆ ತತ್ಸಮಾನ ಪದಗಳಂತೆ ಕಂಡರೂ, ಒಳನೋಟದಲ್ಲಿ ಅನೇಕ ರೀತಿಯ ಭಿನ್ನತೆಯನ್ನು ಕಾಣಬಹುದು. ಕಲಿಯುವವರು, ಕಲಿಸುವವರು ಈ ಕುರಿತು ಸ್ಪಷ್ಟತೆ ಹೊಂದಿರಬೇಕು. ಮುಖ್ಯವಾಗಿ ಆಧುನಿಕತೆ ಪ್ರಕ್ರಿಯೆ ಕುರಿತಂತೆ ಅನೇಕ ಸಾಮಾಜಿಕ ಚಿಂತಕರು ವಿಶಿಷ್ಟ ರೀತಿಯಲ್ಲಿ ಬಣ್ಣಿಸಿದ್ದಾರೆ. ಪ್ರಮುಖವಾಗಿ ಹೇಳಬೇಕೆಂದರೆ ಆಧುನಿಕತೆ ಕುರಿತು ಕೇವಲ ಆಧುನಿಕ ಚಿಂತಕರಷ್ಟೆ ಅಲ್ಲದೇ ಸಾಂಪ್ರದಾಯಿಕ ಸಾಮಾಜಿಕ ಚಿಂತಕರೂ ಸಹ ತಮ್ಮ ವಿಚಾರವನ್ನು ಭಿನ್ನ ರೀತಿಯಲ್ಲಿಯೇ ತಿಳಿಸಿರುತ್ತಾರೆ. ಉದಾಹರಣೆಗೆ ಬಂಡವಾಳಶಾಹಿತ್ವ ಏಳಿಗೆ ಹಾಗೂ ಅಭಿವೃದ್ಧಿಯೇ ಆಧುನಿಕತೆ ಹೊರತು ಬೇರೆನೂ ಅಲ್ಲವೆಂದು ಕಾರ್ಲ್ ಮಾರ್ಕ್ಸ್ ಹೇಳಿದ್ದಾನೆ. ಆಧುನಿಕತೆ ಹೆಚ್ಚಾದಂತೆ ಕೇವಲ ಬಂಡವಾಳಶಾಹಿಗಳ ಅಭಿವೃದ್ಧಿಯಾಗುತ್ತದೆಯೇ ವಿನಃ ಜನಸಾಮಾನ್ಯರದಲ್ಲ ಎಂದು ಮಾರ್ಕ್ಸ ತಿಳಿಸಿದ್ದಾನೆ. ಮುಂದುವರಿದು ಔಪಚಾರಿಕ ವೈಚಾರಿಕತೆಯ ವಿಸ್ತರಣೆಯೇ ಆಧುನಿಕತೆ ಎಂಬ ಅಭಿಪ್ರಾಯವನ್ನು ಮ್ಯಾಕ್ಸವೆಬರ್ ಮಂಡಿಸಿದರೆ, ಜೈವಿಕ ಐಕ್ಯತೆಯ ಬೆಳವಣಿಗೆ ಹಾಗೂ ಸಾಮಾಜಿಕ ಪ್ರಜ್ಞೆಯ ಕ್ಷೀಣಿಸುವಿಕೆಯೇ ಆಧುನಿಕತೆ ಎಂದು ಎಮೈಲ್ ಡರ್ಖೆಂ ತಿಳಿಸಿದ್ದಾರೆ.

ಆಧುನಿಕತೆಯ ಸೊಗಡಿನಲ್ಲಿ ಇಡೀ ಜಗತ್ತು ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತಿದ್ದು, ಪ್ರತಿ ಊರಿನ/ಹಳ್ಳಿಯ ಹಾಗೂ ದೇಶದ ಮೂಲ ಸಂಸ್ಕೃತಿಯನ್ನು ಸದ್ದಿಲ್ಲದೆ ನಾಶ ಮಾಡುತ್ತಾ ಮುಂದುವರೆದಿದೆ. ಯಾವ ರೀತಿಯಲ್ಲಿ ಜರ್ಮನಿಯಲ್ಲಿ ಯೂಹೂದಿಗಳನ್ನು ಸರ್ವನಾಶ/ಹತ್ಯಾಕಾಂಡ/ಕಗ್ಗೊಲೆ ಮಾಡಲು ಪ್ರಯತ್ನಪಟ್ಟಿದರೋ ಅದೇ ರೀತಿ ಪ್ರತಿಯೊಂದು ದೇಶದ ಮೂಲ ಆಚಾರ-ವಿಚಾರಗಳು ವೈವಾರಿಕತೆಯ ಗುಂಗಿನಲ್ಲಿ ಬಹುಳತೆಯನ್ನು ನಾಶಮಾಡುತ್ತಾ ಸಾಗುತ್ತಿದೆ ಎಂದು ಬೊಮನ್ ನುಡಿದಿದ್ದಾನೆ. ಉಲ್ರಿಚ್ ಬೆಕ್‌ರವರು (1992) ಆಧುನಿಕತೆಯನ್ನು ಹಿನ್ನೆಲೆಯಲ್ಲಿ ತಿಳಿಸಿದ್ದಾನೆ. ಬೆಕ್‌ರವರ ಪ್ರಕಾರ ನಾವು ಕೈಗಾರಿಕಾ ಸಮಾಜದಲ್ಲಿ ಬಾಳದೇ ಶರವೇಗದಲ್ಲಿ ಆಧುನಿಕತೆಯ ಪರಿಣಾಮದಿಂದ ಆತಂಕಕಾರಿ ಸಮಾಜದತ್ತ ಮುಂದುವರೆಯುತ್ತಿದ್ದೇವೆ.[] ಜೀವನದ ಪ್ರತಿಯೊಂದು ಹಂತದಲ್ಲೂ ಅನಿಯಂತ್ರಿತ ಅಪಾಯಗಳು/ಆತಂಕಗಳು ಇದ್ದೇ ಇರುವುದರಿಂದ ನಮ್ಮೆದುರಿಗೆ ಇರುವ ಕೇಂದ್ರ ವಿಷಯವೇ ಹೇಗೆ ಅಪಾಯಗಳನ್ನು ನಿಯಂತ್ರಿಸೋದು, ಕಡಿಮೆ ಮಾಡೊದು ಅಥವಾ ಯಾವ ಮಾರ್ಗೊಪಾಯ ಮಾಡಿಕೊಳ್ಳುವುದೇ ಅತ್ಯಂತ ಗಂಭೀರ ಸವಾಲು ಆಗಿದೆ.

ಇವೆಲ್ಲಕ್ಕಿಂತ ಮಿಗಿಲಾಗಿ ವೇಬರ್‌ರವರ ವೈಚಾರೀಕರಣ ಸಿದ್ಧಾಂತವನ್ನೇ ಮುಂದುವರೆಸಿ, ಅದೇ ಪರಿಕಲ್ಪನೆಯನ್ನು ಮೆಕ್‌ಡೊನಾಲ್ಡೀಕರಣ ಮೂಲಕ ಮರುಸ್ಪಷ್ಟಿಸಿದ ಕಲ್ಪನೆಯೇ ಮೆಕ್‌ಡೊನಾಲ್ಡೀಕರಣ. ವೇಬರ್‌ಗೆ ನೌಕರಶಾಹಿಯೇ, ವೈಚಾರೀಕರಣಕ್ಕೆ ಮಾದರಿಯಾದರೆ, ರಿಟ್‌ಝರ್‌ಗೆ ಫಾಸ್ಟ್ ಫುಡ್ ರೆಸ್ಟೊರೆಂಟ್‌ಗಳು ಆಧುನಿಕ ಸಮಾಜದಲ್ಲಿನ ವೈಚಾರೀಕರಣಕ್ಕೆ ಮಾದರಿಯಾಗಿದೆ. ಬದಲಾಗುತ್ತಿರುವ ವಿಜ್ಞಾನ-ತಂತ್ರಜ್ಞಾನ, ಆರ್ಥಿಕತೆ ಹಾಗೂ ಸಂಸ್ಕೃತಿಯಿಂದಾಗಿ ಮಾಕ್‌ಡೊನಾಲ್ಡ್ ಯಶಸ್ವಿಯಾಗಿದೆ, ರಿಟ್‌ಝರ್‌ನ ಪ್ರಕಾರ ತ್ವರಿತ ರೆಸ್ಟೊರೆಂಟ್‌ಗಳು ಆಧುನಿಕ ಸಮಾಜದಲ್ಲಿನ ಬದಲಾವಣೆಗೆ ಪೂರಕವಾಗಿ ಕೆಲಸ ಮಾಡುತ್ತಾ ಅನೇಕ ರೀತಿಯ ಬದಲಾವಣೆಗೆ ಒತ್ತು ಕೊಡುತ್ತಿದೆ. ಮೆಕ್‌ಡೋನಾಲ್ಡೀಕರಣದ ಪ್ರಭಾವದಿಂದ ಕೇವಲ ಉತ್ಪಾದನಾ ವಲಯವನ್ನಷ್ಟೇ ಅಲ್ಲದೆ ಸಮಾಜದ ಮೌಲ್ಯಗಳು, ಹಾಗೂ ಮಾನವರ ಸಾಮಾಜಿಕ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತಲಿವೆ. ಒಟ್ಟಾರೆ ವೇಬರ್‌ನ ವೈಚಾರಿಕರಣ ಸಿದ್ಧಾಂತವೇ ಜಾರ್ಜ್ ರಿಟ್‌ಝರ್‌ನ ಮೆಕ್‌ಡೋನಾಲ್ಡೀಕರಣ ಸಿದ್ಧಾಂತಕ್ಕೆ ಸಂಪೂರ್ಣ ಮಾದರಿಯಾಗಿದೆ.

ಮೆಕ್‌ಡೋನಾಲ್ಡೀಕರಣ

ಮೆಕ್‌ಡೋನಾಲ್ಡೀಕರಣದ ಅರ್ಥ:-

[ಬದಲಾಯಿಸಿ]

ಅಮೆರಿಕಾದ ಸಮಾಜಶಾಸ್ತ್ರಜ್ಞ ಜಾರ್ಜ್ ರಿಟ್‌ಝರ್‌ರವರ ಪ್ರಕಾರ ಅಮೆರಿಕಾದ ಸಮಾಜ ಹಾಗೂ ಜಗತ್ತಿನ ಇತರೆ ದೇಶಗಳಲ್ಲಿ ಫಾಸ್ಟ್ ಫುಡ್ ರೆಸ್ಟೊರೆಂಟ್‌ಗಳ ನೀತಿ-ನಿಯಮಗಳು, ಶೈಲಿಗಳು, ವಿವಿಧ ಕ್ಷೇತ್ರದಲ್ಲಿಯೂ ಪ್ರಾಬಲ್ಯ ವಹಿಸುತ್ತಿರುವ ಪ್ರಕ್ರಿಯೆಯೇ ಮೆಕ್‌ಡೋನಾಲ್ಡೀಕರಣ. ವಿಶೇಷವಾಗಿ ಮೆಕ್‌ಡೋನಾಲ್ಡ್ ಫಾಸ್ಟ್ ಫುಡ್ ರೆಸ್ಟೊರೆಂಟ್‌ಗಳ ಮಾದರಿಗಳು ಇತರೆ ಎಲ್ಲಾ ವಲಯಗಳಲ್ಲಿ ಕಂಡುಬರುವುದೇ ಮೆಕ್‌ಡೋನಾಲ್ಡೀಕರಣ. ಅತ್ಯಂತ ಸರಳಭಾಷೆಯಲ್ಲಿ ಹೇಳಬೇಕೆಂದರೆ ಮೆಕ್‌ಡೋನಾಲ್ಡ್ ಫಾಸ್ಟ್ ಫುಡ್ ರೆಸ್ಟೊರೆಂಟ್‌ನ ಯಶೋಗಾಥೆಯನ್ನು ಅನುಕರಣ ಮಾಡುವುದೇ ಮೆಕ್‌ಡೋನಾಲ್ಡೀಕರಣ. ಮೆಕ್‌ಡೋನಾಲ್ಡ್ ನೀತಿ-ನಿಯಮಗಳನ್ನು ತಂತ್ರವನ್ನು ಹಾಗೂ ನೀತಿಗಳನ್ನು ಜಗತ್ತಿನಾದ್ಯಂತ ಇತರೆ ಕಂಪನಿಗಳು/ ವ್ಯಾಪಾರಸ್ಥರು/ಕಾರ್ಪೊರೇಟ್ ಕಂಪನಿಗಳು ತಮ್ಮಲ್ಲಿ ಅವಳವಡಿಸಿಕೊಂಡು ಯಶಸ್ವಿಯಾಗುತ್ತಿರುವುದೇ ಮೆಕ್‌ಡೋನಾಲ್ಡೀಕರಣ. ಈ ಹಿನ್ನೆಲೆಯಲ್ಲಿ ಮೆಕ್‌ಡೊನಾಲ್ಡ್ ನೀತಿಗಳು ಆಧುನಿಕ ಸಮಾಜದಲ್ಲಿ ಹೇಗೆ ಯಶಸ್ವಿಯಾದವು ಎಂಬುದನ್ನು ಅರಿಯುವುದು ಸೂಕ್ತ.[]

ಮೆಕ್‌ಡೊನಾಲ್ಡ್ ಯಾರು?
[ಬದಲಾಯಿಸಿ]

ಮೆಕ್‌ಡೋನಾಲ್ಡೀನ ತತ್ವಗಳನ್ನು ಅರಿಯುವುದಕ್ಕಿಂತ ಮುಂಚೆ ಮೆಕ್‌ಡೊನಾಲ್ಡ್ ಕುರಿತು ಸಂಕ್ಷಿಪ್ತವಾಗಿ ತಿಳಿಯುವುದು ಸೂಕ್ತ. ಅಮೆರಿಕಾ ದೇಶದ ಕ್ಯಾಲಿಪೋರ್ನಿಯಾದಲ್ಲಿ 1940ರಲ್ಲಿ ರಿಚರ್ಡ್ ಮತ್ತು ಮೌರೀಸ್ ಮೆಕ್‌ಡೋನಾಲ್ಡ್ ಸಹೋದರರು ಪ್ರಾರಂಭಿಸಿದ ಒಂದು ಚಿಕ್ಕ ಉಪಹಾರ ಗೃಹವೇ ಮೊಕ್‌ಡೊನಾಲ್ಡ್. ಇತ್ತೀಚಿನ ದಿನಗಳಲ್ಲಿ ಜಗತ್ತಿನ ಅತ್ಯಂತ ಬೃಹತ್‌ಗಾತ್ರದ ಆಹಾರ-ಸರಪಳಿಯಾಗಿದ್ದು, ಪ್ರತಿದಿನ ವಿಶ್ವದಾದ್ಯಂತ ಸುಮಾರು 7 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ತನ್ನೆಡೆಗೆ ಆಕರ್ಷಿಸಿ, 120 ದೇಶಗಳಿಗಿಂತಲೂ ಹೆಚ್ಚಿನ ಕಡೆ ನಾವು ಮೆಕ್‌ಡೊನಾಲ್ಡ್ ಉಪಹಾರ ಗೃಹಗಳನ್ನು ಕಾಣಬಹುದು. 1948ರಲ್ಲಿ ಮೆಕ್‌ಡೋನಾಲ್ಡ್ ಸಹೋದರರು ತನ್ನ ಸಾಂಪ್ರದಾಯಿಕ ಉಪಹಾರ ಕ್ರಮಕ್ಕೆ ತಿಲಾಂಜಲಿ ನೀಡಿ, ಉಪಹಾರದಲ್ಲಿ ತ್ವರಿತ ಸೇವಾ ವ್ಯವಸ್ಥೆ ಪ್ರಾರಂಭಿಸಿ, ತಿನ್ನುವ ಉಪಹಾರಕ್ಕೆ ಹಾಗೂ ವಿತರಣೆಗೆ ಹೊಸ ರೂಪವನ್ನು ನೀಡಿದರು. ಈಗಾಗಲೇ ಜಗತ್ತಿನಾದ್ಯಂತ 38 ಸಾವಿರದಷ್ಟು ಮಾಕ್‌ಡೋನಾಲ್ಡ್ ರೆಸ್ಟೊರೆಂಟ್‌ಗಳನ್ನು ಹೊಂದಿದ್ದು, ಸುಮಾರು 2 ಲಕ್ಷದಷ್ಟು ಉದ್ಯೋಗಿಗಳನ್ನು ಅದು ಹೊಂದಿದೆ. ನೂರಕ್ಕೂ ಅಧಿಕ ಬಿಲಿಯನ್ ಡಾಲರ್ ವ್ಯಾಪಾರ ವಹಿವಾಟು ನಡೆಸುತ್ತಿರುವ ಈ ರೆಸ್ಟೊರೆಂಟ್‌ಗಳು ಜನರ ತಿನ್ನುವ ಆಹಾರ ಕ್ರಮವನ್ನೇ ಬದಲಾಯಿಸಿಬಿಟ್ಟಿದೆ. ಅತ್ಯಂತ ಚಿಕ್ಕದಾಗಿ ಪ್ರಾರಂಭಿಸಿದ ಈ ಉಪಹಾರ ಗೃಹವು, ಕೇವಲ 50 ವರ್ಷದಲ್ಲಿ ತನ್ನ ಹೊಸ ತತ್ವಗಳಿಂದ, ಇಂದು ರೆಸ್ಟೊರೆಂಟ್‌ಗಳ ರಾಜನಾಗಿ ಬದಲಾಗಿದೆ ಇದನ್ನೇ ಗುರಿಯಾಗಿಟ್ಟುಕೊಂಡು ಬರೆದ ಸಿದ್ಧಾಂತವೇ ಮೆಕ್‌ಡೋನಾಲ್ಡೀಕರಣ. ಇಂದು ಜಗತ್ತಿನಾದ್ಯಂತ ನೂರಾರು ಕಂಪನಿಗಳು/ಶಾಲಾ-ಕಾಲೇಜುಗಳು/ಸಂಸ್ಥೆಗಳು/ವ್ಯವಹಾರ ನಡೆಸುತ್ತಿರುವ ದೊಡ್ಡ ಮಾಲ್‌ಗಳು ಮೆಕ್‌ಡೊನಾಲ್ಡ್ ನೀತಿ-ನಿಯಮಗಳನ್ನು ತಮ್ಮ ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಂಡು ಯಶಸ್ಸಿನತ್ತ ಮುನ್ನುಗುತ್ತಿದೆ. ಇಡೀ ಜಗತ್ತಿಗೆ ಮೆಕ್‌ಡೊನಾಲ್ಡ್ ಮಾದರಿಯಾಗಿದೆ. ಮಾನವರು ತಂತ್ರಜ್ಞಾನದಿಂದ-ತಂತ್ರಜ್ಞಾನವು ಮನುಷ್ಯರಿಂದ ಬೆರೆತು ಹೋಗಿ ಭಾವನೆಗಳು, ನೋವು ನಲಿವುಗಳು, ಸುಖ ದುಃಖಗಳು, ದೈನಂದಿನ ಜೀವನದಲ್ಲಿ ನುಸುಳದಂತೆ ಕಾರ್ಯಕ್ರಮ ಮಾಡಿಕೊಂಡಿವೆ. ಇದೆ ಆಧುನಿಕ ಆಧುನಿಕತೆಯ ಬಂಡವಾಳವೆಂದು ರಿಟ್‌ಝರ್ ತನ್ನ ಪುಸ್ತಕ ‘The McDonaldization of Society’ (1993) ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಮೆಕ್‌ಡೋನಾಲ್ಡೀಕರಣದ ನಾಲ್ಕು ಮುಖ್ಯ ತತ್ವಗಳನ್ನು ಇಲ್ಲಿ ಚರ್ಚಿಸಲಾಗಿದೆ. ಈ ನಾಲ್ಕು ತಂತ್ರಾಂಶಗಳೇ ಇಡಿ ಜಗತ್ತಿನ ಆರ್ಥಿಕಾಭಿವೃದ್ಧಿ ಮಾದರಿಯಾಗಿದೆ. ಇವನ್ನು ಅರಿತುಕೊಂಡರೆ, ಮೆಕ್‌ಡೋನಾಲ್ಡೀಕರಣ ಸಿದ್ಧಾಂತವು ಸರಳವಾಗಿ ಅರ್ಥವಾಗುತ್ತದೆ.

1.  ದಕ್ಷತೆ
[ಬದಲಾಯಿಸಿ]

ಮೆಕ್‌ಡೋನಾಲ್ಡ್ ತನ್ನ ಎಲ್ಲಾ ಆಹಾರದ ಸೇವೆಯನ್ನು ಗ್ರಾಹಕರಿಗೆ ಅತ್ಯಂತ ತ್ವರಿತವಾಗಿ ಹಾಗೂ ಕಡಿಮೆ ಅವಧಿಯಲ್ಲಿ ನೀಡುವುದಲ್ಲದೇ, ಅದನ್ನು ಸಿದ್ಧಪಡಿಸುವಿಕೆ ಹಾಗೂ ವಿತರಣೆಯಲ್ಲೂ ಕ್ಷಿಪ್ರಗತಿಯನ್ನು ಹೊಂದುವ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಹಸಿವಾದ ಹೊಟ್ಟೆಗಳಿಗೆ ಕ್ಷಿಪ್ರವಾಗಿ ತಿನ್ನೋಕೆ ಕೊಡೋದೆ ಮೆಕ್‌ಡೋನಾಲ್ಡ್ ಯಶಸ್ಸಿನ ಗುಟ್ಟು. ಒಂದೂರಿಂದ ಮತ್ತೊಂದೆಡೆ ಆರಾಮವಾಗಿ ಒಯ್ಯುವ ರೀತಿಯಲ್ಲಿ ಬರ್ಗರ್/ಪಿಜಾಹಟ್ ತಯಾರಿಸಿ ಗ್ರಾಹಕರಿಗೆ ತಲುಪಿಸುತ್ತಾರೆ. ಸಾಂಪ್ರದಾಯಿಕವಾಗಿ ಭಾರತೀಯ ಹೋಟೆಲ್‌ಗಳಲ್ಲಿನ ತಿಂಡಿ-ತಿನಿಸು-ದೊಸೆಗಳು/ಚೌಚೌಬಾತ್/ಇಡ್ಲಿ/ಬಿಸಿಬೆಳೆಬಾತ್ ಒಂದೂರಿನಿಂದ ಮತ್ತೊಂದು ಕಡೆ ಒಯ್ಯುವ ಪ್ರಕ್ರಿಯೆ ಇರಲಿಲ್ಲ ಬರ್ಗರ್ ಗೋಲಾಕಾರ ವಿನ್ಯಾಸ ತಿನ್ನುವವರಿಗೆ ಅನುಕೂಲ ರೀತಿಯಲ್ಲಿದ್ದು, ಬಸ್ಸಲ್ಲಿ/ಟ್ರೈನಲ್ಲಿ ನಿಂತುಕೊಂಡು ಅಥವಾ ನಡೆದುಕೊಂಡು ತಿನ್ನಬಹುದು. ಟಿಷ್ಯು ಪೇಪರ್‌ನ್ನು ಜೊತೆಯಲ್ಲೇ ಕೊಟ್ಟಿರುವುದರಿಂದ ಕೆಲವೊಮ್ಮೆ ಕೈ ಸ್ವಚ್ಛಗೊಳಿಸುವ ಪ್ರಕ್ರಿಯೆಯೂ ಆರಾಮವಾಗಿರುತ್ತದೆ. ಆದರೆ ಉಪ್ಪಿಟ್ಟಾಗಲಿ/ಅವಲಕ್ಕಿಯಾಗಲಿ/ಇಡ್ಲಿ-ಸಾಂಬಾರ್-ಚಟ್ನಿಯಾಗಲಿ ಈ ರೀತಿಯಲ್ಲಿ ತಿನ್ನಲೂ ಸಾಧ್ಯವಾದರೂ, ತಿನ್ನೋವವರಿಗೆ ತ್ರಾಸದಾಯಕವಾಗುತ್ತದೆ. ಇದಕ್ಕಿಂತ ಮಿಗಿಲಾಗಿ ಮೆಕ್‌ಡೋನಾಲ್ಡ್ ಹೆಚ್ಚಿನ ಕಾರ್ಯ ನಿರ್ವಹಿಸುವುದು ಆಹಾರ ಫ್ಯಾಕ್ಟರಿಗಳು ಬಟನ್ ಒತ್ತಿದೊಡನೆ ಯಾವಾಗ/ಹೇಗೆ/ಬೇಕೆಂದು ತಿನ್ನುವಂತಹ ವಸ್ತುಗಳನ್ನು ತಂತ್ರಜ್ಞಾನವೇ ನಿರ್ವಹಿಸುವುದರಿಂದ ಆಹಾರದಲ್ಲಿ ದಕ್ಷತೆಯನ್ನು ಸಾಧಿಸಬಹುದು.

2.  ಲೆಕ್ಕಾಚಾರತೆ
[ಬದಲಾಯಿಸಿ]

ಮೆಕ್‌ಡೋನಾಲ್ಡ್ ಯಾವತ್ತೂ ಗುಣಾತ್ಮಕತೆ ಮಹತ್ವ ನೀಡದೆ ಲೆಕ್ಕಾಚಾರಕ್ಕೆ ಸಿಗುವ ವಸ್ತುಗಳಿಗೆ ಹೆಚ್ಚಾಗಿ ಒತ್ತು ನೀಡುತ್ತದೆ. ಮ್ಯಾಕಡೋನಾಲ್ಡಿನ ಯಾವುದೇ ಆಹಾರದ ವಸ್ತುಗಳನ್ನು ತಿಂದರೆ ನಾವು ಎಷ್ಟು ತಿಂದಿದ್ದೇವೆ ಎಂದು ನಿಖರವಾಗಿ ಹೇಳಬಹುದು. ಮೆಕ್‌ಡೋನಾಲ್ಡಿನ ಪ್ಯಾಕೇಟುನ್ನು ಆಕರ್ಷಕ ರೀತಿಯಲ್ಲಿ ಮಾಡಿ ಗ್ರಾಹಕರಿಗೆ ನೀಡುತ್ತಾರೆ. ಸಾಮಾನ್ಯವಾಗಿ ಬಣ್ಣ ಬಣ್ಣದ ಪ್ಯಾಕೇಟ್‌ಲ್ಲಿ ವಿವಿಧ ಆಹಾರದ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುತ್ತಾರೆ. ಪ್ಯಾಕ್‌ನ ಒಳಗೆ ನೋಡಿದಾಗ ದುಂಡಾಕಾರವಾಗಿ ಹಾಗೂ ತಿನ್ನುವಾಗ ತ್ರಿಕೋನ ಶೈಲಿಯಲ್ಲಿ ತುಂಡಾಗಿ ಪಿಜಾಹಟ್‌ವಿರುತ್ತದೆ. ಆದ್ದರಿಂದ ತಿನ್ನುವವರಿಗೆ ತ್ರಿಕೋನಾಕಾರದ ಭಾಗ ಬಾಯಿಯೊಳಗೆ ಹಾಕಿಕೊಳ್ಳಲು  ಚಿಕ್ಕ ಮಕ್ಕಳಿಂದ ದೊಡ್ಡವರಿಗೂ ಅನುಕೂಲವಾಗಿರುತ್ತದೆ. ಆದರೆ ಈ ರೀತಿಯ ಗಾತ್ರ ಅಥವಾ ತೂಕವನ್ನು ನಾವು ಮಸಾಲೆದೊಸೆಗಾಗಲೀ/ಉಪ್ಪಿಟ್ಟಲ್ಲಾಗಲೀ/ಮದ್ದೂರು ವಡೆಗಳಲ್ಲಾಗಲೀ/ಖಾರಾಬಾತ್‌ಗಳಲ್ಲಾಗಲಿ ನಿಖರವಾಗಿ ಮಾಡಲು ಆಗಲ್ಲ. ಒಂದೇ ಹೋಟೆಲ್‌ಗೆ ಹೋಗಿ ದಿನಾ ಮಸಾಲೆದೊಸೆ/ ತುಪ್ಪದೊಸೆ/ ಸೆಟ್‌ದೊಸೆ ತಿಂದರೂ, ಪ್ರತಿಬಾರಿಯೂ ಅದರ ಗಾತ್ರ/ತೂಕದಲ್ಲಿ/ರುಚಿಯಲ್ಲಿ ವ್ಯತ್ಯಾಸಗಳು ಖಂಡಿತ ಕಂಡುಬರುತ್ತವೆ. ಬೆಂಗಳೂರಿನ ದೊಸೆಗೂ ಬಳ್ಳಾರಿಯ ದೊಸೆಗೂ ವ್ಯತ್ಯಾಸಗಳು ನಾವು ಖಂಡಿತಾ ಕಾಣಬಹುದು. ನವದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಸಿಗುವ ಮೆಕ್‌ಡೋನಾಲ್ಡ್ ಹಾಗು ಗುಲ್ಬರ್ಗಾದ ಮೆಕ್‌ಡೋನಾಲ್ಡ್ ರೆಸ್ಟೊರೆಂಟ್‌ನಲ್ಲಿ ಸಿಗುವ ಐಟಂಗಳಿಗೂ, ಯಾವುದೇ ವ್ಯತ್ಯಾಸಗಳು ಕಂಡು ಬರುವುದಿಲ್ಲ. ಸಮಾನ ರೀತಿಯ ವಿನ್ಯಾಸ-ಅಷ್ಟೇ ಗ್ರಾಂನ ಐಟಂಗಳು ಅದೇ ರುಚಿ ಎಲ್ಲಾ ಮೆಕ್‌ಡೋನಾಲ್ಡ್ ರೆಸ್ಟೊರೆಂಟ್‌ಗಳಲ್ಲಿ ಲಭ್ಯವಿರುತ್ತವೆ. ಅಷ್ಟೇ ಅಲ್ಲದೆ ಜಗತ್ತಿನಾದ್ಯಂತ ಎಲ್ಲಾ ಮೆಕ್‌ಡೋನಾಲ್ಡ್ ಆಹಾರದ ಕ್ರಮಗಳು/ ಗಾತ್ರ-ತೂಕ/ ವಿನ್ಯಾಸ ಹಾಗೂ ರೆಸ್ಟೊರೆಂಟಿನ ಒಳ ಹಾಗೂ ಹೊರ ವಿನ್ಯಾಸ, ಉಪಹಾರವನ್ನು ಆರ್ಡರ್ ಮಾಡುವ ರೀತಿ, ಕೊಡುವವರ ವಸ್ತು ವಿನ್ಯಾಸ, ಬಣ್ಣ ಎಲ್ಲವೂ ಒಂದೇ ರೀತಿಯಲ್ಲಿ ಇರುತ್ತದೆ. ಆದ್ದರಿಂದ ಮೆಕ್‌ಡೋನಾಲ್ಡಿನ ಯಾವುದೇ ರೆಸ್ಟೊರೆಂಟ್‌ಗಳಿಗೆ ಹೋಗುವ ಗ್ರಾಹಕರಿಗೆ ತಿನ್ನುವ ಐಟಂಗಳಲ್ಲಿ ಗೊಂದಲವಿರುವುದಿಲ್ಲ.

3.  ನಿರೀಕ್ಷಿಸಲು ಸಾಧ್ಯ
[ಬದಲಾಯಿಸಿ]

ಮೆಕ್‌ಡೋನಾಲ್ಡೀಕರಣದ ಪ್ರಕ್ರಿಯೆ ಅವಲಂಬಿತವಾಗಿರುವುದೇ ಭವಿಷ್ಯದ ಮೇಲೆ ಎಂದರೆ ತಪ್ಪಾಗಲಾರದು. ಉದಾಹರಣೆಗೆ ಬೆಂಗಳೂರಿನಲ್ಲಿ ಅಥವಾ ಮೈಸೂರಿನಲ್ಲಿ ದೊರಕುವ ಹಮಬರ್ಗ್ ವಿನ್ಯಾಸ-ಗಾತ್ರದಲ್ಲಿ ನಿರೀಕ್ಷೆ ಮಾಡುವ ರೀತಿಯಲ್ಲೇ ಖಂಡಿತಾ ಲಭ್ಯವಿರುವುದರಿಂದ ಗ್ರಾಹಕರಿಗೇನೂ ಸಮಸ್ಯೆ ಉಂಟಾಗದು. ಮೆಕ್‌ಡೋನಾಲ್ಡಿನ ಉತ್ಪನ್ನಗಳು ಹಾಗೂ ಸೇವೆಗಳು ಜಗತ್ತಿನಾದ್ಯಂತ ಸಮಾನ ರೀತಿಯಲ್ಲಿದ್ದು, ಯಾವುದೇ ಭಾಷೆಯಲ್ಲೂ ಉತ್ಪನ್ನಗಳು ಅಭಿನ್ನವಾಗಿರುತ್ತವೆ. ಮೊದಲೆ ಸಿದ್ಧಪಡಿಸಿದ ಖಾದ್ಯಪಟ್ಟಿಯನ್ನು ನೋಡಿ ತಾಕೀತು ಮಾಡಬಹುದು. ಅದಲ್ಲದೇ ಮೆಕ್‌ಡೋನಾಲ್ಡ್ ಹೋಟೆಲ್‌ಗಳಲ್ಲಿ ಹೋಗೊಕ್ಕಿಂತ ಮೊದಲೇ ಏನೆಲ್ಲಾ ಐಟಂಗಳು ಲಭ್ಯವಿರುತ್ತವೆ ಎಂದು ಊಹಿಸಲು ಸಾಧ್ಯ. ಈ ರೀತಿಯ ಸೌಲಭ್ಯ ನಮ್ಮ ಅನೇಕ ಹೋಟೆಲುಗಳಲ್ಲಿ ವಿರಳ.

4.  ಮಾನವ ರಹಿತ-ತಂತ್ರಜ್ಞಾನಯುಕ್ತ ನಿಯಂತ್ರಣ
[ಬದಲಾಯಿಸಿ]

ಮೆಕ್‌ಡೋನಾಲ್ಡ್ ಉಪಾಹಾರಗೃಹಗಳು ತಂತ್ರಜ್ಞಾನದ ಮುಖಾಂತರವೇ ನಿರ್ವಹಣೆ ಮಾಡುತ್ತದೆ. ಇದರಿಂದ ಆಹಾರದ ಗುಣಮಟ್ಟ-ಗಾತ್ರ-ರುಚಿಯಲ್ಲಿ ನಿಯಂತ್ರಣ ಸಾಧ್ಯವಾಗುತ್ತದೆ. ಈ ರೀತಿಯ ಸವಲತ್ತು ಸಾಂಪ್ರದಾಯಿಕ ಹೋಟೆಲ್‌ಗಳಲ್ಲಿ ಕಂಡು ಬರುವುದಿಲ್ಲ. ಆದ್ದರಿಂದಲೇ ಗುಣಮಟ್ಟ-ರುಚಿಗಳಲ್ಲಿ ನಾವು ಏರು-ಪೇರನ್ನು ಅನುಭವಿಸಬಹುದು. ಮಾನವ ಉದ್ಯೋಗಿಗಳ ಬದಲಾಗಿ ರೋಬೊಟ್‌ಗಳು ಈ ಖಾದ್ಯಗಳ ನಿರ್ವಹಣೆ ಮಾಡುತ್ತಿರುತ್ತವೆ. ಒಟ್ಟಾರೆ ಹೇಳಬೇಕಾದರೆ ಕನಿಷ್ಟ ಜವಾಬ್ದಾರಿ ಹಾಗೂ ಗರಿಷ್ಟದಕ್ಷತೆಯೇ ಮೆಕ್‌ಡೋನಾಲ್ಡಿನ ಧ್ಯೇಯವಾಕ್ಯವಾಗಿದ್ದು, ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಈ ತತ್ವಗಳನ್ನು ತಮ್ಮಲ್ಲಿಯೂ ಅಳವಡಿಸುತ್ತಾ ಯಶಸ್ಸನ್ನು ಪಡೆದಿವೆ. ನಮ್ಮ ದೇಶದಲ್ಲೂ1996ರ ನಂತರ ಈ ನೀತಿಗಳ ಪ್ರಭಾವಗಳನ್ನು ಅನೇಕ ಕಡೆ ಕಾಣಬಹುದು. ಮೋರ್ ಮಳಿಗೆಗಳು, ರಿಲಯನ್ಸ್ ಟ್ರೆಂಡ್ಸ್, ಸೋಚ್ ಮಳಿಗೆ, ಅಪೋಲೊ ಮೆಡಿಕಲ್ಸ್ ಎಚ್.ಪಿ/ಭಾರತ್ ಪೆಟ್ರೋಲಿಯಂಗಳು/ಎಂಆರ್.ಎಫ್/ಮಾರುತಿ ಶೋರೂಂಗಳು/ಸ್ಟೇಟ್ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್‌ಗಳು, ರೇಮಂಡ್ ಶೋರೂಂಗಳು, ಮಲ್ಟಿಫ್ಲೆಕ್ಸ್ಗಳು/ವಿಶಾಲ್ ಮೆಗಾಮಾರ್ಕೇಟ್ ದೇಶದ ಯಾವುದೇ ಮೂಲೆಗಳಲ್ಲಿ ಹೋದರೂ ಈ ಎಲ್ಲಾ ಮಳಿಗೆಗಳ ಒಳವಿನ್ಯಾಸ, ಮಾರಾಟ ಮಾಡುವ ರೀತಿ, ವಸ್ತುಗಳನ್ನು ಇಡುವ ರೀತಿ, ಸೇವೆಗಳು ಎಲ್ಲವೂ ಏಕರೂಪದಲ್ಲಿ ಕಾಣಬಹುದು. ನಮ್ಮ ರಾಜ್ಯದಲ್ಲಿ ಗಮನಿಸಿದರೆ VRL/SRS ಬಸ್ಸು ಸೇವೆಗಳು, ಸ್ವಲ್ಪಮಟ್ಟಿಗೆ ಕಾಮತ್ ಹೋಟೆಲುಗಳು, ಕಾಫಿ ಡೇ ಸಮಾನ ರೀತಿಯಲ್ಲಿ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಲಿವೆ.

ಮೆಕ್‌ಡೋನಾಲ್ಡೀಕರಣದ ದುಷ್ಪರಿಣಾಮಗಳು

[ಬದಲಾಯಿಸಿ]

ಮೆಕ್‌ಡೋನಾಲ್ಡ್ ಯಶೋಗಾಥೆಯು ಎಲ್ಲಾ ಬೃಹತ್ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆಗಳಲ್ಲಿ ತಮ್ಮ ವ್ಯಾಪಾರ-ವಹಿವಾಟನ್ನು ಕನಿಷ್ಟ-ಜವಾಬ್ದಾರಿ-ಉತ್ಕೃಷ್ಟ ದಕ್ಷತೆಯ ಮೂಲಕ ಕೈಗೊಳ್ಳಲು ಅನುಕೂಲವಾಗಿರುವುದರಲ್ಲಿ ಯಾವುದೇ ರೀತಿಯ ಸಂದೇಹಗಳಿಲ್ಲ. ಆದರೆ ಈ ಪ್ರಕ್ರಿಯೆಯಿಂದಾಗಿ ಅನೇಕ ಅಗೋಚರ ಪರಿಣಾಮಗಳನ್ನು ನಮ್ಮ ಸಾಮಾಜಿಕ-ಆರ್ಥಿಕ ವ್ಯವಸ್ಥೆಗಳಲ್ಲಿ ಕಾಣ ಸಿಗುತ್ತವೆ.

  • ಮೊದಲನೆಯದಾಗಿ, ಮೆಕ್‌ಡೋನಾಲ್ಡ್ ಏಕರೂಪತೆಗೆ ಒತ್ತು ನೀಡಿದ್ದು, ಬಹುಳತೆಗೆ ಮಾರಕವಾಗಿದೆ. ಉದಾಹರಣೆಗೆ ಆಹಾರ ಕ್ರಮದಲ್ಲಿ ನಮ್ಮ ದೇಶದ ವೈಶಿಷ್ಟ್ಯತೆಯೆ ವಿಭಿನ್ನತೆ. ದಕ್ಷಿಣ-ಉತ್ತರ ಭಾರತೀಯ ತಿಂಡಿ-ತಿನಿಸುಗಳಲ್ಲಿ ನೂರಾರು ರೀತಿಯ ವಿಶಿಷ್ಟತೆಯನ್ನು ಗಮನಿಸಬಹುದು. ಅದೇ ರೀತಿ ನಮ್ಮ ರಾಜ್ಯದಲ್ಲಿನ ಧಾರವಾಡ ಪೇಡ, ಮೈಸೂರು ಪಾಕ್, ಬೆಳಗಾವಿ ಕುಂದ, ಸವಣೂರು ಖಾರ, ಗೋಕಾಕ್ ಕರದಂಟು, ಮಂಗಳೂರಿನ ಬಾಳೆಹಣ್ಣು ಹಲ್ವಾ, ಕರಾವಳಿಯ ಕುಚ್‌ಲಕ್ಕಿ ಅನ್ನ, ಖಾನಾವಳಿಗಳು, ಬಿಜಾಪುರದ ರೊಟ್ಟಿ, ಮದ್ದೂರು ವಡೆ, ಮೈಸೂರು ಬಜ್ಜಿ, ಮಿರ್ಚಿ, ಮಂಡಕ್ಕಿ ಇತ್ಯಾದಿ ಅಯಾ ಊರಿನ ಆಹಾರದ ವೈಶಿಷ್ಟ್ಯಗಳು ಬಹುಳತೆಗೆ ಪುಷ್ಟಿ ನೀಡುತ್ತವೆ.
  • ಎರಡನೆಯದಾಗಿ, ಮೆಕ್‌ಡೊನಾಲ್ಡ್ ಮಾನವ ಸಂಬಂಧಗಳಿಗೆ ಒತ್ತು ನೀಡುವುದಿಲ್ಲ. ಮನುಷ್ಯರನ್ನು ಕೃತಕ ಮುಗುಳ್‌ನಗೆಯಿಂದ ನಿರ್ವಹಿಸುವ ಕ್ರಮಗಳನ್ನು ನಾವು ಬಹುರಾಷ್ಟ್ರೀಯ ವ್ಯಾಪಾರಗಳಲ್ಲಿ ಕಾಣಬಹುದು. ಉದಾಹರಣೆಗೆ ಇತ್ತೀಚೆಗೆ ಜನಪ್ರಿಯವಾಗಿರುವ ಮಾರಾಟ ಮಳಿಗೆಗಳಲ್ಲಿ ಯಾರೊಡನೆಯೂ ಮಾತನಾಡದೆ ನಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತೇವೆ. ಬಿಲ್ಲುಗಳನ್ನು ನೀಡುವವರೂ ಸಹ ಅದೇ ರೀತಿಯಲ್ಲಿ ವರ್ತಿಸುತ್ತಾರೆ. ಆದರೆ ನಮ್ಮ ಊರಿನಲ್ಲಿರುವ ಹಳೆ ಬಟ್ಟೆ ಅಂಗಡಿ/ದಿನಸಿ ಅಂಗಡಿಯ ಮಾಲೀಕರು ನಗುಮುಖದಿಂದ ನಮ್ಮೆಲ್ಲರ ಕುಶಲೋಪರಿಯನ್ನು ಸರ್ವೆಸಾಮಾನ್ಯವಾಗಿ ವಿಚಾರಿಸುತ್ತಾರೆ. ಬೇಕಾದರೆ ಸಾಲ ಮಾಡಲು ಅವಕಾಶವನ್ನು ಕೊಡುತ್ತಾರೆ.
  • ಮೂರನೆಯದಾಗಿ, ಮೆಕ್‌ಡೊನಾಲ್ಡೀ ಪ್ರಕ್ರಿಯೆಯು ಹೆಚ್ಚಾಗಿ ಉಳ್ಳವರಿಗೆ ಹಾಗೂ ಮಧ್ಯಮವರ್ಗದ ಮನಃಸ್ಥಿತಿಗೆ ಸೂಕ್ತವಾಗಿದ್ದೂ ಬಡವರ್ಗಕ್ಕೆ ಅಲ್ಲ.
  • ನಾಲ್ಕನೆಯದಾಗಿ, ಆಡಂಬರದ ಪ್ರದರ್ಶನ: ಮೆಕ್‌ಡೊನಾಲ್ಡ್ನಲ್ಲಿ ತಿನ್ನುವವರು ಸರ್ವೆಸಾಮಾನ್ಯವಾಗಿ ಪೋಟೊ ಕ್ಲಿಕ್ ಮಾಡಿ ಸ್ಟೇಟಸ್ ಹಾಕಿ ತಮ್ಮ ಆಡಂಬರವನ್ನು ಪ್ರದರ್ಶಿಸುತ್ತಾರೆ. ಆದರೆ ಇವರುಗಳೆ ಹಳೇ ಹೋಟೆಲ್‌ಗೆ, ಖಾನಾವಳಿಗೆ ಹೋದರೆ ಸೆಲ್ಫಿ ಹಾಕೊಲ್ಲ.
  • ಐದನೆಯದಾಗಿ, ಯುವಜನಾಂಗದ ಆಕರ್ಷಣೆಗೆ ಪೂರಕವಾಗಿದ್ದು, ಸರ್ವೆ ಸಾಮಾನ್ಯವಾಗಿ ಮೆಕ್‌ಡೊನಾಲ್ಡಿನ ಖಾದ್ಯಗಳು ಎನೂ ರುಚಿಕರವೆನಿಸುವುದಿಲ್ಲ ಹಾಗೂ ಅವೂಗಳೆಲ್ಲವೂ ನೇರವಾಗಿ ಆರೋಗ್ಯದ ಮೇಲೆ ವಿಶೇಷವಾಗಿ ಪಚನ ಕ್ರಿಯೆಯ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ.

ಕೊನೆಯಲ್ಲಿ ಹೇಳಬೇಕಾದರೆ ಜಾರ್ಜ್ ರಿಟ್‌ಝರ್ ಮೆಕ್‌ಡೊನಾಲ್ಡೀಕರಣ ನಾಲ್ಕೂ ಆಯಾಮಗಳು ಉಲ್ಟಾ ಆಗಿದ್ದಾವೆ ಎಂದಿದ್ದಾನೆ. ಕೋವಿಡ್‌ನಿಂದಾಗಿ ತೀರಾ ಅದಕ್ಷತೆ; ಲೆಕ್ಕಕ್ಕೆ ಸಿಗಲಾರದಷ್ಟು ಸಮಾಜದ ಮೇಲಿನ ದುಷ್ಪರಿಣಾಮ; ಊಹಿಸಲಾರದಷ್ಟು ಜನರ ಜೀವನದ ಮೇಲಿನ ಪ್ರಭಾವ; ಹಾಗೂ ಯಾವುದೇ ರೀತಿಯ ನಿಯಂತ್ರಣ ಇಲ್ಲದಂತಾಯಿತು. ಒಟ್ಟಾರೆ ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಮೆಕ್‌ಡೊನಾಲ್ಡ್ ನೀತಿ-ಧೋರಣೆ ತತ್ವಗಳ ಅನುಕರಣೆಯೇ ಮೆಕ್‌ಡೊನಾಲ್ಡೀಕರಣ.     

ಪರಾಮರ್ಶನ ಗ್ರಂಥಗಳು

[ಬದಲಾಯಿಸಿ]
  • Giddens, A. (1990). The Consequences of Modernity. Stanford University Press, Stanford.
  • Ritzer, G. (1993). The McDonaldization of Society: An Investigation into the Changing Character Contemporary Social Life. Sage Publications, New York.
  • Ritzer, G. (2005). Sociological Theory. Rawat Publications, Jaipur.
  • Habermas, J. (1996). Habermas and the Unfinished Project of Modernity (Eentreves, M. P., & Seyla, B. eds.), Polity, London.
  • Castells, M. (1996). The Rise of Network Society: The information Age: Economy, Society and Culture. Vol. I, Wiley Blackwell, London.
  • Bauman, Z. (1999). Liquid Modernity. Polity Press, London.
  • Bauman, Z. (1989). Modernity and the Holocaust. Polity Press, London.
  • Beck, U. (1992). Risk Society: Towards a New Modernity. Sage Publications, London.
  • ಪ್ರೊ. ಶೌಕತ್ ಅಝೀಮ್. ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡನನ್ನ
  1. Some Concluding Thoughts on the McDonaldization Thesis. 1 Oliver's Yard, 55 City Road, London EC1Y 1SP United Kingdom: SAGE Publications Ltd. 1998. pp. 175–191.{{cite book}}: CS1 maint: location (link)
  2. Sujatha, D.K.; Pitanatri, P.D.S. (2016-10-26). Adopt, adapt and adep: A Balinese way persisting to McDonalization. CRC Press. pp. 305–309. ISBN 978-1-315-38698-0.

ಹೆಸರು ಪ್ರೇರಣಾ ಬಿ.ವಿದ್ಯಾಂಜನ್. ನಾನು ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿದ್ದು. ನನ್ನ ತಂದೆಯಾ ಹೆಸರು ಆಂಜನಪ್ಪ ಬಿ.ಹೆಚ್ ಮತ್ತು ತಾಯಿ ವಸುಂಧರಾ ಬಿ.ಸಿ ಇವರಿಬ್ಬರು ಸಮಾಜಶಾಸ್ತ್ರ ವಿಷಯದಲ್ಲಿ ಡಾಕ್ಟ್ರೇಟ್ ಪದವಿ ಪಡೆದಿದ್ದಾರೆ . ನನ್ನ ತಂದೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ . ನನ್ನ ತಾಯಿ ಅತಿಥಿ ಉಪನ್ಯಾಸಾಕಿಯಾಗಿ ರಾಷ್ಟ್ರೀಯ ಶಿಕ್ಷಣ ಸಮಸ್ಥೆಯಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ  ಪಾಠ ಮಾಡುತ್ತಾರೆ. ನನ್ನ ತಂದೆ ತಾಯಿಗೆ ನಾನು ಎರಡನೇ ಮಗು ಎಂದರೆ ನನಗೆ ಒಬ್ಬ ಅಣ್ಣ ಇದ್ದಾರೆ. ನನ್ನ ಅಣ್ನನ  ಹೆಸರು ಧನುಷ್ ಬಿ. ವಿದ್ಯಾಂಜನ್ ಅವರು ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸುವ ಹಂತದಲ್ಲಿ ಇದ್ದಾರೆ. ಇದು ನನ್ನ ಕುಟುಂಬದ ಪರಿಚಯ. ನನ್ನ ಹೆಸರಿನ ಅರ್ಥ ಸ್ಫೂರ್ತಿ. ವಿದ್ಯಾಂಜನ್ ಎನ್ನುವ ಉಪನಾಮ ನನ್ನ ತಾಯಿ ತಂದೆ ಹೆಸರುಗಳಾದ ವಿದ್ಯಾ ಹಾಗು ಆಂಜನ್ ಈ ಎರಡು ಹೆಸರುಗಳಿಂದ ಬಂದಿದೆ.

ನಾನು ಪ್ರಾರ್ಥಮಿಕ ಹಾಗು ಪ್ರೌಢ ಶಾಲೇಯ ವಿದ್ಯಭ್ಯಾಸವನ್ನು  ಭದ್ರಾವತಿಯ ಪ್ರತಿಷ್ಠಿತ ಶಾಲೆಗಲ್ಲಿ ಒಂದಾದ  ಪೂರ್ಣ ಪ್ರಜ್ಞಾ ಎಜುಕೇಶನ್ ಸೆಂಟರ್ನಲ್ಲಿ ಮುಗಿಸಿದ್ದೇನೆ. ಪ್ರಾರ್ಥಮಿಕ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಕನ್ನಡದಲ್ಲಿ ವಿಷಯದಲ್ಲಿ ನನಗೆ ಹೆಚ್ಚಿನ ಆಸಕ್ತಿ ಇದ್ದಿದ್ದರಿಂದ ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಹಾಯವಾಯಿತು. ನಮ್ಮ ಶಾಲೆಯಲ್ಲಿ ನಡೆಸುತ್ತಿದ್ದ ವಾಚನ ಸ್ಪರ್ಧೆಯಲ್ಲಿ ಒಂದನೇ ತರಗತಿ ಇಂದ ಪ್ರಥಮ ಸ್ಥಾನಗಳಿಸುತಿದ್ದೆ ಇದನ್ನು ನೋಡಿದ ನನ್ನ ಕನ್ನಡ ಶಿಕ್ಷಕಿ ನನಗೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡುತಿದ್ದರು. ಆಗಿಂದಲೇ ನಾನು ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದೆ. ಜಿಲ್ಲಾ ಮಟ್ಟದ ಪ್ರತಿಭಾ  ಕಾರಂಜಿಯಲ್ಲಿ ಕನ್ನಡ    ವ್ಯಾಕರಣ ಪುಸ್ತಕ ಬಹುಮಾನವಾಗಿ ಸಿಕ್ಕಿತ್ತು. ಆ ಪುಸ್ತಕದಲ್ಲಿದ್ದ ವ್ಯಾಕರಣದ ವಿಷಯಗಳಾದ ಸಂಧಿ-ಸಮಾಸ,ಅವ್ಯಯಗಳು, ಛಂದಸ್ಸು ಇತ್ಯಾದಿ ನನ್ನ ಉತ್ತಮ ಅಂಕಗಳಿಗೆ ಒಂದು ಕರಣವಾಗಿದೆ. ಮುಂದೆ ಇದು ನನ್ನ ೧೦ ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ೧೨೫ ಅಂಕಗಳಿಗೆ ೧೨೧ ಅಂಕಗಳನ್ನು ಪಡೆದಿರುತ್ತೇನೆ ಇದಕ್ಕೆ ನನ್ನ ಶಾಲೆಯ ಶಿಕ್ಷಕರು ಮಾಡಿದ ಪಾಠ ಮತ್ತು ನನ್ನ ತಂದೆ ತಾಯಿ ಸಹೋದರನ  ಸಹಕಾರವೇ ಕಾರಣ. ನನ್ನ ಮುಂದಿನ ಪದವಿಪೂರ್ವ  ವಿದ್ಯಾಭ್ಯಾಸವು ಶಿವಮೊಗ್ಗದ ಪೇಸ್ ಯು.ಎಂ.ಪಿ .ಯು ಕಾಲೇಜುನಲ್ಲಿ ಮುಗಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ೧೦೦ ಅಂಕಗಳಿಗೆ  ಕನ್ನಡ ವಿಷಯದಲ್ಲಿ ೯೯ ಅಂಕಗಳಿಸಿ ಮತ್ತೊಮ್ಮೆ ನನ್ನ ಪೋಷಕರಿಗೆ ಹೆಮ್ಮೆ ಪಡುವಂತೆ ಮಾಡಿದ್ದೇನೆ.

                      ನಾನು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಶಿಕ್ಷಣವನ್ನು ಪಡೆಯಲು ಇಚ್ಛಿಸಿ ಬಿ.ಯಸ್.ಸಿ ವಿಷಯದಲ್ಲಿ ಅಧ್ಯಯನಕ್ಕೆ ರಸಾಯನಾಶಾಸ್ತ್ರ ಮತ್ತು  ಪ್ರಾಣಿಶಾಸ್ತ್ರವನ್ನು ತೆಗೆದುಕೊಂಡಿರುತ್ತೇನೆ. ಇದರ ಮಧ್ಯೆಯೂ ನನ್ನ ಮಾತೃ ಭಾಷೆಯಾದ  ಕನ್ನಡದ ಕಡೆ ನನಗಿದ್ದ ಒಲವು ಮತ್ತು ಸೆಳೆತ ಕನ್ನಡವನ್ನು ನನ್ನ ದ್ವಿತೀಯ ಭಾಷೆಯನ್ನಾಗಿ  ಆಯ್ಕೆ ಮಾಡಿಕೊಳ್ಳುವಂತೆ ಪ್ರೋತ್ಸಹಿಸಿತು. ನಾನು ಮುಂದೆ ಯಾವುದೇ ಸ್ಥಾನಕ್ಕೆ ಹೋದರು ಸಹ ಕನ್ನಡವನ್ನು ಇಂದಿಗೂ ಮರೆಯುವುದಿಲ್ಲ. ಕನ್ನಡವನ್ನು ಕಲಿಸಿದ ನನ್ನ ತಾಯಿ ಮೊದಲ ಗುರು ಆಗಿರುವುದರಿಂದ ತಾಯಿಯಷ್ಟೇ  ಪ್ರೀತಿ ಕನ್ನಡ ಭಾಷೆಯಾ ಮೇಲಿದೆ. ನನಗೆ ಭವಿಷ್ಯದಲ್ಲಿ ರಸಾಯನಶಾಸ್ತ್ರದ ವಿಷಯಕ್ಕೆ ಸಂಬಂಧ ಪಟ್ಟಂತೆ ವೈಜ್ಞಾನಿಕ ಸಂಶೋಧನೆ  ಮಾಡುವ ಆಸಕ್ತಿ ಇದೆ. ನನ್ನ ಜೀವನವನ್ನು ಸುಂದರವಾಗಿ ಸೃಷ್ಠಿಸಿಕೊಂಡ ನಂತರವೂ ಸಹ ಕನ್ನಡಕ್ಕೆ ಒಂದು ಉತ್ತಮ ಸ್ಥಾನವನ್ನು ಸ್ಥಾನವನ್ನು ನನ್ನ ಉಸಿರಿರುವವರೆಗೂ ನೀಡುತ್ತೇನೆ. ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದಾಗಿರುವ ಈ ಕನ್ನಡ ಭಾಷೆ ಇಂದಿಗೂ ನನ್ನ ಪ್ರೇಯ ಭಾಷೆಯಾಗಿರುತ್ತದೆ. ಒಟ್ಟಾರೆ ನನಗೆ ಕನ್ನಡದ ಮೇಲಿರುವ ಗೌರವ ಅಭಿಮಾನ ನಾನು ಇಂದಿಗೂ ಮರೆಯುವುದಿಲ್ಲ.