ಸದಸ್ಯ:Preran S/WEP

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರತನ್ ನಾವಲ್ ಟಾಟಾ[ಬದಲಾಯಿಸಿ]

ರತನ್ ನಾವಲ್ ಟಾಟಾ' (೨೮, ಡಿಸೆಂಬರ್, ೧೯೩೭-)ಅನೇಕ ಪ್ರಮುಖ ಟಾಟಾ ಉದ್ಯಮಗಳಾದ, ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಮುಂತಾದ ಶ್ರೇಷ್ಟ ವಿಭಾಗಗಳಲ್ಲಿ ಹೊಸದಾಗಿ ಅಳವಡಿಸಿದ ಅತ್ಯಾಧುನಿಕ ತಾಂತ್ರಿಕ ಮತ್ತು ಮುಂದಾಲೋಚನೆಯ ಕ್ರಮಗಳಿಂದಾಗಿ ಅವುಗಳ ಮಟ್ಟವನ್ನು ಉನ್ನತ ಶಿಖರಕ್ಕೇರಿಸಿ, ಕಂಪೆನಿಯ ಲಾಭಾಂಶವನ್ನು ಹೆಚ್ಚಿಸಿದರು.

ಟಾಟಾ

ರತನ್ ಟಾಟಾ, ಜೆ. ಆರ್. ಡಿ ರವರ ಅತ್ಯಂತ ನೆಚ್ಚಿನ ಶಿಷ್ಯ ; ಮತ್ತು ಅಜ್ಞಾರಾಧಕ. ಈಗಿನ ಪ್ರಸಕ್ತ, ಟಾಟಾಸನ್ಸ್, ಸಂಸ್ಥೆಯ ಛೇರ್ಮನ್ ಆಗಿರುವ, ರತನ್ ಟಾಟಾ, ಎಲ್ಲಾ ಟಾಟಾ ಸಂಸ್ಥೆಗಳ ವಿಭಾಗಗಳನ್ನೆಲ್ಲಾ ನೋಡಿಕೊಳ್ಳುತ್ತಿರುವ ಮಾತೃಸಂಸ್ಥೆಯಲ್ಲಿ ದುಡಿಯು ತ್ತಿದ್ದಾರೆ.[೨] ಇವರು, ಅನೇಕ ಪ್ರಮುಖ ಟಾಟಾ ಉದ್ಯಮಗಳಾದ, ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಮುಂತಾದ ಶ್ರೇಷ್ಟ ವಿಭಾಗಗಳಲ್ಲಿ ಹೊಸದಾಗಿ ಅಳವಡಿಸಿದ ಅತ್ಯಾಧುನಿಕ ತಾಂತ್ರಿಕ ಮತ್ತು ಮುಂದಾಲೋಚನೆಯ ಕ್ರಮಗಳಿಂದಾಗಿ ಅವುಗಳ ಮಟ್ಟವನ್ನು ಉನ್ನತ ಶಿಖರಕ್ಕೇರಿಸಿ, ಕಂಪೆನಿಯ ಲಾಭಾಂಶವನ್ನು ಹೆಚ್ಚಿಸಿದರು. ಟಾಟಾ ಉದ್ಯಮ ಪರಿವಾರ, ಯೂರೋಪಿನ, ಕೊರಸ್ ಸ್ಟೀಲ್, ಕಂಪೆನಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವುದರ ಮೂಲಕ, ಒಂದು ವಿಕ್ರಮವನ್ನೇ ಸ್ಥಾಪಿಸಿದೆ. ಟಾರತನ್ಟಾ ರವರ ದೂರಾಲೋಚನೆ, ಮನೋಸ್ಥೈರ್ಯ, ಮುಂದಾಳುತ್ವ, ಹಾಗೂ ಸರಿಯಾದ ಸಮಯದಲ್ಲಿ ಸರಿಯಾಗಿ ತೆಗೆದುಕೊಳ್ಳುವ ತೀರ್ಮಾನಗಳಿಂದ, ಒಬ್ಬ ಅತ್ಯಂತ ಯಶಸ್ವಿ ಹಾಗೂ ಪರಿಣಾಮಕಾರಿಯಾದ ವ್ಯಕ್ತಿಯಾಗಿ ಪರಿಗಣಿಸಲ್ಪಟ್ಟಿದ್ದಾರೆ. ಟಾಟಾ ವಾಣಿಜ್ಯ ಪರಿವಾರ, ಈಗಾಗಲೇ ವಿಶ್ವದ ೫೦ ವಿದೇಶಿ ಸಂಸ್ಥೆಗಳಲ್ಲಿ, ತನ್ನ ಬಂಡವಾಳವನ್ನು ಹಾಕಿ ಯಶಸ್ವಿಯಾಗಿ ವಹಿವಾಟು ನಡೆಸುತ್ತಿದೆ. ಅವುಗಳಲ್ಲಿ ಮುಖ್ಯವಾದ ಕೆಲವು ಕಂಪೆನಿಗಳಲ್ಲಿ, ದಾವೂ ಟ್ರಕ್ಸ್, ಮತ್ತು ಟೆಟ್ಲಿ ಟೀ ಕೂಡ ಸೇರಿವೆ.

ನ್ಯೂಯಾರ್ಕ್

ನಮ್ಮ ಭಾರತದಲ್ಲೇ ಪೂರ್ಣ ತಯಾರಿಸಿದ ದೇಸೀಕಾರನ್ನು ಗ್ರಾಹಕರಿಗೆ ಕಡಿಮೆದರದಲ್ಲಿ ಒದಗಿಸುವ ಗೀಳು ಅವರಿಗೆ ಬಹಳವಾಗಿತ್ತು. ಜೆ. ಆರ್.ಡಿ.ಟಾಟಾ ರವರು, ತಮ್ಮ ಛೇರ್ಮನ ಹುದ್ದೆಯನ್ನು ರತನ್ ರವರಿಗೆ, ೧೯೯೧ ರಲ್ಲಿ ಒಪ್ಪಿಸಿ, ಅವರಿಗೆ ಟಾಟಾ ಉದ್ಯಮದ ಸರ್ವಾಧಿಕಾರವನ್ನು ಕೊಟ್ಟರು. ರತನ್ ಅಧಿಕಾರಕ್ಕೆ ಬಂದ ಸ್ವಲ್ಪ ಸಮಯದಲ್ಲೇ, ಟಿ.ಸಿ ಎಸ್ ಕಂಪೆನಿಯನ್ನು ಪಬ್ಲಿಕ್ ಶೇರ್ ಕಂಪೆನಿಯಾಗಿ ಪರಿವರ್ತಿಸಿದರು. ಟಾಟಾ ಮೋಟರ್ ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಛೇಂಜ್ ನಲ್ಲಿ, ಸೇರ್ಪಡೆಯಾಯಿತು. ರತನ್ ಟಾಟಾರವರಿಗೆ, ದೇಸಿ ಕಾರೊಂದನ್ನು ಟಾಟಾ ಕಂಪೆನಿ ತಯಾರಿಸಿ ದೇಶಕ್ಕೆ ಒಪ್ಪಿಸಬೇಕೆಂಬ ಆಕಾಂಕ್ಷೆ ಬಹಳ ಸಮಯದಿಂದ ಇತ್ತು. ಟಾಟಾಇಂಡಿಕ, ತಯಾರಿಕೆಯಿಂದಾಗಿ ಆ ಕನಸು ಸಾಕಾರವಾಯಿತು. ಸಿಂಗೂರ್, ನಲ್ಲಿ ಒಂದು ಚಿಕ್ಕ-ಕಾರ್, ಅನ್ನು ತಯಾರುಮಾಡುವ ಕಾರ್ಖಾನೆಯನ್ನು ಸ್ಥಾಪಿಸಿದ್ದಾರೆ. ರತನ್, ಅಂದಾಜಿನ ಪ್ರಕಾರ, ೨೦೦೮ ರ ಮಧ್ಯಭಾಗದಲ್ಲಿ, ಇದು ಕಾರ್ಯಾರಂಭಮಾಡುವ ಸಾಧ್ಯತೆಗಳಿವೆಯೆಂದು ಅಭಿಪ್ರಾಯಪಡುತ್ತಾರೆ

ಬಹುಮುಖ್ಯ ಪ್ರಶಸ್ತಿಗಳು, ಹಾಗೂ ಸನ್ಮಾನಗಳು

ಸನ್ ೨೦೦೦ ದಲ್ಲಿ, ಭಾರತಸರ್ಕಾರದ ಮೇರು ಪ್ರಶಸ್ತಿ, 'ಪದ್ಮ ಭೂಷಣ' ಸಿಕ್ಕಿತು. 'ಡಾಕ್ಟೊರೇಟ್ ಇನ್ ಬಿಸಿನೆಸ್ ಅಡ್ಮಿನಿಸ್ಟ್ರೇಶನ್', ಅಮೆರಿಕದ 'ಒಹೈ', ವಿಶ್ವವಿದ್ಯಾಲಯದಿಂದ. 'ಡಾಕ್ಟೊರೇಟ್ ಇನ್ ಸೈನ್ಸ್','ಏಶ್ಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲೊಜಿ', 'ಬ್ಯಾಂಕಾಕ್' 'ಡಾಕ್ಟೊರೇಟ್ ಇನ್ ಸೈನ್ಸ್', 'ವಾರ್ವಿಕ್', ವಿಶ್ವವಿದ್ಯಾಲಯದಿಂದ 'ಲಂಡನ್ ಸ್ಕೂಲ್ ಆಫ್ ಎಕೊನೊಮಿಕ್ಸ್', ರತನ್ ರವರಿಗೆ 'ಗೌರವ ಡಾಕ್ಟೊರೇಟ್' ಸಲ್ಲಿಸಿ, ಗೌರವಿಸಿದೆ.