ಸದಸ್ಯ:Preethi 1910366/ನನ್ನ ಪ್ರಯೋಗಪುಟ

  ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

  ವೈ. ಸುಬ್ರಹ್ಮಣ್ಯ ರಾಜು[ಬದಲಾಯಿಸಿ]

  alt= ವೈ.ಸುಬ್ರಹ್ಮಣ್ಯ ರಾಜು ಅವರು ರಚಿಸಿರುವ ಚಿತ್ರಪಟದ ಮು೦ದೆ ಹೆಚ್ ಹೆಚ್ ಶ್ರಿಕ೦ಠದತ್ತ ನರಸಿ೦ಹರಾಜ ವಾಡಿಯರ್ ಅವರು ಪೂಜಿಸುತ್ತಿರುವ ದೃಶ್ಯ |thumb|   ವೈ.ಸುಬ್ರಹ್ಮಣ್ಯ ರಾಜು ಅವರು ರಚಿಸಿರುವ ಚಿತ್ರಪಟ ವೈ. ಸುಬ್ರಹ್ಮಣ್ಯ ರಾಜು ಅವರು ಭಾರತಿಯ ದೊಡ್ದ ಕಲಾವಿದರಾಗಿದ್ದು, ಮೈಸೂರು ಶೈಲಿಯ ಸಾಂಪ್ರದಾಯಿಕ ಕಲೆಯನ್ನು ಉತ್ತೆಜಿಸಿದರು. ಮೈಸೂರು ದಾಸರಾ ಮೆರವಣಿಗೆಯಲ್ಲಿ ಕಲ್ಯಾಣ ಮಂಟಪದ ಗೋಡೆಗಳು ಇವರ ಚಿತ್ರಪಟಗಳಿಂದ ಅಲ೦ಕಾರಿಸಲಾಗಿದೆ.

  ಪರಿಚಯ ಮತ್ತು ಕುಟುಂಬ[ಬದಲಾಯಿಸಿ]

  ವೈ. ಸುಬ್ರಹ್ಮಣ್ಯ ರಾಜುರವರು ೩ನೇ ಡಿಸೆಂಬರ್ ೧೯೦೭, ಮೈಸೂರಿನಲ್ಲಿ ಜನಿಸಿದರು. ರಾಜು ಅವರ ಕುಟು೦ಬದವರು ಸೋಮವಂಶ ಆರ್ಯ ಕ್ಷತ್ರಿಯ ಪಂಥಕ್ಕೆ ಸೇರಿದವರು. ಅವರ ಪೂರ್ವಜರು ಮೈಸೂರು ಶೈಲಿಯ ಕಲೆಯ ಪ್ರತಿಪಾದಕರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ, ಅವರ ಪೂರ್ವಜರು ಹಿಂದಿನ ಮೈಸೂರು ರಾಜ್ಯಕ್ಕೆ ವಲಸೆ ಬಂದರು. ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ ದರಿಯಾ ದೌಲತ್ ಅರಮನೆಯಲ್ಲಿ ವಿಶ್ವಪ್ರಸಿದ್ಧ ಭಿತ್ತಿಚಿತ್ರಗಳನ್ನು ರಚಿಸಿದ ಕೀರ್ತಿ ಇವರ ಕುಟುಂಬಕ್ಕೆ ಸೇರಿದೆ. ಇವರ ಅಜ್ಜ ಸುಂದರಯ್ಯ ಅರಮನೆಯಲ್ಲಿ ಬಣ್ಣ ಬಳಿಯುವವರಾಗಿದ್ದರು ಮತ್ತು ಅವರ ತ೦ದೆ ಯೆಲ್ಲಪ್ಪ ವಾಸ್ತು ಶಿಲ್ಪಿಯಾಗಿದ್ದರು. ರಾಜು ಅವರ ಸಹೋದರ ವೈ.ನಾಗರಾಜು ಮತ್ತು ಚಿಕ್ಕಪ್ಪ ಶಂಕರ ರಾಜು ಕೂಡ ಅರಮನೆಯಲ್ಲಿ ಕಲಾವಿದರಾಗಿದ್ದರು. ಅವರು ಸುಮಾರು ಹತ್ತು ವರ್ಷರಾಗಿದ್ದಾಗ ಅವರಿಗೆ ಒ೦ದು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ದೊರೆಯಿತು.ಈ ಸ್ಪರ್ಧೆ ಅವರಿಗೆ ಅಖಿಲ ಭಾರತ ಪ್ರಶಸ್ತಿಯನ್ನು ತ೦ದಿತು. ಅ೦ದಿನಿ೦ದ ಅವರನ್ನು ಯುವ ಕಲಾವಿದ ಎ೦ದು ಗುರುತಿಸಲಾಯಿತು.

  ವಿಧ್ಯಭ್ಯಾಸ[ಬದಲಾಯಿಸಿ]

  ಮುಮ್ಮಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಆಂಗ್ಲೋ ಕನ್ನಡ ಶಾಲೆ, "ರಾಜಾ ಶಾಲೆ"ಯಲ್ಲಿ ವಿಧ್ಯಭ್ಯಾಸ ಶುರುಮಾಡಿದರು. ಅಧ್ಯಾಪಕರು ಹೇಳಿ ಕೊಡುತ್ತಿದ್ದ ಪಾಠಗಳನ್ನು ಚೆನ್ನಾಗೆ ಕೇಳಿಸಿಕ್ಕೊಳುತ್ತಿದ್ದು, ರೇಖಾಚಿತ್ರಗಲಳಲ್ಲಿ ಹೆಚ್ಚು ಆಸಕ್ತಿ ತೂರಿಸುತ್ತಿದ್ದರು.ರಾಜು ಅವರು ಆಗಾಗ ತನ್ನ ತಂದೆ ಅಥವಾ ಸಹೋದರನೊಂದಿಗೆ ಅರಮನೆಗೆ ಹೋಗುತ್ತಿದ್ದಂತೆ, ಅವರು ಸರ್ ಚಾರ್ಲ್ಸ್ ಟೋಡ್ಹಂಟರ್ ಅವರ ಗಮನಕ್ಕೆ ಬಂದರು. ಇವರು ರಾಜು ಅವರಿಗೆ ಕ್ರಿಸ್‌ಮಸ್ ಉಡುಗೊರೆಯನ್ನು ನೀಡುವ ಉದ್ದೇಶದಿಂದ ಲ್ಯಾಂಪ್‌ಶೇಡ್‌ಗಾಗಿ ವಿನ್ಯಾಸವನ್ನು ತಯಾರಿಸಲು ಕೇಳಿಕೊಂಡರು. ಈ ವಿನ್ಯಾಸವು, ಮೈಸೂರು ದಸರಾ ಮೆರವಣಿಗೆಯಲ್ಲಿನ ಒಂದು ರೂಪಕವಾಗಿ ಪ್ರದರ್ಶಿಸಲಾಯಿತು. ಈ ರೀತಿಯಿ೦ದ ಅ೦ದಿನ ಮಹರಾಜರು ಕೃಷ್ಣರಾಜ ಒಡೆಯರ್ಗಮನಕ್ಕೆ ಬ೦ದರು. ಮಹಾರಾಜರ ಆಸೆಯ೦ತೆ, ರಾಜು ಅವರು ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯಲ್ಲಿ ಸೇರಿದರು. ಅಲ್ಲದೆ ಮಹಾರಾಜರು ಅವರಿಗೆ ತಿಂಗಳಿಗೆ ನಾಲ್ಕು ರೂಪಾಯಿ ವಿದ್ಯಾರ್ಥಿವೇತನವನ್ನು ನೀಡಿದರು. ನಂತರ ಅದನ್ನು ಆರು ರೂಪಾಯಿಗೆ ಏರಿಸಲಾಯಿತು. ಇವರ ದೃಷ್ಟಿಕೋನ, ಸಮತೋಲನ, ಅಂಗರಚನಾಶಾಸ್ತ್ರ ಮತ್ತು ಅನುಪಾತದ ತತ್ವಗಳೊಂದಿಗೆ ಪರಿಚಯವಾಯಿತು. ಕೇಶವಯ್ಯ ಅವರ ಮೇಲ್ವಿಚಾರಣೆಯಲ್ಲಿ ರಾಜು ಅವರು ಭೂದೃಶ್ಯ ಚಿತ್ರಕಲೆ ತಂತ್ರವನ್ನು ಕಲಿತರು. ೧೯೨೬ ರಲ್ಲಿ ಮದ್ರಾಸ್‌ನ ತಾಂತ್ರಿಕ ಸಂಸ್ಥೆಯಿಂದ ಚಿತ್ರಕಲೆ ಮತ್ತು ವಿನ್ಯಾಸದಲ್ಲಿ ಡಿಪ್ಲೊಮವನ್ನು ಪಡೆದರು. ಜೆ.ಜೆ. ಶಾಲೆಗೆ ಸೇರಿದ ನಂತರ, ರಾಜು ಅವರು ತಮ್ಮ ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಅವರ ಸಹಪಾಠಿಗಳೊ೦ದಿಗೆ ಬರೋಡಾಗೆ ಕಳುಹಿಸಲಾಯಿತು. ಅಲ್ಲಿನ ಗಾಯಕ್ ವಾಡ್ ಅರಮನೆ ಒಳಮಾಳಿಗೆಯನ್ನು ಅಲಂಕಾರ ಮಾಡಲು ಹೋಗಿದ್ದರು. ಅಲ್ಲಿ ಮಾಡಿರುವ ವಿನ್ಯಸವು ಲಂಡನ್ನಲ್ಲಿ, ಭಾರತೀಯ ಕಲಾ ಖಜಾನೆಗಳ ಪ್ರತಿನಿಧಿ ಎ೦ಬ ಶೀರೋನಾಮದಲ್ಲಿ ಪ್ರದರ್ಶಿಸಲಾಗಿದೆ.

  ಕಲಾ ವೃತ್ತಿ[ಬದಲಾಯಿಸಿ]

  ೧೯೨೬ ರಲ್ಲಿ ವೈ.ಸುಬ್ರಮಣ್ಯ ರಾಜು ಅವರು ವೇದಾ೦ತ ದೇಶಿಕ ಅವರ ಭಾವಚಿತ್ರವನ್ನು ಮಾಡಲು ಪರಕಲಾ ಮಠದಿಂದ ಒಂದು ನಿಯೋಜನೆಯನ್ನು ಪಡೆದರು. ಈ ನಿಯೋಜನೆಯ ನಂತರ, ರಾಜು ಅವರಿಗೆ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯಲ್ಲಿ ಶಿಕ್ಷಕರಾಗುವ ನೇಮಕಾತಿ ದೊರೆಯಿತು. ಶಾರದ ಅವರ ಜೊತೆ ವಿವಾಹವಾದ ನ೦ತರ ರಾಜು ಅವರಿಗೆ ಮೈಸೂರು ನಗರಕ್ಕೆ ಯೋಜನೆ ಸಿದ್ಧಪಡಿಸುವ ಅವಕಾಶ ದೊರೆಯಿತು. ಈ ಯೋಜನೆಯಿ೦ದಾಗಿ ಅವರಿಗೆ ಬಹಳ ಗೌರವ ದೊರಕಯಿತು. ರಾಜು ಅವರ ಅತ್ಯಂತ ಮೆಚ್ಚುಗೆ ಪಡೆದ ಕೃತಿಗಳು ಮೈಸೂರು ಅರಮನೆಯ ಕಲ್ಯಾಣ ಮಂಟಪದಲ್ಲಿವೆ. ಕಲ್ಯಾಣ ಮಂಟಪದಲ್ಲಿ ಚಿತ್ರಿಸಿದ ೨೮ ಗೋಡೆ ಫಲಕಗಳಲ್ಲಿ ೬ ಗೋಡೆಗಳನ್ನು ರಾಜು ಅವರೇ ಚಿತ್ರಿಸಿದ್ದು. ಕಲ್ಯಾಣ ಮಂಟಪದಲ್ಲಿನ ಎಲ್ಲಾ ೨೮ ವರ್ಣಚಿತ್ರಗಳ ಪ್ರಮುಖ ರೇಖಾಚಿತ್ರಗಳನ್ನು ವಿನ್ಯಾಸಗೊಳಿಸಿದ ಕೀರ್ತಿ ಇವರ ಪಾಲಾಗಿದೆ.

  ಸಂಖ್ಯೆ ೫: III ಮೈಸೂರು ಬೆಟಾಲಿಯನ್.

  ಸಂಖ್ಯೆ ೧೦: ಆನೆ ಪಟ್ಟಾಭಿಷೇಕ, ಕುದುರೆ ಮತ್ತು ಪಲ್ಲಕ್ಕಿ.

  ಸಂಖ್ಯೆ ೧೮: ರಾಮನು ಚಾಮುಂಡೇಶ್ವರಿ ದೇವಿಯ ಎದುರು ಶಸ್ತ್ರಾಸ್ತ್ರಗಳನ್ನು ಪೂಜಿಸುವ ಚಿತ್ರ.

  ಸಂಖ್ಯೆ ೨೪: ನೌಪಾತ್ ಆನೆ.

  ಸಂಖ್ಯೆ ೨೫: ರಿಯರ್ಗಾರ್ಡ್ ಕುದುರೆ.

  ಸಂಖ್ಯೆ ೨೮: ಆನೆ - ಎಳೆದ ಗಾಡಿ ಮತ್ತು ಆಂಬುಲೆನ್ಸ್.

  ದಾಸರ ಉತ್ಸವದ ಸಂದರ್ಭದಲ್ಲಿ, ಆಯುಧ ಪೂಜೆಯ ದಿನ, ಮೈಸೂರು ರಾಜಮನೆತನದ ಮುಖ್ಯಸ್ಥರು ಮೈಸೂರು ಅರಮನೆಯಲ್ಲಿ ರಾಜರ ಶಸ್ತ್ರಾಸ್ತ್ರಗಳನ್ನು ಪೂಜಿಸುತ್ತಾರೆ. ಈ ಕಾರ್ಯಕ್ರಮ ವೈ.ಸುಬ್ರಮಣ್ಯ ರಾಜು ಅವರ ವರ್ಣಚಿತ್ರದ (ಶ್ರೀ ರಾಮನು ಚಾಮುಂಡೇಶ್ವರಿ ದೇವಿಯ ಮುಂದೆ ಶಸ್ತ್ರಾಸ್ತ್ರಗಳನ್ನು ಪೂಜಿಸುವ ಚಿತ್ರ) ಮುಂದೆ ನಡಿಯುತಿತ್ತು. ೧೯೭೦ರಲ್ಲಿ ರಾಜು ಅವರ ವಿದ್ಯಾರ್ಥಿ ಎಂ.ಎಸ್.ನಂಜುಂಡ ರಾವ್ ಮತ್ತು ಸ್ನೆಹಿತ ಎಂ. ಆರ್ಯ ಮೂರ್ತಿ ಚಿತ್ರಕಲ ಪರಿಷತ್ (ಈಗ ಕರ್ನಾಟಕ ಚಿತ್ರಕಲ ಪರಿಷತ್) ಎ೦ಬ ಕಲಾ ಸಂಕೀರ್ಣವನ್ನು ಸ್ಥಾಪಿಸಿದರು.ರಾಜ್ಯದ ಲಲಿತಕಲೆ ಮತ್ತು ಕಲಾವಿದರ ಪ್ರಚಾರಕ್ಕಾಗಿ ಕೆಲಸ ಮಾಡಲು ಅವರೊಂದಿಗೆ ಸೇರಲು ರಾಜು ಅವರನ್ನು ಸಂಪರ್ಕಿಸಿದರು. ಅಲ್ಲಿ ರಾಜು ಅವರು ಅನೇಕ ಕಲಾವಿದರಿಗೆ ಸಾಂಪ್ರದಾಯಿಕ ತಂತ್ರವನ್ನು ಹೇಳಿಕೊಡುತಿದ್ದರು.

  ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

  alt=ಭಾರತದ ಮಾಜಿ ರಾಷ್ಟ್ರಪತಿ ನೀಲ೦ ಸ೦ಜೀವ ರೆಡ್ಡಿ ಅವರು   ವೈ.ಸುಬ್ರಹ್ಮಣ್ಯ ರಾಜು ಅವರನ್ನು ಸಾನ್ಮಾನಿಸುತ್ತಿರುವುದು|thumb|224x224px|ಭಾರತದ ಮಾಜಿ ರಾಷ್ಟ್ರಪತಿ ನೀಲ೦ ಸ೦ಜೀವ ರೆಡ್ಡಿ ಅವರು   ವೈ.ಸುಬ್ರಹ್ಮಣ್ಯ ರಾಜು ಅವರನ್ನು ಸಾನ್ಮಾನಿಸುತ್ತಿರುವುದು •೧೯೩೧ ರಲ್ಲಿ "ದಸರಾ ಎಕ್ಸಿಬಿಷನ್ ಪೋಸ್ಟರ್" ಗಾಗಿ ಚಿನ್ನದ ಪದಕ

  • ೧೯೩೧ ರಲ್ಲಿ "ಲ್ಯಾಂಡ್ಸ್ಕೇಪ್" ವಿಭಾಗದಲ್ಲಿ ಬೆಳ್ಳಿ ಪದಕ

  • ೧೯೩೧ ರಲ್ಲಿ"ನೀರಿನ ಬಣ್ಣ" ವಿಭಾಗದಲ್ಲಿ ಬೆಳ್ಳಿ ಪದಕ

  • ೧೯೩೧ ರಲ್ಲಿ ಮೈಸೂರು ಫೈನ್ ಆರ್ಟ್ ಸೊಸೈಟಿಯಿಂದ "ಹುಸ್ಕೂರ್ ಚನ್ನಾ ಬಸಪ್ಪ” ಅವರ ಬಹುಮಾನ.

  • ೧೯೩೧ ರಲ್ಲಿ ಮದ್ರಾಸ್ ಫೈನ್ ಆರ್ಟ್ ಸೊಸೈಟಿ ಪ್ರಶಸ್ತಿ

  • ೧೯೩೨ ರಲ್ಲಿ ಸಿಮ್ಲಾ ಫೈನ್ ಆರ್ಟ್ ಸೊಸೈಟಿ ಪ್ರಶಸ್ತಿ.

  • ೧೯೫೩ ರಲ್ಲಿ ಎಣಿಕೆದಾರರಾಗಿ ಜನಗಣತಿಗಾಗಿ ಭಾರತ ಸರ್ಕಾರವು ಬೆಳ್ಳಿ ಪದಕ ನೀಡಿತು.

  • ೧೯೬೨ ರಲ್ಲಿ ಮೈಸೂರು ರಾಜ್ಯ ಲಲಿತಕಲಾ ಅಕಾಡೆಮಿ ಬಹುಮಾನ.

  • ೧೯೭೧ ರಲ್ಲಿ ಕರ್ನಾಟಕ ಚಿತ್ರಕಲೆ ಗೌರವ ಪ್ರಶಸ್ತಿ.

  •೧೯೭೨ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.

  •೧೯೭೩ ರಲ್ಲಿ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದವರು "ಚಿತ್ರಕಲ ಪ್ರವೀಣ" ಎಂಬ ಬಿರುದನ್ನು ನೀಡಿದರು.

  •೧೯೭೭ ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ.

  •೧೯೮೫ ರಲ್ಲಿ ಆಲ್ ಇಂಡಿಯಾ ಫೈನ್ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಸೊಸೈಟಿ ಪ್ರಶಸ್ತಿ.

  ಉಲ್ಲೆಖನಗಳು[ಬದಲಾಯಿಸಿ]

  <r>https://en.wikipedia.org/wiki/Y._Subramanya_Raju</r>

  <r>https://www.deccanherald.com/content/552162/tracing-artistic-journey.html</r>

  <r>https://timesofindia.indiatimes.com/city/bengaluru/rare-jain-paintings-to-be-displayed-at-chitrakala-parishath/articleshow/62563139.cms</r>