ಸದಸ್ಯ:Preethesh Preethu/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                       ಎಲ್ಲಾದರೂ ಇರೋಣ,ಮಾನವರಾಗಿ ಬಾಳೋಣ
    ಒಂದು ಜೀವಿಯನ್ನು ಮನುಷ್ಯ ಎನ್ನುವುದು ಅವನ ಉಸಿರಾಟದಿಂದಲ್ಲ, ಬುದ್ಧಿಯಿಂದಲ್ಲ ಅಥವಾ ಅವನ ಸಾಧನೆಗಳಿಂದಲ್ಲ. ಈ ಎಲ್ಲಾ ಗುಣಗಳು ಪ್ರಾಣಿಗಳಲ್ಲೂ ಇವೆ. ಮಾನವ ಮಾತನಾಡಬಲ್ಲ, ಅದನ್ನು ಬೇರೆಯವರ ಜೊತೆ ವ್ಯಕ್ತಪಡಿಸಬಲ್ಲ ಸಾಮರ್ಥ್ಯ ಹೊಂದಿದ್ದಾನೆ. ಬೇರೆಯವರ ನೋವು-ನಲಿವನ್ನು ಅರ್ಥ ಮಾಡಿಕೊಂಡು ಸಾಮರಸ್ಯದಿಂದ ಬಾಳುತ್ತಾನೆ. ಸಮಾಜದಲ್ಲಿ ಮಾನವನಿಗೆ ಒಂದು ಉನ್ನತ ಸ್ಥಾನವಿದೆ. ಅದು ಕೇವಲ ಮಾನವೀಯತೆ ಎಂಬ ಕಾರಣದಿಂದಾಗಿ ಮಾತ್ರ. ಈ ಒಂದು ಕಾರಣದಿಂದಾಗಿ ಮಾನವ ಮತ್ತು ಪ್ರಾಣಿಗಳನ್ನು ವಿಂಗಡಿಸಲಾಗಿದೆ. ಮಾನವ ಎಂಬ ಮೂರು ಅಕ್ಷರವು ಮೂರು ಗುಣಗಳನ್ನು ಪ್ರತಿಬಿಂಬಿಸುತ್ತದೆ. ಮಾ-ಮಾತು, ನ-ನಡತೆ, ವ-ವರ್ತನೆ. ಈ ಮೂರು ಗುಣಗಳು ಮನುಷ್ಯರಲ್ಲಿರುವ ಮಾನವೀಯತೆಯನ್ನು ತೋರಿಸುತ್ತವೆ. ಸಮಾಜದಲ್ಲಿ ಉತ್ತಮವಾಗಿರಲು ಮಾತು ಮುಖ್ಯ. 'ಮಾತು ಆಡಿದರೆ ಹೋಯಿತು, ಮುತ್ತು ಹೊಡೆದರೆ ಹೋಯಿತು' ಎಂಬಂತೆ ಆ ಮಾತು ಬೇರೆಯವರಿಗೆ ಆದರ್ಶವಾಗಿರಬೇಕು, ಹಿತಕರವಾಗಿರಬೇಕೇ ಹೊರತು ಬೇರೆಯವರ ಮನಸ್ಸು ನೋಯಿಸುವ ವ್ಯಂಗ್ಯ ನುಡಿಯಾಗಿರಬಾರದು. ನಡತೆ ಮಾನವನ ಚಿನ್ನದಂತಹ ಗುಣ. ಮಾನವನಾದವನು ಉತ್ತಮ ನಡವಳಿಕೆಯನ್ನು ಹೊಂದಿರಬೇಕು. ನಡವಳಿಕೆ ಮಾನವನ ಗೌರವವನ್ನು ಹೆಚ್ಚಿಸುತ್ತದೆ. ವರ್ತನೆ ಮಾನವನ ಇನ್ನೊಂದು ಗುಣ. ಬೇರೆಯವರ ಜೊತೆ ಹೇಗೆ ವರ್ತಿಸಬೇಕೆಂದು ತಿಳಿದಿರಬೇಕು. ಪ್ರಾಣಿಗಳಂತೆ ವರ್ತಿಸುವುದು ಮಾನವನ ಗುಣವಲ್ಲ. ನಮ್ಮ ವರ್ತನೆ ಬೇರೆಯವರಿಗೆ ಅಶಾದಾಯಕವಾಗಿರಬೇಕು.
    ಈಗಿನ ಸಮಾಜವನ್ನು ನೋಡಿದಾಗ ಕೆಲ ಪ್ರಶ್ನೆಗಳು ಮೂಡುತ್ತವೆ. ಅದೇ ಮನುಷ್ಯರೇಕೆ ಮನುಷ್ಯರಾಗಿಲ್ಲ? ಅವರೇಕೆ ಕ್ರೂರ ಪ್ರಾಣಿಗಳಂತೆ ವರ್ತಿಸುತ್ತಿದ್ದಾರೆ? ಈ ಸ್ಪರ್ಧಾತ್ಮಕ ಸಮಾಜದಲ್ಲಿ ಪ್ರತಿಯೊಬ್ಬರು ತಾವು ಮುಂದೆ ಬರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಮನುಷ್ಯಪೂರ್ವಕವಾಗಿ ಪ್ರಯತ್ನ ನಡೆಸುತ್ತಾರೆ. ಸ್ಪರ್ಧೆ ಎಂದರೆ ಒಬ್ಬರನ್ನು ನೆಲಸಮ ಮಾಡಿ ಮುನ್ನಡೆಯುವುದು ಎಂಬ ಅರ್ಥ ಪಡೆದಿದೆ. ಎದೆಷ್ಟು ಸರಿ?
    ದಿನ ಕಳೆದಂತೆ ಮನುಷ್ಯರು ಮಾನವೀಯತೆಯನ್ನೇಕೆ ಮರೆಯುತ್ತಿದ್ದಾರೆ? ಈಗ ಪ್ರಾಣಿಗಳಿಗೂ ಮನುಷ್ಯರಿಗೂ ಏನು ವ್ಯತ್ಯಾಸ? ಇನ್ನೇಕೆ ಮನುಷ್ಯರಿಗೆ ಮಾನವ ಎಂಬ ಹೆಸರು! ಮಾನವೀಯತೆ ಇಲ್ಲದವರು ಪ್ರಾಣಿಗಳಿಗಿಂತಲೂ ಕೀಳು.
    ಮನುಷ್ಯರು ಮನುಷ್ಯರಾಗಿರಬೇಕಾದರೆ ಮಾನವೀಯತೆಯನ್ನು ಉಳಿಸಬೇಕು.ಮಾತು, ನಡತೆ, ವರ್ತನೆಯ ಗುಣಗಳನ್ನು ಹೊಂದಿ ಮಾನವನಾಗಿ ಮಾನವೀಯತೆಯನ್ನು ಜೀವನದಲ್ಲಿ ಅಳವಡಿಸಬೇಕು.ಮುಂದಿನ ಪೀಳಿಗೆಗೆ ಮಾನವ ಪದದ ಅರ್ಥ ಸಾರೋಣ. ಮಾನವೀಯತೆಯನ್ನು ತಿಳಿಸೋಣ. ನಾವೆಲ್ಲರೂ ಒಂದಾಗಿ ಮಾನವೀಯತೆಯ ಗುಣವನ್ನು ಬೆಳೆಸಿ ಉತ್ತಮ ಮಾನವೀಯ ಸಮಾಜ ನಿರ್ಮಿಸೋಣ. "ಎಲ್ಲಾದರೂ ಇದ್ದರೂ ಮಾನವೀಯತೆಯನ್ನು ಉಳಿಸಿಕೊಂಡು ಮಾನವರಾಗಿ ಬಾಳೋಣ."